ಮಳೆಗಾಲದಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಬಚಾವ್ ಆಗಿ.! ಈ ಮುನ್ನೆಚ್ಚರಿಕೆ ಇರಲಿ

 ಕರೋನಾ ಜೊತೆ ಮತ್ತೊಬ್ಬ ರಕ್ಕಸ ಈಗ ತಾಂಡವವಾಡುತ್ತಿದ್ದಾನೆ. ಅದೇ  ಬ್ಲ್ಯಾಕ್ ಫಂಗಸ್ . ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಪ್ರಕಾರ,  ಬ್ಲ್ಯಾಕ್ ಫಂಗಸ್ ಮೂಗಿನ ಮೂಲಕ ಪ್ರವೇಶಿಸಿ ಕಣ್ಣು ಮತ್ತು ಮೆದುಳಿಗೆ ದಾಳಿ ಇಡುತ್ತದೆ.

Written by - Ranjitha R K | Last Updated : May 24, 2021, 02:24 PM IST
  • ಮಳೆಗಾಲ ಹೊಸ್ತಿಲಿನಲ್ಲಿದೆ. ಈ ಹೊತ್ತಲ್ಲಿ ಬ್ಲ್ಯಾಕ್ ಫಂಗಸ್ ಇನ್ನಷ್ಟು ಬೇಗ ಹರಡಬಹುದು
  • ಮಳೆಗಾಲದ ಹೊತ್ತಲ್ಲಿ ಮನೆಯಲ್ಲೊಂದಿಷ್ಟು ಮುನ್ನೆಚ್ಚರಿಕೆ ಈ ಸಲ ಅಗತ್ಯ
  • ಮನೆಯಲ್ಲಿ ಸ್ವಚ್ಛತಾ ಕಾರ್ಯಾಚರಣೆ ಹೇಗಿರಬೇಕು..? ಇಲ್ಲಿದೆ ಮಾಹಿತಿ
ಮಳೆಗಾಲದಲ್ಲಿ ಬ್ಲ್ಯಾಕ್ ಫಂಗಸ್ ನಿಂದ ಬಚಾವ್ ಆಗಿ.! ಈ ಮುನ್ನೆಚ್ಚರಿಕೆ ಇರಲಿ title=
ಮನೆಯಲ್ಲಿ ಸ್ವಚ್ಛತಾ ಕಾರ್ಯಾಚರಣೆ ಹೇಗಿರಬೇಕು..? ಇಲ್ಲಿದೆ ಮಾಹಿತಿ (file photo)

ನವದೆಹಲಿ : ಕರೋನಾ ಜೊತೆ ಮತ್ತೊಬ್ಬ ರಕ್ಕಸ ಈಗ ತಾಂಡವವಾಡುತ್ತಿದ್ದಾನೆ. ಅದೇ  ಬ್ಲ್ಯಾಕ್ ಫಂಗಸ್ (black fungus). ದೆಹಲಿ ಏಮ್ಸ್ ನಿರ್ದೇಶಕ ಡಾ. ರಣದೀಪ್ ಗುಲೇರಿಯಾ ಪ್ರಕಾರ,  ಬ್ಲ್ಯಾಕ್ ಫಂಗಸ್ ಮೂಗಿನ ಮೂಲಕ ಪ್ರವೇಶಿಸಿ ಕಣ್ಣು ಮತ್ತು ಮೆದುಳಿಗೆ ದಾಳಿ ಇಡುತ್ತದೆ. ದೇಹದ ಇತರ ಅಂಗಗಳಿಗೂ ದಾಳಿ ಇಡಬಹುದು. ಬ್ಲ್ಯಾಕ್ ಫಂಗಸ್ ಗಾಳಿಯಲ್ಲೂ ಇರುತ್ತದೆ. ಮರದ ತೊಗಟೆ, ಪಾಚಿ ಗಟ್ಟಿದ ಪ್ರದೇಶಗಳಲ್ಲೂ ಇರಬಹುದು. ಹಾಗಾಗಿ, ಕರೋನಾದಿಂದ (Coronavirus) ಚೇತರಿಸಿಕೊಂಡಿರುವ ವ್ಯಕ್ತಿಗಳು, ಕಡಿಮೆ ಇಮ್ಯೂನಿಟಿ ಇರುವವರು ಇದರಿಂದ ದೂರ ಇರಬೇಕು.  ಇನ್ನು ಮಳೆ ಗಾಲ ಆರಂಭವಾಗಲಿದೆ. ಫಂಗಸ್ ಎಲ್ಲಾ ಕಡೆಯಲ್ಲೂ ಕಾಣಿಸಿಕೊಳ್ಳಲಿದೆ. ಬ್ಲ್ಯಾಕ್ ಫಂಗಸ್ ನಿಂದ ತಪ್ಪಿಸಿಕೊಳ್ಳಲು ನಾವೊಂದಷ್ಟು ಮುಂಜಾಗ್ರತೆ ವಹಿಸಬೇಕು. ಹಾಗಾದರೆ ನಾವು ಮಾಡಬೇಕಾದ ಮಂಜಾಗ್ರತೆ ಏನು.?

1. ನೀರಿನಂಶ ಪಸರಿಸಿರುವ ಜಾಗದಲ್ಲಿ ಬ್ಲ್ಯಾಕ್ ಫಂಗಸ್ (Black fungus) ಬೇಗ ಹರಡುತ್ತದೆ. ಹಾಗಾಗಿ, ನೀರು ಒಸರಿ ಪಾಚಿಗಟ್ಟಿದ್ದರೆ ಅದನ್ನು ಕೂಡಲೇ ಸರಿಪಡಿಸಿ
2. ಫ್ರಿಜ್ ನಲ್ಲಿಟ್ಟಿರುವ ಪಾಚಿಗಟ್ಟಿದ ಬ್ರೆಡ್ (Bread) , ತರಕಾರಿ, ಹಣ್ಣನ್ನು (Fruits) ಕೂಡಲೇ ಡಸ್ಟ್ ಬಿನ್ ಗೆ ಹಾಕಿ. 

ಇದನ್ನೂ ಓದಿ : Exercise- ದೀರ್ಘಾವಧಿಯ ಬಳಿಕ ವ್ಯಾಯಾಮ ಪ್ರಾರಂಭಿಸುತ್ತಿದ್ದರೆ ಈ ವಿಷಯಗಳ ಬಗ್ಗೆ ಇರಲಿ ಎಚ್ಚರ

3. ಮನೆಯ ಕಿಟಕಿ, ಬಾಗಿಲು ತೆರೆದಿಡಿ. ಮನೆಯೊಳಗೆ ಗಾಳಿ ಪರಿಚಲನೆ ಚೆನ್ನಾಗಿರಲಿ. ಕ್ರಾಸ್ ವೆಂಟಿಲೇಶನ್ (Cross Ventilation) ಇದ್ದರೆ ಉತ್ತಮ
4. ಮಳೆಗೆ ಪಾಚಿಗಟ್ಟುವ ಸಾಧ್ಯತೆ ಇರುವುದರಿಂದ, ಸಾಧ್ಯವಾದರೆ ಮನೆಯ ಹೊರಗೋಡೆಗೆ ವಾಟರ್ ಪ್ರೂಫ್ ಪೈಂಟ್ ಮಾಡಿ
5. ಮನೆಯಲ್ಲಿ  ಬ್ಲ್ಯಾಕ್ ಫಂಗಸ್ ಪತ್ತೆ ಹಚ್ಚುವ ಕೆಲಸ ಮಾಡುವಾಗ ಖಂಡಿತಾ ಮಾಸ್ಕ್ (Mask) ಬಳಸಿ

ಇದನ್ನೂ ಓದಿ : Curry Leaves Benefits : ಕರಿಬೇವಿನ ಎಲೆಯಲ್ಲಿದೆ ನಿಮ್ಮ ಆರೋಗ್ಯದ ಗುಟ್ಟು : ಇಲ್ಲಿದೆ ಅದರ 5 ಪ್ರಯೋಜನಗಳು!

6. ಬಟ್ಟೆ ಕಪಾಟಿನಲ್ಲಿ  ಕರ್ಪೂರದ  ತುಂಡು ಇಡಿ. ಇದು ಕಪಾಟಿನ ಜಿಗುಟು ವಾಸನೆ ದೂರ ಮಾಡುತ್ತದೆ
7. ಕೆರೋಸಿನ್ ಬಳಸಿ ಫರ್ನಿಚರ್ ಸ್ವಚ್ಛ ಮಾಡಿ
8. ಕಾಲಕಾಲಕ್ಕೆ ಶೂ ಸ್ಟ್ಯಾಂಡ್ (Shoe stand) ಸ್ವಚ್ಚ ಮಾಡಿ. 
9. ಮನೆಯ ಬಾಗಿಲಿನಲ್ಲಿ ಕ್ರ್ಯಾಕ್ ಇದೆಯಾ ನೋಡಿ. ಇದ್ದರೆ ಗುಣಮಟ್ಟದ ಫಿಲ್ಲರ್ ನಿಂದ  ಅದನ್ನು ಫಿಲ್ ಮಾಡಿ. 

ಇದನ್ನೂ ಓದಿ : ನೆಲಗಡಲೆ ನೆನೆಸಿ ತಿಂದರೆ ಆರೋಗ್ಯಕ್ಕೇನು ಲಾಭ.?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News