ಬೆಂಗಳೂರು : ನಿಂಬೆ ನೀರು, ಅದರಲ್ಲಿಯೂ ವಿಶೇಷವಾಗಿ ತಾಜಾ ನಿಂಬೆಹಣ್ಣಿನಿಂದ ತಯಾರಿಸಿದ ನಿಂಬೆ ಜ್ಯೂಸ್ ಬೇಸಿಗೆ ಕಾಲದಲ್ಲಿ ಅನೇಕ ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ. ಆದರೆ, ಮನೆಯಲ್ಲಿ ನಿಂಬೆ ಪಾನಕವನ್ನು ತಯಾರಿಸುವಾಗ, ಅದನ್ನು  ಆರೋಗ್ಯಕರವಾಗಿರಿಸುವ ಉದ್ದೇಶದಿಂದ ಸಕ್ಕರೆ ಮತ್ತು ಇತರ ಅನಗತ್ಯ ಪದಾರ್ಥಗಳನ್ನು ಸೇವಿಸಬಾರದು ಎನ್ನುವುದು ಕೂಡಾ ಮುಖ್ಯ. 


COMMERCIAL BREAK
SCROLL TO CONTINUE READING

ಬೇಸಿಗೆಯಲ್ಲಿ ನಿಂಬೆ ನೀರನ್ನು ಕುಡಿಯುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳು : 
1. ಹೈಡ್ರೆಶನ್ :

ನಿಂಬೆ ನೀರು ಬೇಸಿಗೆಯಲ್ಲಿ ದೇಹವನ್ನು ಹೈಡ್ರೇಟ್ ಮಾಡಲು ಸಹಾಯ ಮಾಡುತ್ತದೆ. ದೇಹದ ಕಾರ್ಯಗಳನ್ನು ನಿರ್ವಹಿಸಲು ಮತ್ತು ಆರೋಗ್ಯವನ್ನು ಕಾಪಾಡಿಕೊಳ್ಳಲು ದೇಹವನ್ನು ಹೈಡ್ರೆಟ್ ಆಗಿ ಇಟ್ಟುಕೊಳ್ಳುವುದು ಬಹಳ ಮುಖ್ಯ. 


2.ವಿಟಮಿನ್ ಸಿ  : 
ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ.ಇದು ಶಕ್ತಿಯುತವಾದ ಉತ್ಕರ್ಷಣ ನಿರೋಧಕವಾಗಿದ್ದು, ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.   ಸೋಂಕಿನ ವಿರುದ್ಧ ಹೋರಾಡಲು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಿಕೊಳ್ಳಲು ಇದು ಸಹಾಯ ಮಾಡುತ್ತದೆ. ವಿಟಮಿನ್ ಸಿ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ.  ಇದು ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳಿಗೆ ಅವಶ್ಯಕವಾಗಿದೆ.


ಇದನ್ನೂ ಓದಿ :ನಿತ್ಯ ಎರಡೇ ಎರಡು ಎಲೆ ಜಗಿಯಿರಿ ! ಈ ಪುಟ್ಟ ಎಲೆ ನಾರ್ಮಲ್ ಮಾಡಿ ಬಿಡುತ್ತದೆ ಬ್ಲಡ್ ಶುಗರ್ !


3.ಎಲೆಕ್ಟ್ರೋಲೈಟ್ ಸಮತೋಲನ :
ನಿಂಬೆ ನೀರಿನಲ್ಲಿ ಪೊಟ್ಯಾಸಿಯಮ್, ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಮ್‌ನಂತಹ ಎಲೆಕ್ಟ್ರೋಲೈಟ್‌ಗಳಿವೆ. ಬೇಸಿಗೆ ಕಾಲದಲ್ಲಿ ಬೆವರುವ ಮೂಲಕ ದೇಹದಿಂದ ನೀರಿನ ಅಂಶ ಹೊರಹೋಗುತ್ತದೆ. ಹಾಗಾಗಿ ನಿಂಬೆ ನೀರು ದೇಹದ ಎಲೆಕ್ಟ್ರೋಲೈಟ್ ಅನ್ನು ಕಾಪಾಡಲು ಸಹಾಯ ಮಾಡುತ್ತದೆ. 


4.ಜೀರ್ಣಕ್ರಿಯೆಯಲ್ಲಿ ಸಹಕಾರಿ : 
ನಿಂಬೆ ನೀರಿನಲ್ಲಿ ಇರುವ ಸಿಟ್ರಿಕ್ ಆಮ್ಲ ಜೀರ್ಣಕಾರಿ ಕಿಣ್ವಗಳ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಅಜೀರ್ಣ, ಹೊಟ್ಟೆ ಉಬ್ಬುವುದು ಮತ್ತು ಮಲಬದ್ಧತೆಯ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಹೆಚ್ಚಿಸಲು ನಿಂಬೆ ನೀರು ಸಹಾಯ ಮಾಡುತ್ತದೆ.


5. pH ಸಮತೋಲನ : 
ನಿಂಬೆ ನೀರನ್ನು ಸೇವಿಸುವುದರಿಂದ ದೇಹದಲ್ಲಿ ಸೂಕ್ತವಾದ pH ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಒಟ್ಟಾರೆ ದೇಹದ ಆರೋಗ್ಯಕ್ಕೆ ಮುಖ್ಯವಾಗಿದ್ದು, ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.


ಇದನ್ನೂ ಓದಿ :ಮಧುಮೇಹಿಗಳಿಗೆ ವರದಾನ, ವಿವಿಧ ರೋಗಗಳಿಗೆ ರಾಮಬಾಣ ಈ ಹಣ್ಣು ..!


6. ಯಕೃತ್ತನ್ನು ಸ್ವಚ್ಛಗೊಳಿಸುತ್ತದೆ :
ನಿಂಬೆ ನೀರನ್ನು ವಿಶೇಷವಾಗಿ ಬೆಳಿಗ್ಗೆ ಬಿಸಿ ನೀರಿನೊಂದಿಗೆ ಸೇವಿಸಿದಾಗ, ಪಿತ್ತರಸ ಉತ್ಪಾದನೆಯನ್ನು ಹೆಚ್ಚಿಸುತ್ತದೆ. ಹೀಗೆ ದೇಹದಿಂದ ವಿಷವನ್ನು ಹೊರಹಾಕುವ ಮೂಲಕ ಯಕೃತ್ತಿನ ನಿರ್ವಿಶೀಕರಣಕ್ಕೆ ಸಹಾಯ ಮಾಡುತ್ತದೆ. ಇದು ಯಕೃತ್ತಿನ ಕಾರ್ಯವನ್ನು ಸುಧಾರಿಸಲು ಸಹಾಯ ಮಾಡಬಹುದು.


7. ತೂಕ ನಿರ್ವಹಣೆಗೆ ಸಹಾಯಕ : 
ನಿಂಬೆ ನೀರನ್ನು ಕುಡಿಯುವುದು, ಅದರಲ್ಲಿಯೂ ಊಟಕ್ಕೆ ಮುಂಚಿತವಾಗಿ, ನಿಂಬೆ ನೀರನ್ನು ಕುಡಿದರೆ ಹಸಿವನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ. ನಿಂಬೆ ನೀರು ಚಯಾಪಚಯವನ್ನು ಹೆಚ್ಚಿಸುತ್ತದೆ ಮತ್ತು ಕೊಬ್ಬಿನ ಚಯಾಪಚಯಕ್ಕೆ ಸಹಾಯ ಮಾಡುತ್ತದೆ. ಹೀಗಾದಾಗ ತೂಕ ನಷ್ಟಕ್ಕೆ ಇದು ಸಹಾಯ ಮಾಡುತ್ತದೆ. 


8. ಚರ್ಮದ ಆರೋಗ್ಯ ಕಾಪಾಡುತ್ತದೆ : 
ನಿಂಬೆ ನೀರಿನಲ್ಲಿರುವ ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳು ಚರ್ಮದ ಆರೋಗ್ಯವನ್ನು ಕಾಪಾಡುತ್ತದೆ. ಸುಕ್ಕುಗಳು ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ. ನಿಂಬೆ ನೀರನ್ನು ಸೇವಿಸುವುದರಿಂದ ಚರ್ಮದ ಕಾಂತಿ ಹೆಚ್ಚಾಗಲು ಸಹಾಯವಾಗುತ್ತದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.