Cooking Food In A Pressure Cooker : ಅಡುಗೆ ಮಾಡುವುದು ಕೂಡಾ ಒಂದು ಕಲೆ ಎಂದು ಹೇಳಲಾಗುತ್ತದೆ.  ಆ ಕಲೆ ಎಲ್ಲರಲ್ಲಿಯೂ ಇರುವುದಿಲ್ಲ. ಕೆಲವರು ಬಹಳ ಚೆನ್ನಾಗಿ ಅಡುಗೆ ಮಾಡುತ್ತಾರೆ. ಇನ್ನು ಕೆಲವರು ಅದೆಂಥಾ ಮಸಾಲೆ ಬಳಸಿದರೂ, ಟ್ರಿಕ್ಸ್ ಬಳಸಿದರೂ ಅಡುಗೆ ರುಚಿ ಹೆಚ್ಚುವುದೇ ಇಲ್ಲ. ಇನ್ನು ಕೆಲವರಿಗೆ ಅಡುಗೆ ಮಾಡುವುದಕ್ಕೂ ಸಮಯದ ಅಭಾವ.  ಹಿಂದಿನ ಕಾಲದಲ್ಲಿ ಹೆಚ್ಚು ಸವಲತ್ತುಗಳಿರಲಿಲ್ಲ. ಅಡುಗೆಯ ಎಲ್ಲಾ ಪ್ರಕ್ರಿಯೆಗೆ ದೈಹಿಕ ಶ್ರಮ ಅಗತ್ಯವಾಗಿತ್ತು. ಈಗ ಹಾಗಲ್ಲ ಅನೇಕ ಉಪಕರಣಗಳು  ನಮ್ಮ ಅಡುಗೆ ಮನೆಯಲ್ಲಿ ಜಾಗ ಪಡೆದುಕೊಂಡಿವೆ. 
ಒಂದು ರೀತಿಯಲ್ಲಿ ಅಡುಗೆ ವಿಧಾನಗಳೇ ಬದಲಾಗಿವೆ. ಹಸ್ತಚಾಲಿತ ಅಡುಗೆಯಿಂದ ಉಪಕರಣಗಳ ಮೇಲೆ ಅವಲಂಬಿತರಾಗಿ ಬಿಟ್ಟಿದ್ದೇವೆ. ಈ ಉಪಕರಣಗಳಲ್ಲಿ ಕುಕ್ಕರ್ ಕೂಡಾ ಒಂದು.


COMMERCIAL BREAK
SCROLL TO CONTINUE READING

ಕುಕ್ಕರ್ ಇಲ್ಲದೆ ಅಡುಗೆ ಮನೆಯಲ್ಲಿ ಕೆಲಸ ಸಾಗುವುದೇ ಇಲ್ಲ. ಪ್ರೆಶರ್ ಕುಕ್ಕರ್ ನಲ್ಲಿ ಅಡುಗೆ ಮಾಡುವಾಗ ಸಮಯ ಉಳಿಯುತ್ತದೆ ನಿಜ. ಆದರೆ ಆಹಾರದ ರುಚಿ ಕೆಡುತ್ತದೆ. ರುಚಿಯ ಮಾತು ಹಾಗಿರಲಿ ಕೆಲವು ಆಹಾರಗಳನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ ಅದು ಆರೋಗ್ಯದ ಮೇಲೆ ನೇರ ಪರಿಣಾಮ ಬೀರಬಹುದು. ಪ್ರೆಶರ್ ಕುಕ್ಕರ್‌ನಲ್ಲಿ ಅಡುಗೆ ಮಾಡುವುದನ್ನು ತಪ್ಪಿಸಬೇಕಾದ ಐದು ಆಹಾರಗಳ ಪಟ್ಟಿ ಇಲ್ಲಿದೆ.


ಇದನ್ನೂ ಓದಿ : 18ರಿಂದ 30 ವಯಸ್ಸಿನ ಯುವಕರಲ್ಲಿ ಹೆಚ್ಚುತ್ತಿದೆ ಈ ಕ್ಯಾನ್ಸರ್ ! ದೇಹ ನೀಡುವ ಈ ಎರಡು ಲಕ್ಷಣಗಳನ್ನು ಗುರುತಿಸಿಕೊಳ್ಳಿ


ಈ ಆಹಾರ ಪದಾರ್ಥಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು : 


1. ಅನ್ನ  :
ನೀವು ಅನ್ನ ಬೇಯಿಸಲು ಪ್ರೆಶರ್ ಕುಕ್ಕರ್ ಬಳಸುವವರಾಗಿದ್ದರೆ, ನೀವು ಅನುಸರಿಸುತ್ತಿರುವ ಕ್ರಮವನ್ನು ಇಂದೇ ನಿಲ್ಲಿಸಿ ಬಿಡಿ. ಅಕ್ಕಿಯಲ್ಲಿರುವ ಪಿಷ್ಟವು ಅಕ್ರಿಲಮೈಡ್ ಎಂಬ ಹಾನಿಕಾರಕ ರಾಸಾಯನಿಕವನ್ನು ಬಿಡುಗಡೆ ಮಾಡುತ್ತದೆ. ಇದು ಕೆಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ರಾಸಾಯನಿಕವನ್ನು ನಿಯಮಿತವಾಗಿ ಸೇವಿಸುವುದರಿಂದ ಕ್ಯಾನ್ಸರ್, ಬಂಜೆತನ ಮತ್ತು ನರವೈಜ್ಞಾನಿಕ ಅಸ್ವಸ್ಥತೆಗಳಂತಹ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು . ಹಾಗಾಗಿ ಅನ್ನವನ್ನು ಕುಕ್ಕರ್ ನಲ್ಲಿ ಬೇಯಿಸುವ ಬದಲು ಸಾಮಾನ್ಯ ಪಾತ್ರೆಯಲ್ಲಿ ಬೇಯಿಸುವುದೇ ಉತ್ತಮ. ಇನ್ನು ಮಂಡಿ ನೋವು, ಗಂಟು ನೋವು ಇದ್ದವರಂತೂ ಕುಕ್ಕರ್ ಬದಲು ಸಾಮಾನ್ಯ ಪಾತ್ರೆಗಳಲ್ಲಿ ಅನ್ನ ಬೇಯಿಸಿ, ನೀರನ್ನು ಬಸಿದು ಸೇವಿಸುವುದು ಉತ್ತಮ ಎಂದು ಹೇಳಲಾಗುತ್ತದೆ. 


2. ಆಲೂಗಡ್ಡೆ : 
ನಮ್ಮಲ್ಲಿ ಹೆಚ್ಚಿನವರು ಆಲೂಗೆಡ್ಡೆಯನ್ನು ಬೇಯಿಸಲು ಪ್ರೆಶರ್ ಕುಕ್ಕರ್ ಅನ್ನು ಬಳಸುತ್ತಾರೆ. ಆದರೆ ಅಕ್ಕಿಯಂತೆ, ಆಲೂಗಡ್ಡೆ ಕೂಡಾ ಹೆಚ್ಚಿನ ಪ್ರಮಾಣದ ಪಿಷ್ಟವನ್ನು ಹೊಂದಿರುತ್ತದೆ. ಅದಕ್ಕಾಗಿಯೇ ಅವುಗಳನ್ನು ಪ್ರೆಶರ್ ಕುಕ್ಕರ್‌ನಲ್ಲಿ ಕುದಿಸುವುದು ಅಥವಾ ಬೇಯಿಸುವುದು ಸರಿಯಲ್ಲ. ಅಡುಗೆಮನೆಯಲ್ಲಿ ಸಮಯವನ್ನು ಉಳಿಸುವ ಕಾರಣಕ್ಕೆ ಆಲೂಗಡ್ಡೆಯನ್ನು ಕುಕ್ಕರ್ ನಲ್ಲಿ ಬೇಯಿಸಿದರೆ ಇದು ಸಮಯವನ್ನೆನ್ನೋ ಉಳಿಸಬಹುದು. ಆದರೆ, ಆರೋಗ್ಯಕ್ಕೆ ಹಾನಿಕಾರಕವಾಗಿ ಪರಿಣಮಿಸಬಹುದು. 


ಇದನ್ನೂ ಓದಿ : ತುಂಬಾ ದಪ್ಪಗಿದ್ದೀರಾ..? ಈ ಹಣ್ಣನ್ನು ತಿನ್ನಿ ನಿಮ್ಮ ತೂಕ ಕಡಿಮೆಯಾಗುತ್ತದೆ


3. ಪಾಸ್ತಾ​ : 
ಇನ್ನು ಪಾಸ್ತಾವನ್ನು ಕೂಡಾ ಪ್ರೆಶರ್ ಕುಕ್ಕರ್‌ನಲ್ಲಿ ಬೇಯಿಸಬಾರದು.  ಪಾಸ್ಟಾದಲ್ಲಿ ಕೂಡಾ ಅಧಿಕ ಪ್ರಮಾಣದಲ್ಲಿ ಪಿಷ್ಟ ಅಡಗಿದೆ. ಇದನ್ನೂ ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಿದರೆ ಅದು ಹಾನಿಕಾರಕ ರಾಸಾಯನಿಕಗಳನ್ನು ಬಿಡುಗಡೆ ಮಾಡುತ್ತದೆ. ಪಾಸ್ತಾವನ್ನು ಬಾಣಲೆಯಲ್ಲಿ ಬೇಯಿಸಿ ಮಾಡುವುದೇ ಆರೋಗ್ಯಕರ ಮತ್ತು ರುಚಿಕರ ವಿಧಾನ. 


4. ಕೆನೆ ಭರಿತ ಯಾವುದೇ ಆಹಾರ : 
ಕೆನೆ ಬೇಸ್ ಹೊಂದಿರುವ  ಯಾವುದೇ ಆಹಾರಗಳನ್ನು ಬೇಯಿಸಲು ಪ್ರೆಶರ್ ಕುಕ್ಕರ್‌ ಬಳಸಬಾರದು. ಯಾವ ಅಡುಗೆಯಲ್ಲಿ ಹಾಲು, ಚೀಸ್ ಮೊಸರಿನಂತಹ ಡೈರಿ ಉತ್ಪನ್ನಗಳನ್ನು ಬಳಸುತ್ತೇವೆಯೋ ಆ ಅಡುಗೆಯನ್ನು ಪ್ರೆಶರ್ ಕುಕ್ಕರ್ ನಲ್ಲಿ ಬೇಯಿಸಬಾರದು. 


ಇದನ್ನೂ ಓದಿ : ನೀವು ಆರೋಗ್ಯವಾಗಿರಬೇಕು ಅಂದ್ರೆ ಈ 7 ವಸ್ತುಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ..!


5. ಮೀನು :
ಮೀನು ತುಂಬಾ ಸೂಕ್ಷ್ಮವಾಗಿದ್ದು, ಕುಕ್ಕರ್‌ನಲ್ಲಿ ಬೇಯಿಸುವುದು  ಖಂಡಿತಾ ತಪ್ಪು. ಮೀನನ್ನು ಕುಕ್ಕರ್ ನಲ್ಲಿಟ್ಟರೆ ಅದು ಮೀನಿನ ಘಮ ಕಳೆದುಕೊಳ್ಳುವುದರ ಜೊತೆಗೆ ರುಚಿಯಲ್ಲಿ ಕೂಡಾ ಒಣ ಮೀನಿನಂತೆ ಆಗಬಹುದು. 


ಆದ್ದರಿಂದ, ಈ ಮೇಲಿನ ಆಹಾರಗಳನ್ನು ಕುಕ್ಕರ್ ನಲ್ಲಿ ಬೇಯಿಸುವುದು ಆರೋಗ್ಯಕರ ಪದ್ದತಿಯಲ್ಲ. ಇವುಗಳನ್ನು ಸಾಮಾನ್ಯ ಪಾತ್ರೆಗಳಲ್ಲಿ ಬೇಯಿಸಿದರೆ ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ, ಆರೋಗ್ಯಡ ಮೇಲೆ ಅಡ್ಡ ಪರಿಣಾಮ ಬೀರುವುದಿಲ್ಲ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.