ಪ್ರತಿದಿನ ಈ ಸಮಯಕ್ಕೆ ಎಳನೀರು ಕುಡಿದ್ರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು..! ವಿವರ ಇಲ್ಲಿದೆ

Right time to drink Coconut water : ಹೆಚ್ಚು ನೀರು ಇರುವ ಆಹಾರಗಳನ್ನು ಜ್ಯೂಸ್‌ನೊಂದಿಗೆ ಸೇವಿಸಬೇಕು. ಬೇಸಿಗೆಯಲ್ಲಿ ಎಷ್ಟೇ ಬಿಸಿಲಿದ್ದರೂ ನಮ್ಮ ದೇಹಕ್ಕೆ ಬೇಕಾದ ನೀರು ಮತ್ತು ಲವಣಾಂಶಗಳು ನಿಯಮಿತವಾಗಿ ದೊರೆತರೆ ಬೇಸಿಗೆ ಮುಗಿಯುವವರೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ.

Written by - Krishna N K | Last Updated : Apr 1, 2024, 09:34 PM IST
    • ಬೇಸಿಗೆಯಲ್ಲಿ ದೇಹವು ವಿಪರೀತವಾಗಿ ಬೆವರುತ್ತದೆ.
    • ತಕ್ಷಣ ಬಾಯಾರಿಕೆಯಾಗಿ ತಣ್ಣಗೆ ಏನಾದರೂ ಕುಡಿಯಬೇಕು ಅಂತ ಅನಿಸುತ್ತದೆ.
    • ಯಾವಾಗ ಬೇಕು ಆವಾಗ ಎಳನೀರು ಕುಡಿಯುವುದು ಒಳ್ಳೆಯದಲ್ಲ.
ಪ್ರತಿದಿನ ಈ ಸಮಯಕ್ಕೆ ಎಳನೀರು ಕುಡಿದ್ರೆ ಮಾತ್ರ ಆರೋಗ್ಯಕ್ಕೆ ಒಳ್ಳೆಯದು..! ವಿವರ ಇಲ್ಲಿದೆ title=

Coconut water health beneftis : ಬೇಸಿಗೆಯ ಬಿಸಿಯಿಂದ ತಪ್ಪಿಸಿಕೊಳ್ಳುವ ದೇಸಿಯ ಪಾನಿ ಎಳನೀರು ತುಂಬಾ ಒಳ್ಳೆಯದು. ಇದು ಆರೋಗ್ಯವನ್ನು ರಕ್ಷಿಸುವುದರ ಜೊತೆ ದೇಹವನ್ನು ಹೈಡ್ರೇಟ್‌ ಆಗಿ ಇರಿಸುತ್ತದೆ. ಆದರೆ ಯಾವಾಗ ಬೇಕು ಆವಾಗ ಎಳನೀರು ಕುಡಿಯುವುದು ಒಳ್ಳೆಯದಲ್ಲ.. ಬನ್ನಿ ಈ ನೀರನ್ನು ಕುಡಿಯಲು ಸರಿಯಾದ ಸಮಯ ಯಾವುದು ಅಂತ ತಿಳಿಯೋಣ..

ಬೇಸಿಗೆಯಲ್ಲಿ ದೇಹವು ವಿಪರೀತವಾಗಿ ಬೆವರುತ್ತದೆ. ಇದರಿಂದಾಗಿ ದೇಹದಲ್ಲಿರುವ ಲವಣಗಳು ಹೊರಗೆ ಬಂದು, ತಕ್ಷಣ ಬಾಯಾರಿಕೆಯಾಗಿ ತಣ್ಣಗೆ ಏನಾದರೂ ಕುಡಿಯಬೇಕು ಅಂತ ಅನಿಸುತ್ತದೆ. ಆಗ ಕೂಲ್ ಡ್ರಿಂಕ್ಸ್ ಮತ್ತು ಐಸ್ ಕ್ರೀಂಗಳನ್ನು ಹುಡುಕಿಕೊಂಡು ಹೋಗುತ್ತೇವೆ. ಆದರೆ, ಇವು ಅನಾರೋಗ್ಯವನ್ನು ತರುತ್ತವೆ. 

ಇದನ್ನೂ ಓದಿ:ಕಲ್ಲಂಗಡಿ ಹಣ್ಣು ತಿಂದು ಸಿಪ್ಪೆ ಬಿಸಾಡ್ತೀರಾ..? ನಿಮ್ಮಷ್ಟು ದಡ್ಡರೂ ಯಾರು ಇಲ್ಲ ಬಿಡಿ..

ಅದಕ್ಕಾಗಿಯೇ ಹೆಚ್ಚು ನೀರು ಇರುವ ಆಹಾರಗಳನ್ನು ಜ್ಯೂಸ್‌ನೊಂದಿಗೆ ಸೇವಿಸಬೇಕು. ಬೇಸಿಗೆಯಲ್ಲಿ ಎಷ್ಟೇ ಬಿಸಿಲಿದ್ದರೂ ನಮ್ಮ ದೇಹಕ್ಕೆ ಬೇಕಾದ ನೀರು ಮತ್ತು ಲವಣಾಂಶಗಳು ನಿಯಮಿತವಾಗಿ ದೊರೆತರೆ ಬೇಸಿಗೆ ಮುಗಿಯುವವರೆಗೆ ಯಾವುದೇ ಆರೋಗ್ಯ ಸಮಸ್ಯೆಗಳು ಎದುರಾಗುವುದಿಲ್ಲ.

ತೆಂಗಿನಕಾಯಿ ಹೆಚ್ಚಿನ ನೀರಿನಂಶವಿರುವ ಆಹಾರಗಳಲ್ಲಿ ಒಂದು. ಈ ನೀರನ್ನು ಕುಡಿಯಲು ಕೂಡ ಒಂದು ಸಮಯವಿದೆ.. ಹೌದು, ಸೋಶಿಯಲ್ ಮೀಡಿಯಾದಲ್ಲಿ ದೊರೆತ ಕೆಲವು ವರದಿಗಳ ಪ್ರಕಾರ, ಬಿಸಿಲಿನ ದಿನಗಳಲ್ಲಿ ಬೆಳಿಗ್ಗೆ 10 ಗಂಟೆಗೆ ಎಳನೀರು ಕುಡಿಯಬೇಕು. ಅಲ್ಲದೆ, ಲೋಬಿಪಿ ಇರುವವರು ತೆಂಗಿನ ನೀರನ್ನು ಕುಡಿಯಬಾರದು. ಏಕೆಂದರೆ ಇದು ರಕ್ತದೊತ್ತಡವನ್ನು ಇನ್ನಷ್ಟು ಕಡಿಮೆ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. 

ಇದನ್ನೂ ಓದಿ:ಮಾರಕ ಕಾಮಾಲೆಯನ್ನೂ ಗುಣಪಡಿಸುವ ಅದ್ಭುತ ಶಕ್ತಿ ಇದೆ ಈ ಹಣ್ಣಿಗೆ..!

100 ಗ್ರಾಂ ತೆಂಗಿನ ನೀರಿನಲ್ಲಿ 94 ಗ್ರಾಂ ನೀರು ಇದೆ. ನಾವು ಪ್ರತಿದಿನ ಒಂದು ಕಪ್ ಕುಡಿದರೆ ದೇಹಕ್ಕೆ ಸೋಡಿಯಂ ಸಿಗುತ್ತದೆ. ಇದನ್ನು ಕುಡಿಯುವುದರಿಂದ ನಿರ್ಜಲೀಕರಣವಾಗುವುದನ್ನು ತಡೆಯುತ್ತದೆ. 
ಆರೋಗ್ಯ ದೃಷ್ಟಿಯಿಂದಲೂ ಸಹ ಎಳನೀರು ತುಂಬಾ ಒಳ್ಳೆಯದು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News