Cashew- ಈ ಸಮಸ್ಯೆ ಇದ್ದರೆ ಗೋಡಂಬಿ ಸೇವಿಸಲೇಬಾರದು, ಇದರಿಂದ ಲಾಭಕ್ಕೆ ಬದಲಾಗಿ ಹಾನಿಯಾಗಬಹುದು

ಅತಿಯಾದರೆ ಅಮೃತವೂ ವಿಷ ಎಂಬಂತೆ ಯಾವುದನ್ನಾದರೂ ಅತಿಯಾಗಿ ಸೇವಿಸುವುದರಿಂದ ನಮ್ಮ ದೇಹಕ್ಕೆ ಹಾನಿ ಉಂಟಾಗುತ್ತದೆ. ಗೋಡಂಬಿ ಕೂಡ ಇದಕ್ಕೆ ಹೊರತಾಗಿಲ್ಲ.

Written by - Yashaswini V | Last Updated : Jul 7, 2021, 02:25 PM IST
  • ಗೋಡಂಬಿ ಅತಿಯಾಗಿ ಸೇವಿಸುವುದರಿಂದ ಆರೋಗ್ಯಕ್ಕೆ ಹಾನಿಕಾರಕ
  • ಅಧಿಕ ರಕ್ತದೊತ್ತಡ ಮತ್ತು ಸಕ್ಕರೆ ರೋಗಿಗಳು ಗೋಡಂಬಿ ತಿನ್ನಬಾರದು
  • ತಲೆನೋವಿನ ಸಮಸ್ಯೆ ಹೊಂದಿರುವ ರೋಗಿಗಳು ಗೋಡಂಬಿ ತಿನ್ನುವುದನ್ನು ತಪ್ಪಿಸಬೇಕು.
Cashew- ಈ ಸಮಸ್ಯೆ ಇದ್ದರೆ ಗೋಡಂಬಿ ಸೇವಿಸಲೇಬಾರದು, ಇದರಿಂದ ಲಾಭಕ್ಕೆ ಬದಲಾಗಿ ಹಾನಿಯಾಗಬಹುದು title=
ಈ ಜನರು ಅಪ್ಪಿ-ತಪ್ಪಿಯೂ ಗೋಡಂಬಿ ಸೇವಿಸಲೇಬಾರದು!

ಬೆಂಗಳೂರು: ಗೋಡಂಬಿ  (Cashew) ಅನ್ನು ಉತ್ಕರ್ಷಣ ನಿರೋಧಕಗಳ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ. ಇದರಲ್ಲಿ ಉತ್ತಮ ಪ್ರಮಾಣದ ಕ್ಯಾಲ್ಸಿಯಂ, ಪ್ರೋಟೀನ್, ವಿಟಮಿನ್ ಮತ್ತು ಪೊಟ್ಯಾಸಿಯಮ್ ಇರುತ್ತದೆ. ಆದರೆ ಕೆಲವು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಜನರು ಹೆಚ್ಚು ಗೋಡಂಬಿ ಬೀಜಗಳನ್ನು ಸೇವಿಸಿದಾಗ ಅವರಿಗೆ ತೊಂದರೆ ಉಂಟಾಗುತ್ತದೆ ಎಂದು ಹೇಳಲಾಗುತ್ತದೆ. ಇಂದು ಅದರ ಬಗ್ಗೆ ನಿಮಗೆ ಮಾಹಿತಿ ನೀಡಲಿದ್ದೇವೆ. 

ಯಾವ ಸಮಸ್ಯೆ ಇರುವವರು ಗೋಡಂಬಿಯನ್ನು ಅತಿಯಾಗಿ ಸೇವಿಸಬಾರದು ಎಂಬುದನ್ನು ತಿಳಿಯಿರಿ...

1. ತಲೆನೋವಿನ ಸಮಸ್ಯೆ :
ತಲೆನೋವನ್ನು ಸಾಮಾನ್ಯ ಸಮಸ್ಯೆಯೆಂದು ಪರಿಗಣಿಸಲಾಗಿದೆ. ಆದರೆ ಈ ಸಮಸ್ಯೆ ನಂತರ ಮೈಗ್ರೇನ್ (Migraine) ರೂಪ ಪಡೆಯುತ್ತದೆ. ಈ ಕಾಯಿಲೆಯಿಂದ ಬಳಲುತ್ತಿರುವ ಜನರು ಗೋಡಂಬಿ ಸೇವಿಸಬಾರದು. ಗೋಡಂಬಿಯಲ್ಲಿ ಅಮೈನೊ ಆಮ್ಲಗಳು ಟೈರಮೈನ್ ಮತ್ತು ಫೆನೆಥೈಲಮೈನ್ ಸಹ ಇರುತ್ತವೆ, ಇದು ತಲೆನೋವಿನ ಸಮಸ್ಯೆಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇದನ್ನೂ ಓದಿ- Weight Loss Coffee: ಬ್ಲಾಕ್ ಕಾಫಿ ಜೊತೆಗೆ ಇವುಗಳನ್ನು ಮಿಕ್ಸ್ ಮಾಡಿ ಕುಡಿದರೆ ಒಂದೇ ತಿಂಗಳಲ್ಲಿ ತೂಕ ಕಡಿಮೆಯಾಗುತ್ತೆ

2. ತೂಕ ನಿಯಂತ್ರಣ ಮಾಡುತ್ತಿರುವ ಜನರು :
ಬದಲಾಗುತ್ತಿರುವ ಸಮಯದೊಂದಿಗೆ ಜನರ ಆಲೋಚನೆಯಲ್ಲಿಯೂ ಬದಲಾವಣೆ ಕಂಡುಬಂದಿದೆ. ಇಂದು ಪ್ರತಿಯೊಬ್ಬರೂ ತಮ್ಮನ್ನು ತಾವು ಸದೃಢವಾಗಿಡಲು ಬಯಸುತ್ತಾರೆ. ಹೆಚ್ಚಿನ ಜನರು ಯೋಗ, ಜಿಮ್, ಡಯಟ್ ಇತ್ಯಾದಿಗಳತ್ತ ಮುಖ ಮಾಡಲು ಇದೂ ಕೂಡ ಒಂದು ಪ್ರಮುಖ ಕಾರಣವಾಗಿದೆ. ಈ ಅನುಕ್ರಮದಲ್ಲಿ, ನಿಮ್ಮ ತೂಕವನ್ನು ಕಡಿಮೆ (Weight Loss) ಮಾಡಲು ನೀವು ಪ್ರಯತ್ನಿಸುತ್ತಿದ್ದರೆ, ನಂತರ ಗೋಡಂಬಿ ಬೀಜಗಳನ್ನು ಸೇವಿಸಬೇಡಿ. ಏಕೆಂದರೆ ಸುಮಾರು 30 ಗ್ರಾಂ ಗೋಡಂಬಿ 169 ಕ್ಯಾಲೊರಿ ಮತ್ತು 13.1 ಕೊಬ್ಬನ್ನು ಹೊಂದಿರುತ್ತದೆ. ಇದು ನಿಮ್ಮ ತೂಕವನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ.

3. ರಕ್ತದೊತ್ತಡ ರೋಗಿಗಳು :
ಹೈ ಬಿಪಿ (High Blood Pressure) ಸಮಸ್ಯೆ ಹೊಂದಿರುವವರು ಯಾವುದೇ ಕಾರಣಕ್ಕೂ ಗೋಡಂಬಿ ಸೇವಿಸದಿದ್ದರೆ ಒಳ್ಳೆಯದು.  ಗೋಡಂಬಿ ಸೋಡಿಯಂ ಅನ್ನು ಹೊಂದಿರುತ್ತದೆ. ಇದು ರಕ್ತದೊತ್ತಡವನ್ನು ಮತ್ತಷ್ಟು ಹೆಚ್ಚಿಸುತ್ತದೆ. ಇದರಿಂದ ನಿಮ್ಮ ಸಮಸ್ಯೆ ಇನ್ನೂ ಹೆಚ್ಚಾಗಬಹುದು.

ಇದನ್ನೂ ಓದಿ- ಗೋಡಂಬಿ ತಿಂದರೆ ಆರೋಗ್ಯಕ್ಕೆ ಆಗುವ ಎಂಟು ಲಾಭ ಇಲ್ಲಿದೆ

4. ಔಷಧಿಗಳ ಮೇಲೆ ಪರಿಣಾಮ ಬೀರುತ್ತದೆ :
ಸುಮಾರು 3-4 ಗೋಡಂಬಿ 82.5 ಮಿಗ್ರಾಂ ಮೆಗ್ನೀಸಿಯಮ್ ಅನ್ನು ಹೊಂದಿರುತ್ತದೆ. ಈ ಮೆಗ್ನೀಸಿಯಮ್ ಮಧುಮೇಹ, ಥೈರಾಯ್ಡ್ ರೀತಿಯ ಔಷಧಿಗಳ ಮೇಲೆ ಪರಿಣಾಮ ಬೀರುತ್ತದೆ. ಅಂದರೆ, ಅವುಗಳ ಪರಿಣಾಮವನ್ನು ಸ್ವಲ್ಪ ಕಡಿಮೆ ಮಾಡಬಹುದು. ಆದ್ದರಿಂದ ಸಕ್ಕರೆ ರೋಗಿಗಳು ಗೋಡಂಬಿ ಸೇವಿಸದಂತೆ ಸೂಚಿಸಲಾಗಿದೆ. 

ಸೂಚನೆ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಂಪೂರ್ಣ ಸತ್ಯವಾಗಿದೆ ಮತ್ತು ಸ್ಫುಟವಾಗಿದೆ ಎಂಬುದನ್ನು ಝೀ ಹಿಂದೂಸ್ತಾನ್ ಕನ್ನಡ ಪುಷ್ಟೀಕರಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News