ಮುಖದ ಕಾಂತಿಗಾಗಿ ಅನುಸರಿಸಿ ಈ ನಾಲ್ಕು ಸಿಂಪಲ್ ಟಿಪ್ಸ್

ಮುಖದ ಕಾಂತಿ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಇವತ್ತು ಒಂದಷ್ಟು ಮಾಹಿತಿ ನೀಡಲಿದ್ದೇವೆ. ಇದು ಮನೆಯಲ್ಲೇ ಸಿಗುವ ಸಾಮಾಗ್ರಿ. ರಾತ್ರಿ ಹೊತ್ತು ಮುಖಕ್ಕೆ ಹಚ್ಚಿದರೆ ಸಾಕು.  

Written by - Ranjitha R K | Last Updated : Jun 1, 2021, 12:03 PM IST
  • ಮುಖದ ಕಾಂತಿಗಾಗಿ ಈ ನಾಲ್ಕು ವಸ್ತುಗಳನ್ನು ರಾತ್ರಿ ಮುಖಕ್ಕೆ ಹೆಚ್ಚಿ..!
  • ತಮ್ಮ ಮುಖ ಮಿರ ಮಿರ ಮಿಂಚುತ್ತಿರಬೇಕು ಎಂಬುದು ಎಲ್ಲರ ಆಸೆ
  • ಆದರೆ ಬೇರೆ ಬೇರೆ ಕಾರಣಕ್ಕೆ ಆ ಆಸೆ ಈಡೇರುವುದಿಲ್ಲ.
ಮುಖದ ಕಾಂತಿಗಾಗಿ ಅನುಸರಿಸಿ ಈ ನಾಲ್ಕು ಸಿಂಪಲ್ ಟಿಪ್ಸ್ title=
ಮುಖದ ಕಾಂತಿಗಾಗಿ ಈ ನಾಲ್ಕು ವಸ್ತುಗಳನ್ನು ರಾತ್ರಿ ಮುಖಕ್ಕೆ ಹೆಚ್ಚಿ (photo zee news)

ನವದೆಹಲಿ : ತಮ್ಮ ಮುಖ ಮಿರ ಮಿರ ಮಿಂಚುತ್ತಿರಬೇಕು ಎಂಬುದು ಎಲ್ಲರ ಆಸೆ. ಆದರೆ, ಮಾಲಿನ್ಯ, ದೂಳು, ಬಿಸಿಲು, ತೇವಾಂಶದ ಕಾರಣ ನಮ್ಮ ಮುಖದ ತ್ವಚೆ ಬಹುಬೇಗ ಹಾಳಾಗುತ್ತದೆ. ಮುಖದ ಕಾಂತಿ ಹೆಚ್ಚಿಸಲು ಏನು ಮಾಡಬೇಕು ಎಂಬುದರ ಬಗ್ಗೆ ಇವತ್ತು ಒಂದಷ್ಟು ಮಾಹಿತಿ ನೀಡಲಿದ್ದೇವೆ. ಇದು ಮನೆಯಲ್ಲೇ ಸಿಗುವ ಸಾಮಾಗ್ರಿ. ರಾತ್ರಿ ಹೊತ್ತು ಮುಖಕ್ಕೆ ಹಚ್ಚಿದರೆ ಸಾಕು.  ನಿಮ್ಮ ಮುಖದ ಕಾಂತಿ ಮತ್ತೆ ಮರಳುತ್ತದೆ. ಇದು ತಜ್ಞರು ಹೇಳಿರುವಂತ ಮಾಹಿತಿಯಾಗಿದೆ. 

1. ಆಲಿವ್ ಆಯಿಲ್:
ರಾತ್ರಿ ಮಲಗುವ ಮುನ್ನ ನಿಮ್ಮ ನೆಚ್ಚಿನ ನೈಟ್ ಕ್ರೀಮ್ (Night cream) ಜೊತೆ ವರ್ಜಿನ್ ಅಲಿವ್ ಆಯಿಲ್ (olive oil) ಸೇರಿಸಿ ಮುಖಕ್ಕೆ ಚೆನ್ನಾಗಿ ಮಸಾಜ್ ಮಾಡಿ.  ಕೇವಲ ಆಲಿವ್ ಆಯಿಲ್ ಅಷ್ಟನ್ನೇ ಬೇಕಾದರೂ ಬಳಸಬಹುದು.  ಇದರಿಂದ ನಿಮ್ಮ ಚರ್ಮದ ಕಾಂತಿ ಮತ್ತೆ ಮರಳುತ್ತದೆ.

ಇದನ್ನೂ ಓದಿ : Sugarcane Juice : ತೂಕ ಇಳಿಕೆ ಮತ್ತು ಮೂತ್ರಕ್ಕೆ ಸಂಬಂಧಿಸಿದ ರೋಗಗಳಿಗೆ ಪ್ರಯೋಜನಕಾರಿ ಕಬ್ಬಿನ ಹಾಲು!

2. ತೆಂಗಿನೆಣ್ಣೆ:
ರಾತ್ರಿ ನಿಮ್ಮ ನೆಚ್ಚಿನ ನೈಟ್ ಕ್ರೀಮ್ ಜೊತೆ ಒಂದೆರಡು ಹನಿ ಶುದ್ಧ ತೆಂಗಿನೆಣ್ಣೆ (coconut oil)ಮಿಕ್ಸ್ ಮಾಡಿ ಮುಖಕ್ಕೆ ಹಚ್ಚಿ. ಬೆಳಗ್ಗೆ ಎದ್ದು ಮುಖ ತೊಳೆಯಿರಿ. ತೆಂಗಿನೆಣ್ಣೆ ಚರ್ಮದ ಪಾಲಿಗೆ ಸೂಪರ್ ಫುಡ್ ತರಹ ಕೆಲಸ ಮಾಡುತ್ತೆ. ಅದು ಕೇವಲ ತ್ವಚೆಗೆ ಕಾಂತಿ ತರುವುದಷ್ಟೇ ಅಲ್ಲದೆ ಚರ್ಮದ ಉರಿಯನ್ನು ನಿವಾರಿಸುತ್ತದೆ. ಜೊತೆಗೆ ಸೋಂಕು (infection) ಉಂಟಾಗುವುದನ್ನು ತಡೆಯುತ್ತದೆ.

3. ಸೌತೆಕಾಯಿ :
ರಾತ್ರಿ ಮಲಗುವ ಮೊದಲು ಸೌತೆಕಾಯಿ (cucumber) ರಸ ಹಿಂಡಿ ಅದನ್ನುಮುಖಕ್ಕೆ  ಹಚ್ಚಿ. ಸೌತೆ ಕಾಯಿ ಮುಖದ ಕಾಂತಿಗೆ ಒಂದು ಸೂಪರ್ ಫುಡ್. ಸೌತೆಕಾಯಿ ಸಾರ ಚರ್ಮಕ್ಕೆ ತಂಪಿನ ಅನುಭವ ನೀಡುತ್ತದೆ.  ತ್ವಚೆಯ ನೀರಿನ ಮಟ್ಟವನ್ನು ಹೆಚ್ಚಿಸುತ್ತದೆ. ಉರಿ ಕಡಿಮೆ ಮಾಡುತ್ತದೆ. ಅರ್ಧ ಸೌತೆಕಾಯಿ ಕಟ್ ಮಾಡಿ ಅದರ ರಸ ತೆಗೆದು ಒಂದು ಹತ್ತಿ ಉಂಡೆಯ ನೆರವಿನಿಂದ ಮುಖಕ್ಕೆ ಹಚ್ಚಬಹುದು.

ಇದನ್ನೂ ಓದಿ : Vitamin C Deficiency Symptoms: ದೇಹದಲ್ಲಿ ವಿಟಮಿನ್ ಸಿ ಕೊರತೆಯ ಲಕ್ಷಣಗಳಿವು

4. ಅರಸಿಣ ಹಾಕಿದ ಹಾಲು :
ರಾತ್ರಿ ಮಲಗುವ ಮುನ್ನ ಒಂದು ಚಮಚ ಕಚ್ಚಾ ಹಾಲಿಗೆ (milk) ಅರ್ಧ ಚಮಚ ಅರಸಿಣ ಪುಡಿ (Turmeric) ಅಥವಾ ಹಳದಿ ಪುಡಿ ಸೇರಿಸಿ. ಒಂದು ಹತ್ತಿ ಉಂಡೆಯ ನೆರವಿನಿಂದ ಅದನ್ನು ಟೋನರ್ (toner)  ತರಹ ಮುಖಕ್ಕೆ ಹಚ್ಚಿ.  ಹಾಸಿಗೆಗೆ ಹೋಗುವ ಮೊದಲು ಅದು ಸಂಪೂರ್ಣವಾಗಿ ಒಣಗಬೇಕು.  ಈ ಕ್ರಮ ನಿತ್ಯವೂ ಅನುಸರಿಸಿದರೆ ಹೊಳೆಯುವ ಮುಖ ನಿಮ್ಮದಾಗುತ್ತದೆ.  ಆರೋಗ್ಯಕ್ಕಾಗಿ ಅರಸಿಣ ಮಿಶ್ರಿತ ಹಾಲು ಎಷ್ಟು ಮುಖ್ಯ ಎಂಬುದು ನಿಮಗೆ ಗೊತ್ತಿದೆ.  ಇದು ಅಂಟಿ ಆಕ್ಸಿಡೆಂಟ್ ಗುಣ ಹೊಂದಿದೆ. ರೋಗನಿರೋಧಕ (immunity) ಗುಣ ಇದೆ. ಆಯುರ್ವೇದದಲ್ಲಿ ಅರಸಿಣಕ್ಕೆ ಸಾಕಷ್ಟು ಮಹತ್ವ ಇದೆ.  

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News