ನವದೆಹಲಿ : ಹಾಲು ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಕ್ಯಾಲ್ಸಿಯಂ, ಪ್ರೋಟೀನ್, ಪೊಟ್ಯಾಸಿಯಮ್ ಮತ್ತು ರಂಜಕವು ಹಾಲಿನಲ್ಲಿ ಕಂಡುಬರುತ್ತದೆ. ಮೂಳೆಗಳ ಆರೋಗ್ಯಕ್ಕೆ ಹಾಲು ಬಹಳ ಮುಖ್ಯ. ಆದರೆ, ಹಾಲಿನೊಂದಿಗೆ ತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಆರೋಗ್ಯಕ್ಕೆ ಇನ್ನಷ್ಟು ಪ್ರಯೋಜನಕಾರಿಯಾಗಿದೆ (Milk with ghee health benefits). ತುಪ್ಪ ಸೇವನೆ ಕೂಡಾ ಆರೋಗ್ಯಕ್ಕೆ ಅತ್ಯುತ್ತಮವಾಗಿದೆ. ತುಪ್ಪ ಸೇವನೆಯಿಂದ ದೇಹದ ದೌರ್ಬಲ್ಯವನ್ನು ತೆಗೆದುಹಾಕಬಹುದು. ಹಾಲು ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ, ಸಿಗುವ ಎಲ್ಲಾ ಪ್ರಯೋಜನಗಳು ದ್ವಿಗುಣಗೊಳ್ಳುತ್ತವೆ. 


COMMERCIAL BREAK
SCROLL TO CONTINUE READING

ನಿದ್ರಾಹೀನತೆ : ರಾತ್ರಿಯಲ್ಲಿ ನಿದ್ದೆ ಬಾರದಿರುವ ಸಮಸ್ಯೆಯನ್ನು ಅನೇಕ ಜನರು ಎದುರಿಸುತ್ತಾರೆ. ರಾತ್ರಿ ಸರಿಯಾಗಿ ನಿದ್ದೆ ಬಾರದಿರುವ ಅಂದರೆ ನಿದ್ರಾಹೀನತೆಯ ಸಮಸ್ಯೆ ಎದುರಿಸುವವರು, ಹಾಲಿನಲ್ಲಿ (Milk) ತುಪ್ಪವನ್ನು ಸೇರಿಸಿ ಕುಡಿಯುವುದರಿಂದ ಬಹಳಷ್ಟು ಪ್ರಯೋಜನವಾಗಲಿದೆ. ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಕುಡಿಯುವುದರಿಂದ ಮೆದುಳಿನ ನರಗಳು  ಶಾಂತಗೊಳ್ಳುತ್ತದೆ.  


ಇದನ್ನೂ ಓದಿ : National Refreshment Day 2021: ಮಳೆಗಾಲದಲ್ಲಿ ಟ್ರೈ ಮಾಡಿ ನೋಡಿ ದಾಲ್ಚಿನಿ- ಶುಂಠಿ ಮಿಶ್ರಿತ ಟೀ


ಜೀರ್ಣಕ್ರಿಯೆ : ಹಾಲಿನೊಂದಿಗೆ ತುಪ್ಪವನ್ನು (Ghee) ಬೆರೆಸಿ ಕುಡಿಯುವುದರಿಂದ, ದೇಹದಿಂದ ಕಿಣ್ವಗಳು ಬಿಡುಗಡೆಯಾಗುತ್ತವೆ. ಇದರಿಂದಾಗಿ ಜೀರ್ಣಕ್ರಿಯೆಗೆ ಸಂಬಂಧಿಸಿದ ಸಮಸ್ಯೆಗಳು ನಿವಾರಣೆಯಾಗುತ್ತದೆ. ಹಾಗಾಗಿ ಜೀರ್ಣ ಕ್ರಿಯೆಗೆ ಸಬಂಧಿಸಿದ ಸಮಸ್ಯೆ ಎದುರಿಸುತ್ತಿರುವವರು ಹಾಲಿನಲ್ಲಿ ತುಪ್ಪವನ್ನು ಬೆರೆಸಿ ಸೇವಿಸಿದರೆ ಪ್ರಯೋಜನವಾಗಲಿದೆ. 


ಚರ್ಮ : ಹಾಲು ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಚರ್ಮಕ್ಕೆ (Skin care) ತುಂಬಾ ಪ್ರಯೋಜನಕಾರಿ. ಹಾಲು ಮತ್ತು ತುಪ್ಪ ಎರಡೂ ನೈಸರ್ಗಿಕ ಮಾಯಿಶ್ಚರೈಸರ್ ಗಳಾಗಿವೆ. ಹೆಚ್ಚುತ್ತಿರುವ ವಯಸ್ಸಿನ ಕಾರಣ ತ್ವಚೆಯ ಮೇಲಾಗುವ ಪರಿಣಾಮವನ್ನು ಇದು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : Coffee For Skin: ಕಾಫಿ ಪುಡಿಯನ್ನು ಈ ರೀತಿ ಬಳಸಿ ಮುಖದ ಮೇಲಿನ ಕಲೆ, ಮೊಡವೆಗಳಿಗೆ ಹೇಳಿ ಬೈ, ಬೈ!


ಕೀಲು ನೋವು : ಹಾಲು ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದ ಕೀಲು ನೋವು ಗುಣವಾಗುತ್ತದೆ. ಗಂಟುಗಳು ಊದಿಕೊಳ್ಳುವುದು, ನೋವು ಮುಂತಾದ ಸಮಸ್ಯೆಯಿಂದ ಪರಿಹಾರ ಸಿಗುತ್ತದೆ. ತುಪ್ಪ ಬೆರೆಸಿದ ಹಾಲನ್ನು ಸೇವಿಸುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.