White Breadಗಿಂತ ಹೆಚ್ಚು ಅಪಾಯಕಾರಿ ಬ್ರೌನ್ ಬ್ರೆಡ್ ! ಈ ವಿಡಿಯೋ ನೋಡಿದರೆ ಬ್ರೆಡ್ ಮುಟ್ಟಿಯೂ ನೋಡುವುದಿಲ್ಲ ನೀವು

Side effects of brown bread: ಸಾಮಾನ್ಯವಾಗಿ ಬ್ರೌನ್ ಬ್ರೆಡ್ ಬ್ರೆಡ್ ಅನ್ನು ಆರೋಗ್ಯಕರವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಜನ ವೈಟ್ ಬ್ರೆಡ್ ಬದಲು ಬ್ರೌನ್ ಬ್ರೆಡ್ ನತ್ತ ವಾಲುತ್ತಿದ್ದಾರೆ. ಆದರೆ ನಿಜ ಸಂಗತಿ ಬೇರೆಯೇ ಇದೆ. ವೈಟ್ ಬ್ರೆಡ್ ಗಿಂತ ಬ್ರೌನ್ ಬ್ರೆಡ್ ಹೆಚ್ಚು  ಅಪಾಯಕಾರಿಯಾಗಿದೆ. ಅದಕ್ಕೆ ಸಾಕ್ಷಿ ಈ ವಿಡಿಯೋ.   

Written by - Ranjitha R K | Last Updated : Sep 13, 2023, 10:45 AM IST
  • ಬ್ರೌನ ಬ್ರೆಡ್ ಎಷ್ಟು ಉತ್ತಮ ?
  • ಬೆಚ್ಚಿ ಬೀಳಿಸುತ್ತದೆ ವಿಡಿಯೋ
  • ವಿಡಿಯೋ ನೋಡಿ ಜನರ ಆಕ್ರೋಶ
White Breadಗಿಂತ ಹೆಚ್ಚು ಅಪಾಯಕಾರಿ ಬ್ರೌನ್ ಬ್ರೆಡ್ ! ಈ ವಿಡಿಯೋ ನೋಡಿದರೆ ಬ್ರೆಡ್ ಮುಟ್ಟಿಯೂ ನೋಡುವುದಿಲ್ಲ ನೀವು  title=

Side effects of brown bread : ಇಂದಿನ ಯುವಿ ಪೀಳಿಗೆಯು ಏನನ್ನೇ ಖರೀದಿಸಿದರೂ, ಅದನ್ನು ಮೊದಲು ಎಲ್ಲಾ ರೀತಿಯಲ್ಲಿಯೂ ಪರಿಶೀಲಿಸಿ ನೋಡುತ್ತಾರೆ. ಯಾವ ವಸ್ತುವನ್ನು ತಿನ್ನುವುದಕ್ಕೆ ಆರಿಸಿಕೊಂಡರೂ ಆರೋಗ್ಯ ದೃಷ್ಟಿಯಿಂದ ಅದು ಎಷ್ಟು ಪ್ರಯೋಜನಕಾರಿ ಎನ್ನುವುದನ್ನು ಕಂಡು ಹಿಡಿಯಲು ಪ್ರಯತ್ನಿಸುತ್ತಾರೆ.  ಕಂಪನಿಗಳು ಕೂಡಾ ಜನರ ಈ ಮನಸ್ಥಿತಿಯನ್ನು ಚೆನ್ನಾಗಿ ಅರ್ಥ ಮಾಡಿಕೊಂಡಿವೆ.  ಹಾಗಾಗಿ ತಮ್ಮ ಉತ್ಪನ್ನಗಳನ್ನು ಆರೋಗ್ಯಕರವೆಂದು ಲೇಬಲ್ ಮಾಡಿಕೊಂಡೇ ಮಾರಾಟ ಮಾಡುತ್ತವೆ. ಬ್ರೌನ್ ಬ್ರೆಡ್  ಇದಕ್ಕೊಂದು ಉತ್ತಮ ಉದಾಹರಣೆಯಾಗಿದೆ. ಸಾಮಾನ್ಯವಾಗಿ ಬ್ರೌನ್ ಬ್ರೆಡ್ ಬ್ರೆಡ್ ಅನ್ನು ಆರೋಗ್ಯಕರವೆಂದೇ ಪರಿಗಣಿಸಲಾಗುತ್ತದೆ. ಹಾಗಾಗಿ ಜನ ವೈಟ್ ಬ್ರೆಡ್ ಬದಲು ಬ್ರೌನ್ ಬ್ರೆಡ್ ನತ್ತ ವಾಲುತ್ತಿದ್ದಾರೆ. ಆದರೆ ನಿಜ ಸಂಗತಿ ಬೇರೆಯೇ ಇದೆ. ವೈಟ್ ಬ್ರೆಡ್ ಗೊಂತ ಬ್ರೌನ್ ಬ್ರೆಡ್ ಹೆಚ್ಚು  ಅಪಾಯಕಾರಿಯಾಗಿದೆ. 

ಬ್ರೌನ ಬ್ರೆಡ್ ಎಷ್ಟು ಉತ್ತಮ ? :
ಬ್ರೌನ ಬ್ರೆಡ್ ತಯಾರಿಸಲು ಕೂಡಾ ಮೈದಾವನ್ನು ಬಳಸಲಾಗುತ್ತದೆ. ಆದರೆ ಈ ಮೈದಾವನ್ನು ಗೋಧಿಯಿಂದ ತಯಾರಿಸಲಾಗುತ್ತದೆ. ಇದು ಹೊಟ್ಟು ಮತ್ತು ಸೂಕ್ಷ್ಮಾಣುಗಳನ್ನು ಹೊಂದಿರುವುದಿಲ್ಲ. ಹೊಟ್ಟು ಮತ್ತು ಸೂಕ್ಷ್ಮಾಣು ಗೋಧಿಯಲ್ಲಿ ಕಂಡುಬರುವ ಪೋಷಕಾಂಶಗಳ ಮುಖ್ಯ ಮೂಲಗಳಾಗಿವೆ. ಆದ್ದರಿಂದ, ವೈಟ್ ಬ್ರೆಡ್‌ಗೆ ಹೋಲಿಸಿದರೆ ಬ್ರೌನ್  ಬ್ರೆಡ್‌ನಲ್ಲಿನ ಪೋಷಕಾಂಶಗಳ ಪ್ರಮಾಣವು ಕಡಿಮೆಯಾಗಿದೆ. ಫಿಟ್ನೆಸ್ ಪ್ರಜ್ಞೆ ಇರುವವರು ಬ್ರೌನ್ ಬ್ರೆಡ್ ಖರೀದಿಸುವಾಗ ಜಾಗರೂಕರಾಗಿರಬೇಕು. ಬ್ರೌನ್ ಬ್ರೆಡ್ ನ ಲೇಬಲ್ ಅನ್ನು ಎಚ್ಚರಿಕೆಯಿಂದ ಓದಿದರೆ ಈ ಸತ್ಯ ನಿಮಗೂ ತಿಳಿಯುತ್ತದೆ. ಬ್ರೌನ್ ಬ್ರೆಡ್ ಹೊಟ್ಟು ಮತ್ತು ಸೂಕ್ಷ್ಮಾಣು ಹೊಂದಿಲ್ಲದಿದ್ದರೆ, ಅದು ಅನಾರೋಗ್ಯಕರವಾಗಿರುತ್ತದೆ. ಬ್ರೌನ್ ಬ್ರೆಡ್ ತಯಾರಿಸುವ ಕಾರ್ಖಾನೆಯ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ವೀಡಿಯೊವನ್ನು ನೋಡಿದ ನಂತರ ನೀವು ಬ್ರೌನ್ ಬ್ರೆಡ್ ತಿನ್ನುವುದನ್ನು  ನೀವು ಖಂಡಿತವಾಗಿಯೂ ನಿಲ್ಲಿಸುತ್ತೀರಿ.

ಇದನ್ನೂ  ಓದಿ : ಕೊಲೆಸ್ಟ್ರಾಲ್ ಹೆಚ್ಚಾದಾಗ ಪರಿಣಾಮ ಹೃದಯ ಮಾತ್ರವಲ್ಲ ದೇಹದ ಈ ಅಂಗದ ಮೇಲೂ ಬೀಳುತ್ತದೆ

ಬೆಚ್ಚಿ ಬೀಳಿಸುತ್ತದೆ ವಿಡಿಯೋ : 
Instagramನಲ್ಲಿ, ವ್ಯಕ್ತಿಯೊಬ್ಬರು ಬ್ರೌನ್ ಬ್ರೆಡ್ ತಯಾರಿಸುವ ಕಾರ್ಖಾನೆಯ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಬ್ರೌನ್ ಬ್ರೆಡ್ ಅನ್ನು ಹೇಗೆ ತಯಾರಿಸಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ.  ಇಲ್ಲಿ ಬ್ರೌನ್  ಬ್ರೆಡ್ ಮಾಡಲು ಮೈದಾವನ್ನು ಬಳಸುತ್ತಿದ್ದಾರೆ. ಇದನ್ನು ತಯಾರಿಸಲು, ಬಿಳಿ ಬ್ರೆಡ್ ತಯಾರಿಸಲು ಬಳಸುವ ಎಲ್ಲಾ ವಸ್ತುಗಳನ್ನು ಬಳಸಲಾಗುತ್ತಿದೆ. ಆದರೆ  ಬ್ರೌನ್ ಬ್ರೆಡ್ ತಯಾರಿಸುವಾಗ ಮಾತ್ರ ಇದಕ್ಕೆ ವಿಶೇಷ ರೀತಿಯ ಬಣ್ಣವನ್ನು ಸಹ ಸೇರಿಸಲಾಗುತ್ತಿದೆ. ಇದರಿಂದಾಗಿ ಅದರ ಬಣ್ಣವು ಬದಲಾಗುತ್ತದೆ. ಈ ಬಣ್ಣವು ನಮ್ಮ ಆರೋಗ್ಯದ ಮೇಲೆ ದೊಡ್ಡ ಮಟ್ಟದ ಅಡ್ಡ ಪರಿಣಾಮವನ್ನು ಬೀರುತ್ತದೆ. 

 

ಇದನ್ನೂ  ಓದಿ : ಪೈಲ್ಸ್ ಸೇರಿದಂತೆ 5 ಕಾಯಿಲೆಗಳಿಗೆ ಸಂಜೀವನಿಗೆ ಸಮಾನ ಈ ಹಣ್ಣು, ಇಂದೇ ಸೇವನೆ ಆರಂಭಿಸಿ!

ವಿಡಿಯೋ ನೋಡಿ ಜನರ ಆಕ್ರೋಶ : 
ವೈರಲ್ ಆಗಿರುವ ವಿಡಿಯೋ ನೋಡಿದ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬ್ರೌನ್ ಬ್ರೆಡ್ ಬಿಳಿ ಬ್ರೆಡ್‌ಗಿಂತ ಹೆಚ್ಚು ಅನಾರೋಗ್ಯಕರ ಎನ್ನುವುದು ಈ ವಿಡಿಯೋ ಮೂಲಕ ಕಂಡುಕೊಳ್ಳಬಹುದು. ಬ್ರೌನ್ ಬ್ರೆಡ್ ಅನ್ನು ಆರೋಗ್ಯಕರ ಎನ್ನುವ ದೃಷ್ಟಿಯಿಂದಲೇ ಸೇವನೆ ಮಾಡಲಾಗುತ್ತದೆ. ಆದರೆ ಇಲ್ಲಿ ಜನರನ್ನು ಮೂರ್ಖರನ್ನಾಗಿಸಲಾಗುತ್ತಿದೆ ಎಂದು ಒಬ್ಬ ಬಳಕೆದಾರರು ಆಕ್ರೋಶ ಹೊರ ಹಾಕಿದ್ದಾರೆ. ಬ್ರೌನ್ ಬ್ರೆಡ್ ಗಿಂತ ವೈಟ್ ಬ್ರೆಡ್ ಎಷ್ಟೋ ಆರೋಗ್ಯಕಾರಿ, ಯಾಕೆಂದರೆ ವೈಟ್ ಬ್ರೆಡ್ ಗೆ ಕನಿಷ್ಠ ಪಕ್ಷ ಹಾನಿಕಾರಕ ಕಲರ್ ಬಳಸಲಾಗುವುದಿಲ್ಲ ಎಂದು ಮತ್ತೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News