Health Tips: ಚಳಿಗಾಲದಲ್ಲಿ ಪ್ರತಿದಿನ ಶುಂಠಿ ಹಾಲು ಕುಡಿಯಿರಿ, ಏನೆಲ್ಲಾ ಪ್ರಯೋಜನಗಳಿವೆ ಗೊತ್ತೇ?
ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಶುಂಠಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.
ನವದೆಹಲಿ: ಚಳಿಗಾಲವು ಸಾಕಷ್ಟು ಸವಾಲುಗಳನ್ನು ತರುತ್ತದೆ. ಈ ಋತುವಿನಲ್ಲಿ ರೋಗನಿರೋಧಕ ಶಕ್ತಿ ತುಂಬಾ ದುರ್ಬಲಗೊಳ್ಳುತ್ತದೆ. ಇದರಿಂದ ಶೀತ-ಕೆಮ್ಮು, ಜ್ವರ ಸೇರಿದಂತೆ ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಶುಂಠಿಯ ಸೇವನೆಯು ನಮ್ಮ ದೇಹಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ (Ginger Milk Health Benefits). ಶುಂಠಿ ಸೇವನೆಯಿಂದ ದೇಹದಲ್ಲಿ ಶಾಖ ಉಳಿಯುತ್ತದೆ. ಪ್ರತಿನಿತ್ಯ ಶುಂಠಿ ಹಾಲು ಸೇವಿಸುವುದರಿಂದ ಅನೇಕ ಪ್ರಯೋಜನಗಳಿವೆ.
ಶುಂಠಿಯನ್ನು ಬಳಸುವುದು ಹೇಗೆ?
ಶುಂಠಿಯನ್ನು ಹಲವು ವಿಧಗಳಲ್ಲಿ ಬಳಸಬಹುದು(Ginger Benefits And Uses). ಉದಾಹರಣೆಗೆ ಆಹಾರದಲ್ಲಿ, ಚಹಾದಲ್ಲಿ, ಹಾಲು ಮತ್ತು ಒಣಗಿರುವ ಶುಂಠಿ ಇತ್ಯಾದಿ. ನೀವು ಶುಂಠಿ ಹಾಲು ಕುಡಿಯಲು ಸಾಧ್ಯವಾದರೆ ಅದು ತುಂಬಾ ಒಳ್ಳೆಯದು. ಶುಂಠಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದು ಅನೇಕ ಆರೋಗ್ಯಕಾರಿ ಪ್ರಯೋಜನಗಳನ್ನು ನೀಡುತ್ತದೆ. ಉರಿಯೂತ ನಿವಾರಕ ಮತ್ತು ಬ್ಯಾಕ್ಟೀರಿಯಾ ವಿರೋಧಿ ಗುಣಗಳಿಂದ ಸಮೃದ್ಧವಾಗಿರುವ ಶುಂಠಿಯನ್ನು ಹಾಲಿನೊಂದಿಗೆ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಹಲವಾರು ಪ್ರಯೋಜನಗಳಿವೆ.
ಇದನ್ನೂ ಓದಿ: Liver Health : ನಿಮ್ಮ ಕಿಡ್ನಿಯನ್ನ ಆರೋಗ್ಯವಾಗಿ ಮತ್ತು ಸ್ವಚ್ಛವಾಗಿಡಲು ತಪ್ಪದೆ ಈ ಆಹಾರಗಳು ಸೇವಿಸಿ
ಶುಂಠಿಯ ಪ್ರಯೋಜನಗಳು ಮತ್ತು ಉಪಯೋಗಗಳು
ಆಂಟಿಬ್ಯಾಕ್ಟೀರಿಯಲ್ ಮತ್ತು ಆಂಟಿಫಂಗಲ್ ಗುಣಗಳಿಂದ ಸಮೃದ್ಧವಾಗಿರುವ ಶುಂಠಿ(Benefits Of Ginger Milk)ಯು ಹೊಟ್ಟೆಗೆ ಸಂಬಂಧಿಸಿದ ಅನೇಕ ಸಮಸ್ಯೆಗಳನ್ನು ನಿವಾರಿಸುತ್ತದೆ. ನಿಮ್ಮ ಹೊಟ್ಟೆಯಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ ಶುಂಠಿ ಹಾಲು ಕುಡಿಯುವುದರಿಂದ ಪರಿಹಾರ ಪಡೆಯಬಹುದು. ಶುಂಠಿಯ ಹಾಲು ಉದರಶೂಲೆ ಸಮಸ್ಯೆಯಲ್ಲಿ ಪರಿಣಾಮಕಾರಿ ಎಂದು ಸಾಬೀತಾಗಿದೆ.
ಮಲಬದ್ಧತೆ, ಹೊಟ್ಟೆ ನೋವು, ಅಸಿಡಿಟಿ, ಆಸಿಡ್ ರಿಫ್ಲಕ್ಸ್ ನಂತಹ ಹೊಟ್ಟೆಯ ಸಮಸ್ಯೆ ಇರುವವರು ಶುಂಠಿ ಹಾಲ(Ginger Milk)ನ್ನು ಕುಡಿಯಬಹುದು. ಶುಂಠಿಯು ಫೈಬರ್ನಲ್ಲಿ ಸಮೃದ್ಧವಾಗಿದ್ದು, ಇದರಿಂದ ಮಲಬದ್ಧತೆ ಸಮಸ್ಯೆ ನಿವಾರಣೆಯಾಗುತ್ತದೆ. ಶುಂಠಿ ತಿನ್ನುವುದರಿಂದ ಜೀರ್ಣಕ್ರಿಯೆಯ ಪ್ರಕ್ರಿಯೆ ಸಹ ಉತ್ತಮವಾಗಿರುತ್ತದೆ.
ಇದನ್ನೂ ಓದಿ: DARK CHOCOLATE: ಡಾರ್ಕ್ ಚಾಕೊಲೇಟ್ ತಿನ್ನುವುದರಿಂದ ಎಷ್ಟೆಲ್ಲ ಲಾಭ ಗೊತ್ತೇ?
ತಲೆನೋವಿಗೆ ಶುಂಠಿ ಹಾಲು ರಾಮಬಾಣ
ತಲೆನೋವಿನ ಸಮಸ್ಯೆ ಇರುವವರು ಶುಂಠಿ ಸೇವಿಸುವ ಮೂಲಕ ಪ್ರಯೋಜನ(Ginger Milk Benefits) ಪಡೆಯಬಹುದು. ಇದಕ್ಕಾಗಿ ನೀವು 5 ಗ್ರಾಂ ಒಣ ಶುಂಠಿ ಪೇಸ್ಟ್ ಅನ್ನು 50 ಮಿಲಿ ಹಾಲಿನಲ್ಲಿ ಮಿಶ್ರಣ ಮಾಡಿ. ಅದನ್ನು ಫಿಲ್ಟರ್ ಮಾಡಿ ತೆಗೆದುಕೊಳ್ಳಿ. ಇದು ತೀವ್ರವಾದ ತಲೆನೋವನ್ನು ನಿವಾರಿಸುತ್ತದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.