Lemon Water without brushing teeth: ನಾವು ಪ್ರತಿದಿನ ಬೆಳಿಗ್ಗೆ ಎದ್ದ ನಂತರ ಹಲ್ಲುಜ್ಜುತ್ತೇವೆ. ಇದು ನಮ್ಮ ಹಲ್ಲು ಮತ್ತು ಬಾಯಿಯನ್ನು ಸ್ವಚ್ಛಗೊಳಿಸುತ್ತದೆ ಮತ್ತು ಎಲ್ಲಾ ರೀತಿಯ ಕೆಟ್ಟ ವಾಸನೆಯನ್ನು ಸಹ ತೊಡೆದುಹಾಕುತ್ತದೆ. ಅಷ್ಟೇ ಅಲ್ಲದೆ, ಬ್ರಷ್ ಮಾಡದೆ ಬೆಳಗಿನ ಉಪಾಹಾರವನ್ನು ಸೇವಿಸಬಾರದು ಎಂದು ಹೇಳುತ್ತಾರೆ. ಏಕೆಂದರೆ, ಸೂಕ್ಷ್ಮಜೀವಿಗಳು ನಮ್ಮ ಬಾಯಿಯಲ್ಲಿ ಉಳಿದು, ಆಹಾರದ ಮೂಲಕ ಹೊಟ್ಟೆಗೆ ಸೇರುತ್ತವೆ, ಬಳಿಕ ಸಮಸ್ಯೆಗಳನ್ನು ಉಂಟುಮಾಡುತ್ತವೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 'ಸ್ಟಾಪ್ ಕ್ಲಾಕ್' ನಿಯಮ: ಆಟ ನಿಧಾನವಾದರೆ 5 ರನ್ ದಂಡ ವಿಧಿಸುತ್ತೆ ICCಯ ಈ ಹೊಸ ರೂಲ್ಸ್!


ಇನ್ನು ಆರೋಗ್ಯವಂತರಾಗಿರಲು ಪ್ರತೀದಿನ 8 ರಿಂದ 10 ಗ್ಲಾಸ್ ನೀರು ಕುಡಿಯಬೇಕು ಎಂದು ತಜ್ಞರು ಹೇಳುತ್ತಾರೆ.  ಇದು ದೇಹವನ್ನು ಹೈಡ್ರೇಟ್ ಮಾಡುತ್ತದೆ. ಅದರಲ್ಲೂ ಬೆಳಿಗ್ಗೆ ಎದ್ದ ತಕ್ಷಣ ನೀರು ಕುಡಿದರೆ ದೇಹಕ್ಕೆ ಬಹಳಷ್ಟು ಪ್ರಯೋಜನಗಳಿವೆ.


ಬೆಳಿಗ್ಗೆ ಎದ್ದು ಹಲ್ಲುಜ್ಜದೆ ನೀರು ಕುಡಿದರೆ ಅದರಿಂದ ಯಾವುದೇ ಹಾನಿಯಾಗುವುದಿಲ್ಲ. ಬದಲಿಗೆ ಇದು ಹಲವಾರು ಪ್ರಯೋಜನಗಳನ್ನು ಹೊಂದಿದೆ. ಅದರಲ್ಲೂ ನಿಂಬೆ ಹನಿ ಬೆರೆಸಿ ಕುಡಿದರೆ ಶೀಘ್ರವಾಗಿಯೇ ತೂಕ ಇಳಿಕೆ ಮಾಡಬಹುದು.


  • ಬೆಳಿಗ್ಗೆ ಹಲ್ಲುಜ್ಜುವ ಮೊದಲು ಒಂದು ಲೋಟ ನೀರಿಗೆ ನಿಂಬೆ ರಸ ಬೆರೆಸಿ ಕುಡಿದರೆ, ಅದು ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

  • ಹಲ್ಲುಜ್ಜದೆ ನಿಂಬೆ ನೀರು ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಸುಧಾರಿಸುತ್ತದೆ ಮತ್ತು ಬಾಯಿಯ ದುರ್ವಾಸನೆ ದೂರವಾಗುತ್ತದೆ.

  • ಹಲ್ಲುಜ್ಜದೆ ನಿಂಬೆ ನೀರು ಕುಡಿಯುವುದರಿಂದ ನಿಮ್ಮ ಕೂದಲು ಸ್ಟ್ರಾಂಗ್ ಆಗಿ ಹೊಳೆಯುತ್ತದೆ.

  • ಈ ರೀತಿ ನೀರನ್ನು ಕುಡಿಯುವುದರಿಂದ ಮುಖ ಮತ್ತು ತ್ವಚೆಯು ಹೊಳೆಯಲು ಪ್ರಾರಂಭಿಸುತ್ತದೆ

  • ಈ ರೀತಿ ನಿಂಬೆ ನೀರು ಕುಡಿಯುವುದರಿಂದ ಬೊಜ್ಜು ಕ್ರಮೇಣ ಕಡಿಮೆಯಾಗುತ್ತದೆ ಎಂದು ಅನೇಕ ಆರೋಗ್ಯ ತಜ್ಞರು ಹೇಳುತ್ತಾರೆ.

  • ಅಷ್ಟೇ ಅಲ್ಲದೆ, ಹಲ್ಲುಜ್ಜದೆ ನೀರು ಕುಡಿಯುವುದರಿಂದ ಮಲಬದ್ಧತೆ ಮತ್ತು ಅಸಿಡಿಟಿಯಂತಹ ಹೊಟ್ಟೆಯ ಸಮಸ್ಯೆಗಳೂ ಕಡಿಮೆಯಾಗುತ್ತದೆ.


ಇದನ್ನೂ ಓದಿ: “ಬೇರೆ ಯಾರಿಗೂ Sorry ಕೇಳಲ್ಲ… ನಿಮ್ಮಿಬ್ರಿಗೆ ಮಾತ್ರ”- ಸ್ನೇಹಿತ್ ಹೀಗಂದಿದ್ದು ಯಾರಿಗೆ?


ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಅಳವಡಿಸಿಕೊಳ್ಳುವ ಮೊದಲು, ದಯವಿಟ್ಟು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ZEE NEWS ಇದನ್ನು ಖಚಿತಪಡಿಸುವುದಿಲ್ಲ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ