ನೀರು ಕುಡಿಯುವುದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ, ದೇಹದ ಅನೇಕ ಅಸ್ವಸ್ಥತೆಗಳನ್ನು ನಿವಾರಿಸುವ ಜೊತೆಗೆ, ನಮ್ಮ ದೇಹವನ್ನು ಹೈಡ್ರೇಟ್ ಆಗಿಡಲು ನೀರು ತುಂಬಾ ಪರಿಣಾಮಕಾರಿಯಾಗಿದೆ. ನಿಮಗೆ ಬಿಸಿ ನೀರನ್ನು ಕುಡಿಯಲು ಇಷ್ಟಪಡದಿದ್ದರೂ, ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಆದ್ದರಿಂದ 8 ರಿಂದ 10 ಲೋಟ ನೀರು ಕುಡಿಯುವುದು ದೇಹಕ್ಕೆ ಬಹಳ ಮುಖ್ಯ, ಆದರೆ ದಿನಕ್ಕೆ ಮೂರು ಬಾರಿ ಬಿಸಿ ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳಿ, ಇದರಿಂದ ದೇಹಕ್ಕೆ ರೋಗಗಳಿಂದ ದೂರವಿರಿಸುತ್ತದೆ. ಪ್ರತಿದಿನ ಬೆಳಿಗ್ಗೆ ಒಂದು ಲೋಟ ಬೆಚ್ಚಗಿನ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.


COMMERCIAL BREAK
SCROLL TO CONTINUE READING

ತೂಕ ಇಳಿಕೆಗೆ ಬಿಸಿ ನೀರು :


ನಿಮ್ಮ ದೇಹ ತೂಕ(Weight Loss) ಹೆಚ್ಚುತ್ತಿದ್ದರೆ, ನಿಮ್ಮ ಸಾವಿರಾರು ಪ್ರಯತ್ನಗಳು ಮಾಡಿದರು ನಿಮ್ಮ ದೇಹ ತೂಕ ಇಳಿಕೆ ಮಾಡಿದ್ರು ಕಡಿಮೆ ಆಗುವುದಿಲ್ಲ, ಆದ್ರೆ, ಸತತ ಮೂರು ತಿಂಗಳು ಬಿಸಿ ನೀರು ಕುಡಿಯಿರಿ. ನೀವು ಖಂಡಿತವಾಗಿಯೂ ತೂಕ ಕಡಿಮೆ ಮಾಡಿಕೊಳ್ಳಬಹುದು. ನಿಮಗೆ ಬಿಸಿ ನೀರು ಕುಡಿಯಾದಾಗದಿದ್ದರೆ. ಊಟ, ತಿಂಡಿ ಮಡಿದ ನಂತ್ರ ಒಂದು ಕಪ್ ಬಿಸಿ ನೀರನ್ನು ಸಹ ಕುಡಿಯಬಹುದು.


ಇದನ್ನೂ ಓದಿ : ಮುಖದ ಕಾಂತಿಗಾಗಿ ಅನುಸರಿಸಿ ಈ ನಾಲ್ಕು ಸಿಂಪಲ್ ಟಿಪ್ಸ್


ರಕ್ತ ಪರಿಚಲನೆ ಸರಿಯಾಗಲು ಬಿಸಿ ನೀರು:


ದೇಹವನ್ನು ಸರಾಗವಾಗಿ ಚಲಿಸಲು, ದೇಹದಾದ್ಯಂತ ರಕ್ತ(Blood)ವು ಸರಿಯಾಗಿ ಹರಿಯುವುದು ತುಂಬಾ ಮುಖ್ಯ ಮತ್ತು ಅದರಲ್ಲಿ ಬಿಸಿ ನೀರನ್ನು ಕುಡಿಯುವುದು ತುಂಬಾ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ : Sugarcane Juice : ತೂಕ ಇಳಿಕೆ ಮತ್ತು ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೆ ಪ್ರಯೋಜನಕಾರಿ ಕಬ್ಬಿನ ಹಾಲು!


ಕೀಲು ನೋವಿಗೆ ಮನೆ ಮದ್ದು ಬಿಸಿ ನೀರು :


ಬೆಚ್ಚಗಿನ ನೀರು(Water) ಕೀಲುಗಳನ್ನು ನಯಗೊಳಿಸುತ್ತದೆ ಮತ್ತು ನೋವನ್ನು ಕಡಿಮೆ ಮಾಡುತ್ತದೆ. ನಮ್ಮ 80 ಪ್ರತಿಶತ ಸ್ನಾಯುಗಳು ನೀರಿನಿಂದ ಮಾಡಲ್ಪಟ್ಟಿವೆ, ಆದ್ದರಿಂದ ನೀರು ಸ್ನಾಯು ಸೆಳೆತವನ್ನು ಸಹ ನಿವಾರಿಸಬಹುದು.


ಇದನ್ನೂ ಓದಿ : Vitamin C Deficiency Symptoms: ದೇಹದಲ್ಲಿ ವಿಟಮಿನ್ ಸಿ ಕೊರತೆಯ ಲಕ್ಷಣಗಳಿವು


ಕೂದಲಿಗೆ ಪ್ರಯೋಜನಕಾರಿ ಬಿಸಿ ನೀರು :


ಇದರ ಹೊರತಾಗಿ ಬಿಸಿ ನೀರಿನ(Hot Water) ಸೇವನೆ ಕೂಡ ಕೂದಲು ಮತ್ತು ಚರ್ಮಕ್ಕೆ ತುಂಬಾ ಪ್ರಯೋಜನಕಾರಿ. ಇದರಿಂದ ಕೂದಲು ಹೊಳೆಯುವಂತೆ ಮಾಡುತ್ತದೆ ಮತ್ತು ಅವುಗಳ ಬೆಳವಣಿಗೆಗೂ ಇದು ತುಂಬಾ ಪ್ರಯೋಜನಕಾರಿ.


ಇದನ್ನೂ ಓದಿ : Health in Your Hands : ನಿಮ್ಮ ಕೈಗಳಿಂದ ಬರುತ್ತವೆ ಕೊರೋನಾ ಸೇರಿದಂತೆ ಅನೇಕ ಗಂಭೀರ ಕಾಯಿಲೆಗಳು!


ದೇಹದ ಎಲ್ಲಾ ಕಲ್ಮಶ ಹೊರ ಹಾಕಲು ಬಿಸಿ ನೀರು :


ಬೆಚ್ಚಗಿನ ನೀರನ್ನು ಕುಡಿಯುವುದರಿಂದ ದೇಹವನ್ನು ನಿರ್ವಿಷಗೊಳಿಸಲು ಸಹಾಯ ಮಾಡುತ್ತದೆ ಮತ್ತು ಇದು ದೇಹ(Body)ದ ಎಲ್ಲಾ ಕಲ್ಮಶಗಳನ್ನು ಬಹಳ ಸುಲಭವಾಗಿ ಸ್ವಚ್ಛಗೊಳಿಸುತ್ತದೆ. ಬಿಸಿ ನೀರನ್ನು ಕುಡಿಯುವ ಮೂಲಕ, ದೇಹದ ತಾಪಮಾನವು ಹೆಚ್ಚಾಗಲು ಪ್ರಾರಂಭಿಸುತ್ತದೆ, ಇದು ಬೆವರಲು ಕಾರಣವಾಗುತ್ತದೆ ಮತ್ತು ಇದರ ಮೂಲಕ ದೇಹದ ಕಲ್ಮಶಗಳನ್ನು ತೆಗೆದುಹಾಕಲಾಗುವುದು.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ