ಬೆಂಗಳೂರು : ಕಿವಿ ನೋವು ಅಥವಾ ಶೀತದ ಸಂದರ್ಭದಲ್ಲಿ ಬೆಳ್ಳುಳ್ಳಿಯನ್ನು ಬಳಸಲು ಮನೆಯಲ್ಲಿನ ಹಿರಿಯರು ಸಲಹೆ ನೀಡುತ್ತಾರೆ.ಆದರೆ ಬೆಳ್ಳುಳ್ಳಿಯನ್ನು ಹಾಗೆಯೇ ಬಳಸುವುದಲ್ಲ, ಬೆಳ್ಳುಳ್ಳಿಯನ್ನು ಈ ಒಂದು ವಸ್ತುವಿನ ಜೊತೆಯಲ್ಲಿ ಬಳಸಿದರೆ ನೆಗಡಿ ಮತ್ತು ಕೆಮ್ಮಿನ ಸಮಸ್ಯೆಗಳು ಶಾಶ್ವತ ಪರಿಹಾರವಾಗುತ್ತದೆ. ಮಾತ್ರವಲ್ಲ,ಇದು ಅನೇಕ ರೀತಿಯ ಸಮಸ್ಯೆಗಳನ್ನು ಕೂಡಾ ಕಡಿಮೆ ಮಾಡುತ್ತದೆ. 


COMMERCIAL BREAK
SCROLL TO CONTINUE READING

ಬೆಳ್ಳುಳ್ಳಿಯನ್ನು ಸಾಸಿವೆ ಎಣ್ಣೆಯ ಜೊತೆಯಲ್ಲಿ ಬಳಸಿದರೆ ನಮ್ಮ ಆರೋಗ್ಯದಲ್ಲಿ ಕಾಣಿಸಿಕೊಳ್ಳುವ ಅನೇಕ ಸಮಸ್ಯೆಗಳಿಗೆ ಪರಿಹಾರ ಸಿಗುತ್ತದೆ.ಸಾಸಿವೆ ಎಣ್ಣೆ  ಮೊನೊಸ್ಯಾಚುರೇಟೆಡ್ ಕೊಬ್ಬಿನಾಮ್ಲಗಳು,ಬಹುಅಪರ್ಯಾಪ್ತ ಕೊಬ್ಬಿನಾಮ್ಲಗಳು, ಪ್ರೋಟೀನ್ ಗಳನ್ನು ಹೊಂದಿರುತ್ತದೆ.ಬೆಳ್ಳುಳ್ಳಿ ವಿಟಮಿನ್ ಎ,ವಿಟಮಿನ್ ಬಿ, ವಿಟಮಿನ್ ಸಿ ಮತ್ತು ಇತರ ಹಲವು ರೀತಿಯ ಆಂಟಿಆಕ್ಸಿಡೆಂಟ್ ಗುಣಗಳನ್ನು ಹೊಂದಿದೆ.ಇದು ನಿಮ್ಮ ಅನೇಕ ಸಮಸ್ಯೆಗಳನ್ನು ಕಡಿಮೆ ಮಾಡುತ್ತದೆ. 


ಇದನ್ನೂ ಓದಿ : ಹಿತ್ತಲ ತುಂಬಾ ಹರಡಿಕೊಳ್ಳುವ ಈ ಪುಟ್ಟ ಗಿಡದ ಎಲೆ ಸೇವಿಸಿದ ತಕ್ಷಣ ನಾರ್ಮಲ್ ಆಗುವುದು ಬ್ಲಡ್ ಶುಗರ್!ಈ ಹೊತ್ತಿನಲ್ಲಿ ಸೇವಿಸಿ ನೋಡಿ


ರಕ್ತ ಪರಿಚಲನೆ ಸುಧಾರಿಸಲು : 
ಸಾಸಿವೆ ಎಣ್ಣೆ ಮತ್ತು ಬೆಳ್ಳುಳ್ಳಿಯನ್ನು ಬಳಸುವುದರಿಂದ ದೇಹದ ರಕ್ತ ಪರಿಚಲನೆ ಸುಧಾರಿಸುತ್ತದೆ.ಈ ಎರಡರ ಮಿಶ್ರಣದಿಂದ ಮಸಾಜ್ ಮಾಡಿದರೆ ಬಹಳ ಪ್ರಯೋಜನಕಾರಿಯಾಗಿದೆ.ಸ್ವಲ್ಪ ಬೆಳ್ಳುಳ್ಳಿ ಎಸಳುಗಳನ್ನು ಸಾಸಿವೆ ಎಣ್ಣೆಯಲ್ಲಿ ಹಾಕಿ ಬಿಸಿ ಮಾಡಿ. ನಂತರ,ಎಣ್ಣೆಯನ್ನು ತಣ್ಣಗಾಗಿಸಿ ಬಾಡಿ ಮಸಾಜ್ ಮಾಡಿ. 


ಶೀತ ಮತ್ತು ಕೆಮ್ಮಿಗೆ ಪರಿಹಾರ : 
ಶೀತ ಮತ್ತು ಕೆಮ್ಮಿನ ಸಂದರ್ಭದಲ್ಲಿ ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯ ಮಿಶ್ರಣ ಪರಿಣಾಮಕಾರಿ ಕೆಲಸ ಮಾಡುತ್ತದೆ.ಇದು ಬ್ಯಾಕ್ಟೀರಿಯಾ ವಿರೋಧಿ ಮತ್ತು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ.ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಶೀತ ಮತ್ತು ಕೆಮ್ಮಿನ ಸಮಸ್ಯೆಯನ್ನು ಕಡಿಮೆ ಮಾಡಲು, ಬೆಳ್ಳುಳ್ಳಿ ಎಸಳುಗಳನ್ನು ಸಾಸಿವೆ ಎಣ್ಣೆಯಲ್ಲಿ ಕುದಿಸಿ.ಅದನ್ನು ತಣ್ಣಗಾಗಿಸಿ ಸೇವಿಸಿ.  


ಇದನ್ನೂ ಓದಿ : ಶುಂಠಿ ರಸವನ್ನು ಇದರಲ್ಲಿ ಬೆರೆಸಿ ಕುಡಿದರೆ ಕೀಲುಗಳಲ್ಲಿ ಅಂಟಿದ ಯುರಿಕ್‌ ಆಸಿಡ್‌ ಕರಗಿ... ಕಿಡ್ನಿ ಸ್ಟೋನ್‌ ಸಹ ಪುಡಿಯಾಗಿ ಹೊರಬರುವುದು!


ಕೀಲು ನೋವಿನಿಂದ ಪರಿಹಾರ :  
ಕೀಲು ನೋವಿನ ಸಮಸ್ಯೆ ನಿಮ್ಮನ್ನು ಕಾಡುತ್ತಿದ್ದರೆ ಸಾಸಿವೆ ಮತ್ತು ಬೆಳ್ಳುಳ್ಳಿ ಎಣ್ಣೆಯನ್ನು ಬಳಸಬಹುದು.ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯನ್ನು ತಯಾರಿಸಿ ಕೀಲುಗಳಿಗೆ ಹಚ್ಚಿ ಚೆನ್ನಾಗಿ ಮಸಾಜ್ ಮಾಡಿ.ಇದರಿಂದ ಕೀಲು ನೋವು ಗುಣವಾಗಲಿದೆ. 


ಆಯಾಸ ಹೋಗಲಾಡಿಸುತ್ತದೆ : 
ಸಾಸಿವೆ ಎಣ್ಣೆ ಮತ್ತು ಬೆಳ್ಳುಳ್ಳಿ ದೇಹದಲ್ಲಿ ನೋವು ಮತ್ತು ಆಯಾಸದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.ಇದರಲ್ಲಿ ಅನೇಕ ವಿಧದ ಜೀವಸತ್ವಗಳು ಮತ್ತು ಖನಿಜಗಳು ಕಂಡುಬರುತ್ತವೆ.ಇದು ದೀರ್ಘಕಾಲದ ನೋವು ಮತ್ತು ಊತದ ಸಮಸ್ಯೆಯನ್ನು ಕಡಿಮೆ ಮಾಡುತ್ತದೆ.


ಹಲ್ಲು ನೋವಿಗೆ ಪರಿಹಾರ :
ಹಲ್ಲುನೋವಿನ ಸಮಸ್ಯೆಯನ್ನು ಕಡಿಮೆ ಮಾಡಲು,ಬೆಳ್ಳುಳ್ಳಿ ಮತ್ತು ಸಾಸಿವೆ ಎಣ್ಣೆಯನ್ನು ಬಳಸಬಹುದು.ಇದು ಒಸಡುಗಳಲ್ಲಿನ ನೋವನ್ನು ಕಡಿಮೆ ಮಾಡುವ ಗುಣವನ್ನು ಹೊಂದಿದೆ.ಇದಕ್ಕಾಗಿ ಬೆಳ್ಳುಳ್ಳಿ ಎಣ್ಣೆಯನ್ನು ಹಲ್ಲುಗಳಿಗೆ ಹಚ್ಚಿ ಸ್ವಲ್ಪ ಸಮಯ ಮಸಾಜ್ ಮಾಡಬೇಕು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.