Deep Sleep tips : ರಾತ್ರಿ ಸರಿಯಾಗಿ ನಿದ್ದೆ ಬಾರದಿದ್ದಾಗ, ಮಲಗುವ ಮೊದಲು ಈ ಕೆಳಗೆ ನೀಡಿರುವ ಪಾನೀಯಗಳನ್ನು ಸೇವಿಸಿ. ಇವುಗಳು ಉತ್ತಮ ನಿದ್ರೆಗೆ ಸಹಾಯ ಮಾಡುತ್ತವೆ.. ಅಲ್ಲದೆ, ಬೆಳಿಗ್ಗೆ ನೀವು ತಾಜಾತನದಿಂದ ಕಾಣುತ್ತೀರಿ. ಕೆಲವು ರೀತಿಯ ಪಾನೀಯಗಳು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತವೆ. ಈ ಪಾನೀಯಗಳನ್ನು ರಾತ್ರಿ ಮಲಗುವ ಮುನ್ನ ಸೇವಿಸಬೇಕು. ಕಳಪೆ ನಿದ್ರೆ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಈ ಕೆಳ ನೀಡಿರುವ ಪಾನೀಯ ಸೇವಿಸಿ ಉತ್ತಮ ನಿದ್ರೆ ಮಾಡಿ...


COMMERCIAL BREAK
SCROLL TO CONTINUE READING

ಬೆಚ್ಚಗಿನ ಹಾಲು : ಇದು ಟ್ರಿಪ್ಟೊಫಾನ್ ಮತ್ತು ಆಮ್ಲಗಳಿಂಧ ಸಮೃದ್ಧವಾಗಿದೆ. ಉಗುರು ಬೆಚ್ಚಗಿನ ಹಾಲು ಸಿರೊಟೋನಿನ್ ಮಟ್ಟವನ್ನು ಹೆಚ್ಚಿಸಿ ಆಳವಾದ ನಿದ್ರೆ ನೀಡುತ್ತದೆ. ಮಲಗುವ ಮುನ್ನ ನಿಯಮಿತ ಆಹಾರದಲ್ಲಿ ಈ ಹಾಲನ್ನು ಸೇರಿಸಿ.. ಇದು ನಿಮ್ಮ ನಿದ್ರೆಗೆ ಸಹಾಯ ಮಾಡುತ್ತದೆ. ಪ್ರತಿದಿನ ಒಂದು ಲೋಟ ಹಾಲು ಕುಡಿಯಿರಿ.


ಇದನ್ನೂ ಓದಿ:ಸೌತೆಕಾಯಿಯನ್ನು ಈ ಸಮಯದಲ್ಲಿ ಹೀಗೆಯೇ ಸೇವಿಸಿ !ಜೋತು ಬಿದ್ದ ಹೊಟ್ಟೆ ಚಪ್ಪಟೆಯಾಗುವುದರಲ್ಲಿ ಡೌಟ್ ಬೇಡವೇ ಬೇಡ !


ಬಾದಾಮಿ ಹಾಲು : ಬಾದಾಮಿ ಹಾಲು ಸಹ ನಿಮಗೆ ಉತ್ತಮ ನಿದ್ರೆಗೆ ಸಹಾಯ ಮಾಡುತ್ತದೆ.. ಇದು ಮೆಗ್ನೀಸಿಯಮ್ನಲ್ಲಿ ಸಮೃದ್ಧವಾಗಿದ್ದು, ಸ್ನಾಯುಗಳನ್ನು ಸಡಿಲಗೊಳಿಸುತ್ತದೆ ಮತ್ತು ಉತ್ತಮ ನಿದ್ರೆಯನ್ನು ಉಂಟುಮಾಡುತ್ತದೆ. ಅಲ್ಲದೆ, ಬಾದಾಮಿ ಹಾಲು ಕಡಿಮೆ ಕ್ಯಾಲೋರಿಗಳನ್ನು ಹೊಂದಿದ್ದು, ತೂಕವನ್ನು ಹೆಚ್ಚಿಸುವುದಿಲ್ಲ.


ಆಲಂ ಟೀ : ರಾತ್ರಿ ಮಲಗುವ ಮುನ್ನ ಆಲಂ ಟೀ ಕುಡಿಯಿರಿ.. ಇದು ಉತ್ತಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹೊಟ್ಟೆಯ ಸಮಸ್ಯೆಗಳನ್ನು ನಿಯಂತ್ರಿಸುತ್ತದೆ. ರಾತ್ರಿ ಮಲಗುವ ಮೊದಲು ಇದನ್ನು ಸೇವಿಸಿ ಉತ್ತಮ ಗಾಢ ನಿದ್ರೆ ಬರುತ್ತದೆ..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.