Mistakes While Having Green Tea : ವೇಗವಾಗಿ ತೂಕವನ್ನು ಕಳೆದುಕೊಳ್ಳಲು ಬಯಸುವವರು,  ತ್ವಚೆಯ ಕಾಂತಿಯನ್ನು ಕಾಪಾಡಿಕೊಳ್ಳಲು,  ಜೀರ್ಣಕ್ರಿಯೆಯನ್ನು ಸುಧಾರಿಸಲು ಅಥವಾ ದೇಹದ ಶಕ್ತಿಯನ್ನು ಹೆಚ್ಚಿಸಲು ಗ್ರೀನ್ ಟೀ ಸೇವನೆ ಅಗತ್ಯ ಎನ್ನುವ ಮಾತಿದೆ. ಹೌದು, ಗ್ರೀನ್ ಟೀ ಸೇವನೆಯಿಂದ ಅನೇಕ ಆರೋಗ್ಯ ಪ್ರಯೋಜನಗಳಿವೆ ಎನ್ನುವುದನ್ನು ಅಲ್ಲಗಳೆಯುವಂತಿಲ್ಲ. ಇತ್ತೀಚಿನ ದಿನಗಳಲ್ಲಿ ಗ್ರೀನ್ ಟೀ ಕುಡಿಯುವವರ ಸಂಖ್ಯೆ ಕೂಡಾ ಸಾಕಷ್ಟು ಹೆಚ್ಚಾಗಿದೆ. ರೋಗ ನಿರೋಧಕ ಶಕ್ತಿ ಹೆಚ್ಚಿಸುವಲ್ಲಿ ಗ್ರೀನ್ ಟೀ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಇದರೊಂದಿಗೆ, ಇದು ಕ್ಯಾನ್ಸರ್, ಕೊಲೆಸ್ಟ್ರಾಲ್, ರಕ್ತದೊತ್ತಡ ಮತ್ತು ಹೃದ್ರೋಗದ ಅಪಾಯವನ್ನು ಕೂಡಾ ಕಡಿಮೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಮೊದಲೇ ಹೇಳಿದ ಹಗೆ ಬಹುತೇಕ ಮಂದಿ ಗ್ರೀನ್ ಟೀ ಕುಡಿಯುತ್ತಾರೆ. ಆದರೆ ಅದನ್ನು ಸೇವಿಸುವ ಸರಿಯಾದ ಮಾರ್ಗವನ್ನು ತಿಳಿದಿಲ್ಲ.   ಹಾಗಾಗಿ ಗ್ರೀನ್ ಟೀ ಕುಡಿಯುವಾಗ ಕೆಲವು ತಪ್ಪುಗಳನ್ನು ಮಾಡುತ್ತಾರೆ. ಗ್ರೀನ್ ಟೀ ಕುಡಿಯುವಾಗ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ಇಲ್ಲದಿದ್ದರೆ, ಅದರ ಪ್ರಯೋಜನಗಳನ್ನು ಪಡೆಯುವ ಬದಲು, ನಷ್ಟಗಳಾಗುವುದೇ  ಹೆಚ್ಚು. ಇದು ನಿಮ್ಮ ಆರೋಗ್ಯದ ಮೇಲೆ ಅಡ್ಡ ಪರಿಣಾಮಗಳನ್ನು  ಬೀರಬಹುದು. 


ಇದನ್ನೂ ಓದಿ : ಅಧಿಕ ತಾಪಮಾನದಿಂದ ನಿಮ್ಮನ್ನು ಹೀಗೆ ರಕ್ಷಿಸಿಕೊಳ್ಳಿರಿ...!


ಗ್ರೀನ್ ಟೀ ಕುಡಿಯುವಾಗ ಈ ತಪ್ಪುಗಳನ್ನು ಮಾಡಬೇಡಿ :
1. ಅತಿಯಾದರೆ ಅಮೃತವೂ ವಿಷ :
ಗ್ರೀನ್ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಅನೇಕ ಪ್ರಯೋಜನ ಸಿಗುತ್ತವೆ ಎನ್ನುವುದು ನಿಮಗೆ ತಿಳಿದಿರಬಹುದು. ಹಾಗಂತ ಕೆಲವರು ಅದನ್ನು ಅತಿಯಾಗಿ ಸೇವಿಸಲು ಪ್ರಾರಂಭಿಸುತ್ತಾರೆ. ಅತಿಯಾದರೆ ಅಮೃತವೂ ವಿಷ ಎನ್ನುವ ಮಾತಿನಂತೆ ಗ್ರೀನ್ ಟೀಯನ್ನು ಕೂಡಾ ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಯಾಗುತ್ತದೆ. ಹಾಗಾಗಿ ಅಗತ್ಯವಿದ್ದಾಗ ಮಾತ್ರ ಗ್ರೀನ್ ಟೀ ಕುಡಿಯಿರಿ.   ಗ್ರೀನ್ ಟೀ ಯನ್ನು ಅತಿಯಾಗಿ ಸೇವಿಸಿದರೆ, ಅದು ಆತಂಕ, ನಿದ್ರಾಹೀನತೆ ಮತ್ತು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು. 


2.  ಗ್ರೀನ್ ಟೀ  ಕುಡಿಯುವುದಕ್ಕೂ ನಿರ್ದಿಷ್ಟ ಸಮಯವಿದೆ : 
ಗ್ರೀನ್ ಟೀಯಲ್ಲಿ ಕೆಫೀನ್ ಕೂಡಾ ಇದೆ. ಆದ್ದರಿಂದ ನೀವು ಅದನ್ನು ರಾತ್ರಿ ಹೊತ್ತು ಕುಡಿಯಬಾರದು. ಒಂದು ವೇಳೆ ರಾತ್ರಿ ಹೊತ್ತು ಗ್ರೀನ್ ಟೀ ಸೇವಿಸಿದರೆ ಸ್ಲೀಪಿಂಗ್ ಪ್ಯಾಟರ್ನ್ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಅದಕ್ಕಾಗಿಯೇ ರಾತ್ರಿಯಲ್ಲಿ  ಗ್ರೀನ್ ಟೀ  ಸೇವಿಸಬಾರದು.  ಅದರಲ್ಲೂ ಮಲಗುವ ಮುನ್ನ ಗ್ರೀನ್ ಟೀ ಬೇಡವೇ ಬೇಡ. 


ಇದನ್ನೂ ಓದಿ : ಬ್ರಿಸ್ಕ್ ವಾಕ್ ಮಾಡಿದರೆ ಈ ಎಲ್ಲಾ ಸಮಸ್ಯೆಗಳು ಮಾಯವಾಗುತ್ತವೆ


3. ಖಾಲಿ ಹೊಟ್ಟೆಯಲ್ಲಿ ಗ್ರೀನ್ ಟೀ ಕುಡಿಯಬೇಡಿ :
ಕೆಲವರಿಗೆ ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವ ಅಭ್ಯಾಸವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಅವರು ಗ್ರೀನ್ ಟೀಯನ್ನೇ ಸವಿಯುತ್ತಾರೆ. ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ  ಗ್ರೀನ್ ಟೀಯೊಂದಿಗೆ ದಿನವನ್ನು ಪ್ರಾರಂಭಿಸಿದರೆ, ಅದು ಆರೋಗ್ಯಕ್ಕೆ ಒಳ್ಳೆಯದಲ್ಲ. ಗ್ರೀನ್ ಟೀ  ಟ್ಯಾನಿನ್ ಅನ್ನು ಹೊಂದಿರುತ್ತದೆ.  ಇದು ಹೊಟ್ಟೆಯಲ್ಲಿ  ಆಸಿಡ್ ಉತ್ಪಾದಿಸುತ್ತದೆ. ಅದಕ್ಕಾಗಿಯೇ ಇದನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಬೇಡಿ. 


4. ಊಟವಾದ ತಕ್ಷಣ  ಗ್ರೀನ್ ಟೀ ಕುಡಿಯಬೇಡಿ : 
ಏನನ್ನಾದರೂ ತಿಂದ ತಕ್ಷಣ ಗ್ರೀನ್ ಟೀ ಕುಡಿಯುವುದು ತಪ್ಪು. ಇದು ಆಹಾರದಿಂದ ದೇಹಕ್ಕೆ ಸಿಗುವ ಪೋಷಕಾಂಶಗಳನ್ನು ತಡೆಯುತ್ತದೆ. ಊಟವಾದ ತಕ್ಷಣ ಗ್ರೀನ್ ಟೀ ಸೇವನೆಯು ಕಬ್ಬಿಣದ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಇದರಿಂದಾಗಿ ರಕ್ತಹೀನತೆ ಸಮಸ್ಯೆ ಉಂಟಾಗುತ್ತದೆ. ಆಹಾರವನ್ನು ಸೇವಿಸಿದ 1-2 ಗಂಟೆಗಳ ನಂತರ ಗ್ರೀನ್ ಟೀಯನ್ನು ಕುಡಿಯುವುದಕ್ಕೆ ಯಾವ ಸಮಸ್ಯೆಯೂ ಇರುವುದಿಲ್ಲ. 


ಇದನ್ನೂ ಓದಿ : National Dengue Day 2023: ಡೆಂಗ್ಯೂ ರೋಗದ ಲಕ್ಷಣ, ಕಾರಣ ಮತ್ತು ನಿಯಂತ್ರಣ ಕ್ರಮಗಳ ಮಾಹಿತಿ ಇಲ್ಲಿದೆ ನೋಡಿ


5. ಗ್ರೀನ್ ಟೀ ಬ್ಯಾಗ್ ಗಳನ್ನು ಮರುಬಳಕೆ ಮಾಡಬೇಡಿ : 
ಕೆಲವರು ಗ್ರೀನ್ ಟೀ ಬ್ಯಾಗ್ ಗಳನ್ನು ಮರುಬಳಕೆ ಮಾಡುತ್ತಾರೆ. ಆದರೆ ಹಾಗೆ ಮಾಡಬಾರದು. ಟೀ ಬ್ಯಾಗ್ ಗಳನ್ನು ಮರುಬಳಕೆ ಮಾಡುವುದರಿಂದ ಚಹಾದ ರುಚಿ ಹಾಳಾಗುತ್ತದೆ. ಅನಾರೋಗ್ಯಕರ ರೀತಿಯಲ್ಲಿ ಗ್ರೀನ್ ಟೀ ಕುಡಿಯುವುದರಿಂದ ಅದರ ತಾಜಾ ಎಲೆಗಳನ್ನು ಬಳಸುವುದೇ ಹೆಚ್ಚು ಸೂಕ್ತ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.