Health Tips: ಬಿಳಿ ಮುಟ್ಟಿನ ಸಮಸ್ಯೆಗೆ ಸುಲಭ ಮನೆಮದ್ದು
White Menstrual Problems: ಬಿಳಿ ಮುಟ್ಟಿನ ಸಮಸ್ಯೆಯನ್ನು ಒಂದು ಕಾಯಿಲೆ ಎಂದು ಪರಿಗಣಿಸಲಾಗುತ್ತದೆ. ಆದರೆ, ಋತುಚಕ್ರ ಎಷ್ಟು ಮುಖ್ಯವೋ ಬಿಳಿ ಮುಟ್ಟು ಸಹ ಅಷ್ಟೇ ಮುಖ್ಯ. ಆದರೆ, ಅತಿಯಾದ ಬಿಳಿ ಮುಟ್ಟಿನ ಸಮಸ್ಯೆ ಆರೋಗ್ಯ ಸಮಸ್ಯೆಗಳನ್ನು ಹೆಚ್ಚಿಸಬಹುದು.
White Menstrual Problems: ಹಿಂದಿನ ಕಾಲದಲ್ಲಿ ಮಾತ್ರವಲ್ಲ, ಪ್ರಸ್ತುತ ಬದಲಾದ ಸಮಯದಲ್ಲಿಯೂ ಸಹ ಮಹಿಳೆಯರಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಬಹಿರಂಗವಾಗಿ ಚರ್ಚೆಯಾಗುವುದಿಲ್ಲ. ಅಂತಹ ವಿಷಯಗಳಲ್ಲಿ ಈ ಬಿಳಿ ಮುಟ್ಟಿನ ಸಮಸ್ಯೆಯೂ ಒಂದು.
ಸಾಮಾನ್ಯವಾಗಿ ನಮ್ಮಲ್ಲಿ ಹಲವರು ಬಿಳಿ ಮುಟ್ಟಿನ ಸಮಸ್ಯೆಯನ್ನು ಒಂದು ಕಾಯಿಲೆ ಎಂದು ಪರಿಗಣಿಸುತ್ತಾರೆ. ಆದರೆ, ಋತುಚಕ್ರ/ಪಿರಿಯಡ್ಸ್ ಹೊಂದುವುದು ಎಷ್ಟು ಮುಖ್ಯವೋ ಬಿಳಿ ಮುಟ್ಟು ಸಹ ಅಷ್ಟೇ ಮುಖ್ಯವಾಗಿದೆ. ಬಿಳಿ ಮುಟ್ಟು ಒಂದು ಸಾಮಾನ್ಯ ಪ್ರಕ್ರಿಯೆ. ಯೋನಿಯಿಂದ ಹರಿಯುವ ವಿಸರ್ಜನೆಯನ್ನು ಬಿಳಿ ವಿಸರ್ಜನೆ ಮತ್ತು ಬಿಳಿ ನೀರು ಎಂದೂ ಕರೆಯುತ್ತಾರೆ. ಈ ಬಿಳಿ ಮುಟ್ಟನ್ನು ಲ್ಯುಕೋರಿಯಾ ಎಂದೂ ಕರೆಯುತ್ತಾರೆ.
ಆದಾಗ್ಯೂ, ಈ ಬಿಳಿ ಮುಟ್ಟಿನ ಸಮಸ್ಯೆ ಹೆಚ್ಚಾದರೆ ಅದು ಆರೋಗ್ಯದ ಮೇಲೆ ಹೆಚ್ಚು ನಕಾರಾತ್ಮಕ ಪರಿಣಾಮವನ್ನು ಬೀರಬಹುದು. ಇದನ್ನು ತಪ್ಪಿಸಲು ಔಷಧಿಗಳ ಅವಶ್ಯಕತೆ ಇದೆ. ಆದರೂ, ನಿಮ್ಮ ಮನೆಯಲ್ಲಿಯೇ ಇರುವ ಕೆಲವು ಪದಾರ್ಥಗಳ ಸಹಾಯದಿಂದ ಈ ಸಮಸ್ಯೆಯಿಂದ ಸುಲಭ ಪರಿಹಾರವನ್ನು ಪಡೆಯಬಹುದು.
ಇದನ್ನೂ ಓದಿ- ಏನಾದರೂ ತಿಂದ ಕೂಡಲೇ ಕಾಣಿಸಿಕೊಳ್ಳುವ ಹೊಟ್ಟೆನೋವಿಗೆ ಈ ಮೂರು ವಸ್ತುಗಳ ಮಿಶ್ರಣವೇ ಪರಿಹಾರ!
ಬಿಳಿ ಮುಟ್ಟಿನ ಸಮಸ್ಯೆಯಿಂದ ಸುಲಭ ಪರಿಹಾರ ನೀಡುವ ಮನೆಮದ್ದುಗಳು :
ಮೆಂತೆ ಕಾಳು:-
ಮೆಂತೆ ಕಾಳನ್ನು ರಾತ್ರಿಯಿಡೀ ನೀರಿನಲ್ಲಿ ನೆನೆಸಿಟ್ಟು, ಬೆಳಿಗ್ಗೆ ಆ ನೀರನ್ನು ಬಿಸಿ ಮಾಡಿ ಶೋಧಿಸಿ ಕುಡಿಯಿರಿ. ನಿಯಮಿತವಾಗಿ ಈ ರೀತಿ ಮಾಡುತ್ತಾ ಬಂದರೆ ಇದು ನಿಮ್ಮ ಬಿಳಿ ಮುಟ್ಟಿನ ಸಮಸ್ಯೆಗೆ ಶೀಘ್ರವೇ ಪರಿಹಾರ ನೀಡಬಲ್ಲದು.
ದಾಳಿಂಬೆ:-
ದಾಳಿಂಬೆ ಒಂದು ಅದ್ಭುತವಾದ ನೈಸರ್ಗಿಕ ಹಣ್ಣಾಗಿದ್ದು ಇದು ರುಚಿಕರ ಮಾತ್ರವಲ್ಲದೆ ಹಲವಾರು ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಹಿಳೆಯರಲ್ಲಿ ಬಿಳಿ ಮುಟ್ಟಿನ ಸಮಸ್ಯೆಯನ್ನು ತಡೆಗಟ್ಟಲು ಇದು ಪರಿಣಾಮಕಾರಿ ಮನೆಮದ್ದುಗಳಲ್ಲಿ ಒಂದಾಗಿದೆ ಎಂದು ಪರಿಗಣಿಸಲಾಗಿದೆ.
ತುಳಸಿ:-
ಆಯುರ್ವೇದ ಪ್ರಕಾರ, ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ಗಿಡಮೂಲಿಕೆಗಳಲ್ಲಿ ಒಂದು ಎಂದು ಪರಿಗಣಿಸಲಾಗಿರುವ ತುಳಸಿ ಎಲೆಗಳ ರಸವನ್ನು ಜೇನುತುಪ್ಪದೊಂದಿಗೆ ಬೆರೆಸಿ ಕುಡಿಯುವುದರಿಂದ ಬಿಳಿ ಮುಟ್ಟಿನ ಸಮಸ್ಯೆಯಿಂದ ಸುಲಭ ಪರಿಹಾರ ದೊರೆಯುತ್ತದೆ.
ಇದನ್ನೂ ಓದಿ- ಖಾಲಿ ಹೊಟ್ಟೆಯಲ್ಲಿ ʼಸೇಬು ಹಣ್ಣುʼ ತಿನ್ನಬಹುದಾ..!? ಈ ಅಭ್ಯಾಸ ಒಳ್ಳೆಯದೋ.. ಕೆಟ್ಟದ್ದೋ..
ಮಾಗಿದ ಬಾಳೆಹಣ್ಣುಗಳು:-
ಬಿಳಿ ಮುಟ್ಟಿನ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ಮಾಗಿದ ಬಾಳೆಹಣ್ಣು ಅತ್ಯುತ್ತಮ ಮನೆಮದ್ದು. ನಿತ್ಯ ಬೆಳಿಗ್ಗೆ ಮತ್ತು ಸಂಜೆ ಮಾಗಿದ ಬಾಳೆಹಣ್ಣನ್ನು ತಿನ್ನುವುದರಿಂದ ಈ ಸಮಸ್ಯೆಯಿಂದ ಪರಿಹಾರವನ್ನು ಪಡೆಯಬಹುದು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.