ಈ ಸಮಸ್ಯೆಗಳು ನಿಮಗೂ ಇದ್ದಲ್ಲಿ ಮೆಂತ್ಯೆ ಕಾಳನ್ನು ಸೇವಿಸಲೇಬಾರದು !
Fenugreek Seeds Side Effects:ಮೆಂತ್ಯೆ ಬೀಜಗಳ ಸೇವನೆಯು ಕೆಲವರಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಮೆಂತ್ಯೆ ಬೀಜಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳಬಹುದು.
Fenugreek Seeds Side Effects : ಮೆಂತ್ಯೆ ಬೀಜಗಳನ್ನು ಬಹುತೇಕ ಎಲ್ಲಾ ಮನೆಗಳಲ್ಲಿ ಮಸಾಲೆಯಾಗಿ ಬಳಸಲಾಗುತ್ತದೆ.ಇದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ, ಆರೋಗ್ಯಕ್ಕೆ ಹಲವಾರು ಪ್ರಯೋಜನಗಳನ್ನು ನೀಡುತ್ತದೆ. ಇದನ್ನು ಸೇವಿಸುವುದರಿಂದ ಮಧುಮೇಹ, ಬೊಜ್ಜು, ಮಲಬದ್ಧತೆ ಮತ್ತು ಕೊಲೆಸ್ಟ್ರಾಲ್‌ನಂತಹ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಡಿಮೆಯಾಗುತ್ತದೆ. ಅಲ್ಲದೆ, ಇದು ನಮ್ಮ ಚರ್ಮ ಮತ್ತು ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ.ಆದರೆ, ಕೆಲವು ಸಮಸ್ಯೆಗಳಿದ್ದಲ್ಲಿ ಮೆಂತ್ಯೆ ಬೀಜಗಳನ್ನು ತಪ್ಪಿಯೂ ಸೇವಿಸಬಾರದು. ಮೆಂತ್ಯೆ ಬೀಜಗಳ ಸೇವನೆಯು ಕೆಲವರಿಗೆ ಹಾನಿಕಾರಕವಾಗಿ ಪರಿಣಮಿಸಬಹುದು. ಮೆಂತ್ಯೆ ಬೀಜಗಳನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳಬಹುದು.
ಲೋ ಬ್ಲಡ್ ಶುಗರ್ :
ಮೆಂತ್ಯೆ ಬೀಜಗಳನ್ನು ಸೇವಿಸುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿರುತ್ತದೆ.ಮೆಂತ್ಯೆಯನ್ನು ಅತಿಯಾಗಿ ಸೇವಿಸಿದರೆ,ಅದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡುತ್ತದೆ.ಇದು ಮಧುಮೇಹ ರೋಗಿಗಳಲ್ಲಿ ಹೈಪೊಗ್ಲಿಸಿಮಿಯಾ ಸಮಸ್ಯೆಯನ್ನು ಉಂಟುಮಾಡಬಹುದು. ಮಧುಮೇಹ ನಿವಾರಕ ಔಷಧಗಳನ್ನು ಸೇವಿಸುವವರು ವೈದ್ಯರ ಸಲಹೆ ಮೇರೆಗೆ ಮಾತ್ರ ಮೆಂತ್ಯೆಯನ್ನು ಸೇವಿಸಬೇಕು.
ಇದನ್ನೂ ಓದಿ : ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಎಂದಿಗೂ ಈ 3 ಆಹಾರಗಳನ್ನು ಸೇವಿಸಬೇಡಿ..!
ಗರ್ಭಿಣಿ ಮತ್ತು ಹಾಲುಣಿಸುವ ಮಹಿಳೆಯರು :
ಗರ್ಭಿಣಿಯರು ಮೆಂತ್ಯೆಯನ್ನು ಹೆಚ್ಚು ಸೇವಿಸಬಾರದು. ಮೆಂತ್ಯೆಯ ಸ್ವಭಾವವು ಬಿಸಿಯಾಗಿರುತ್ತದೆ. ಇದನ್ನು ಅತಿಯಾಗಿ ಸೇವಿಸುವುದರಿಂದ ರಕ್ತಸ್ರಾವದ ಸಮಸ್ಯೆಗಳು ಉಂಟಾಗಬಹುದು. ಇದರಿಂದ ಗರ್ಭಪಾತವಾಗುವ ಅಪಾಯವೂ ಇದೆ. ಇದಲ್ಲದೆ, ಹಾಲುಣಿಸುವ ಮಹಿಳೆಯರು ಕೂಡಾ ಮೆಂತ್ಯೆಯನ್ನು ಸೇವಿಸಬಾರದು. ಇದು ಮಗುವಿಗೆ ಗ್ಯಾಸ್ ಮತ್ತು ಅತಿಸಾರದ ಸಮಸ್ಯೆಗಳನ್ನು ಉಂಟು ಮಾಡಬಹುದು.
ಬಿಪಿ ರೋಗಿಗಳು :
ಬಿಪಿ ನಿಯಂತ್ರಣಕ್ಕೆ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೆ, ಮೆಂತ್ಯೆ ಬೀಜಗಳನ್ನು ಸೇವಿಸಬಾರದು. ಇದು ಕಡಿಮೆ ಪ್ರಮಾಣದ ಸೋಡಿಯಂ ಅನ್ನು ಹೊಂದಿರುತ್ತದೆ. ಇದರಿಂದಾಗಿ ಇದು ರಕ್ತದೊತ್ತಡದ ಮಟ್ಟವನ್ನು ಪರಿಣಾಮಕಾರಿಯಾಗಿ ಕಡಿಮೆ ಮಾಡುತ್ತದೆ. ಹೀಗಿರುವಾಗ ಮೆಂತ್ಯೆಯನ್ನು ಅತಿಯಾಗಿ ಸೇವಿಸಿದರೆ, ರಕ್ತದೊತ್ತಡವು ಹೆಚ್ಚಿನ ಪ್ರಮಾಣದಲ್ಲಿ ಹೆಚ್ಚಾಗುತ್ತದೆ. ಇದು ಕಡಿಮೆ ಬಿಪಿ ಸಮಸ್ಯೆಗೆ ಕಾರಣವಾಗಬಹುದು.
ಇದನ್ನೂ ಓದಿ : ಬೆಳಗ್ಗೆ ಎದ್ದ ಕೂಡಲೇ ಈ ರೀತಿಯಲ್ಲಿ ನೀರು ಸೇವಿಸಿದರೆ ಒಂದೇ ವಾರದಲ್ಲಿ ಹೊಟ್ಟೆ ಭಾಗದ ಬೊಜ್ಜು ಕರಗುವುದು !
ಅಲರ್ಜಿ ಸಮಸ್ಯೆ :
ಮೆಂತ್ಯೆ ಸೇವನೆಯಿಂದ ಕೆಲವರಿಗೆ ಅಲರ್ಜಿ ಸಮಸ್ಯೆಗಳು ಉಂಟಾಗಬಹುದು. ಅದರಲ್ಲಿರುವ ಕೆಲವು ಸಂಯುಕ್ತಗಳು ಅಲರ್ಜಿಯನ್ನು ಉಂಟುಮಾಡಬಹುದು. ಇದು ಚರ್ಮದ ಮೇಲೆ ಕಿರಿಕಿರಿ, ಕೆಂಪು ಮತ್ತು ದದ್ದುಗಳನ್ನು ಉಂಟುಮಾಡಬಹುದು.
ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು :
ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆ ಇರುವವರು ಮೆಂತ್ಯೆ ಸೇವಿಸುವುದನ್ನು ತಪ್ಪಿಸಬೇಕು.ಇದನ್ನು ಅತಿಯಾಗಿ ಸೇವಿಸುವುದರಿಂದ ಅತಿಸಾರ, ವಾಂತಿ, ಹೊಟ್ಟೆನೋವು ಮತ್ತು ಗ್ಯಾಸ್ ಸಮಸ್ಯೆ ಉಂಟಾಗುತ್ತದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ