Milk Tea Side Effects: ಹಾಲಿನ ಚಹಾ ಸೇವನೆ ಸರಿಯಲ್ಲ..7 ಕಾಯಿಲೆಗಳ ಅಪಾಯ

Milk Tea Side Effects: ಖಾಲಿ ಹೊಟ್ಟೆ ಹಾಲಿನ ಚಹಾ ಸೇವನೆ ಕೆಲ ಅಡ್ಡ ಪರಿಣಾಮಗಳನ್ನು ಹೊಂದಿದೆ ಮತ್ತು ಈ ಕಾರಣದಿಂದ ಆಗುವ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಅವುಗಳ ಕುರಿತು ತಿಳಿದುಕೊಳ್ಳುವುದು ತುಂಬಾ ಅವಶ್ಯಕ.  

Written by - Nitin Tabib | Last Updated : Dec 11, 2022, 05:35 PM IST
  • ಚಹಾ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಕೆಲವರ ಮುಂಜಾನೆ ಒಂದು ಕಪ್ ಟೀ ಇಲ್ಲದೆ ಅವರ ಮುಂಜಾವು ಪೂರ್ಣವಾಗುವುದಿಲ್ಲ.
  • ಆದರೆ ಹಾಲು ಮತ್ತು ಸಕ್ಕರೆಯನ್ನು ಒಟ್ಟಿಗೆ ಬೆರೆಸಿದಾಗ ಅದು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ?
Milk Tea Side Effects: ಹಾಲಿನ ಚಹಾ ಸೇವನೆ ಸರಿಯಲ್ಲ..7 ಕಾಯಿಲೆಗಳ ಅಪಾಯ title=
Milk Tea Side Effects

Milk Tea Side Effects: ನಿಮಗೂ ಹಾಲಿನ ಚನಾ ಸೇವನೆಯ ಅಭ್ಯಾಸವಿದೆಯಾ? ಒಂದು ಲೋಟ ಹಾಲಿನ ಚಹಾದೊಂದಿಗೆ ಎಷ್ಟೊಂದು ಅದ್ಭುತ ಅನುಭವ ನೀಡುತ್ತದೆ ಎಂಬುದು ನಮ್ಮೆಲ್ಲರಿಗೂ ತಿಳಿದೇ ಇದೆ. ಆದರೆ ಪ್ರತಿಯೊಬ್ಬರೂ ತಿಳಿದಿರಬೇಕಾದ ಒಂದು ಸಂಗತಿ ಎಂದರೆ ಅದರಿಂದಾಗುವ ಅಡ್ಡಪರಿಣಾಮಗಳು. ಹೌದು, ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು ಕುಡಿಯುವುದು ಕೆಲವು ಪ್ರಮುಖ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು ಮತ್ತು ಅದರಿಂದಾಗುವ ಸಮಸ್ಯೆಗಳಿಂದ ಸುರಕ್ಷಿತವಾಗಿರಲು ಅವುಗಳ ಕುರಿತು ತಿಳಿದುಕೊಳ್ಳುವುದು ತುಂಬಾ ಮುಖ್ಯವಾಗಿದೆ ಮುಖ್ಯವಾಗಿದೆ.

ಹಾಲಿನ ಚಹಾದ ಹಾನಿಕಾರಕ ಅಡ್ಡಪರಿಣಾಮಗಳು
ಚಹಾ ಭಾರತೀಯರ ನೆಚ್ಚಿನ ಪಾನೀಯಗಳಲ್ಲಿ ಒಂದಾಗಿದೆ. ಕೆಲವರ ಮುಂಜಾನೆ ಒಂದು ಕಪ್ ಟೀ ಇಲ್ಲದೆ ಅವರ ಮುಂಜಾವು ಪೂರ್ಣವಾಗುವುದಿಲ್ಲ. ಆದರೆ ಹಾಲು ಮತ್ತು ಸಕ್ಕರೆಯನ್ನು ಒಟ್ಟಿಗೆ ಬೆರೆಸಿದಾಗ ಅದು ಗಂಭೀರವಾದ ಆರೋಗ್ಯ ಪರಿಣಾಮಗಳನ್ನು ಉಂಟುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು ಕುಡಿಯುವ ಕೆಲವು ಅನಾನುಕೂಲತೆಗಳನ್ನು ಹೊಂದಿದೆ ಮತ್ತು ಇಂದು ನಾವು ಅವುಗಳ ಕುರಿತು ಚರ್ಚಿಸುತ್ತಿದ್ದೇವೆ.

ಹೊಟ್ಟೆ ಉಬ್ಬರ
ಹೆಚ್ಚು ಹಾಲಿನ ಟೀ ಕುಡಿಯುವುದರಿಂದ ಹೊಟ್ಟೆ ಉಬ್ಬರದ ಸಮಸ್ಯೆ ಎದುರಾಗುತ್ತದೆ. ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ, ಇದು ಹೊಟ್ಟೆಯನ್ನು ಉಬ್ಬುವಂತೆ ಮಾಡುತ್ತದೆ. ಚಹಾಕ್ಕೆ ಹಾಲನ್ನು ಸೇರಿಸಿದಾಗ, ಏಕೆಂದರೆ ಇವೆರಡೂ ಕೂಡ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಉಂಟು ಮಾಡುತ್ತವೆ ಚಹಾದಲ್ಲಿ ಕಂಡುಬರುವ ಟ್ಯಾನಿನ್ಗಳು ಜೀರ್ಣಾಂಗ ವ್ಯವಸ್ಥೆಯನ್ನು ಅಡ್ಡಿಪಡಿಸುತ್ತದೆ ಮತ್ತು ಹೊಟ್ಟೆ ನೋವನ್ನು ಉಂಟುಮಾಡುತ್ತವೆ.

ಮಲಬದ್ಧತೆ
ಕೆಫೀನ್ ಜೊತೆಗೆ, ಚಹಾದಲ್ಲಿ ಥಿಯೋಫಿಲಿನ್ ಕೂಡ ಇದೆ. ಚಹಾದ ಹೆಚ್ಚಿನ ಸೇವನೆಯು ದೇಹವನ್ನು ನಿರ್ಜಲೀಕರಣಗೊಳಿಸುತ್ತದೆ, ಇದರಿಂದಾಗಿ ನೀವು ಮಲಬದ್ಧತೆಯ ಸಮಸ್ಯೆಯಿಂದ ತೊಂದರೆಗೊಳಗಾಗಬಹುದು.

ಆತಂಕ
ನೀವು ಆತಂಕದಿಂದ ಬಳಲುತ್ತಿದ್ದರೆ ಪದೇ ಪದೇ ಚಹಾ ಕುಡಿಯುವುದನ್ನು ನಿಲ್ಲಿಸಿ, ಇದು ಸ್ಥಿತಿಯ ಲಕ್ಷಣಗಳನ್ನು ಪ್ರಚೋದಿಸಬಹುದು ಮತ್ತು ಅದನ್ನು ನಿಯಂತ್ರಿಸಲು ನೀವು ಮತ್ತಷ್ಟು ಪರದಾಡಬೇಕಾಗುತ್ತದೆ.

ನಿದ್ರಾಹೀನತೆ
ಚಹಾವು ಕೆಫೀನ್ ಅನ್ನು ಹೊಂದಿರುತ್ತದೆ, ಇದು ನಿಮ್ಮ ನಿದ್ರೆಯ ಚಕ್ರಕ್ಕೆ ಅಡ್ಡಿಪಡಿಸುತ್ತದೆ ಮತ್ತು ಅದು ನಿದ್ರಾಹೀನತೆಗೆ ಕಾರಣವಾಗಬಹುದು. ಆದ್ದರಿಂದ, ನೀವು ಈಗಾಗಲೇ ನಿದ್ರಾಹೀನತೆ ಮತ್ತು ಅದರ ರೋಗಲಕ್ಷಣಗಳಿಂದ ಬಳಲುತ್ತಿದ್ದರೆ, ಹಾಲಿನ ಚಹಾವನ್ನು ಕುಡಿಯುವುದನ್ನು ತಪ್ಪಿಸಿ.

ರಕ್ತದೊತ್ತಡ
ರಕ್ತದೊತ್ತಡವ ಅನೇಕ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದಾದಂತಹ ಸ್ಥಿತಿಯಾಗಿದೆ, ಅದನ್ನು ನಿಯಂತ್ರಿಸುವುದು ಸ್ವಲ್ಪ ಕಷ್ಟದ ಕೆಲಸ.  ಅಧಿಕ ರಕ್ತದೊತ್ತಡವು ಹೃದಯದ ಸಮಸ್ಯೆಗಳನ್ನು ಪ್ರಚೋದಿಸುತ್ತದೆ, ಇದು ಹೃದಯಾಘಾತಕ್ಕೆ ಕಾರಣವಾಗಬಹುದು. ಹೆಚ್ಚು ಹಾಲಿನ ಟೀ ಕುಡಿಯುವುದರಿಂದ ದೇಹದ ರಕ್ತದೊತ್ತಡ ಹೆಚ್ಚಾಗುತ್ತದೆ.

ನಿರ್ಜಲೀಕರಣ
ಹಾಲಿನ ಚಹಾದ ಅತ್ಯಂತ ಅಪಾಯಕಾರಿ ಅಡ್ಡಪರಿಣಾಮವೆಂದರೆ ನಿರ್ಜಲೀಕರಣ. ಇದು ಮುಖ್ಯವಾಗಿ ಕೆಫೀನ್ ಕಾರಣ ಉಂಟಾಗುತ್ತದೆ. ಅದಕ್ಕಾಗಿಯೇ ಖಾಲಿ ಹೊಟ್ಟೆಯಲ್ಲಿ ಹಾಲಿನ ಚಹಾವನ್ನು ಕುಡಿಯಬೇಡಿ, ವಿಶೇಷವಾಗಿ ಅದರಲ್ಲಿ ಸಕ್ಕರೆಯನ್ನು ಬೆರೆಸಿ ಸೇವಿಸಬೇಡಿ.

ಇದನ್ನೂ ಓದಿ-Pomegranate Peel For Health: ದಾಳಿಂಬೆ ಸಿಪ್ಪೆಯಿಂದ ಆರೋಗ್ಯಕ್ಕೆ ಆಗುವ ಈ ಲಾಭಗಳು ನಿಮಗೂ ತಿಳಿದಿರಲಿ

ತಲೆನೋವು
ಅತಿ ಹೆಚ್ಚು ಹಾಲಿನ ಚಹಾ ಸೇವಿಸುವುದು ನಿರ್ಜಲೀಕರಣಕ್ಕೆ ಕಾರಣವಾಗಬಹುದು, ಇದು ತಲೆನೋವನ್ನು ತಂದೊಡ್ಡುತ್ತದೆ. ಹೀಗಾಗಿ ಹೆಚ್ಚು ಹಾಲು ಮತ್ತು ಸಕ್ಕರೆಯೊಂದಿಗೆ ಚಹಾವನ್ನು ಕುಡಿಯುವುದನ್ನು ತಪ್ಪಿಸಬೇಕು.

ಇದನ್ನೂ ಓದಿ-Health Tips: ಈ ಕಾಯಿಲೆ ಇರುವವರು ಪಪ್ಪಾಯಿಯನ್ನು ಮರೆತೂ ಕೂಡ ಸೇವಿಸಬಾರದು

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಅನ್ಸುಅರಿಸುವ ಮುನ್ನ ವೈದ್ಯಕೀಯ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಪುಷ್ಠಿಕರಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News