Eye Health: ತಂತ್ರಜ್ಞಾನ ಮುಂದುವರೆದಂತೆ ಎಲೆಕ್ಟ್ರಾನಿಕ್ ವಸ್ತುಗಳ ಬಳಕೆಯೂ ಹೆಚ್ಚಾಗಿದೆ. ಪುಟ್ಟ ಪುಟ್ಟ ಕಂದಮ್ಮಗಳಿಂದ ಹಿಡಿದು ವಯೋವೃದ್ಧರವರೆಗೂ ಈಗಂತೂ ಯಾರ ಕೈಯಲ್ಲಿ ನೋಡಿದರೂ ಸ್ಮಾರ್ಟ್ಫೋನ್ ಕಾಣಬಹುದು. ಇದಲ್ಲದೆ, ಕರೋನಾ ಸಾಂಕ್ರಾಮಿಕದ ಬಳಿಕ ಎಲ್ಲೆಡೆ ವರ್ಕ್ ಫ್ರಮ್ ಹೋಂ ಸಂಸ್ಕೃತಿಯೂ ಹೆಚ್ಚಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಇತ್ತೀಚಿನ ದಿನಗಳಲ್ಲಿ ಡಿಜಿಟಲ್ ಗ್ಯಾಜೆಟ್‌ಗಳು ಪ್ರತಿಯೊಬ್ಬ ವ್ಯಕ್ತಿಯ ಜೀವಂದಲ್ಲಿ ಅನಿವಾರ್ಯ ಎಂತಲೇ ಹೇಳಬಹುದು. ಆದರೆ, ಗಂಟೆಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದಿರಲಿ, ಇಲ್ಲವೇ ದಿನವಿಡೀ ಗ್ಯಾಜೆಟ್ ಗಳ ಮುಂದೆ ಕಾಲಕಳೆಯುವುದಿರಲಿ ನಮ್ಮ ಆರೋಗ್ಯದ ದೃಷ್ಟಿಯಿಂದ, ಅದರಲ್ಲೂ ಮುಖ್ಯವಾಗಿ ಕಣ್ಣಿನ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ.  


ಡಿಜಿಟಲ್ ಗ್ಯಾಜೆಟ್‌ಗಳು ಕಣ್ಣುಗಳ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಬೀರುತ್ತವೆ. ವಾಸ್ತವವಾಗಿ, ನಮ್ಮಲ್ಲಿ ಬಹುತೇಕ ಜನರು ಕಂಪ್ಯೂಟರ್ ಮುಂದೆ ಕುಳಿತು ದಿನವಿಡೀ ಕೆಲಸ ಮಾಡುತ್ತಾರೆ. ಬಿಡುವಿನ ಸಮಯದಲ್ಲಿ ಮೊಬೈಲ್ ಬಳಕೆ, ಇಲ್ಲವೇ ಟಿವಿ ವೀಕ್ಷಣೆಯಲ್ಲಿ ಕಾಲ ಕಳೆಯುತ್ತಾರೆ. ಇದರಿಂದ ಕಣ್ಣುಗಳಿಗೆ ಹೆಚ್ಚಿನ ಒತ್ತಡ ಉಂಟಾಗುತ್ತದೆ. ಆದರೆ, ಈ ಬಗ್ಗೆ ತಜ್ಞರು ಏನ್ ಹೇಳ್ತಾರೆ ಗೊತ್ತಾ? 


ಇದನ್ನೂ ಓದಿ- ಮಧುಮೇಹಕ್ಕೆ ಇಲ್ಲಿದೆ ದಿವ್ಯೌಷಧ..!..ಈ ಸಲಹೆಯನ್ನು ತಪ್ಪದೇ ಪಾಲಿಸಿ..!


ನವದೆಹಲಿಯ ನೇತ್ರಾ ಐ ಸೆಂಟರ್‌ನಲ್ಲಿ ಹೆಸರಾಂತ ನೇತ್ರತಜ್ಞೆ, ನಿರ್ದೇಶಕ ಮತ್ತು ಸಲಹೆಗಾರರೂ ಆಗಿರುವ ಡಾ ಪ್ರಿಯಾಂಕಾ ಸಿಂಗ್  (MBBS, MS, DNB, FAICO), ಈ ಬಗ್ಗೆ ಮಾತನಾಡಿದ್ದು, ಅತಿಯಾದ ಸ್ಕ್ರೀನ್ ವೀಕ್ಷಣೆಯಿಂದ ಉಂಟಾಗುವ ಕಣ್ಣಿನ ಸಮಸ್ಯೆಗಳು,  ವಿಶೇಷವಾಗಿ ಕಂಪ್ಯೂಟರ್ ವಿಷನ್ ಸಿಂಡ್ರೋಮ್ (CVS) ಅಥವಾ ಡಿಜಿಟಲ್ ಐ ಸ್ಟ್ರೈನ್ (DES)  ವಿಸ್ತೃತ ಕೆಲಸದ ಸಮಯವನ್ನು ಹೊಂದಿರುವ ವಯಸ್ಕರು ಮತ್ತು ಹೆಚ್ಚಾಗಿ ಮೊಬೈಲ್ ವೀಕ್ಷಿಸುವ ಮಕ್ಕಳ ಮೇಲೆ ತುಂಬಾ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಹೇಳಿದ್ದಾರೆ. 


ಡಿಜಿಟಲ್ ಗ್ಯಾಜೆಟ್‌ಗಳ ಸ್ಕ್ರೀನ್ ಕಣ್ಣುಗಳ ಮೇಲೆ ಹೇಗೆ ಪರಿಣಾಮ ಬೀರುತ್ತದೆ? 
ಸ್ಟ್ರೈನ್ಡ್ ಸಿಲಿಯರಿ ಸ್ನಾಯುಗಳು: 

ದೃಷ್ಟಿ ತಜ್ಞರ ಪ್ರಕಾರ, ಹೆಚ್ಚು ಸ್ಕ್ರೀನ್ ನೋಡುವುದರಿಂದ ಕಣ್ಣುಗಳಲ್ಲಿನ ಸಿಲಿಯರಿ ಸ್ನಾಯುಗಳು ದಣಿವರಿಯಿಲ್ಲದೆ ಕೆಲಸ ಮಾಡಲು ಒತ್ತಾಯಿಸುತ್ತದೆ. ದೀರ್ಘ ಸಂಯದವರೆಗೆ ಈ ರೀತಿ ಮಾಡುವುದು ಸ್ನಾಯುವಿನ ಆಯಾಸ, ಕಣ್ಣಿನ ಆಯಾಸಕ್ಕೆ ಕಾರಣವಾಗುತ್ತದೆ. 


ಶುಷ್ಕತೆ, ವಿಕಿರಣ: 
ದೀರ್ಘ ಸಮಯದವರೆಗೆ ಡಿಜಿಟಲ್ ಗ್ಯಾಜೆಟ್ಸ್ ವೀಕ್ಷಣೆಯು ಕಣ್ಣಿನ ಶುಷ್ಕತೆಗೆ ಕಾರಣವಾಗಬಹುದು. ಇದರ ವಿಕಿರಣಗಳು ಕಣ್ಣಿನ ಮೇಲ್ಮೈ ಮೇಲೆ ಹಾನಿಯನ್ನುಂಟು ಮಾಡಬಹುದು.  ಇದರಿಂದಾಗಿ, ಶುಷ್ಕತೆ ಹೆಚ್ಚಾಗುವ ಸಾಧ್ಯತೆ ಇದ್ದು ದೃಷ್ಟಿಹಾನಿ ಸಂಭವಿರುತ್ತದೆ. 


ಇದನ್ನೂ ಓದಿ- ಸ್ತನ ಕ್ಯಾನ್ಸರ್‌.. ಭಯಬೇಡ, ಈ ಮಾಹಿತಿ ತಿಳಿದಿರಲಿ ಸಾಕು.!


ಡಿಜಿಟಲ್ ಐ ಸ್ಟ್ರೈನ್ (DES) ಲಕ್ಷಣಗಳು: 
* ಆಗಾಗ್ಗೆ ತಲೆ ಮತ್ತು ಕುತ್ತಿಗೆಯಲ್ಲಿ ನೋವು 
* ಕಣ್ಣಿನ ತುರಿಕೆ 
* ಮಸುಕಾದ ದೃಷ್ಟಿ
* ಕಣ್ಣಿನ ಆಯಾಸ 
* ಸೂರ್ಯನ ಬೆಳಕಿನಲ್ಲಿ ಕಣ್ಣು ಬಿಡಲು ಕಷ್ಟವಾಗುವುದು ಈ ರೀತಿಯ ಲಕ್ಷಣಗಳು ಕಾಣಿಸಿಕೊಳ್ಳಬಹುದು.  


ಈ ಸಮಸ್ಯೆಗಳ ಪರಿಹಾರಕ್ಕಾಗಿ ತಜ್ಞರ ಸಲಹೆ ಈ ಕೆಳಕಂಡಂತಿದೆ: 
ಗ್ಯಾಜೆಟ್‌ಗಳಿಲ್ಲದೆ ಜೀವನವೇ ಇಲ್ಲ ಎಂಬಂತ ವಾತಾವರಣದಲ್ಲಿ ನಾವಿದ್ದೇವೆ. ಹಾಗಾಗಿ, ನಾವು ಸಂಪೂರ್ಣವಾಗಿ ಇವುಗಳಿಂದ ದೂರ ಸರಿಯಲು ಸಾಧ್ಯವಿಲ್ಲ. ಆದರೆ, ತಜ್ಞರ ಸಲಹೆಯನ್ನು ಅನುಸರಿಸುವ ಮೂಲಕ ದೃಷ್ಟಿ ಹಾನಿಯಾಗದಂತೆ ನಿಗಾವಹಿಸಬಹುದು. ಅಂತಹ ಕೆಲವು ಸಲಹೆಗಳೆಂದರೆ... 


* ಆರಾಮದಾಯಕ ವೀಕ್ಷಣೆಗೆ ಪರದೆಗಳು ಕಣ್ಣಿನ ಮಟ್ಟಕ್ಕಿಂತ ಕೆಳಗಿವೆ ಎಂಬುದನ್ನೂ ಖಚಿತಪಡಿಸಿಕೊಳ್ಳಿ. 
* ಸಾಧ್ಯವಾದಷ್ಟು ಚಿಕ್ಕ ಗಾತ್ರದ ಪರದೆ ಬದಲಿಗೆ ದೊಡ್ಡ ಗಾತ್ರದ ಪರದೆಯನ್ನು ಆರಿಸಿ. 
* ಮಕ್ಕಳಿಗೆ ಆನ್ಲೈನ್ ತರಗತಿಗಳಿಗಾಗಿ ಟ್ಯಾಬ್ಲೆಟ್‌ಗಳು ಅಥವಾ ಸ್ಮಾರ್ಟ್‌ಫೋನ್‌ಗಳ ಬದಲಿಗೆ ಡೆಸ್ಕ್‌ಟಾಪ್ ಕಂಪ್ಯೂಟರ್‌ಗಳನ್ನು ನೀಡಲು ಪ್ರಯತ್ನಿಸಿ. 
* ಕಣ್ಣಿನ ಆಯಾಸವನ್ನು ತಪ್ಪಿಸಲು ನಿಮ್ಮ ಸುತ್ತಮುತ್ತಲಿನ ಬೆಳಕಿಗೆ ತಕ್ಕಂತೆ ಸ್ಕ್ರೀನ್ ಬೆಳಕನ್ನು ಹೊಂದಿಸಿ. 
* ದೀರ್ಘ ಸಮಯದವರೆಗೆ ಕಂಪ್ಯೂಟರ್ ನಲ್ಲಿ ಕೆಲಸ ಮಾಡುವವರು ಕನಿಷ್ಠ 30 ನಿಮಿಷಗಳಿಗೆ ಒಮ್ಮೆಯಾದರೂ ಕಣ್ಣಿಗೆ ವಿರಾಮ ನೀಡಲು ಪ್ರಯತ್ನಿಸಿ. 
* ಸಾಧ್ಯವಾದಷ್ಟು ಶುದ್ಧವಾದ ನೈಸರ್ಗಿಕ ವಾತಾವರಣದಲ್ಲಿ ಕುಳಿತು ಕಣ್ಣಿಗೆ ಸಂಬಂಧಿಸಿದ ವ್ಯಾಯಾಮಗಳನ್ನು ರೂಢಿಸಿಕೊಳ್ಳಿ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.