ನವದೆಹಲಿ:  ಕೆಲವು ಮಕ್ಕಳು ಈ ಹಣ್ಣನ್ನು ನೋಡಿದ ಕೂಡಲೇ ಮುಖ ತಿರುಗಿಸುತ್ತಾರೆ. ಮತ್ತೆ ಕೆಲವರು ದೂರ ಓದುತ್ತಾರೆ, ಇನ್ನು ಕೆಲವರು ಈ ಹಣ್ಣು ತಿನ್ನುವುದರಿಂದ ತಪ್ಪಿಸಿಕೊಳ್ಳಲು ನಾನಾ ಕಾರಣಗಳನ್ನು ಹುಡುಕುತ್ತಾರೆ. ಆದರೆ ಅದೇ ಮಕ್ಕಳು ದೊಡ್ಡವರಾದ ಮೇಲೆ ತಾವು ಈ ಹಣ್ಣನ್ನು ತಿನ್ನದೇ ಎಂತಹ ತಪ್ಪು ಮಾಡಿದ್ವಿ ಅನ್ನೋದು ಅವರಿಗೆ ಅರಿವಾಗುತ್ತದೆ. ಯಾಕಂದ್ರೆ ಈ ಹಣ್ಣನ್ನು ತಿನ್ನುವುದರಿಂದ ದೇಹಕ್ಕೆ ಸಿಕ್ಕಾಪಟ್ಟೆ ಎನರ್ಜಿ ಸಿಗುತ್ತದೆ. ಅದರಲ್ಲೂ ಬೇಸಿಗೆಯಲ್ಲಿ ಈ ಹಣ್ಣನ್ನು ತಿನ್ನುವುದರಿಂದ ಸಾಕಷ್ಟು ಪ್ರಯೋಜನಗಳೂ ಸಹ ಇವೆ. ಹಾಗಾದ್ರೆ ಅದು ಯಾವ ಹಣ್ಣು ಅಂತ ಯೋಚಿಸ್ತಿದ್ದೀರಾ? ಅದೇ ಅನಾನಸ್ ಹಣ್ಣು!


COMMERCIAL BREAK
SCROLL TO CONTINUE READING

* ಚರ್ಮ ಸಮಸ್ಯೆಗಳಿಂದ ಮುಕ್ತಿ
ಅನಾನಸ್ ಹಣ್ಣಿನಲ್ಲಿ ಸಾಕಷ್ಟು ಪ್ರಮಾಣದಲ್ಲಿ ವಿಟಮಿನ್ ಸಿ ಅಂಶ ಇರುವುದರಿಂದ ಚರ್ಮ ಆರೋಗ್ಯವಾಗಿರಲು ಸಹಾಯ ಮಾಡುತ್ತದೆ.  ಅಷ್ಟೇ ಅಲ್ಲ, ಮುಖದ ಮೇಲಿನ ಮೊಡವೆಗಳು ನಿವಾರಣೆಯಾಗುತ್ತದೆ. 


* ಹೊಟ್ಟೆಯ ಸಮಸ್ಯೆ ನಿವಾರಣೆ
ಅನಾನಸ್ ಹಣ್ಣಿನಲ್ಲಿ ಬ್ರೋಮೆಲಿನ್ ಕಿಣ್ವ ಇರುವುದರಿಂದ ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಇದರಲ್ಲಿ ನಾರಿನ ಅಂಶ ಹೆಚ್ಚಾಗಿರುವುದರಿಂದ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ. 


* ಉರಿ ಊತ ನಿವಾರಣೆ
ಮೂತ್ರ ಕಟ್ಟುವುದು, ಪಿತ್ತಕೋಶ ಊದಿಕೊಳ್ಳುವುದು, ಕಣ್ಣಿನ ಸುತ್ತಮುತ್ತ ಊದಿಕೊಳ್ಳುವುದು ಮುಂತಾದ ತೊಂದರೆಗಳಿಗೆ ತಾಜಾ ಅನಾನಸ್ ರಾಮಬಾಣ. ಅಷ್ಟೇ ಅಲ್ಲದೆ ಸಂಧಿವಾತದಿಂದ ಆಗುವ ಊತ ಕಡಿಮೆಯಾಗುತ್ತದೆ. ಅಷ್ಟೇ ಅಲ್ಲ ನೋವೂ ಸಹ ಕಡಿಮೆಯಾಗುತ್ತದೆ. 


* ಮೂಳೆಗಳಿಗೆ ಪ್ರಯೋಜನಕಾರಿ
ಅನಾನಸ್ ಹಣ್ಣಿನಲ್ಲಿ ಮೂಳೆಗಳನ್ನು ಬಲಪಡಿಸಲು ಅಗತ್ಯವಾದ ಕ್ಯಾಲ್ಸಿಯಂ ಮತ್ತು ಮ್ಯಾಂಗನೀಸ್ ಅಂಶ ಹೆಚ್ಚಾಗಿರುತ್ತದೆ.  ಒಂದು ಕಪ್ ಅನಾನಸ್ ರಸದ ರಸದಲ್ಲಿ 73% ಮ್ಯಾಂಗನೀಸ್ ಅಂಶ ಇರುವುದರಿಂದ ನಿಯಮಿತವಾಗಿ ಅನಾನಸ್ ಹಣ್ಣಿನ ರಸ ಕುಡಿಸ್ಯುವುದರಿಂದ ಮೂಳೆಗಳು ಬಲಗೊಳ್ಳುತ್ತವೆ.