Does Drinking Water Help You Lose Weight : ಈಗಿನ ಕಾಲದಲ್ಲಿ ತೂಕ ಹೆಚ್ಚಾಗುವುದು ದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. ತೂಕ ಹೆಚ್ಚಾಗುವುದು, ಹೊಟ್ಟೆಯ ಭಾಗದಲ್ಲಿ ಕೊಬ್ಬು ಬೆಳೆಯುವುದು ಸಾಮಾನ್ಯ ಸಮಸ್ಯೆಯಾಗಿ ಬಿಟ್ಟಿದೆ. ಇದನ್ನು ಸಕಾಲದಲ್ಲಿ ತಡೆಯದಿದ್ದರೆ ಅಥವಾ ನಿಯಂತ್ರಿಸದೇ ಇದ್ದರೆ, ಮಾರಣಾಂತಿಕ ಕಾಯಿಲೆಗಳಿಗೆ ಕಾರಣವಾಗಬಹುದು. ಕೊಬ್ಬನ್ನು ಕಡಿಮೆ ಮಾಡುವ ಉದ್ದೇಶದಿಂದ ಕೆಲವರು ಯಾರು ಏನೇ ಹೇಳಿದರೂ ಅದನ್ನು ಅನುಸರಿಸು ಮುಂದಾಗಿ ಬಿಡುತ್ತಾರೆ. ದೇಹ ತೂಕ ಕಡಿಮೆ ಮಾಡಲು ಅಥವಾ ಕೊಬ್ಬು ಕರಗಿಸಲು ಕೆಲವೊಂದು ಮನೆ ಮದ್ದು ಇದೆ ಎನ್ನುವುದು ಸುಳ್ಳಲ್ಲ. ಆದರೆ ಎಲ್ಲವನ್ನೂ ಮನೆ ಮದ್ದು ಕಣ್ಣು ಮುಚ್ಚಿ ಅನುಸರಿಸುವ ಮುನ್ನ ಯೋಚಿಸಬೇಕಾಗುತ್ತದೆ. 


COMMERCIAL BREAK
SCROLL TO CONTINUE READING

ದೇಹವನ್ನು ಹೈಡ್ರೇಟ್ ಮಾಡುವುದರಿಂದ ತೂಕ ಕಡಿಮೆಯಾಗುತ್ತದೆ.  ಬೊಜ್ಜು ಕರಗುತ್ತದೆ ಎನ್ನುವ ಮಾತನ್ನು ನೀವು ಕೇಳಿರಬಹುದು.   ಈ ಕಾರಣಕ್ಕಾಗಿ ಕುಡಿಯುವ ನೀರಿನ ಪ್ರಮಾಣವನ್ನು ಹೆಚ್ಚಿಸಿದವರೂ ನಮ್ಮ ನಡುವೆ ಇರಬಹುದು. ಆದರೆ, ಈ ಮಾತು ಎಷ್ಟು ಸತ್ಯ ? ನಿಜವಾಗಿಯೂ ನೀರನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ ದೇಹ ತೂಕ ಕಡಿಮೆಯಾಗುವುದೇ ? ವೈಜ್ಞಾನಿಕವಾಗಿ ಈ ಮಾತಿನ ಹಿಂದೆ ಎಷ್ಟು ಸತ್ಯವಿದೆ ಎನ್ನುವ ಮಾಹಿತಿ ಇಲ್ಲಿದೆ. 


ಇದನ್ನೂ ಓದಿ : ಮಧುಮೇಹ ಕಾಯಿಲೆಯ ಶತ್ರು ಈ ಹಸಿರು ತರಕಾರಿ, ಸೇವಿಸುತ್ತಲೇ ನಿಯಂತ್ರಣಕ್ಕೆ ಬರುತ್ತೆ, ಡ್ಯೆಬಿಟೀಸ್!


ಕೇವಲ ನೀರನ್ನು ಕುಡಿಯುವುದರಿಂದ ತೂಕವನ್ನು ಕಳೆದುಕೊಳ್ಳಬಹುದೇ? : ನಮ್ಮ ದೇಹದ ಅನೇಕ ಕಾರ್ಯಗಳಿಗೆ ನೀರು ಅತ್ಯಗತ್ಯ ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಆದರೆ ಅದು ನೇರವಾಗಿ ಕೊಬ್ಬನ್ನು  ಬರ್ನ್ ಮಾಡುತ್ತದೆ ಎನ್ನುವುದು ಸತ್ಯವಲ್ಲ. ಇದು ಹಸಿವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದರಿಂದಾಗಿ ಕ್ರಮೇಣ ತೂಕ ಕಳೆದುಕೊಳ್ಳಲು  ಸಾಧ್ಯವಾಗುತ್ತದೆ. 


ಐಸ್ ವಾಟರ್ ಹೆಚ್ಚು ಕ್ಯಾಲೊರಿಗಳನ್ನು ಸುಡುತ್ತದೆಯೇ ? : 
ಐಸ್ ವಾಟರ್ ಕುಡಿಯುವುದರಿಂದ ಕ್ಯಾಲೊರಿ ಬಳಕೆಯನ್ನು ಸ್ವಲ್ಪ ಹೆಚ್ಚು ಮಾಡುತ್ತದೆ. ತೂಕ ನಷ್ಟಕ್ಕೆ ಇದು ಯಶಸ್ವಿ ತಂತ್ರವಲ್ಲ.


ವಾಟರ್ ರಿಟೇಶನ್ ತೂಕ ಹೆಚ್ಚಳಕ್ಕೆ ಸಮನಾಗಿರುತ್ತದೆ : 
ಉಪ್ಪು ಸೇವನೆ ಮತ್ತು ಹಾರ್ಮೋನುಗಳ ಏರಿಳಿತದಂತಹ ವಿವಿಧ ಕಾರಣಗಳಿಗಾಗಿ ದೇಹವು ನೀರನ್ನು ಉಳಿಸಿಕೊಳ್ಳುತ್ತದೆ. ನೀರಿನ ಕಾರಣದಿಂದ ತೂಕ ಹೆಚ್ಚಾಗುವುದು ಕೊಬ್ಬಿನ ಕಾರಣದಿಂದ ತೂಕ ಹೆಚ್ಚಾದಂತೆ ಅಲ್ಲ. 


ಇದನ್ನೂ ಓದಿ : ಅರಿಶಿನ ಈ ದೀರ್ಘಕಾಲದ ಕಾಯಿಲೆಯನ್ನು ಬುಡದಿಂದಲೇ ನಿವಾರಿಸುತ್ತೆ


ಊಟಕ್ಕೆ ಮುಂಚೆ ನೀರು ಕುಡಿಯುವುದರಿಂದ ಚಯಾಪಚಯ ಹೆಚ್ಚಿಸುತ್ತದೆ :
ಕೆಲವು ಸಂಶೋಧನೆಗಳು ಊಟಕ್ಕೆ ಮುಂಚಿತವಾಗಿ ನೀರು ಕುಡಿಯುವುದರಿಂದ ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುವುದನ್ನು ತೋರಿಸಿದೆ. ಇದು ಪರೋಕ್ಷವಾಗಿ ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.


ಕೇವಲ ನೀರು ಮಾತ್ರ ಬಳಸಿದರೆ ಸಾಕು : 
 ಹರ್ಬಲ್ ಟೀ ಅಥವಾ ಸಿಟ್ರಸ್ ಹಣ್ಣಿನ ರಸದಂತಹ ಪಾನೀಯಗಳು ಕ್ಯಾಲೊರಿ  ಬರ್ನ್ ಮಾಡಲು ಸಹಾಯ ಮಾಡುತ್ತದೆ.


ನೀರು ವಿಷ ಮತ್ತು ಕೊಬ್ಬನ್ನು ಹೊರಹಾಕುತ್ತದೆ : 
ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ನೀರು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ಇದು ನಿರ್ದಿಷ್ಟವಾಗಿ ಕೊಬ್ಬಿನ ಕೋಶಗಳನ್ನು ಗುರಿಯಾಗಿಸಿಕೊಳ್ಳುವುದಿಲ್ಲ. ನಿರ್ವಿಶೀಕರಣಕ್ಕಾಗಿ ನೀರನ್ನು ಅವಲಂಬಿಸಬಹುದು ಎನ್ನುವುದು ಕೂಡಾ ವೈಜ್ಞಾನಿಕವಾಗಿ ಸಾಬೀತಾಗಿಲ್ಲ.


ದಿನಕ್ಕೆ 8 ಗ್ಲಾಸ್ ನೀರು ಕುಡಿಯಬೇಕು :
"8x8" ನಿಯಮ (ಎಂಟು 8-ಔನ್ಸ್ ಗ್ಲಾಸ್) ಎಲ್ಲರಿಗೂ ಅನ್ವಯವಾಗುವುದಿಲ್ಲ. ಪ್ರತಿಯೊಬ್ಬರ ನೀರಿನ ಅಗತ್ಯ ಬೇರೆ ಬೇರೆಯಾಗಿರುತ್ತದೆ. 


ಇದನ್ನೂ ಓದಿ : ಯಾವ ಮದ್ದೂ ಬೇಡ, ಈ ಹಣ್ಣುಗಳೇ ಸಾಕು ಕೂದಲು ಉದುರುವುದನ್ನು ತಡೆಯಲು


ಬಾಯಾರಿಕೆ ಮತ್ತು ಹಸಿವು ಸಮಾನ: 
ಕೆಲವೊಮ್ಮೆ, ಬಾಯಾರಿಕೆಯನ್ನು ಹಸಿವೂ ಎಂದು ಭಾವಿಸಬಹುದು.  ಹೈಡ್ರೇಟೆಡ್ ಆಗಿ ಉಳಿಯುವುದರಿಂದ ಅನಗತ್ಯ ತಿಂಡಿಗಳ ಸೇವನೆಯನ್ನು ತಪ್ಪಿಸಬಹುದು.  


ನಿರ್ಜಲೀಕರಣವು ತೂಕ ನಷ್ಟಕ್ಕೆ ಕಾರಣವಾಗಬಹುದು : 
ನಿರ್ಜಲೀಕರಣದ ಮೂಲಕ ತೂಕವನ್ನು ಕಳೆದುಕೊಳ್ಳುತ್ತದೆ ಎನ್ನುವುದು ತಪ್ಪು ಕಲ್ಪನೆ. ಇದು ದೇಹವನ್ನು ದುರ್ಬಲಗೊಳಿಸುತ್ತದೆ. ಮತ್ತು ಅನಾರೋಗ್ಯಕ್ಕೆ  ಗುರಿಯಾಗಿಸಬಹುದು. 


ರಾತ್ರಿ ನೀರು ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ : 
ಮಲಗುವ ಮುನ್ನ ನೀರು ಕುಡಿಯುವುದರಿಂದ ನಿಮ್ಮ ತೂಕ ಹೆಚ್ಚಾಗುವುದಿಲ್ಲ. ಆದರೆ ಇದು ಖಂಡಿತವಾಗಿಯೂ ನಿಮ್ಮ ನಿದ್ರೆಗೆ ಭಂಗ ತರುತ್ತದೆ. ಏಕೆಂದರೆ ಮಲಗುವ ಮುನ್ನ ನೀರು ಕುಡಿಯುವುದರಿಂದ ರಾತ್ರಿ  ಪದೇ ಪದೇ ಶೌಚಾಲಯಕ್ಕೆ ಹೋಗಬೇಕಾಗುತ್ತದೆ.


ಇದನ್ನು ನೆನಪಿನಲ್ಲಿಡಿ : 
ನೀವು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿದ್ದರೆ ನೀರಿನ ಪಾತ್ರವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ, ಆಗ ಮಾತ್ರ ನೀವು ಸರಿಯಾದ ನಿರ್ಧಾರ ಮತ್ತು ಯೋಜನೆಯನ್ನು ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ವ್ಯಾಯಾಮ, ಆರೋಗ್ಯಕರ ಆಹಾರ ಮತ್ತು  ಹೈಡ್ರೆಶನ್ ಅನ್ನು ಸಮತೋಲನಗೊಳಿಸಿದರೆ ಮಾತ್ರ ಯಶಸ್ವಿ ತೂಕ ನಷ್ಟ ಸಾಧ್ಯ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ