ಬೆಂಗಳೂರು: ಚಳಿಗಾಲದಲ್ಲಿ ನಮ್ಮ ಆರೋಗ್ಯವನ್ನು ರಕ್ಷಿಸುವಂತಹ ಆಹಾರ ಸೇವನೆ ಬಹಳ ಒಳ್ಳೆಯದು. ಅದರಲ್ಲೂ ನಮ್ಮ ದೇಹವನ್ನು ಬೆಚ್ಚಗಿರಿಸುವ ಮತ್ತು ಜೊತೆಗೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವಂತಹ ಆಹಾರ ಸೇವನೆ ಇನ್ನೂ ಉತ್ತಮ. ಅಂತಹ ಸೂಪರ್‌ಫುಡ್‌ ಯಾವುದು ಎಂದು ಯೋಚಿಸುತ್ತಿದ್ದೀರಾ. ಅದು ಎಲ್ಲರ ಮನೆಯಲ್ಲೂ ಸಾಮಾನ್ಯವಾಗಿ ಬಳಸುವ ಆಹಾರ ಪದಾರ್ಥ 'ಬೆಲ್ಲ'.


COMMERCIAL BREAK
SCROLL TO CONTINUE READING

ಬೆಲ್ಲದ ಅನೇಕ ಪ್ರಯೋಜನಗಳಿವೆ. ಅವುಗಳಲ್ಲಿ ಕೆಲವು ನಿಮಗೆ ತಿಳಿದಿರಬಹುದು, ಇನ್ನೂ ಕೆಲವು ನಿಮಗೆ ತಿಳಿಯದೇ ಇರಬಹುದು. ದೇಸಿ ಸೂಪರ್‌ಫುಡ್ ಬೆಲ್ಲವನ್ನು ಹಾಲಿನೊಂದಿಗೆ ಬೆರೆಸಿ ಕುಡಿದರೆ, ಅದರ ಪ್ರಯೋಜನಗಳು ಅನೇಕ ಪಟ್ಟು ಹೆಚ್ಚಾಗುತ್ತವೆ ಎಂದು ನಿಮಗೆ ತಿಳಿದಿದೆಯೇ?


ಹೌದು, ಬೆಲ್ಲವನ್ನು ಹಾಲಿಗೆ ಬೆರೆಸಿ ಕುಡಿದರೆ ಹಲವು ಆರೋಗ್ಯಕರ ಪ್ರಯೋಜನ ಸಿಗಲಿದೆ. ಅವುಗಳ ಬಗ್ಗೆ ಕೆಲವೊಂದು ಮಾಹಿತಿ ಇಲ್ಲಿದೆ...


- ಹಾಲಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆ ಉತ್ತಮವಾಗಿರುತ್ತದೆ.


- ರಾತ್ರಿ ಮಲಗುವ ಮೊದಲು ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಉತ್ತಮ ನಿದ್ರೆ ನಿಮ್ಮದಾಗುತ್ತದೆ. ಚಯಾಪಚಯ ದರವನ್ನು ವೇಗಗೊಳಿಸಲು ಉತ್ತಮ ನಿದ್ರೆ ಸಹಾಯ ಮಾಡುತ್ತದೆ.


- ರಕ್ತಹೀನತೆ ಇದ್ದರೆ, ಹಿಮೋಗ್ಲೋಬಿನ್ ಅನ್ನು ಹೆಚ್ಚಿಸುವಂತಹ ಆಹಾರವನ್ನು ಸೇವಿಸಬೇಕು. ಬೆಲ್ಲದಲ್ಲಿ ಹಿಮೋಗ್ಲೋಬಿನ್
ವರ್ಧಿಸುವ ಗುಣಲಕ್ಷಣಗಳು ಕಂಡುಬರುತ್ತವೆ. ಹೀಗಾಗಿ ಹಾಲಿಗೆ ಬೆಲ್ಲ ಬೆರೆಸಿ ಕುಡಿಯುವುದರಿಂದ ನಿಮ್ಮ ಹಿಮೊಗ್ಲೋಬಿನ್ ಹೆಚ್ಚಾಗುತ್ತದೆ.


- ನೀವು ಪ್ರತಿದಿನ ಹಾಲಿನಲ್ಲಿ ಬೆಲ್ಲವನ್ನು ಬೆರೆಸಿ ಕುಡಿದರೆ ನಿಮ್ಮ ಚರ್ಮವು ಯಾವಾಗಲೂ ಆರೋಗ್ಯಕರವಾಗಿರುತ್ತದೆ.


- ಹಾಲಿನಲ್ಲಿ ಬೆಲ್ಲ ಹಾಕಿ ಕುಡಿಯುವುದರಿಂದ, ಶರೀರದಲ್ಲಿ ಉಂಟಾಗುವ ಹಲವು ನೋವನ್ನು ನಿವಾರಿಸಬಹುದು. 


- ಅದರಲ್ಲೂ ವಿಶೇಷವಾಗಿ ಹೆಣ್ಣು ಮಕ್ಕಳು ಮುಟ್ಟಿನ ಸಂದರ್ಭದಲ್ಲಿ ಬೆಚ್ಚಗಿನ ಹಾಲಿನೊಂದಿಗೆ ಬೆಲ್ಲವನ್ನು ಬೆರೆಸಿ ಕುಡಿಯುವುದರಿಂದ ಹಲವು ರೀತಿಯ ಪ್ರಯೋಜನಗಳಿವೆ.


- ನೀವು ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ಬೆಲ್ಲ ಮಿಕ್ಸ್ ಮಾಡಿ ಕುಡಿಯುವುದನ್ನು ಅಭ್ಯಾಸ ಮಾಡಿಕೊಂಡರೆ ನಿಮ್ಮ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ.


- ವ್ಯಾಯಾಮ, ಕ್ರೀಡೆ ಅಥವಾ ಕೆಲಸದ ಕಾರಣದಿಂದಾಗಿ ದೇಹದಲ್ಲಿ ನೋವು ತಪ್ಪಿಸಲು ಕೂಡ ಈ ಹಾಲು ಸಹಾಯಕ.


- ನಿಮ್ಮ ದೈನಂದಿನ ಆಹಾರದಲ್ಲಿ ಹಾಲಿನಲ್ಲಿ ಅರಿಶಿನ ಬೆಲ್ಲವನ್ನು ಸೇರಿಸಿ ಕುಡಿದರೆ ನೀವು ಕ್ಯಾನ್ಸರ್, ಹೃದ್ರೋಗ, ಹೃದಯಾಘಾತದಂತಹ ಗಂಭೀರ ಕಾಯಿಲೆಗಳಿಂದ ದೂರ ಇರಬಹುದು.