Kidney Health: ಮೂತ್ರಪಿಂಡಗಳನ್ನು ಕಿಡ್ನಿ ಎಂತಲೂ ಕರೆಯಲಾಗುತ್ತದೆ.  ದೇಹದಿಂದ ವಿಷವನ್ನು ಹೊರಹಾಕಲು ಮತ್ತು ರಕ್ತವನ್ನು ಸ್ವಚ್ಛಗೊಳಿಸಲು ಮೂತ್ರಪಿಂಡಗಳು ಬಹಳ ಮುಖ್ಯ. ಹಾಗಾಗಿಯೇ ಯಾವುದೇ ವ್ಯಕ್ತಿ ಆರೋಗ್ಯವಾಗಿರಲು ಆತ ಆರೋಗ್ಯಕರ ಮೂತ್ರಪಿಂಡಗಳನ್ನು ಹೊಂದಿರುವುದು ಬಹಳ ಅಗತ್ಯ. ಬದಲಾದ ಹಾಗೂ ಅನಾರೋಗ್ಯಕರ  ಜೀವನಶೈಲಿಯಿಂದಾಗಿ ಹಲವು ಬಾರಿ ನಮ್ಮ ಮೂತ್ರಪಿಂಡಗಳು ಹಾನಿಗೊಳಗಾಗುತ್ತವೆ. ಮಾತ್ರವಲ್ಲ, ಇದರಿಂದ ಕೆಲವೊಮ್ಮೆ ಕಿಡ್ನಿಗಳು ವೈಫಲ್ಯಗೊಳ್ಳುವ ಸಾಧ್ಯತೆಯೂ ಇದೆ. ಇದನ್ನು ತಪ್ಪಿಸಲು ಕಿಡ್ನಿಯ ಆರೋಗ್ಯದ ಬಗ್ಗೆ ಗಮನಹರಿಸುವುದು ಬಹಳ ಅಗತ್ಯ. 


COMMERCIAL BREAK
SCROLL TO CONTINUE READING

ಕಿಡ್ನಿಯ ಪ್ರಮುಖ ಕೆಲಸವೆಂದರೆ ಮೂತ್ರದ ಮೂಲಕ ದೇಹದ ನೈರ್ಮಲ್ಯವನ್ನು, ವಿಷಕಾರಿ ಅಂಶಗಳನ್ನು ಹೊರಹಾಕುವುದು. ಅಷ್ಟೇಅಲ್ಲ, ಕಿಡ್ನಿ ಮಾನವ ದೇಹದಲ್ಲಿನ ಉಪ್ಪು, ಪೊಟ್ಯಾಸಿಯಮ್ ಮತ್ತು ಆಮ್ಲದ ಪ್ರಮಾಣವನ್ನು ನಿಯಂತ್ರಿಸುತ್ತದೆ. ಇವೆಲ್ಲದರ ಜೊತೆಗೆ ಮೂತ್ರಪಿಂಡಗಳು, ನಮ್ಮ ದೇಹದ ಇತರ ಭಾಗಗಳು ಕಾರ್ಯನಿರ್ವಹಿಸಲು ಬೇಕಾಗುವ ಹಾರ್ಮೋನುಗಳನ್ನು ಕೂಡ ಬಿಡುಗಡೆ ಮಾಡುತ್ತದೆ. ಹಾಗಾಗಿ, ಆರೋಗ್ಯವಾಗಿರಲು ಮೂತ್ರಪಿಂಡಗಳು ಆರೋಗ್ಯವಾಗಿರುವುದು ಬಹಳ ಮುಖ್ಯ. 


ವರದಿಯೊಂದರ ಪ್ರಕಾರ, ನಿತ್ಯ ನಿಮ್ಮ ಆಹಾರದಲ್ಲಿ ನಿಂಬೆಹಣ್ಣನ್ನು ಬಳಸುವ ಮೂಲಕ ಆರೋಗ್ಯಕರವಾದ ಮೂತ್ರಪಿಂಡಗಳನ್ನು ನಿಮ್ಮದಾಗಿಸಬಹುದು. ನಿತ್ಯ ಒಂದೆರಡು ಲೋಟ ನಿಂಬೆ ರಸವನ್ನು ಕುಡಿಯುವುದರಿಂದ ಮೂತ್ರದ ಸಿಟ್ರೇಟ್ ಹೆಚ್ಚಾಗಿ ಮೂತ್ರಪಿಂಡದಿಂದ ವಿಷವನ್ನು ಹೊರಹಾಕಲು ಸಹಾಯಕವಾಗಿದೆ.  ಮಾತ್ರವಲ್ಲ, ನಿತ್ಯ 2 ರಿಂದ 2.5 ಲೀಟರ್ ನಷ್ಟು ಮೂತ್ರ ವಿಸರ್ಜಿಸುವ ಜನರಲ್ಲಿ ಕಿಡ್ನಿ ಸ್ಟೋನ್ ಅಪಾಯವೂ ಕಡಿಮೆ ಎಂದು ಹೇಳಲಾಗುತ್ತದೆ.  


ಇದನ್ನೂ ಓದಿ- Bad Urine Smell: ಮೂತ್ರ ವಿಸರ್ಜನೆ ವೇಳೆ ಬರುವ ಕೆಟ್ಟ ವಾಸನೆ ಈ ಗಂಭೀರ ಕಾಯಿಲೆಗಳ ಮುನ್ಸೂಚನೆ!


ಕಿಡ್ನಿಯ ಆರೋಗ್ಯಕ್ಕೆ ನಮ್ಮ ಆಹಾರ, ಪಾನೀಯಗಳ ಬಗ್ಗೆಯೂ ನಿಗಾವಹಿಸುವುದು ಕೂಡ ಅತ್ಯಗತ್ಯ. ಅಂತಹ ಆಹಾರಗಳಲ್ಲಿ ನಿಂಬೆಹಣ್ಣು ಕೂಡ ಒಂದು. ನಿಂಬೆಹಣ್ಣಿನ ಸರಿಯಾದ ಬಳಕೆಯೂ ಕೂಡ ಕಿಡ್ನಿ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ. ಹಾಗಿದ್ದರೆ, ಆರೋಗ್ಯಕರ ಕಿಡ್ನಿಗಳನ್ನು ಪಡೆಯಲು, ಕಿಡ್ನಿಯನ್ನು ಸ್ವಚ್ಛಗೊಳಿಸಲು ಸಹಾಯಕವಾಗುವ ಪಾನೀಯಗಳ ಬಗ್ಗೆ ತಿಳಿಯೋಣ...


ಕಿಡ್ನಿ ಆರೋಗ್ಯಕ್ಕಾಗಿ ನಿಂಬೆಯನ್ನು ಈ ರೀತಿ ಬಳಸಿ:
* ಎಳನೀರಿನೊಂದಿಗೆ ನಿಂಬೆ: 

ಎಳನೀರು ಆರೋಗ್ಯಕ್ಕೆ ಉತ್ತಮ ಎಂದು ನಿಮಗೆ ತಿಳಿದೇ ಇದೆ. ಎಳನೀರಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಇದರ ಪ್ರಯೋಜನಗಳು ದುಪ್ಪಟ್ಟಾಗುತ್ತದೆ. ಇದು ಕಿಡ್ನಿ ಆರೋಗ್ಯಕ್ಕೂ ಒಳ್ಳೆಯದು.


* ಪುದೀನ ಎಲೆಯೊಂದಿಗೆ ನಿಂಬೆ:
ಪುದೀನ ಎಲೆಯೊಂದಿಗೆ ನಿಂಬೆ ಬೆರೆಸಿ ಸೇವಿಸುವುದು ಕೂಡ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು. ಇದಕ್ಕಾಗಿ ಮೊದಲು ಒಂದು ಲೋಟ ನೀರನ್ನು ತೆಗೆದುಕೊಂಡು ಅದಕ್ಕೆ ಮಿಂಟ್ ಎಲೆಗಳನ್ನು ಸೇರಿಸಿ, ಸ್ವಲ್ಪ ನಿಂಬೆ ರಸವನ್ನೂ ಮಿಕ್ಸ್ ಮಾಡಿ ಸೇವಿಸಿ.


ಇದನ್ನೂ ಓದಿ- Body Detox Tips: ರಕ್ತವನ್ನು ಶುಚಿಗೊಳಿಸುವುದರ ಜೊತೆಗೆ ಹಲವು ಕಾಯಿಲೆಗಳನ್ನು ನಿಮ್ಮಿಂದ ದೂರವಿರಿಸುತ್ತವೆ ಈ ಸಂಗತಿಗಳು


* ಲೆಮೆನ್-ಮಸಾಲಾ ಸೋಡಾ:
ಒಂದು ಲೋಟ ನೀರಿನಲ್ಲಿ ನಿಂಬೆ ರಸದ ಜೊತೆಗೆ ಸ್ವಲ್ಪ ಜೀರಿಗೆ-ಕೊತ್ತಂಬರಿ ಪುಡಿಯನ್ನು ಹಾಕಿ ಅದರೊಂದಿಗೆ ಸೋಡಾ ಬೆರೆಸಿ ಸೇವಿಸಿ. ಇದೂ ಕೂಡ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಲಾಗುತ್ತದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.