ಕೊಲೆಸ್ಟ್ರಾಲ್ ಹೆಚ್ಚಾದಾಗ ಮಹಿಳೆಯರ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು!

High cholesterol symptoms : ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದಾಗಿ, ಹೃದಯಾಘಾತ,ಪಾರ್ಶ್ವವಾಯು ಮತ್ತು ಹೃದಯರಕ್ತನಾಳದ ಆರೋಗ್ಯ ಸಮಸ್ಯೆಗಳ ಅಪಾಯವು ಕ್ರಮೇಣ ಜನರಲ್ಲಿ ಹೆಚ್ಚಾಗುತ್ತದೆ.  

Last Updated : May 20, 2024, 03:48 PM IST
  • ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಬಹಳ ಸುಲಭವಾಗಿ ಗೋಚರಿಸುವುದಿಲ್ಲ.
  • 50 ವರ್ಷದ ನಂತರ ಮಹಿಳೆಯರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಬಹುದು.
  • ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಗ್ರೀಸ್ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.
ಕೊಲೆಸ್ಟ್ರಾಲ್ ಹೆಚ್ಚಾದಾಗ ಮಹಿಳೆಯರ ದೇಹದಲ್ಲಿ ಕಾಣಿಸಿಕೊಳ್ಳುತ್ತವೆ ಈ ಲಕ್ಷಣಗಳು!  title=

High cholesterol symptoms : ಅಧಿಕ ಕೊಲೆಸ್ಟ್ರಾಲ್‌ನ ಲಕ್ಷಣಗಳು ಬಹಳ  ಸುಲಭವಾಗಿ ಗೋಚರಿಸುವುದಿಲ್ಲ. ಆದರೆ, ದೇಹದಲ್ಲಿ ಸಂಭವಿಸುವ ಕೆಲವು ಸಮಸ್ಯೆಗಳ ಸಹಾಯದಿಂದ ಹೆಚ್ಚಿನ ಕೊಲೆಸ್ಟ್ರಾಲ್ ಸಮಸ್ಯೆಯನ್ನು  ಗುರುತಿಸಬಹುದು.50 ವರ್ಷದ ನಂತರ ಮಹಿಳೆಯರಲ್ಲಿ ಅಧಿಕ ಕೊಲೆಸ್ಟ್ರಾಲ್ ಸಮಸ್ಯೆ ಹೆಚ್ಚಾಗಬಹುದು.ಕೊಲೆಸ್ಟ್ರಾಲ್ ಅಪಧಮನಿಗಳಲ್ಲಿ ಗ್ರೀಸ್ ರೂಪದಲ್ಲಿ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಇದನ್ನು ಫ್ಲೇಕ್ ಎಂದು ಕರೆಯಲಾಗುತ್ತದೆ. ಫ್ಲೇಕ್ ಸಂಗ್ರಹವಾದ ನಂತರ,ರಕ್ತನಾಳಗಳು ಒಳಗಿನಿಂದ ಕಿರಿದಾಗಲು ಪ್ರಾರಂಭಿಸುತ್ತವೆ.ಇದರಿಂದಾಗಿ ದೇಹದಲ್ಲಿ ರಕ್ತ ಪರಿಚಲನೆ ನಿಧಾನಗೊಳ್ಳುತ್ತದೆ.

ಈ ಲಕ್ಷಣಗಳು ಮಹಿಳೆಯರಲ್ಲಿ ಮಾತ್ರ ಕಂಡುಬರುತ್ತವೆ : 
ಅಧಿಕ ಕೊಲೆಸ್ಟ್ರಾಲ್ ಮಟ್ಟದಿಂದಾಗಿ, ಹೃದಯಾಘಾತ,ಪಾರ್ಶ್ವವಾಯು ಮತ್ತು ಹೃದಯರಕ್ತನಾಳದ ಆರೋಗ್ಯ ಸಮಸ್ಯೆಗಳ ಅಪಾಯವು ಕ್ರಮೇಣ ಜನರಲ್ಲಿ ಹೆಚ್ಚಾಗುತ್ತದೆ.ಅದಕ್ಕಾಗಿಯೇ ಮಹಿಳೆಯರು ವಯಸ್ಸಾದಂತೆ ನಿಯಮಿತವಾಗಿ  ಪರೀಕ್ಷೆಗಳಿಗೆ ಒಳಗಾಗುವಂತೆ ಸಲಹೆ ನೀಡಲಾಗುತ್ತದೆ.ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾದ ನಂತರ ಮಹಿಳೆಯರಲ್ಲಿ ಕಾಣಿಸಿಕೊಳ್ಳುವ ಮೊದಲ ರೋಗಲಕ್ಷಣಗಳು ಇಲ್ಲಿವೆ. 

ಇದನ್ನೂ ಓದಿ : Nuts: ಮಹಿಳೆಯರು ದೇಹದಲ್ಲಿನ ಕಬ್ಬಿಣ ಮಟ್ಟವನ್ನು ಈ ಆರೋಗ್ಯಕರ ನಟ್ಸ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ!!

ಎದೆ ನೋವು : 
ಕೊಲೆಸ್ಟ್ರಾಲ್ ಮಟ್ಟ ಹೆಚ್ಚಾಗುವುದರ ಜೊತೆಗೆ, ಹೃದಯಕ್ಕೆ ಸಂಬಂಧಿಸಿದ ಅಪಧಮನಿಗಳಲ್ಲಿ ಪ್ಲೇಕ್ ಸಂಗ್ರಹವಾಗುವುದರಿಂದ ರಕ್ತ ಪರಿಚಲನೆಯಲ್ಲಿ ಸಮಸ್ಯೆಗಳು ಉಂಟಾಗಬಹುದು.ಇದು ಎದೆ ನೋವಿಗೆ ಕಾರಣವಾಗುತ್ತದೆ. 

ಕಣ್ಣುಗಳಲ್ಲಿ ಹಳದಿ : 
ಕೊಲೆಸ್ಟ್ರಾಲ್ ಹೆಚ್ಚಳದಿಂದಾಗಿ, ಕಣ್ಣುಗಳ ಸುತ್ತಲಿನ ಚರ್ಮದ ಅಡಿಯಲ್ಲಿ ಪ್ಲೇಕ್ ಸಂಗ್ರಹಗೊಳ್ಳಲು ಪ್ರಾರಂಭಿಸುತ್ತದೆ.ಈ ಕಾರಣದಿಂದಾಗಿ, ಚರ್ಮದ ಬಣ್ಣವು ಬದಲಾಗುತ್ತದೆ.ಕಣ್ಣುಗಳು ಮತ್ತು ಸುತ್ತಮುತ್ತಲಿನ ಚರ್ಮವು ಹಳದಿ ಬಣ್ಣಕ್ಕೆ ತಿರುಗಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ : Nuts: ಮಹಿಳೆಯರು ದೇಹದಲ್ಲಿನ ಕಬ್ಬಿಣ ಮಟ್ಟವನ್ನು ಈ ಆರೋಗ್ಯಕರ ನಟ್ಸ್‌ಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ!!

ಉಸಿರಾಟದಲ್ಲಿ ತೊಂದರೆ : 
ಹೃದಯದ ಕಡೆಗೆ ರಕ್ತದ ಅಸಮರ್ಪಕ ಹರಿವಿನಿಂದ,ಅಪಧಮನಿಗಳು ಕುಗ್ಗಲು ಪ್ರಾರಂಭಿಸುತ್ತವೆ.ಇದು ಉಸಿರಾಟದ ತೊಂದರೆಗಳನ್ನು ಉಂಟುಮಾಡಬಹುದು  ವ್ಯಾಯಾಮ ಮಾಡುವಾಗ ಅಥವಾ ದೈಹಿಕವಾಗಿ ಯಾವುದೇ ಕೆಲಸವನ್ನು ಮಾಡುವಾಗ ಉಸಿರಾಟದ ಸಮಸ್ಯೆ ಎದುರಾಗಬಹುದು. 

ಸುಸ್ತು :
ದೇಹದಲ್ಲಿ ದುರ್ಬಲ ಅಥವಾ ನಿಧಾನವಾದ ರಕ್ತ ಪರಿಚಲನೆಯಿಂದಾಗಿ, ಜನರು ತಮ್ಮ ದೇಹದಲ್ಲಿ ಆಮ್ಲಜನಕದ ಕೊರತೆ ಎದುರಿಸುತ್ತಾರೆ. ಇದರಿಂದ ದಣಿವು ಅಥವಾ ದೌರ್ಬಲ್ಯವನ್ನು ಉಂಟಾಗಬಹುದು.

(ಸೂಚನೆ: ಪ್ರಿಯ ಓದುಗರೇ, ಈ ಲೇಖನವು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್‌ ಇದನ್ನು ಖಚಿತಪಡಿಸುವುದಿಲ್ಲ.)  

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...

Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=O-hDphMYFMg

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

  

Trending News