ನವದೆಹಲಿ : ಬೇಸಿಗೆ ಅಂದರೆ ಮತ್ತು ಮಾವಿನಹಣ್ಣಿನ (Mango) ಸೀಸನ್. ಮಾವಿನಹಣ್ಣಿನ ರುಚಿಯಿಂದಾಗಿ ಮಾವನ್ನು ಇಷ್ಟಪಡದವರು ಇರಲಿಕ್ಕಿಲ್ಲ. ಆದರೆ, ಮಾವಿನಹಣ್ಣಿನ ಜೊತೆ ಕೆಲ ವಸ್ತುಗಳನ್ನು ತಿನ್ನಲೇಬಾರದು. ಮಾವಿನಹಣ್ಣಿನ ಜೊತೆ ಈ ವಸ್ತುಗಳನ್ನು ತಿಂದರೆ ಸಮಸ್ಯೆಗಳು ಎದುರಾಗುತ್ತದೆ. ಹಾಗಿದ್ದರೆ ಆ ವಸ್ತುಗಳು ಯಾವುವು ನೋಡೋಣ.. 


COMMERCIAL BREAK
SCROLL TO CONTINUE READING

ನೀರು ಕುಡಿಯಬಾರದು :
ಮಾವಿನಹಣ್ಣು ತಿಂದ ಕೂಡಲೇ ನೀರು (Water) ಕುಡಿಯಬಾರದು. ಮಾವು ತಿಂದ ಕೂಡಲೇ ನೀರು ಕುಡಿಯುವುದರಿಂದ ಹೊಟ್ಟೆ ನೋವು, ಗ್ಯಾಸ್ ಸಮಸ್ಯೆಗಳು ಎದುರಾಗುತ್ತವೆ.  ಪದೇ ಪದೇ ಈ ರೀತಿ ಮಾಡುವುದರಿಂದ ಸೋಂಕಿನ (Infection) ಅಪಾಯವೂ ಹೆಚ್ಚಾಗುತ್ತದೆ. ಮಾವಿನಹಣ್ಣು ತಿಂದ ಅರ್ಧ ಅಥವಾ ಒಂದು ಗಂಟೆಯವರೆಗೆ  ನೀರನ್ನು ಕುಡಿಯಬಾರದು.


ಇದನ್ನೂ ಓದಿ : Sleeping : ನೀವು ಬೆಳಿಗ್ಗೆ 8 ಗಂಟೆ ಮೇಲೆ ಏಳುತ್ತಿರಾ? ಹಾಗಿದ್ರೆ ನೀವು ಗಂಭೀರ ಕಾಯಿಲೆ ಬೀಳೋದು ಪಕ್ಕಾ!


ತಂಪು ಪಾನೀಯ ನಿಷೇಧ : 
ಮಾವು ತಿಂದ ಕೂಡಲೇ ತಂಪು ಪಾನೀಯಗಳನ್ನು (Cold drinks) ಕುಡಿಯುವುದು ಕೂಡಾ ಹಾನಿಕಾರಕ. ಮಾವಿನಹಣ್ಣಿನಲ್ಲೂ ಸಾಕಷ್ಟು ಸಕ್ಕರೆ ಪ್ರಮಾಣ ಇರುತ್ತದೆ. ತಂಪು ಪಾನೀಯಗಳಲ್ಲಿಯೂ ಸಕ್ಕರೆ ಇರುತ್ತದೆ. ಹಾಗಿರುವಾಗ ಮಧುಮೇಹ (Diabetic) ಸಮಸ್ಯೆಯಿದ್ದವರು ಮಾವಿನಹಣ್ಣು ತಿಂದು ತಂಪು ಪಾನೀಯ ಕುಡಿದರೆ ಅಪಾಯಕಾರಿಯಾಗಿ ಸಾಬೀತಾಗಬಹುದು.   


ಮೊಸರು :
ಮಾವು ತಿಂದ ಕೂಡಲೇ ಮೊಸರು (Curd) ತಿನ್ನುವುದು ಕೂಡ ತಪ್ಪು. ಮಾವು ಮತ್ತು ಮೊಸರನ್ನು ಒಟ್ಟಿಗೆ ತಿನ್ನುವುದರಿಂದ ನಮ್ಮ ದೇಹದಲ್ಲಿ ಹೆಚ್ಚು ಇಂಗಾಲದ ಡೈಆಕ್ಸೈಡ್  ಉತ್ಪತ್ತಿಯಾಗುತ್ತದೆ. ಇದು ದೇಹದಲ್ಲಿ ಅನೇಕ ಸಮಸ್ಯೆಗಳನ್ನು ಉಂಟುಮಾಡುತ್ತದೆ.


ಇದನ್ನೂ ಓದಿ : Coronavirus Prevention: ಡಬಲ್ ಮಾಸ್ಕ್ ಧರಿಸುವುದರಿಂದ ಕರೋನ ಬರಲ್ವಾ!


ಹಾಗಲಕಾಯಿ :
ಮಾವಿನಹಣ್ಣು ತಿಂದ ನಂತರ ಹಾಗಲಕಾಯಿ ಸೇವನೆ ಕೂಡಾ ಸರಿಯಲ್ಲ. ಮಾವಿನಹಣ್ಣು ಸೇವಿಸಿದ ನಂತರ, ಹಾಗಲಕಾಯಿ ತಿಂದರೆ, ವಾಕರಿಕೆ, ವಾಂತಿ (Vomiting) ಮತ್ತು ಉಸಿರಾಟದ ತೊಂದರೆ ಉಂಟಾಗುತ್ತದೆ.


ಮೆಣಸಿನಕಾಯಿ ಮತ್ತು ಮಸಾಲೆಯುಕ್ತ ಪದಾರ್ಥಗಳು : 
ಮಾವಿನಹಣ್ಣನ್ನು ಸೇವಿಸಿದ ನಂತರ, ತಕ್ಷಣ ಮಸಾಲೆಯುಕ್ತ ವಸ್ತುಗಳನ್ನು ಅಥವಾ ಮೆಣಸಿನಕಾಯಿಯನ್ನು (Chilli) ತಿಂದರೆ, ಹೊಟ್ಟೆ ಮತ್ತು ಚರ್ಮದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಆದ್ದರಿಂದ, ನೀವು ಮಾವಿನಹಣ್ಣನ್ನು ತಿಂದ ನಂತರ ಈ ವಸ್ತುಗಳನ್ನು ತಿನ್ನಬೇಡಿ. 


ಇದನ್ನೂ ಓದಿ : ಮಳೆಗಾಲದಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಬಚಾವ್ ಆಗಿ.! ಈ ಮುನ್ನೆಚ್ಚರಿಕೆ ಇರಲಿ


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.