ಮಧುಮೇಹಕ್ಕೆ ಇಲ್ಲಿದೆ ದಿವ್ಯೌಷಧ..!..ಈ ಸಲಹೆಯನ್ನು ತಪ್ಪದೇ ಪಾಲಿಸಿ..!

ಟೈಪ್ 2 ಮಧುಮೇಹವನ್ನು ಹೊಂದಿರುವ 3,042 ವ್ಯಕ್ತಿಗಳು ಮತ್ತು 152 ವೈದ್ಯರನ್ನೊಳಗೊಂಡು ‘STAR’ (Survey for ManagemenT of DiAbetes with FibeR-rich Nutrition Drink) ನಡೆಸಿದ ಪ್ಯಾನ್-ಇಂಡಿಯಾ ಸಮೀಕ್ಷೆಯ ಫಲಿತಾಂಶಗಳನ್ನು ಇತ್ತೀಚೆಗೆ ‘ಇಂಡಿಯನ್ ಜರ್ನಲ್ ಆಫ್ ಕ್ಲಿನಿಕಲ್ ಪ್ರಾಕ್ಟೀಸ್’ನಲ್ಲಿ ಪ್ರಕಟಿಸಲಾಗಿದ್ದು, ಇದು ಫೈಬರ್‌ಗಳಿಂದ ಸಮೃದ್ಧವಾದ ಪೂರಕಗಳ ದೈನಂದಿನ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಹೇಗೆ ನೆರವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.

Written by - Manjunath N | Last Updated : Oct 31, 2023, 04:31 PM IST
  • ಸೂಕ್ತವಾದ ಪೌಷ್ಟಿಕಾಂಶಗಳ ಸೇವನೆ ಮಧುಮೇಹ ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ.
  • ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಫೈಬರ್ ಸೇವನೆಯನ್ನು ಹೆಚ್ಚಿಸುವ ಅಗತ್ಯವಿದೆ.
  • ಆಹಾರದಲ್ಲಿನ ಫೈಬರ್ ಅಂಶವು ಸಂತೃಪ್ತಿಯ ಭಾವನೆಯನ್ನು ತರುತ್ತದೆ
ಮಧುಮೇಹಕ್ಕೆ ಇಲ್ಲಿದೆ ದಿವ್ಯೌಷಧ..!..ಈ ಸಲಹೆಯನ್ನು ತಪ್ಪದೇ ಪಾಲಿಸಿ..! title=

ಬೆಂಗಳೂರು: ಟೈಪ್ 2 ಮಧುಮೇಹವನ್ನು ಹೊಂದಿರುವ 3,042 ವ್ಯಕ್ತಿಗಳು ಮತ್ತು 152 ವೈದ್ಯರನ್ನೊಳಗೊಂಡು ‘STAR’ (Survey for ManagemenT of DiAbetes with FibeR-rich Nutrition Drink) ನಡೆಸಿದ ಪ್ಯಾನ್-ಇಂಡಿಯಾ ಸಮೀಕ್ಷೆಯ ಫಲಿತಾಂಶಗಳನ್ನು ಇತ್ತೀಚೆಗೆ ‘ಇಂಡಿಯನ್ ಜರ್ನಲ್ ಆಫ್ ಕ್ಲಿನಿಕಲ್ ಪ್ರಾಕ್ಟೀಸ್’ನಲ್ಲಿ ಪ್ರಕಟಿಸಲಾಗಿದ್ದು, ಇದು ಫೈಬರ್‌ಗಳಿಂದ ಸಮೃದ್ಧವಾದ ಪೂರಕಗಳ ದೈನಂದಿನ ಸೇವನೆಯು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಣದಲ್ಲಿಡಲು ಹೇಗೆ ನೆರವಾಗುತ್ತದೆ ಎಂಬುದನ್ನು ತೋರಿಸಿಕೊಟ್ಟಿದೆ.

ಸಮೀಕ್ಷೆಯಲ್ಲಿ ಮಧುಮೇಹ ಹೊಂದಿರುವ ವ್ಯಕ್ತಿಗಳನ್ನು ಎರಡು ಗುಂಪುಗಳಾಗಿ ವರ್ಗೀಕರಿಸಲಾಯಿತು, ಅದರಲ್ಲಿ ಒಂದು ಗುಂಪು ಒಂದು ನಿರ್ದಿಷ್ಟವಾದ ಫೈಬರ್ ಸಮೃದ್ಧ ಪೂರಕವನ್ನು ಕನಿಷ್ಠ ಮೂರು ತಿಂಗಳವರೆಗೆ ಸೇವಿಸಿತು ಮತ್ತು ಇನ್ನೊಂದು ಗುಂಪು ಆ ಪೂರಕವನ್ನು ಸೇವಿಸಲಿಲ್ಲ. ಮೂರು ತಿಂಗಳವರೆಗೆ ಫೈಬರ್ ಸಮೃದ್ಧ ಪೂರಕವನ್ನು ಸೇವಿಸಿದ ಮಧುಮೇಹವಿರುವ ವ್ಯಕ್ತಿಗಳಲ್ಲಿ ಪೂರಕವನ್ನು ಸೇವಿಸದಿರುವ ವ್ಯಕ್ತಿಗಳಿಗಿಂತ HbA1C ಗಮನಾರ್ಹವಾಗಿ ಕಡಿಮೆಯಾಗಿದ್ದು ಮತ್ತು ತೂಕವು ಹೆಚ್ಚಿನ ಪ್ರಮಾಣದಲ್ಲಿ ಇಳಿಕೆಯಾಗಿದ್ದು ಮತ್ತು ಸಂತೃಪ್ತಿಯ ಭಾವನೆಗಳನ್ನು ಹೊಂದಿರುವುದು ಎಂದು ತಿಳಿದುಬಂದಿತು.

ಇದನ್ನೂ ಓದಿ: ಅಧಿಕಾರಕ್ಕೆ ಅಂಟಿಕೊಂಡು ಕೂರುವುದಿಲ್ಲ.. ರೈತರ ಹಿತ ಕಾಯುವುದು ಶತಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಯ 

ಪ್ರಪಂಚದಾದ್ಯಂತ ನಡೆಸಿದ ಬಹಳಷ್ಟು ವೈದ್ಯಕೀಯ ಅಧ್ಯಯನಗಳು ಮಧುಮೇಹದ ನಿರ್ವಹಣೆಯಲ್ಲಿ ಫೈಬರ್ ಸಮೃದ್ಧ ಆಹಾರದ ಪಾತ್ರವನ್ನು ದೃಢಪಡಿಸಿವೆ. RSSDI ಮತ್ತು ಅಮೆರಿಕನ್ ಡಯಾಬಿಟಿಸ್ ಅಸೋಸಿಯೇಷನ್‌ನಂತಹ ಸಂಸ್ಥೆಗಳು ಕೂಡ ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಆಹಾರದಲ್ಲಿ ಫೈಬರ್‌ ಸೇವನೆಯನ್ನು ಹೆಚ್ಚಿಸಬೇಕು ಎಂದು ಶಿಫಾರಸು ಮಾಡುತ್ತವೆ. ಭಾರತದಲ್ಲಿ ಮಧುಮೇಹ ಹೊಂದಿರುವ ವ್ಯಕ್ತಿಗಳು ದಿನಕ್ಕೆ 25ರಿಂದ 40 ಗ್ರಾಂ ಫೈಬರ್ ಸೇವಿಸಬೇಕೆಂದು RSSDI ಶಿಫಾರಸು ಮಾಡುತ್ತದೆ, ಆದರೆ ನಿಜವಾದ ಸೇವನೆಯು ವಿವಿಧ ಸಾಮಾಜಿಕ ಆರ್ಥಿಕ ಗುಂಪುಗಳಲ್ಲಿ ಒಂದೊಂದು ರೀತಿ ಇದ್ದು ದಿನಕ್ಕೆ 15ರಿಂದ 40 ಗ್ರಾಂವರೆಗೆ ಇದೆ. ಇದರರ್ಥ ಭಾರತದಲ್ಲಿ ಮಧುಮೇಹ ಹೊಂದಿರುವ ಬಹುತೇಕ ವ್ಯಕ್ತಿಗಳು ಫೈಬರ್‌ನ ದೈನಂದಿನ ಅಗತ್ಯವನ್ನು ಪೂರೈಸಿಕೊಳ್ಳುತ್ತಿಲ್ಲ. ಫೈಬರ್‌ ಸಮೃದ್ಧವಾಗಿರುವ ಪೂರಕಗಳ ಸೇವನೆಯ ಮೂಲಕ ಈ ಅಂತರವನ್ನು ನಿವಾರಿಸಿಕೊಳ್ಳುವುದು ಮತ್ತು ಮಧುಮೇಹ ಹೊಂದಿರುವ ರೋಗಿಗಳು ತಮ್ಮ ಸ್ಥಿತಿಯನ್ನು ಪರಿಣಾಮಕಾರಿಯಾಗಿ ಸುಧಾರಿಸಿಕೊಳ್ಳುವುದು ಹೇಗೆ ಸಾಧ್ಯ ಎಂಬುದನ್ನು 'STAR' ಸಮೀಕ್ಷೆ ತೋರಿಸುತ್ತದೆ.

ಇದನ್ನೂ ಓದಿ: ಶಾಸಕ ಅಬ್ಬಯ್ಯಾ ಕಿಡಿ, ಕಾಂಗ್ರೆಸ್ ನಲ್ಲಿ ತಳಮಳ; ಕಾರ್ಪೊರೇಟರ್‌ಗಳ ಎದೆಯಲ್ಲಿ ಢವಢವ 

ಸೌತ್ ಏಷ್ಯನ್ ಫೆಡರೇಶನ್ ಆಫ್ ಎಂಡೋಕ್ರೈನ್ ಸೊಸೈಟೀಸ್ (SAFES) ಅಧ್ಯಕ್ಷರು ಮತ್ತು ಈ ಸಮೀಕ್ಷೆಯ ಪ್ರಮುಖ ಕರ್ತೃ ಆಗಿರುವ ಡಾ. ಸಂಜಯ್ ಕಲ್ರಾ ಅವರು ಹೇಳುತ್ತಾರೆ, “ಸೂಕ್ತವಾದ ಪೌಷ್ಟಿಕಾಂಶಗಳ ಸೇವನೆ ಮಧುಮೇಹ ನಿರ್ವಹಣೆಯ ಅವಿಭಾಜ್ಯ ಅಂಗವಾಗಿದೆ. ಮಧುಮೇಹ ಹೊಂದಿರುವ ವ್ಯಕ್ತಿಗಳು ಕಾರ್ಬೋಹೈಡ್ರೇಟ್‌ಗಳು ಮತ್ತು ಸಕ್ಕರೆಯ ಸೇವನೆಯನ್ನು ಕಡಿಮೆ ಮಾಡುವುದಷ್ಟೇ ಅಲ್ಲದೆ ಫೈಬರ್ ಸೇವನೆಯನ್ನು ಹೆಚ್ಚಿಸುವ ಅಗತ್ಯವಿದೆ. ಆಹಾರದಲ್ಲಿನ ಫೈಬರ್ ಅಂಶವು ಸಂತೃಪ್ತಿಯ ಭಾವನೆಯನ್ನು ತರುತ್ತದೆ ಮತ್ತು ಅತಿಯಾದ ಆಹಾರಸೇವನೆಯನ್ನು ತಡೆಯುತ್ತದೆ. ಜೀರ್ಣಕ್ರಿಯೆಯ ಸಮಯದಲ್ಲಿ, ನಮ್ಮ ಕರುಳಿನಿಂದ ಸಕ್ಕರೆಯನ್ನು ಹೀರಿಕೊಂಡು ರಕ್ತಕ್ಕೆ ಪೂರೈಸುವ ಪ್ರಮಾಣವನ್ನು ಫೈಬರ್‌ ಕಡಿಮೆ ಮಾಡುತ್ತದೆ ಮತ್ತು ಆಹಾರ ಸೇವನೆಯ ನಂತರ ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಹೆಚ್ಚಿನ ಸಂದರ್ಭಗಳಲ್ಲಿ, ಮಧುಮೇಹ ಹೊಂದಿರುವ ವ್ಯಕ್ತಿಗಳು ತಮ್ಮ ಆಹಾರದಿಂದ ಅಗತ್ಯ ಪ್ರಮಾಣದ ಫೈಬರ್ ಅನ್ನು ಪಡೆಯುವುದಿಲ್ಲ. ಫೈಬರ್ ಸಮೃದ್ಧ ಪೌಷ್ಟಿಕಾಂಶ ಪೂರಕದ ಸೇವನೆಯು ಅವರ ದೈನಂದಿನ ಫೈಬರ್ ಅಗತ್ಯವನ್ನು ಪೂರ್ಣಗೊಳಿಸುತ್ತದೆ ಎಂದು ಈ ಸಮೀಕ್ಷೆಯು ತೋರಿಸಿದೆ.

ಮಧುಮೇಹದ ನಿರ್ವಹಣೆಯು ವೈದ್ಯಕೀಯ ಚಿಕಿತ್ಸೆಯನ್ನು ಅನುಸರಿಸುವ ಜೊತೆಗೆ ಇನ್ನೂ ಹಲವು ವಿಷಯಗಳಿಗೆ ಸಂಬಂಧಿಸಿದೆ ಎಂಬುದನ್ನು ಸಮೀಕ್ಷೆಯು ತೋರಿಸಿದೆ. ರೋಗಿಗಳು ತಮ್ಮ ತೂಕವನ್ನು ನಿಯಂತ್ರಿಸಲು ಮತ್ತು ತಮ್ಮ ರಕ್ತದಲ್ಲಿನ ಗ್ಲೂಕೋಸ್ ಅನ್ನು ನಿಯಂತ್ರಣಕ್ಕೆ ತರಲು ತಮ್ಮ ಆಹಾರ ಪದ್ಧತಿಯನ್ನು ಮಾರ್ಪಡಿಸಿಕೊಳ್ಳಬೇಕಾಗುತ್ತದೆ.

STAR ಸಮೀಕ್ಷೆಯು, 152 ವೈದ್ಯರನ್ನೂ ಸಮೀಕ್ಷೆ ನಡೆಸಿದ್ದು, ಟೈಪ್ 2 ಮಧುಮೇಹ ಹೊಂದಿರುವ 50% ರೋಗಿಗಳಿಗೆ, ಬೊಜ್ಜನ್ನು ಹೊಂದಿರುವ 40% ರೋಗಿಗಳಿಗೆ ಮತ್ತು ಅಧಿಕ ತೂಕ ಹೊಂದಿರುವ 35% ರೋಗಿಗಳಿಗೆ ವೈದ್ಯರು ಫೈಬರ್ ಸಮೃದ್ಧ ಪೂರಕ ಆಹಾರವನ್ನು ಶಿಫಾರಸು ಮಾಡುವುದು ತಿಳಿದುಬಂದಿದೆ. ಸಮೀಕ್ಷೆಯಲ್ಲಿ ಪಾಲ್ಗೊಂಡ ವೈದ್ಯರ ಪ್ರಕಾರ, ಮಧುಮೇಹ ಹೊಂದಿರುವ ವ್ಯಕ್ತಿಗಳಿಗೆ ಫೈಬರ್ ಸೇವನೆಯಿಂದ ಸಂತೃಪ್ತಿಯ ಮಟ್ಟದಲ್ಲಿ ಸುಧಾರಣೆ, ದೈಹಿಕ ಚಟುವಟಿಕೆಯಲ್ಲಿ ಹೆಚ್ಚಳ, HbA1C ಮತ್ತು ಗ್ಲೂಕೋಸ್ ಮಟ್ಟಗಳಲ್ಲಿ ಇಳಿಕೆ ಮತ್ತು ರಕ್ತದಲ್ಲಿನ ಗ್ಲೂಕೋಸ್ ನಿಯಂತ್ರಿಸಲು ಉಪಯೋಗಿಸುವ ಔಷಧಿಗಳ ಸಂಖ್ಯೆ ಮತ್ತು ಪ್ರಮಾಣದಲ್ಲಿ ಇಳಿಕೆ ಮುಂತಾದ ಹಲವು ಪ್ರಯೋಜನಗಳಿವೆ. ಟೈಪ್ 2 ಮಧುಮೇಹದ ನಿರ್ವಹಣೆಯಲ್ಲಿ ಫೈಬರ್‌ಯುಕ್ತ ಆಹಾರದ ಪಾತ್ರದ ಬಗ್ಗೆ ರೋಗಿಗಳು ಮತ್ತು ವೈದ್ಯರಲ್ಲಿ ಹೆಚ್ಚಿನ ಜಾಗೃತಿಯ ಅಗತ್ಯವಿರುವುದನ್ನು ವೈದ್ಯರು ಎತ್ತಿ ತೋರಿಸಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News