Raisin Water With Lemon- ಒಣ ಹಣ್ಣುಗಳನ್ನು ಸುಲಭವಾಗಿ ಹಾಗೆಯೇ ತಿನ್ನಬಹುದು.  ಒಣ ಹಣ್ಣುಗಳಲ್ಲಿ ಒಣದ್ರಾಕ್ಷಿ (Raisin) ಸಹ ಒಂದು. ಇದು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಒಣದ್ರಾಕ್ಷಿ ರುಚಿಯಾಗಿರುವುದು ಮಾತ್ರವಲ್ಲ ಆರೋಗ್ಯದ ದೃಷ್ಟಿಯಿಂದಲೂ ತುಂಬಾ ಒಳ್ಳೆಯದು ಎಂದು ಪರಿಗಣಿಸಲಾಗುತ್ತದೆ. ಒಣದ್ರಾಕ್ಷಿ ತಿನ್ನುವುದರಿಂದ ಅನೇಕ ರೋಗಗಳನ್ನು ತಪ್ಪಿಸಬಹುದು. ಒಣದ್ರಾಕ್ಷಿಯನ್ನು ಹಾಗೇ ತಿನ್ನುವುದರ ಜೊತೆಗೆ, ಅದರ ನೀರು ಕೂಡ ತುಂಬಾ ಒಳ್ಳೆಯದು. ಒಣದ್ರಾಕ್ಷಿ ನೀರಿನಲ್ಲಿ ನಿಂಬೆರಸ ಬೆರೆಸಿ ಕುಡಿಯುವುದರಿಂದ ದೇಹಕ್ಕೆ ಅನೇಕ ಪ್ರಯೋಜನಗಳಿವೆ. ಒಣದ್ರಾಕ್ಷಿ ನೀರಿನಲ್ಲಿ ನಿಂಬೆ ಹಣ್ಣಿನ ರಸವನ್ನು ಮಿಶ್ರಣ ಮಾಡುವುದರಿಂದ ಅದು ಉತ್ತಮ ಡಿಟಾಕ್ಸ್ ನೀರಾಗುತ್ತದೆ. 


COMMERCIAL BREAK
SCROLL TO CONTINUE READING

ನಿಂಬೆ ರಸದೊಂದಿಗೆ ಬೆರೆಸಿದ ಒಣದ್ರಾಕ್ಷಿ ನೀರನ್ನು ಕುಡಿಯುವುದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ...


ಹಲ್ಲು ಮತ್ತು ಮೂಳೆಗಳಿಗೆ ಪ್ರಯೋಜನಕಾರಿ- ನಿಂಬೆ ರಸದೊಂದಿಗೆ ಬೆರೆಸಿದ ಒಣದ್ರಾಕ್ಷಿ ನೀರನ್ನು (Raisin Water With Lemon) ಕುಡಿಯುವುದರಿಂದ ಹಲ್ಲು ಮತ್ತು ಮೂಳೆಗಳು ಬಲಗೊಳ್ಳುತ್ತವೆ. ಇದು ಹಲ್ಲುಗಳ ಹಳದಿ ಬಣ್ಣವನ್ನು ಕಡಿಮೆ ಮಾಡುತ್ತದೆ.


ಹೊಟ್ಟೆಯ ತೊಂದರೆಗಳು ದೂರವಾಗುತ್ತವೆ- ಒಣದ್ರಾಕ್ಷಿ ನೀರಿನಲ್ಲಿ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಜೀರ್ಣಾಂಗ ವ್ಯವಸ್ಥೆಯು ಸಾಕಷ್ಟು ಪ್ರಮಾಣದ ಫೈಬರ್ ಅನ್ನು ಪಡೆಯುತ್ತದೆ. ಇದರಿಂದ ಮಲಬದ್ಧತೆ, ಆಮ್ಲೀಯತೆ ಮತ್ತು ಹೊಟ್ಟೆ ಉಬ್ಬರದಂತಹ ಮುಂತಾದ ಸಮಸ್ಯೆಗಳನ್ನು ತೆಗೆದುಹಾಕಲಾಗುತ್ತದೆ.


ಇದನ್ನೂ ಓದಿ-  Cashew- ಈ ಸಮಸ್ಯೆ ಇದ್ದರೆ ಗೋಡಂಬಿ ಸೇವಿಸಲೇಬಾರದು, ಇದರಿಂದ ಲಾಭಕ್ಕೆ ಬದಲಾಗಿ ಹಾನಿಯಾಗಬಹುದು


ರಕ್ತಹೀನತೆ- ಒಣದ್ರಾಕ್ಷಿ ನೀರಿನಲ್ಲಿ ಬೆರೆಸಿದ ನಿಂಬೆ ರಸವನ್ನು ಕುಡಿಯುವುದರಿಂದ, ದೇಹವು ನೈಟ್ರಿಕ್ ಆಕ್ಸೈಡ್ ಅನ್ನು ಪಡೆಯುತ್ತದೆ, ಇದು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತದೆ. ಇದರಿಂದ ರಕ್ತಹೀನತೆಯ (Anemia) ಸಮಸ್ಯೆಯನ್ನು ಸಹ ತಪ್ಪಿಸಬಹುದು.


ರಕ್ತದೊತ್ತಡ ನಿಯಂತ್ರಣದಲ್ಲಿದೆ- ಒಣದ್ರಾಕ್ಷಿ ನೀರಿನಲ್ಲಿ ನಿಂಬೆ ರಸವನ್ನು ಮಿಶ್ರಣ ಮಾಡಿ ಕುಡಿಯುವುದರಿಂದ, ರಕ್ತದೊತ್ತಡ (Blood Pressure) ನಿಯಂತ್ರಣದಲ್ಲಿರುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಪ್ರಮಾಣವನ್ನು ಕಡಿಮೆ ಮಾಡುತ್ತದೆ. ಒಣದ್ರಾಕ್ಷಿ ಪೊಟ್ಯಾಸಿಯಮ್ನ ಉತ್ತಮ ಮೂಲವಾಗಿದೆ, ಇದರ ನಿಯಮಿತ ಸೇವನೆಯು ಅಧಿಕ ರಕ್ತದೊತ್ತಡ ಹೊಂದಿರುವವರಿಗೆ ಹೆಚ್ಚಿನ ಪರಿಹಾರವನ್ನು ನೀಡುತ್ತದೆ.


ಚರ್ಮ ಮತ್ತು ಕೂದಲಿಗೆ ಪ್ರಯೋಜನಕಾರಿ- ಒಣದ್ರಾಕ್ಷಿ ನೀರಿನಲ್ಲಿ ನಿಂಬೆ ರಸವನ್ನು ಮಿಕ್ಸ್ ಮಾಡಿ ಕುಡಿಯುವುದರಿಂದ ಮುಖದ ಮೇಲೆ ಹೊಳಪು ಬರುತ್ತದೆ. ಅಲ್ಲದೆ ಇದು ಕೂದಲಿಗೆ ಪ್ರಯೋಜನಕಾರಿಯಾಗಿದೆ.


ಇದನ್ನೂ ಓದಿ-  Healthy Diet: ಆಯುರ್ವೇದದ ಪ್ರಕಾರ, ಬೆಳಿಗ್ಗೆ ಉಪಹಾರದಲ್ಲಿ ಏನು ತಿನ್ನಬೇಕು? ಏನನ್ನು ತಿನ್ನಬಾರದು ಎಂದು ತಿಳಿಯಿರಿ


ತೂಕ ನಷ್ಟದಲ್ಲಿ ಪ್ರಯೋಜನಕಾರಿ- ಒಣದ್ರಾಕ್ಷಿ ನೀರನಲ್ಲಿ ನಿಂಬೆ ರಸವನ್ನು ಬೆರೆಸಿ ಪ್ರತಿದಿನ ಕುಡಿಯುವುದರಿಂದ ತೂಕ ಇಳಿಸಿಕೊಳ್ಳಲು (Weight Loss) ಸಹಾಯವಾಗುತ್ತದೆ. ಒಣದ್ರಾಕ್ಷಿಗಳಲ್ಲಿ ಡಯೆಟರಿ ಫೈಬರ್ ಮತ್ತು ಪ್ರಿಬಯಾಟಿಕ್‌ಗಳು ಕಂಡುಬರುತ್ತವೆ, ಇದು ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.


ಒಣದ್ರಾಕ್ಷಿ ಮತ್ತು ನಿಂಬೆ ನೀರನ್ನು ಈ ರೀತಿ ತಯಾರಿಸಿ:
ಅಗತ್ಯ ವಸ್ತುಗಳು:

- ಒಣದ್ರಾಕ್ಷಿ
- ನಿಂಬೆ
- ನೀರು


ಇದನ್ನು ತಯಾರಿಸುವ ವಿಧಾನ:
>> ಮೊದಲನೆಯದಾಗಿ, ಒಣದ್ರಾಕ್ಷಿಗಳನ್ನು ಒಂದು ಲೋಟ ನೀರಿನಲ್ಲಿ ರಾತ್ರಿಯಿಡೀ ನೆನೆಸಿಡಿ.


>> ಮರುದಿನ, ಈ ನೀರನ್ನು ಫಿಲ್ಟರ್ ಮಾಡಿ ನಂತರ ಈ ನೀರಿಗೆ ನಿಂಬೆ ರಸವನ್ನು ಸೇರಿಸಿ.


>> ಇದನ್ನು ಚೆನ್ನಾಗಿ ಬೆರೆಸಿ ನಂತರ ಕುಡಿಯಿರಿ.


ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.