ಈ ಸಮಸ್ಯೆಯಿದ್ದಲ್ಲಿ ಮೊಟ್ಟೆಯನ್ನು ಸೇವಿಸಬಾರದು!
ಮೊಟ್ಟೆಯಲ್ಲಿ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಈ ಸೂಪರ್ ಫುಡ್ ಎಲ್ಲರ ಆರೋಗ್ಯಕ್ಕೂ ಒಗ್ಗುತ್ತದೆ ಎಂದರೆ ಅದು ತಪ್ಪು. ಮೊಟ್ಟೆಯನ್ನು ತಿಂದರೆ ಅದು ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು.
Side Effects Of Eating Eggs : ದಿನಕ್ಕೊಂದು ಮೊಟ್ಟೆ ತುಂಬುವುದು ಹೊಟ್ಟೆ ಎನ್ನುವ ಮಾತನ್ನು ಎಲ್ಲರೂ ಕೇಳಿರುತ್ತೀರಿ. ಹೌದು, ಮೊಟ್ಟೆ ತಿಂದರೆ ಹೊಟ್ಟೆ ತುಂಬುವುದು ಮಾತ್ರವಲ್ಲ ಆರೋಗ್ಯಕ್ಕೆ ಬೇಕಾದ ಎಲ್ಲಾ ಪೋಷಕಾಂಶಗಳು ಸಿಗುತ್ತವೆ. ಮೊಟ್ಟೆಯಲ್ಲಿ ದೇಹಕ್ಕೆ ಅಗತ್ಯವಿರುವ ಪ್ರೊಟೀನ್ ಮತ್ತು ವಿಟಮಿನ್ ಗಳು ಸಮೃದ್ಧವಾಗಿದೆ. ಈ ಕಾರಣಕಾಗಿಯೇ ಬೆಳಗಿನ ಉಪಹಾರದಲ್ಲಿ ಹೆಚ್ಚಿನವರು ಮೊಟ್ಟೆಯನ್ನು ಸೇವಿಸುತ್ತಾರೆ. ಆದರೆ ಈ ಸೂಪರ್ ಫುಡ್ ಎಲ್ಲರ ಆರೋಗ್ಯಕ್ಕೂ ಒಗ್ಗುತ್ತದೆ ಎಂದರೆ ಅದು ತಪ್ಪು. ಈ 5 ಸಮಸ್ಯೆಗಳನ್ನು ಹೊಂದಿರುವವರು ಮೊಟ್ಟೆಯನ್ನು ತಿಂದರೆ ಅದು ಅವರ ಆರೋಗ್ಯಕ್ಕೆ ಮಾರಕವಾಗಿ ಪರಿಣಮಿಸಬಹುದು.
1. ಹೃದ್ರೋಗ :
ಹೃದಯದ ಆರೋಗ್ಯವನ್ನು ಉತ್ತಮವಾಗಿಡಬೇಕಾದರೆ, ಹೃದಯಾಘಾತ ಆಗದಂತೆ ತಡೆಯಬೇಕಾದರೆ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ, ಹೃದಯ ಕಾಯಿಲೆಗಳ ಅಪಾಯವು ಹೆಚ್ಚಾಗುತ್ತದೆ.
ಇದನ್ನೂ ಓದಿ : Side Effects Of Orange : ಕಿತ್ತಳೆ ಹಣ್ಣು ತಿಂದ ಮೇಲೆ ಯಾವತ್ತೂ ಸೇವಿಸಬೇಡಿ ಈ ಪದಾರ್ಥಗಳನ್ನು!
2. ಚರ್ಮದ ಸಮಸ್ಯೆ :
ಮೊಟ್ಟೆಯ ದೇಹವನ್ನು ಹೀಟ್ ಮಾಡುತ್ತದೆ. ಆದ್ದರಿಂದ ಸೂಪರ್ ಫುಡ್ ಎಂದೆನಿಸಿಕೊಂಡಿರುವ ಮೊಟ್ಟೆಯನ್ನು ತಿಂದರೆ ಚರ್ಮದ ಸಮಸ್ಯೆಗಳು ಉದ್ಭವಿಸಬಹುದು. ಮುಖದ ಮೇಲೆ ಮೊಡವೆಗಳು ಕಾಣಿಸಿಕೊಳ್ಳಬಹುದು. ಮೊಟ್ಟೆಗಳಿಂದಾಗಿ, ಹಾರ್ಮೋನುಗಳಲ್ಲಿ ಬದಲಾವಣೆ ಕಂಡುಬರುತ್ತದೆ. ಈ ಕಾರಣದಿಂದಾಗಿ, ಅಡ್ಡಪರಿಣಾಮಗಳ ಅಪಾಯವು ಹೆಚ್ಚಾಗುತ್ತದೆ.
3. ಇನ್ಸುಲಿನ್ ಪ್ರತಿರೋಧ :
ಪ್ರತಿದಿನ ಮಿತಿಗಿಂತ ಹೆಚ್ಚು ಮೊಟ್ಟೆಗಳನ್ನು ಸೇವಿಸಿದರೆ, ದೇಹವು ಇನ್ಸುಲಿನ್ ನಿರೋಧಕವಾಗಬಹುದು. ಸಾಮಾನ್ಯವಾಗಿ ದಿನಕ್ಕೆ 2 ರಿಂದ 3 ಮೊಟ್ಟೆಗಳನ್ನು ತಿನ್ನುವಂತೆ ಸಲಹೆ ನೀಡಲಾಗುತ್ತದೆ.
4. ಅಜೀರ್ಣ :
ಜೀರ್ಣಾಂಗ ವ್ಯವಸ್ಥೆ ಸರಿಯಾಗಿಲ್ಲದಿದ್ದರೆ ಅಥವಾ ಮಲಬದ್ಧತೆ, ಗ್ಯಾಸ್, ಅಸಿಡಿಟಿ, ಅಜೀರ್ಣ ಅಥವಾ ವಾಕರಿಕೆ ಮುಂತಾದ ಸಮಸ್ಯೆಗಳಿದ್ದರೆ, ಮೊಟ್ಟೆ ತಿನ್ನಬಾರದು. ಇದು ಹೊಟ್ಟೆಯ ಸಮಸ್ಯೆಗಳನ್ನು ಹೆಚ್ಚಿಸುತ್ತದೆ.
ಇದನ್ನೂ ಓದಿ : Health Tips: ಚಳಿಗಾಲದಲ್ಲಿ ಕಾಡುವ ಹಿಮ್ಮಡಿ ನೋವಿಗೆ ಸರಳ ಮನೆಮದ್ದು
5. ಕ್ಯಾನ್ಸರ್ ಅಪಾಯ :
ಹೆಚ್ಚು ಮೊಟ್ಟೆಗಳನ್ನು ತಿನ್ನುವ ಜನರು ಕೊಲೊರೆಕ್ಟಲ್ ಸೇರಿದಂತೆ ಇತರ ರೀತಿಯ ಕ್ಯಾನ್ಸರ್ ಅಪಾಯವನ್ನು ಎದುರಿಸುತ್ತಾರೆ ಎನ್ನುವುದು ಅನೇಕ ಸಂಶೋಧನೆಗಳಲ್ಲಿ ಸಾಬೀತಾಗಿದೆ. ಪ್ರತಿ ವರ್ಷ ಅನೇಕ ಜನರು ಕ್ಯಾನ್ಸರ್ ನಿಂದ ಸಾವಿನ ಕದ ತಟ್ಟುತ್ತಿದ್ದಾರೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.