ಬೆಳ್ಳುಳ್ಳಿಯಲ್ಲಿರುವ ಈ ಅಂಶ ರಕ್ತನಾಳಗಳಲ್ಲಿನ ಜಿಡ್ಡನ್ನು ಬುಡಸಮೇತ ಕಿತ್ತೆಸೆಯುತ್ತೇ... ಬೇಕಿದ್ರೆ ಟ್ರೈ ಮಾಡಿ!

Taming Bad Cholesterol: ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಲು ನೀವು ನಿಮ್ಮ ಆಹಾರದಲ್ಲಿ ಕೆಲ ಪದಾರ್ಥಗಳನ್ನು ಶಾಮೀಲುಗೊಳಿಸುವುದು ಉತ್ತಮ. ಹಾಗಾದರೆ ಬನ್ನಿ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿರಿಸುವ ಆ ಆಹಾರ ಪದಾರ್ಥಗಳು ಯಾವುವು ತಿಳಿದುಕೊಳ್ಳೋಣ,

Written by - Nitin Tabib | Last Updated : Sep 9, 2023, 09:46 PM IST
  • ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಡ್ರೈಫ್ರೂಟ್ಸ್ ಅಥವಾ ನಟ್ಸ್ ಅಥವಾ ಬೀಜಗಳು ತುಂಬಾ ಸಹಕಾರಿಯಾಗಿವೆ.
  • ಇದಕ್ಕಾಗಿ ನೀವೂ ಕೂಡ ನಿಮ್ಮ ಆಹಾರದಲ್ಲಿ ಬಾದಾಮಿ, ವಾಲ್ ನಟ್ಸ್, ಗೋಡಂಬಿಗಳಂತಹ ವಿವಿಧ ರೀತಿಯ ಡ್ರೈ ಫ್ರೂಟ್ಸ್ ಅಥವಾ ಬೀಜಗಳನ್ನು ಸೇರಿಸಿಕೊಳ್ಳಬಹುದು.
  • ಈ ಡ್ರೈಫ್ರೂಟ್ ಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅವು ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಬೆಳ್ಳುಳ್ಳಿಯಲ್ಲಿರುವ ಈ ಅಂಶ ರಕ್ತನಾಳಗಳಲ್ಲಿನ ಜಿಡ್ಡನ್ನು ಬುಡಸಮೇತ ಕಿತ್ತೆಸೆಯುತ್ತೇ... ಬೇಕಿದ್ರೆ ಟ್ರೈ ಮಾಡಿ! title=

ಬೆಂಗಳೂರು: ಸಾಮಾನ್ಯವಾಗಿ ಕೊಲೆಸ್ಟ್ರಾಲ್ ಒಂದು ಮೇಣದಂಥ ಪದಾರ್ಥವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಕರಿಸುತ್ತದೆ. ಆದರೆ, ದೇಹದಲ್ಲಿ ಇದರ ಪ್ರಮಾಣ ಹೆಚ್ಚಾದರೆ ಅದು ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತಾಗುತ್ತದೆ. ಹೀಗಾಗಿ ದೇಹವನ್ನು ಆರೋಗ್ಯಕರವಾಗಿರಿಸಲು ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಸಮತೊಲನದಲ್ಲಿಡುವುದು ತುಂಬಾ ಮುಖ್ಯ. ದೇಹದಲ್ಲಿ ಕೆಟ್ಟ ಕೊಲೆಸ್ಟ್ರಾಲ್ ಹೆಚ್ಚಾಗುವುದರಿಂದ ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಹೀಗಾಗಿ ಅದನ್ನು ನಿಯಂತ್ರಣದಲ್ಲಿಡಲು ನಾವು ನಮ್ಮ ಆಹಾರದಲ್ಲಿ ಕೆಲ ಪದಾರ್ಥಗಳನ್ನು ಶಾಮೀಲುಗೊಳಿಸುವುದು ತುಂಬಾ ಮುಖ್ಯ. ಆ ಪದಾರ್ಥಗಳು ಯಾವುವು ತಿಳಿದುಕೊಳ್ಳೋಣ ಬನ್ನಿ,

ಹಸಿ ಬೆಳ್ಳುಳ್ಳಿ   
ಪ್ರತಿದಿನ ಹಸಿ ಬೆಳ್ಳುಳ್ಳಿ ಸೇವಿಸುವುದರಿಂದ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿರುತ್ತದೆ. ಬೆಳ್ಳುಳ್ಳಿಯಲ್ಲಿ ಆಂಟಿ-ಹೈಪರ್ಲಿಪಿಡೆಮಿಯಾ ಅಂಶವಿದ್ದು, ಇದು ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ತುಂಬಾ ಪರಿಣಾಮಕಾರಿಯಾಗಿದೆ.

ಹಣ್ಣುಗಳು
ನಿತ್ಯ ಹಣ್ಣುಗಳ ಸೇವನೆ ಒಂದು ಉತ್ತಮ ಅಭ್ಯಾಸ. ಪ್ರತಿನಿತ್ಯ ಕನಿಷ್ಠ ಒಂದು ಹಣ್ಣನ್ನು ತಿನ್ನಲು ಪ್ರಯತ್ನಿಸಬೇಕು. ಹಣ್ಣುಗಳನ್ನು ತಿನ್ನುವುದರಿಂದ ಹಲವಾರು ಪ್ರಯೋಜನಗಳಿವೆ. ಆದರೆ, ಪ್ರಮುಖವಾಗಿ ನಿತ್ಯ ಒಂದು ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.

ನಟ್ಸ್ ಅಥವಾ ಬೀಜಗಳು
ದೇಹದಲ್ಲಿ ಹೆಚ್ಚಾದ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸಲು ಡ್ರೈಫ್ರೂಟ್ಸ್ ಅಥವಾ ನಟ್ಸ್ ಅಥವಾ ಬೀಜಗಳು ತುಂಬಾ ಸಹಕಾರಿಯಾಗಿವೆ. ಇದಕ್ಕಾಗಿ ನೀವೂ ಕೂಡ ನಿಮ್ಮ ಆಹಾರದಲ್ಲಿ ಬಾದಾಮಿ, ವಾಲ್ ನಟ್ಸ್, ಗೋಡಂಬಿಗಳಂತಹ ವಿವಿಧ ರೀತಿಯ ಡ್ರೈ ಫ್ರೂಟ್ಸ್ ಅಥವಾ ಬೀಜಗಳನ್ನು ಸೇರಿಸಿಕೊಳ್ಳಬಹುದು. ಈ ಡ್ರೈಫ್ರೂಟ್ ಗಳು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದ್ದು, ಅವು ದೇಹದ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತವೆ. 

ಇದನ್ನೂ ಓದಿ-ಆರೋಗ್ಯ ನಿಧಿಯಾಗಿದೆ ಕರಿಬೇವಿನ ಸೊಪ್ಪು, ವೇಗವಾಗಿ ತೂಕ ಇಳಿಸಿಕೊಳ್ಳಲು ಬೆಳಗ್ಗೆ ಈ ಕೆಲಸ ಮಾಡಿ ಸಾಕು!

ಧಾನ್ಯಗಳು
ದೇಹದಲ್ಲಿ ಕೊಲೆಸ್ಟ್ರಾಲ್ ಹೆಚ್ಚಾದಾಗ ಆದಷ್ಟು ಹೆಚ್ಚು ಸಿರಿಧಾನ್ಯಗಳನ್ನು ನೀವು ನಿಮ್ಮ ಆಹಾರದಲ್ಲಿ ಶಾಮೀಲುಗೊಳಿಸಬಹುದು. ಈ ರೀತಿ ಮಾಡುವುದರಿಂದ ದೇಹದಲ್ಲಿ ಹೆಚ್ಚಾಗಿರುವ ಕೊಲೆಸ್ಟ್ರಾಲ್ ನಿಯಂತ್ರಣಕ್ಕೆ ಬರುತ್ತದೆ.

ಇದನ್ನೂ ಓದಿ -ಹಸಿ ಮೆಣಸಿನಕಾಯಿ ಸೇವನೆಯಿಂದಲೂ ಕೂಡ ಮಧುಮೇಹ ನಿಯಂತ್ರಣಕ್ಕೆ ಬರುತ್ತೆ ಗೊತ್ತಾ?

(ಹಕ್ಕುತ್ಯಾಗ- ಈ ಲೇಖನದಲ್ಲಿ ನೀಡಲಾಗಿರುವ ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮನೆಮದ್ದು ಮಾಹಿತಿಯನ್ನು ಆಧರಿಸಿದೆ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ. ಅನುಸರಿಸುವ ಮುನ್ನ ವಿಷಯ ತಜ್ಞರ ಸಲಹೆ ಪಡೆದುಕೊಳ್ಳಲು ಮರೆಯಬೇಡಿ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 
 

Trending News