Anemia Remedies : ಮನುಷ್ಯನ ಮೆದುಳು ಅತ್ಯಂತ ಪ್ರಮುಖವಾದ ಅಂಗ. ದೇಹದ ಯಾವುದೇ ಅಂಗಾಂಗಗಳು ಸುಸೂತ್ರವಾದ ಚಲನೆಯನ್ನು ಹೊಂದಬೇಕು ಎಂದರೆ ಮೆದುಳಿನ ಸಂಜ್ಞೆ ಸರಿಯಾಗಿ ಇರಬೇಕು. ಇಲ್ಲವಾದರೆ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಆರೋಗ್ಯ ಸಮಸ್ಯೆಗೆ ಒಳಗಾಗಬೇಕಾಗುವುದು. 


COMMERCIAL BREAK
SCROLL TO CONTINUE READING

ಹಾಗಾಗಿ ನಾವು ಸೇವಿಸುವ ಆಹಾರದಲ್ಲಿ ಮೆದುಳಿಗೆ ಪೋಷಣೆ ನೀಡುವ ಮತ್ತು ರಕ್ತವನ್ನು ಹೆಚ್ಚಿಸುವ ಕಬ್ಬಿಣಾಂಶದ ಆಹಾರವನ್ನು ಹೇರಳವಾಗಿ ಸೇವಿಸಬೇಕು. ಆಗ ವ್ಯಕ್ತಿಯು ಉತ್ತಮ ಆರೋಗ್ಯದಿಂದ ಉತ್ಸಾಹ ಶೀಲ ಪ್ರವೃತ್ತಿಯನ್ನು ಹೊಂದಿರುತ್ತಾನೆ. ನಾವು ಸೇವಿಸುವ ಆಹಾರ ಪದಾರ್ಥಗಳಲ್ಲಿ ಉತ್ತಮ ಕಬ್ಬಿಣಾಂಶಗಳು ಇದ್ದರೆ ರಕ್ತದಲ್ಲಿ ಕಬ್ಬಿಣಾಂಶದ ಏರಿಕೆ ಆಗುವುದು. ಹಾಗೊಮ್ಮೆ ನಮ್ಮ ರಕ್ತದಲ್ಲಿ ಕಬ್ಬಿಣಾಂಶದ ಕೊರತೆ ಇದೆ ಎಂದಾದರೆ ಅದು ಅನೀಮಿಯಾ ಅಥವಾ ರಕ್ತಹೀನತೆ ಎನಿಸಿಕೊಳ್ಳುತ್ತದೆ. ಯಾರು ಅಗತ್ಯ ಪ್ರಮಾಣದಷ್ಟು ರಕ್ತವನ್ನು ಹೊಂದಿರುವುದಿಲ್ಲವೋ ಅವರು ಸಾಕಷ್ಟು ಬಗೆಯ ಆರೋಗ್ಯ ಸಮಸ್ಯೆಯನ್ನು ಎದುರಿಸಬೇಕಾಗುವುದು.


ರಕ್ತದಲ್ಲಿ ಕಬ್ಬಿಣದ ಕೊರತೆ ಇದ್ದಾಗ ರಕ್ತ ಹೀನತೆ ಸಮಸ್ಯೆಯು ಸಾಮಾನ್ಯವಾಗಿ ಕಾಡುವುದು. ರಕ್ತ ಹೀನತೆಯ ಸಮಸ್ಯೆಯಿಂದ ಹೊರ ಬರಬೇಕು ಎಂದರೆ ರಕ್ತದಲ್ಲಿ ಕಬ್ಬಿಣಾಂಶ ಹೆಚ್ಚಿಸುವ ಆಹಾರ ಪದಾರ್ಥಗಳನ್ನು ಹೇರಳವಾಗಿ ಸೇವಿಸಬೇಕು. ನಾವು ನಿತ್ಯ ಸೇವಿಸುವ ಆಹಾರದಲ್ಲಿ ಜೀವಸತ್ವಗಳು ಮತ್ತು ಖನಿಜಗಳು ಉತ್ತಮವಾಗಿದ್ದರೆ ದೇಹದಲ್ಲಿ ಸಾಕಷ್ಟು ರಕ್ತ ಪ್ರಮಾಣ ಹೆಚ್ಚುವುದು. ದೇಹದಲ್ಲಿ ಆರೋಗ್ಯಕರವಾದ ಹೀಮೋಗ್ಲೋಬಿನ್ ಪ್ರಮಾಣಕ್ಕಿಂತ ಕಡಿಮೆ ಇದ್ದರೆ ಅದನ್ನು ರಕ್ತ ಹೀನತೆ ಎಂದು ಕರೆಯುವರು. 


ಇದನ್ನೂ ಓದಿ-ಬೆಳಗ್ಗೆ ಹಳಸಿದ ಬಾಯಿಯಿಂದ ಈ ಎಲೆಗಳನ್ನು ಅಗೆಯಿರಿ, ರಕ್ತದಲ್ಲಿನ ಸಕ್ಕರೆ ಮಟ್ಟ ತಕ್ಷಣಕ್ಕೆ ನಿಯಂತ್ರಣಕ್ಕೆ ಬರುತ್ತದೆ!


ರಕ್ತಹೀನತೆ ಇರುವಾಗ ಆಮ್ಲಜನಕದ ಸಾಗಣೆಗೆ ಅಡ್ಡಿಯಾಗುವುದು. ಅದನ್ನು ಸಾಗಿಸುವ ಸಾಮರ್ಥ್ಯವು ರಕ್ತದ ಕಣಗಳಿಗೆ ಇರುವುದಿಲ್ಲ. ಈ ಸಮಸ್ಯೆಯು ಮಾರಣಾಂತಿಕ ಆರೋಗ್ಯ ಸಮಸ್ಯೆಗೆ ಕಾರಣವಾಗುವುದು.  ವಯಸ್ಕ ಪುರುಷರಿಗೆ ಪ್ರತಿದಿನ ಸುಮಾರು 8.7 ಮಿಲಿ.ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. 


ವಯಸ್ಕ ಮಹಿಳೆಯರಿಗೆ 14.8 ಗ್ರಾಂ ಕಬ್ಬಿಣಾಂಶದ ಅಗತ್ಯವಿರುತ್ತದೆ. ಅದೇ ಮೌಲ್ಯವು 50ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ 8.9 ಮಿಲಿ.ಗ್ರಾಂ ಸಾಕಾಗುವುದು. ಏಕೆಂದರೆ 50 ವರ್ಷ ದಾಟಿದ ಮಹಿಳೆಯರು ಋತುಚಕ್ರಗಳಿಗೆ ಒಳಗಾಗುವುದಿಲ್ಲ. ಜೊತೆಗೆ ರಕ್ತದ ಹಾನಿಯನ್ನು ಅನುಭವಿಸುವುದಿಲ್ಲ. ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಪೂರೈಕೆಗಾಗಿ ಕೆಲವು ವಿಶೇಷ ಆಹಾರ ಪದಾರ್ಥಗಳನ್ನು ಸೇವಿಸಬೇಕಾಗುವುದು. 


ರಕ್ತ ಹೀನತೆ ಇರುವವರಿಗೆ ಅನೇಕ ಆರೋಗ್ಯ ಸಮಸ್ಯೆಗಳು ಕಾಡಲು ಪ್ರಾರಂಭಿಸುತ್ತವೆ.  ರಕ್ತ ಹೀನತೆಗೆ ಸರಿಯಾದ ಚಿಕಿತ್ಸೆ ಪಡೆಯದೆ ಹೋದರೆ ದೇಹದಲ್ಲಿ ವಿವಿಧ ಸೋಂಕುಗಳು ಕಾಣಿಸಿಕೊಳ್ಳಬಹುದು. ಕಬ್ಬಿಣದ ಕೊರತೆ ಇರುವಾಗ ದೇಹದಲ್ಲಿ ರೋಗ ನಿರೋಧಕ ಶಕ್ತಿಯು ಕಡಿಮೆಯಾಗುವುದು. ಜೊತೆಗೆ ಹೃದಯಕ್ಕೆ ಸಂಬಂಧಿಸಿದಂತೆ ಶ್ವಾಸಕೋಶದ ತೊಂದರೆ ಮತ್ತು ಉಸಿರಾಟದ ತೊಂದರೆ ಅಧಿಕವಾಗಿರುತ್ತವೆ. 


ಅದಕ್ಕೆ ಅದ್ಭುತವಾದ ಆಯ್ಕೆ ಎಂದರೆ ಕಾಳೆ ಸೊಪ್ಪು ಮತ್ತು ಹಸಿರು ಸೊಪ್ಪುಗಳು. ಹಸಿ ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ತಿಂದರೆ ಅಗತ್ಯವಾದ ಕಬ್ಬಿಣಾಂಶವು ದೇಹಕ್ಕೆ ಸಿಗುವುದು. ಕಬ್ಬಿಣಾಂಶ ಹೊಂದಿರುವ ಇತರ ಆಹಾರಗಳಾದ ಸಿರಿ ಧಾನ್ಯಗಳು, ಬೀನ್ಸ್, ಬೀಜಗಳು, ಒಣಗಿದ ಹಣ್ಣುಗಳು ಉತ್ತಮ ಕಬ್ಬಿಣಾಂಶಗಳನ್ನು ಒದಗಿಸುತ್ತವೆ. ಇದರ ಜೊತೆಗೆ ಮಾಂಸ ಮತ್ತು ಯಕೃತ್ತಿನ ಭಾಗವು ಹೆಚ್ಚಿನ ಕಬ್ಬಿಣಾಂಶ ನೀಡುತ್ತವೆ. ಗರ್ಭಿಣಿಯರು ಯಕೃತ್ ಮಾಂಸವನ್ನು ಸೇವಿಸಬಾರದು. ಅದು ಆರೋಗ್ಯದ ಮೇಲೆ ಗಂಭೀರವಾದ ಪ್ರಭಾವವನ್ನು ಉಂಟುಮಾಡುತ್ತದೆ. 


ಕಬ್ಬಿಣಾಂಶದ ಕೊರತೆ  ಇರುವ ವ್ಯಕ್ತಿಗಳು ಚಹಾ, ಕಾಫಿ ಮತ್ತು ಡೈರಿ ಉತ್ಪನ್ನಗಳನ್ನು ಸೇವಿಸಬಾರದು. ಇವುಗಳಲ್ಲಿ ಫೈಟಿಕ್ ಅಮ್ಲವು ಅಧಿಕ ಪ್ರಮಾಣದಲ್ಲಿ ಇರುತ್ತವೆ. ಫೈಟಿಕ್ ಆಮ್ಲ ಇರುವ ಆಹಾರ ಪದಾರ್ಥಗಳು ಕಬ್ಬಿಣಾಂಶವನ್ನು ಹೀರಿಕೊಳ್ಳುತ್ತವೆ. ಆಗ ದೇಹಕ್ಕೆ ಅಗತ್ಯವಾದ ಕಬ್ಬಿಣಾಂಶದ ಪೂರೈಕೆಗೆ ಅಡ್ಡಿ ಉಂಟಾಗುವುದು. ಹಾಗಾಗಿ ರಕ್ತ ಹೀನತೆ ಅಥವಾ ಕಬ್ಬಿಣಾಂಶದ ಕೊರತೆ ಇರುವವರು ಫೈಟಿಕ್ ಆಮ್ಲದ ಆಹಾರವನ್ನು ಸೇವಿಸಬಾರದು ಎಂದು ಸಲಹೆ ನೀಡಲಾಗುವುದು. ಈ ನಿಟ್ಟಿನಲ್ಲಿ ಕಬ್ಬಿಣಂಶ ಅಧಿಕವಿರುವ ಆಹಾರಗಳ ಸೇವನೆ ರಕ್ತಹೀನತೆಯನ್ನು ಬಗೆಹರಿಸಬಲ್ಲದು.


ಇದನ್ನೂ ಓದಿ-Health tips: ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.