ಟಿ20 ಪಂದ್ಯದಲ್ಲಿ 'ಸ್ಟಾಪ್ ಕ್ಲಾಕ್' ನಿಯಮ: ಆಟ ನಿಧಾನವಾದರೆ 5 ರನ್ ದಂಡ ವಿಧಿಸುತ್ತೆ ICCಯ ಈ ಹೊಸ ರೂಲ್ಸ್!

stop clock rules in cricket: ಮಂಗಳವಾರ (ಡಿಸೆಂಬರ್ 12) ಬಾರ್ಬಡೋಸ್‌’ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ 20 ಅಂತಾರಾಷ್ಟ್ರೀಯ ಪಂದ್ಯದೊಂದಿಗೆ 'ಸ್ಟಾಪ್ ಕ್ಲಾಕ್' ಪ್ರಯೋಗವು ಆರಂಭವಾಗಲಿದೆ.

Written by - Bhavishya Shetty | Last Updated : Dec 11, 2023, 08:36 PM IST
    • ಓವರ್‌’ಗಳ ನಡುವಿನ ಸಮಯವನ್ನು ಸೀಮಿತಗೊಳಿಸುವ 'ಸ್ಟಾಪ್ ಕ್ಲಾಕ್
    • ವೆಸ್ಟ್ ಇಂಡೀಸ್ vs ಇಂಗ್ಲೆಂಡ್ ನಡುವಿನ T20 ಸರಣಿಯೊಂದಿಗೆ ಪ್ರಾರಂಭ
    • ಸೋಮವಾರ ಮಾಹಿತಿ ನೀಡಿದ ಗ್ಲೋಬಲ್ ಗವರ್ನಿಂಗ್ ಮಂಡಳಿ
ಟಿ20 ಪಂದ್ಯದಲ್ಲಿ 'ಸ್ಟಾಪ್ ಕ್ಲಾಕ್' ನಿಯಮ: ಆಟ ನಿಧಾನವಾದರೆ 5 ರನ್ ದಂಡ ವಿಧಿಸುತ್ತೆ ICCಯ ಈ ಹೊಸ ರೂಲ್ಸ್!  title=
stop clock rules in cricket

Stop Clock Rules: ಓವರ್‌’ಗಳ ನಡುವಿನ ಸಮಯವನ್ನು ಸೀಮಿತಗೊಳಿಸುವ 'ಸ್ಟಾಪ್ ಕ್ಲಾಕ್' ಪ್ರಯೋಗವು ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ T20 ಅಂತರರಾಷ್ಟ್ರೀಯ ಸರಣಿಯೊಂದಿಗೆ ಪ್ರಾರಂಭವಾಗಲಿದೆ. ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ (ಐಸಿಸಿ), ಆಟದ ಗ್ಲೋಬಲ್ ಗವರ್ನಿಂಗ್ ಮಂಡಳಿಯು ಸೋಮವಾರ ಈ ಮಾಹಿತಿಯನ್ನು ನೀಡಿದೆ.

ಇದನ್ನೂ ಓದಿ: ಟಿ20 ಪಂದ್ಯ ರದ್ದಾದ ಬೆನ್ನಲ್ಲೇ ದ. ಆಫ್ರಿಕಾ ಕ್ರಿಕೆಟ್ ಮಂಡಳಿಯನ್ನು ನಿಂದಿಸಿದ ಸುನಿಲ್ ಗವಾಸ್ಕರ್!

ಮಂಗಳವಾರ (ಡಿಸೆಂಬರ್ 12) ಬಾರ್ಬಡೋಸ್‌’ನಲ್ಲಿ ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ 20 ಅಂತಾರಾಷ್ಟ್ರೀಯ ಪಂದ್ಯದೊಂದಿಗೆ 'ಸ್ಟಾಪ್ ಕ್ಲಾಕ್' ಪ್ರಯೋಗವು ಆರಂಭವಾಗಲಿದೆ.

'ಸ್ಟಾಪ್ ಕ್ಲಾಕ್' ಓವರ್‌’ಗಳ ನಡುವಿನ ಸಮಯವನ್ನು ಮಿತಿಗೊಳಿಸುತ್ತದೆ. ಇದರರ್ಥ ಬೌಲಿಂಗ್ ತಂಡವು ಹಿಂದಿನ ಓವರ್‌’ನ 60 ಸೆಕೆಂಡುಗಳಲ್ಲಿ ಮುಂದಿನ ಓವರ್‌’ನ ಮೊದಲ ಎಸೆತವನ್ನು ಬೌಲ್ ಮಾಡಲು ಸಿದ್ಧರಾಗಿರಬೇಕು. ಇನ್ನಿಂಗ್ಸ್‌’ನಲ್ಲಿ (ಎರಡು ಎಚ್ಚರಿಕೆಗಳ ನಂತರ) ಮೂರನೇ ಬಾರಿಯೂ ವಿಫಲವಾದರೆ ಫೀಲ್ಡಿಂಗ್ ತಂಡದ ವಿರುದ್ಧ ಐದು ರನ್‌’ಗಳ ದಂಡವನ್ನು ವಿಧಿಸಲಾಗುತ್ತದೆ ಎಂದು ಐಸಿಸಿ ಹೇಳಿಕೆಯಲ್ಲಿ ತಿಳಿಸಿದೆ.

ಐಸಿಸಿ ಕ್ರಿಕೆಟ್‌’ನ ಜನರಲ್ ಮ್ಯಾನೇಜರ್ ವಾಸಿಂ ಖಾನ್ ಮಾತನಾಡಿ, 'ಅಂತಾರಾಷ್ಟ್ರೀಯ ಕ್ರಿಕೆಟ್‌’ನ ಎಲ್ಲಾ ಸ್ವರೂಪಗಳಲ್ಲಿ ಆಟದ ವೇಗವನ್ನು ಹೆಚ್ಚಿಸುವ ಉದ್ದೇಶದಿಂದ ಈ ನಿಯಮ ಜಾರಿಗೆ ತರಲಾಗುತ್ತದೆ. ಸ್ಟಾಪ್ ಕ್ಲಾಕ್ ಪ್ರಯೋಗದ ಫಲಿತಾಂಶಗಳನ್ನು ಕೊನೆಯಲ್ಲಿ ಮೌಲ್ಯಮಾಪನ ಮಾಡಲಾಗುತ್ತದೆ’ ಎಂದಿದ್ದಾರೆ.

ವೆಸ್ಟ್ ಇಂಡೀಸ್ ಮತ್ತು ಇಂಗ್ಲೆಂಡ್ ನಡುವೆ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ. ಇದಕ್ಕೂ ಮುನ್ನ ಉಭಯ ತಂಡಗಳ ನಡುವೆ ಏಕದಿನ ಸರಣಿ ನಡೆದಿದ್ದು, ಆತಿಥೇಯ ವೆಸ್ಟ್ ಇಂಡೀಸ್ 2-1 ಅಂತರದಲ್ಲಿ ಗೆದ್ದಿತ್ತು. 25 ವರ್ಷಗಳ ನಂತರ, ಇಂಗ್ಲೆಂಡ್ ವಿರುದ್ಧದ ದ್ವಿಪಕ್ಷೀಯ ಸರಣಿಯಲ್ಲಿ ವೆಸ್ಟ್ ಇಂಡೀಸ್ ತವರಿನಲ್ಲಿ ಗೆದ್ದಿತ್ತು.

ವೆಸ್ಟ್ ಇಂಡೀಸ್ vs ಇಂಗ್ಲೆಂಡ್ T20I ಸರಣಿ ವೇಳಾಪಟ್ಟಿ

  • 1 ನೇ T20I: 12 ಡಿಸೆಂಬರ್, ಕೆನ್ಸಿಂಗ್ಟನ್ ಓವಲ್, ಬಾರ್ಬಡೋಸ್
  • 2 ನೇ T20I: 14 ಡಿಸೆಂಬರ್, ನ್ಯಾಷನಲ್ ಸ್ಟೇಡಿಯಂ, ಗ್ರೆನಡಾ
  • 3 ನೇ T20I: 16 ಡಿಸೆಂಬರ್, ನ್ಯಾಷನಲ್ ಸ್ಟೇಡಿಯಂ, ಗ್ರೆನಡಾ
  • 4 ನೇ T20I: 19 ಡಿಸೆಂಬರ್, ಬ್ರಿಯಾನ್ ಲಾರಾ ಅಕಾಡೆಮಿ, ಟ್ರಿನಿಡಾಡ್
  • 5 ನೇ T20I: 21 ಡಿಸೆಂಬರ್, ಬ್ರಿಯಾನ್ ಲಾರಾ ಅಕಾಡೆಮಿ, ಟ್ರಿನಿಡಾಡ್

ಇದನ್ನೂ ಓದಿ: “ಬೇರೆ ಯಾರಿಗೂ Sorry ಕೇಳಲ್ಲ… ನಿಮ್ಮಿಬ್ರಿಗೆ ಮಾತ್ರ”- ಸ್ನೇಹಿತ್ ಹೀಗಂದಿದ್ದು ಯಾರಿಗೆ?

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News