ಹೊಟ್ಟೆಯ ಕ್ಯಾನ್ಸರ್‌ನ ಈ ಆರಂಭಿಕ ಲಕ್ಷಣಗಳನ್ನು ಎಂದಿಗೂ ಅಸಡ್ಡೆ ಮಾಡಬೇಡಿ!
Stomach Cancer Symptoms: ವಿಶ್ವದಾದ್ಯಂತ ಪ್ರತಿ ಎರಡನೇ ವ್ಯಕ್ತಿಯಲ್ಲಿ ಕಾಣಿಸಿಕೊಳ್ಳುವ ಹೊಟ್ಟೆಯ ಕ್ಯಾನ್ಸರ್ ಒಂದು ಮಾರಣಾಂತಿಕ ಕಾಯಿಲೆಯಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣಗಳು ಯಾವುವು ಎಂದು ತಿಳಿದಿರುವುದು ಹಾಗೂ ಇದಕ್ಕೆ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಬಹಳ ಮುಖ್ಯವಾಗಿದೆ.
Stomach Cancer Symptoms In Kannada: ನಿಮಗೆಲ್ಲರಿಗೂ ತಿಳಿದಿರುವಂತೆ ಸ್ತನ ಕ್ಯಾನ್ಸರ್, ಮೆದುಳಿನ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್ ಹೀಗೆ ಕ್ಯಾನ್ಸರ್‌ನಲ್ಲಿ ಹಲವು ವಿಧಗಳಿವೆ. ಅವುಗಳಲ್ಲಿ ಹೊಟ್ಟೆಯ ಕ್ಯಾನ್ಸರ್ ಕೂಡ ಒಂದು. ಪುರುಷರಿಗಿಂತ ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುವ ಹೊಟ್ಟೆಯ ಕ್ಯಾನ್ಸರ್‌ಗೆ (Stomach Cancer Symptoms) ಸಂಬಂಧಿಸಿದ ಕೆಲವು ಆರಂಭಿಕ ಲಕ್ಷಣಗಳನ್ನು ಜನರು ಕಡೆಗಣಿಸುತ್ತಾರೆ. ಆದರೆ, ಇದು ಭವಿಷ್ಯದಲ್ಲಿ ಮಾರಣಾಂತಿಕ ಸ್ವರೂಪವನ್ನು ಪಡೆಯಬಹುದು. ಇದನ್ನು ತಪ್ಪಿಸಲು ಹೊಟ್ಟೆಯ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳನ್ನು ತಿಳಿದಿರುವುದು ಹಾಗೂ ಸೂಕ್ತ ಸಮಯದಲ್ಲಿ ಚಿಕಿತ್ಸೆ ಪಡೆಯುವುದು ಕೂಡ ಅವಶ್ಯಕವಾಗಿದೆ.
ಹೊಟ್ಟೆ ಕ್ಯಾನ್ಸರ್‌ನ ಐದು ಪ್ರಮುಖ ಆರಂಭಿಕ ಲಕ್ಷಣಗಳೆಂದರೆ...
* ಅಜೀರ್ಣ:
ಅಜೀರ್ಣ, ಎದೆಯುರಿ ಆಹಾರ ವ್ಯತ್ಯಾಸದಿಂದ ಉಂಟಾಗಬಹುದಾದ ಸಾಮಾನ್ಯ ಸಮಸ್ಯೆಗಳು ಎಂದು ಕೆಲವರು ನಿರ್ಲಕ್ಷಿಸುತ್ತಾರೆ. ಆದರೆ, ನಿರಂತರವಾಗಿ ಕಾಡುವ ಅಜೀರ್ಣ, ಹೊಟ್ಟೆಯುರಿಯಂತಹ ಸಮಸ್ಯೆಗಳು ಹೊಟ್ಟೆಯ ಕ್ಯಾನ್ಸರ್‌ನ ಲಕ್ಷಣವೂ (Stomach Cancer Symptoms) ಆಗಿರಬಹುದು. ಹಾಗಾಗಿ, ನೀವು ನಿರಂತರವಾಗಿ ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ ತಡಮಾಡದೇ ವೈದ್ಯರನ್ನು ಸಂಪರ್ಕಿಸಿ.
* ಹೊಟ್ಟೆ ತುಂಬಿದ ಭಾವನೆ:
ಕೆಲವರು ಜನ್ಮತಃ ಸ್ವಲ್ಪವೇ ತಿನ್ನುವ ಅಭ್ಯಾಸ ಹೊಂದಿರುತ್ತಾರೆ. ಆದರೆ, ನೀವು ಸಾಮಾನ್ಯವಾಗಿ ಆಹಾರ ಸೇವಿಸುವುದಕ್ಕಿಂತ ಸ್ವಲ್ಪ ಆಹಾರ ಸೇವಿಸುತ್ತಿದ್ದಂತೆ ನಿಮಗೆ ಹೊಟ್ಟೆ ತುಂಬಿದ ಭಾವನೆ ಉಂಟಾಗುತ್ತಿದ್ದರೆ, ಕೆಲ ದಿನಗಳವರೆಗೆ ಇದು ಹೀಗೆ ಮುಂದುವರೆದರೆ ಇದು ಕೂಡ ಹೊಟ್ಟೆ ಕ್ಯಾನ್ಸರ್‌ನ (Stomach Cancer) ಲಕ್ಷಣವಾಗಿರಬಹುದು ಎಂದು ಅರಿತುಕೊಳ್ಳಿ. ಕೂಡಲೇ ವೈದ್ಯರನ್ನು ಭೇಟಿಯಾಗಿ ಸರಿಯಾದ ಚಿಕಿತ್ಸೆ ಪಡೆಯಿರಿ.
ಇದನ್ನೂ ಓದಿ- ಈ ಸಮಸ್ಯೆ ಇದ್ದವರು ಬೆಂಡೆಕಾಯಿ ತಿನ್ನುವಂತಿಲ್ಲ!ತಿಂದರೆ ಅಪಾಯ ತಪ್ಪಿದ್ದಲ್ಲ
* ತೂಕ ನಷ್ಟ:
ವಿನಾಕಾರಣ ಇದ್ದಕ್ಕಿದ್ದಂತೆ ಕೆಲ ದಿನಗಳಲ್ಲಿ ಅತಿಯಾದ ತೂಕ ನಷ್ಟ (Weight Loss) ಹಾಗೂ ಹಸಿವಿನ ನಷ್ಟವೂ ಕೂಡ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು. ಇಂತಹ ಸಂದರ್ಭದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳ್ಳೆಯದು.
* ಹೊಟ್ಟೆ ನೋವು:
ಆಹಾರ ಸೇವಿಸಿದ ನಂತರ ಹೊಟ್ಟೆಯ ಮೇಲ್ಭಾಗದಲ್ಲಿ ನೋವು, ಅಸ್ವಸ್ಥತೆ ಹೆಚ್ಚಾಗುತ್ತಿದ್ದರೆ ಇದೂ ಸಹ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು.
ಇದನ್ನೂ ಓದಿ- ತೆಂಗಿನೆಣ್ಣೆಗೆ ಇದೊಂದು ವಸ್ತು ಬೆರೆಸಿ ಹಚ್ಚಿದರೆ ಮೊಣಗಂಟವರೆಗೆ ಬೆಳೆಯುವುದು ಕೂದಲು !
* ವಾಂತಿ/ರಕ್ತ ವಾಂತಿ:
ಆಹಾರ ಸೇವಿಸಿದ ನಂತರ ವಾಂತಿ ಅದರಲ್ಲೂ ವಾಂತಿಯ ಜೊತೆಗೆ ರಕ್ತವೂ ಕಾಣಿಸಿಕೊಳ್ಳುತ್ತಿದ್ದರೆ ಇದೂ ಸಹ ಹೊಟ್ಟೆ ಕ್ಯಾನ್ಸರ್‌ನ ಆರಂಭಿಕ ಲಕ್ಷಣವಾಗಿರಬಹುದು. ಹಾಗಾಗಿ ಇಂತಹ ಲಕ್ಷಣಗಳು ಕಾಣಿಸಿಕೊಂಡಾಗ ಇವುಗಳನ್ನು ನಿರ್ಲಕ್ಷಿಸದೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಸರಿಯಾದ ಚಿಕಿತ್ಸೆ ಪಡೆಯುವುದನ್ನು ಖಚಿತಪಡಿಸಿಕೊಳ್ಳುವುದು ಒಳ್ಳೆಯದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.