Health tips: ಸಕ್ಕರೆ ಖಾಯಿಲೆ ನಿಯಂತ್ರಣಕ್ಕೆ ಈ 5 ಆಹಾರ ಸೇವಿಸಿರಿ

Foods for diabetes: ಫೈಬರ್ ಭರಿತ ಆಹಾರ ಸೇವಿಸುವುದರಿಂದ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ನವದೆಹಲಿ: ಇಂದು ಮಧುಮೇಹ ಅಥವಾ ಸಕ್ಕರೆ ಕಾಯಿಲೆ ತುಂಬಾ ಸಾಮಾನ್ಯ ಸಮಸ್ಯೆ. ಭಾರತವೂ ಸೇರಿದಂತೆ ಜಗತ್ತಿನಲ್ಲಿ ಅನೇಕರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ.  ಒಮ್ಮೆ ಈ ಕಾಯಿಲೆ ಬಂದರೆ ಅದಕ್ಕೆ ಚಿಕಿತ್ಸೆಯೇ ಇಲ್ಲವೆಂದು ಜನರು ಭಾವಿಸುತ್ತಾರೆ. ಆದರೆ ಕೆಲವು ಆಹಾರ ಸೇವಿಸುವ ಮೂಲಕ ನೀವು ದೇಹದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಫೈಬರ್ ಭರಿತ ಆಹಾರ ಸೇವಿಸುವುದರಿಂದ ನೀವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಡಿಮೆ ಮಾಡಬಹುದು. ಇದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

1 /5

ಆ್ಯಪಲ್ ಕಡಿಮೆ ಗ್ಲೈಸೆಮಿಕ್ ಸೂಚ್ಯಂಕದ ಆಹಾರವಾಗಿದೆ. ಇದರಲ್ಲಿ ಫೈಬರ್​ ಅಂಶ ಸಮೃದ್ಧವಾಗಿದೆ. ಹೀಗಾಗಿ ಮಧುಮೇಹ ನಿಯಂತ್ರಿಸಲು ಸೇಬು ಹಣ್ಣು ಸೇವಿಸಬಹುದು. ಸೇಬುಗಳು ವಿಟಮಿನ್ C ಮತ್ತು ಅನೇಕ ಫೈಟೊಕೆಮಿಕಲ್​ಗಳನ್ನು ಹೊಂದಿರುತ್ತವೆ.

2 /5

ಬಾದಾಮಿ ಪ್ರೋಟೀನ್ ಆಹಾರವಾಗಿದ್ದು, ಇದನ್ನು ಸೇವಿಸುವುದರಿಂದ ದೇಹವು ಅನೇಕ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುತ್ತದೆ. ಅದೇ ರೀತಿ  ಹೆಚ್ಚಿನ ಸಕ್ಕರೆ ಕಡಿಮೆ ಮಾಡಲು ಬಾದಾಮಿ ಪ್ರಯೋಜನಕಾರಿ. ಬಾದಾಮಿ ಫೈಬರ್, ಪ್ರೋಟೀನ್ ಮತ್ತು ಮೊನೊಸಾಚುರೇಟೆಡ್ ಕೊಬ್ಬಿನಾಮ್ಲಗಳನ್ನು ಹೊಂದಿರುತ್ತದೆ. ಇದು ಮಧುಮೇಹವನ್ನು ನಿರ್ವಹಿಸುವಲ್ಲಿ ಬಹಳ ಪರಿಣಾಮಕಾರಿ.

3 /5

ಪಾಲಕ್ ಸಹ ಪ್ರೋಟೀನ್ ಮತ್ತು ಫೈಬರ್​ನಲ್ಲಿ ಸಮೃದ್ಧವಾಗಿದೆ. ಹೀಗಾಗಿ ನೈಸರ್ಗಿಕವಾಗಿ ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡಲು ಪಾಲಕ್ ಸೇವಿಸಬಹುದು. ಪಾಲಕದಲ್ಲಿರುವ ಮೆಗ್ನೀಸಿಯಮ್ ಹಲವು ಸಂಶೋಧನೆಗಳಲ್ಲಿ ರಕ್ತದಲ್ಲಿನ ಸಕ್ಕರೆಯನ್ನು ನಿರ್ವಹಿಸುವಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.

4 /5

ಮಧುಮೇಹದಿಂದ ಮುಕ್ತಿ ಹೊಂದಬೇಕಾದರೆ ಉಪಾಹಾರದಲ್ಲಿ ಓಟ್ಸ್ ಸೇವಿಸಬೇಕು. ಓಟ್ಸ್ ಕಡಿಮೆ ಗ್ಲೈಸೆಮಿಕ್ ಆಹಾರ ಮಾತ್ರವಲ್ಲ, ಇದು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುವ ಫೈಬರ್ ಅನ್ನು ನೀಡುತ್ತದೆ. ನಿಯಮಿತವಾಗಿ ಓಟ್ಸ್ ಸೇವನೆಯಿಂದ ನೀವು ಹಲವಾರು ಪ್ರಯೋಜನ ಪಡೆಯುತ್ತೀರಿ.

5 /5

ಅರಿಶಿನವು ಕರ್ಕ್ಯುಮಿನ್ ಅಂಶ ಹೊಂದಿರುತ್ತದೆ. ಇದು ಮೇದೋಜ್ಜೀರಕ ಗ್ರಂಥಿಯನ್ನು ಆರೋಗ್ಯಕರವಾಗಿರಿಸುತ್ತದೆ. ನಿಮ್ಮ ಮೇದೋಜ್ಜೀರಕ ಗ್ರಂಥಿಯು ಆರೋಗ್ಯಕರವಾಗಿದ್ದರೆ ದೇಹದಲ್ಲಿನ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವ ಇನ್ಸುಲಿನ್ ಪ್ರಮಾಣವು ಸಮತೋಲಿತವಾಗಿರುತ್ತದೆ. ಇದರಿಂದ ಸಕ್ಕರೆ ಕಾಯಿಲೆ ನಿಮಗೆ ಹೆಚ್ಚು ಬಾಧಿಸುವುದಿಲ್ಲ.