Boost Your Mental Health : ದೈನಂದಿನ ಜೀವನದಲ್ಲಿ ಉತ್ತಮ ಮಾನಸಿಕ ಆರೋಗ್ಯವನ್ನು ಕಾಪಾಡಲು ನಿಮ್ಮ ಆಹಾರಕ್ರಮದಲ್ಲಿ ಹೆಚ್ಚಿನ ಬದಲಾವಣೆಯೇನೂ ತರಬೇಕಿಲ್ಲ. ಆದರೆ ಭಾರತೀಯ ಆಹಾರಪದ್ಧತಿಯು ನಿಮ್ಮ ಮನಸ್ಸು ಮತ್ತು ಮಾನಸಿಕ ಆರೋಗ್ಯವನ್ನು ನಿಯಂತ್ರಣದಲ್ಲಿಡುತ್ತದೆ. 


COMMERCIAL BREAK
SCROLL TO CONTINUE READING

ಇಲ್ಲೊಂದಿಷ್ಟು ಆಹಾರ ಪದಾರ್ಥಗಳನ್ನು ಯಾವ ಆಹಾರವನ್ನು, ಯಾವ ಮಟ್ಟದಲ್ಲಿ ಸೇರಿಸಬೇಕು ಎನ್ನುವುದರ ಮೇಲೆ ನಮ್ಮ ಮಾನಸಿಕ ಆರೋಗ್ಯದ ನಿಯಂತ್ರಣ ನಿರ್ಧರಿತವಾಗುತ್ತದೆ. 


1. ಅರಿಶಿಣ : ಅರಿಶಿಣ ಶಕ್ತಿಯುತವಾದ ಉತ್ಕರ್ಷಣ ನಿರೋಧಕ ಶಕ್ತಿ ಮತ್ತು ಊರಿಯೂತದ ಗುಣಲಕ್ಷಣಗಳನ್ನು ಹೊಂದಿದ್ದು, ಇದು ಸಿರೊಟೋನಿನ್‌ ಬಿಡುಗಡೆಯನ್ನು ಉತ್ತೇಜಿಸುವ ಮೂಲಕ ಖಿನ್ನತೆ ಮತ್ತು ಆತಂಕದ ಲಕ್ಷಣಗಳನ್ನು ನಿವಾರಿಸಲು ಸಹಾಯ ಮಾಡುತ್ತದೆ. ಇದನ್ನು ದಿನಕ್ಕೆ ಸುಮಾರು 1 ಟೀಚಮಚದಷ್ಟು ಸೇವಿಸಬೇಕು.


ಇದನ್ನು ಓದಿ - ಬೆಳ್ಳುಳ್ಳಿಯಲ್ಲಿರುವ ಈ ಅಂಶ ರಕ್ತನಾಳಗಳಲ್ಲಿನ ಜಿಡ್ಡನ್ನು ಬುಡಸಮೇತ ಕಿತ್ತೆಸೆಯುತ್ತೇ... ಬೇಕಿದ್ರೆ ಟ್ರೈ ಮಾಡಿ!


2. ಲೀಫಿ ಗ್ರೀನ್ಸ್‌ : ಸಲಾಡ್‌ಗಳು, ಪಾಲಕ್‌, ಮೆಂತ್ಯ ಎಲೆಗಳು ಸೇವಿಸುವದರಿಂದ ಡೋಪಪೈನ್‌ ಮನಸ್ಥಿತಿ ನಿಯಂತ್ರಣ ಮತ್ತು ಆನಂದಕ್ಕೆ ಅವಶ್ಯಕವಾಗಿದೆ. (ದಿನಕ್ಕೆ ಕನಿಷ್ಠ 1-2 ಕಪ್ಗಳು)


3. ಬೀಜಗಳು : ಬಾದಾಮಿ, ಕುಂಬಳಕಾಯಿ ಬೀಜಗಳನ್ನು ಲಘು ಆಹಾರವಾಗಿ ಮತ್ತು ದಿನಕ್ಕೆ ಒಂದು ಸಣ್ಣ ಕೈಬೆರಳೆಣಿಕೆಯಷ್ಟು ಸೇವಿಸಬಹುದು. ಬೀಜಗಳು ಒಮೆಗಾ-3 ಕೊಬ್ಬಿನಾಮ್ಲಗಳಿಂದ ತುಂಬಿರುತ್ತದೆ.  ಇದು ಆತಂಕದ ಲಕ್ಷಣಗಳನ್ನು ಕಡಿಮೆ ಮಾಡುತ್ತದೆ.


4. ಮಸೂರ : ಲೆಂಟಿಲ್‌ ಸೂಪ್‌, ದಾಲ್‌ ಕರಿ ಮತ್ತು ಸಸ್ಯಹಾರಿ ಮೇಲೋಗರಗಳಿಗೆ ಬಳಸಿ ಉಪಯೋಗಿಸಬಹುದು. (ಪ್ರತಿದಿನ 1 ಕಪ್‌ ಬೇಯಿಸಿದನ್ನು ಸೇವಿಸುವುದು ಒಳ್ಳೆಯದು)


5. ಮೊಸರು : ಮೊಸರನ್ನು ಲಘು ಆಹಾರವಾಗಿ, ಊಟದ ಜೊತೆಗೆ ಆನಂದಿಸುವುದು ಒಳ್ಳೆಯದು. ಮತ್ತು ಇದು ಪ್ರೋಬಯಾಟಿಕ್‌ ಸಮೃದ್ಧ ಆಹಾರವಾಗಿದ್ದು, ಕರುಳು ಮೆದುಳಿನ ಸಂಪರ್ಕವನ್ನು ಧನಾತ್ಮಕವಾಗಿ ಪ್ರಭಾವಿಸುತ್ತದೆ. ಆರೋಗ್ಯಕರ ಕರುಳು ಮತ್ತು ಖಿನ್ನತೆಯ ರೋಗಲಕ್ಷಣಗಳನ್ನು ಕಡಿಮೆ ಮಾಡಲು ಸಹಕಾರಿಯಾಗುತ್ತದೆ.


ಈ ಆಹಾರಗಳನ್ನು ನಿಮ್ಮ ದೈನಂದಿನ ಆಹಾರದಲ್ಲಿ ಸೇರಿಸುವುದರಿಂದ ಮಾನಸಿಕ ಆರೋಗ್ಯದಲ್ಲಿ ಗಮನಾರ್ಹ ಬದಲಾವಣೆಯನ್ನು ತರುತ್ತದೆ.


(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.