ಸ್ಟ್ರೆಸ್ ಕಡಿಮೆಯಾಬೇಕಾ..? ಚೆನ್ನಾಗಿ ಹಣ್ಣು, ತರಕಾರಿ ತಿನ್ನಿ
ಅಧ್ಯಯನದ ಪ್ರಕಾರ 8600 ಜನರಿಗೆ ದಿನವು 470 ಗ್ರಾಂ ಹಣ್ಣು ತರಕಾರಿ ನೀಡಲಾಗಿತ್ತು. ಅವರ ಸ್ಟ್ರೆಸ್ ಪ್ರಮಾಣ ಶೇ. 10 ರಷ್ಟು ಕಡಿಮೆ ಆಗಿತ್ತು ಎಂದು ಹೇಳುತ್ತಾರೆ ಸಂಶೋಧನಾ ವಿದ್ಯಾರ್ಥಿ ಸಿಮೆನ್.
ನವದೆಹಲಿ : ದಿನಕ್ಕೆ ಹೆಚ್ಚು ಕಡಿಮೆ ಒಂದರ್ಧ ಕೆಜಿ ಹಣ್ಣು ತರಕಾರಿ (Fruits and vegetables) ತಿಂದರೆ, ಸ್ಟ್ರೆಸ್ ಟೆನ್ಶನ್ ದೂರವಾಗುತ್ತದೆ. ಹೀಗಂತ ಹೇಳಿದ್ದು ಅಸ್ಟೇಲಿಯಾದ ಎಡಿತ್ ಕೊವೆನ್ ವಿವಿಯ ಒಂದು ಸಂಶೋಧನೆ. ಸ್ಟ್ರೆಸ್ (Stress) ಕಡಿಮೆ ಮಾಡುವ ಉದ್ದೇಶದಿಂದ ತಿನ್ನಲು ಕೊಡುವ ಹಣ್ಣು ಮತ್ತು ತರಕಾರಿಯ ಪ್ರಮಾಣವನ್ನು ಹೆಚ್ಚಿಸಲಾಯಿತು. ಈ ರೀತಿಯ 8600 ಜನರ ಮೇಲೆ ಅಧ್ಯಯನ ಮಾಡಿಲಾಗಿತ್ತು. ಈ ಅಧ್ಯಯನದಿಂದ ಅಚ್ಚರಿಯೆನಿಸುವ ಫಲಿತಾಂಶ ಬಹಿರಂಗವಾಗಿತ್ತು.
ದಿನಕ್ಕೆ 470 ಗ್ರಾಂ ಹಣ್ಣು, ತರಕಾರಿ :
ಈ ಸಂಶೋಧನೆ ಮಾಡಿದ್ದು ಸಿಮೆನ್ ಎಂಬ ವಿದ್ಯಾರ್ಥಿ. ಈ ಅಧ್ಯಯನದ ಪ್ರಕಾರ 8600 ಜನರಿಗೆ ದಿನವು 470 ಗ್ರಾಂ ಹಣ್ಣು (fruits) ತರಕಾರಿ ನೀಡಲಾಗಿತ್ತು. ಅವರ ಸ್ಟ್ರೆಸ್ (stress) ಪ್ರಮಾಣ ಶೇ. 10 ರಷ್ಟು ಕಡಿಮೆ ಆಗಿತ್ತು ಎಂದು ಹೇಳುತ್ತಾರೆ ಸಂಶೋಧನಾ ವಿದ್ಯಾರ್ಥಿ ಸಿಮೆನ್. ಆರೋಗ್ಯದಲ್ಲಿರಬೇಕು ಎಂದಾದರೆ ದಿನಕ್ಕೆ 400 ಗ್ರಾಂ ತರಕಾರಿ (Vegetables) ತಿನ್ನಿ ಎಂದು ಹೇಳುತ್ತದೆ ವಿಶ್ವ ಆರೋಗ್ಯ ಸಂಸ್ಥೆ.
ಇದನ್ನೂ ಓದಿ : 7 Weight Loss Mistakes: ತೂಕ ಇಳಿಸಿಕೊಳ್ಳಬೇಕೇ! ಹಾಗಿದ್ದರೆ ಬೆಳಿಗ್ಗೆ ಹೊತ್ತು ಈ 7 ತಪ್ಪುಗಳನ್ನು ಎಂದಿಗೂ ಮಾಡಬೇಡಿ
ಹಣ್ಣಿಗೂ ಸ್ಟ್ರೆಸ್ ಗೂ ಏನು ಲಿಂಕ್..?
24 ವರ್ಷದಿಂದ 94 ವರ್ಷದವರೆಗಿನ ಜನರನ್ನು ಸಂಶೋಧನೆಗೆ ಗುರಿಪಡಿಸಲಾಗಿತ್ತು. ಸಂಶೊಧಕ ಸಿಮೆನ್ ಪ್ರಕಾರ ಹಣ್ಣು ತರಕಾರಿಗಳ ಕನೆಕ್ಷನ್ ಸೀದಾ ಮೆದುಳಿಗೆ (Brain) ಇದೆ. ಹಣ್ಣು ತರಕಾರಿಗಳಲ್ಲಿ ವಿಟಮಿನ್, ಮಿನರಲ್, ಪ್ಲವನೆಯ್ಡ್ ಮತ್ತು ಕೆರೋಟಿನೆಯಡ್ಸ್ ಸಾಕಷ್ಟು ಪ್ರಮಾಣದಲ್ಲಿ ಇದೆ. ಇವು ದೇಹದಲ್ಲಿ ಸ್ಟ್ರೆಸ್ ಕಡಿಮೆಮಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತದೆ. ಇದರಿಂದ ಮೆದುಳಿಗೆ ಆರಾಮ ಸಿಗುತ್ತದೆ. ದೇಹದ ಆಯಾಸ ನೋವು ಕಡಿಮೆ ಆಗುತ್ತದೆ.
ಇದನ್ನೂ ಓದಿ : ಬೆಳಿಗ್ಗೆ ಎದ್ದ ಕೂಡಲೇ ನೀವೂ ಈ ತಪ್ಪು ಮಾಡುತ್ತಿದ್ದರೆ ತಕ್ಷಣ ತಿದ್ದಿಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.