Vitamin C Deficiency: ಯಾವುದೇ ಋತುಮಾನವಿರಲಿ ರೋಗಗಳ ವಿರುದ್ಧ ಹೋರಾಡಲು ರೋಗನಿರೋಧಕ ಶಕ್ತಿ ಬಲವಾಗಿರುವುದು ಬಹಳ ಮುಖ್ಯ. ಇದಕ್ಕಾಗಿ ವಿಟಮಿನ್ ಸಿ ತುಂಬಾ ಅಗತ್ಯ. ದೇಹದಲ್ಲಿ ವಿಟಮಿನ್ ಸಿ ಕೊರತೆ ಉಂಟಾದಾಗ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳಿಂದಲೂ ಸಹ ಹೊರಬಹುವುದು ತುಂಬಾ ಕಷ್ಟವಾಗುತ್ತದೆ. ಇದನ್ನು ತಪ್ಪಿಸಲು ಔಷಧಿಗಳ ಮೊರೆ ಹೋಗುವ ಬದಲಿಗೆ ನೀವು ನಿತ್ಯ ಸೇವಿಸುವ ಆಹಾರಗಳಲ್ಲಿ ವಿಟಮಿನ್ ಸಿ ಸಮೃದ್ಧ ಆಹಾರವನ್ನು ಸೇವಿಸುವುದು ಬಹಳ ಅಗತ್ಯ. ಅದರಲ್ಲೂ ಬೇಸಿಗೆಯಲ್ಲಿ ವಿಟಮಿನ್ ಸಿ ಕೊರತೆಯನ್ನು ನೀಗಿಸಲು ನಿಮ್ಮ ಆಹಾರದಲ್ಲಿ ಕೆಲವು ಆಹಾರಗಳನ್ನು ತಪ್ಪದೇ ಸೇವಿಸುವುದು ಅತ್ಯಗತ್ಯವಾಗಿದೆ. 


COMMERCIAL BREAK
SCROLL TO CONTINUE READING

ವಾಸ್ತವವಾಗಿ, ಹಲವು ತಾಜಾ ಹಣ್ಣು-ತರಕಾರಿಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಕೆಲವು ಸಂಶೋಧನೆಗಳ ಪ್ರಕಾರ, ದೇಹದ ರೋಗ ನಿರೋಧಕ ಶಕ್ತಿಯನ್ನು ವೃದ್ಧಿಸಲು ವಿಟಮಿನ್ ಸಿ ಸಮೃದ್ಧವಾಗಿರುವ ಆಹಾರವನ್ನು ಸೇವಿಸುವುದು ತುಂಬಾ ಅವಶ್ಯಕ.
19 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವಯಸ್ಕರಿಗೆ ದಿನಕ್ಕೆ 75-90 ಮಿಲಿಗ್ರಾಂ (ಮಿಗ್ರಾಂ) ವಿಟಮಿನ್ ಸಿ ಅಗತ್ಯವಿದೆ. ವಿಟಮಿನ್ ಸಿ ಕೊರತೆಯು ದೇಹದಲ್ಲಿ ಆಯಾಸ, ತೀವ್ರವಾದ ಕೀಲು ಅಥವಾ ಕಾಲು ನೋವು, ಒಸಡುಗಳಲ್ಲಿ ರಕ್ತಸ್ರಾವ ಹೀಗೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ. ವಿಟಮಿನ್ ಸಿ ಕೊರತೆಯು ತುಲನಾತ್ಮಕವಾಗಿ ಅಪರೂಪವಾಗಿದ್ದರೂ, ಇದು ಸ್ಕರ್ವಿ ಎಂಬ ಕಾಯಿಲೆಗೆ ಕಾರಣವಾಗಬಹುದು. ಇದನ್ನು ತಪ್ಪಿಸಲು ನಿಮ್ಮ ದಿನನಿತ್ಯದ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧ ಆಹಾರಗಳನ್ನು ಸೇವಿಸುವುದು ತುಂಬಾ ಮುಖ್ಯ. 


ಇದನ್ನೂ ಓದಿ- ಇದೇ ನೋಡಿ ಮಧುಮೇಹಿಗಳೂ ಸಹ ಮನಃಪೂರ್ತಿ ಸೇವಿಸಬಹುದಾದ ಸಿಹಿ ಹಣ್ಣು


ಆಹಾರ ತಜ್ಞರ ಪ್ರಕಾರ, ಬೇಸಿಗೆಯಲ್ಲಿ ನಿತ್ಯ ನಿಮ್ಮ ಡಯಟ್ನಲ್ಲಿ ಕೆಲವು ಆಹಾರಗಳನ್ನು ಸೇರಿಸುವುದರಿಂದ ವಿಟಮಿನ್ ಸಿ ಕೊರತೆಯನ್ನು ಸುಲಭವಾಗಿ ನೀಗಿಸಬಹುದು ಎಂದು ಹೇಳಲಾಗುತ್ತದೆ. ಆ ಆಹಾರಗಳೆಂದರೆ...
* ಸಿಟ್ರಸ್ ಹಣ್ಣುಗಳು:

ಸಿಟ್ರಸ್ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುತ್ತದೆ. ಬೇಸಿಗೆಯಲ್ಲಿ ನಿಂಬೆ , ಕಿತ್ತಳೆಯಂತಹ ಸಿಟ್ರಸ್ ಹಣ್ಣುಗಳನ್ನು ಹೆಚ್ಚಾಗಿ ಬಳಸುವುದರಿಂದ ವಿಟಮಿನ್ ಸಿ ಕೊರತೆಯನ್ನು ನೀಗಿಸಬಹುದು.


* ಕಿವಿ ಹಣ್ಣು:
ಅಧ್ಯಯನಗಳ ಪ್ರಕಾರ, ಕಿವಿ ಹಣ್ಣು ಪ್ಲಾಸ್ಮಾ ವಿಟಮಿನ್ ಸಿ ಮಟ್ಟವನ್ನು ಹೆಚ್ಚಾಗಿ ಸುಧಾರಿಸುತ್ತದೆ. ಹಾಗಾಗಿ, ನಿತ್ಯ ಒಂದು ಕಿವಿ ಹಣ್ಣನ್ನು ಸೇವಿಸುವುದರಿಂದ ದೇಹದಲ್ಲಿ ವಿಟಮಿನ್ ಕೊರತೆಯನ್ನು ನಿವಾರಿಸಬಹುದು ಎಂದು ಹೇಳಲಾಗುತ್ತದೆ. 


ಇದನ್ನೂ ಓದಿ- ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ ಆರೋಗ್ಯ ಕೆಡಿಸಿದಂತೆ


* ಕಲ್ಲಂಗಡಿ ಹಣ್ಣು:
ಬೇಸಿಗೆಯ ಬಿರು ಬಿಸಿಲ ತಾಪದಿಂದ ಕೊಂಚ ಪರಿಹಾರ ಪಡೆಯಲು ಜನರು ಕಲ್ಲಂಗಡಿ ಹಣ್ಣನ್ನು ಹೆಚ್ಚಾಗಿ ಸೇವಿಸುತ್ತಾರೆ. ಇದರಿಂದ ಬೇಸಿಗೆಯಲ್ಲಿ ಅತಿ ಹೆಚ್ಚು ಬಾಧಿಸುವ ನಿರ್ಜಲೀಕರಣ ಸಮಸ್ಯೆಯಿಂದ ಪರಿಹಾರ ಪಡೆಯಬಹುದು. ಇದರೊಂದಿಗೆ ಕಲ್ಲಂಗಡಿ ಹಣ್ಣು ವಿಟಮಿನ್ ಸಿ ಸಮೃದ್ದ ಹಣ್ಣಾಗಿದ್ದು, ಇದರ ಸೇವನೆಯಿಂದ ವಿಟಮಿನ್ ಸಿ ಕೊರತೆಯನ್ನು ನೀಗಿಸಬಹುದು. 


* ಸೀಬೆಹಣ್ಣು:
ಸೀಬೆ ಹಣ್ಣನ್ನು ಉದರ ಸಂಬಂಧಿತ ಕಾಯಿಲೆಗಳಿಗೆ ದಿವ್ಯೌಷಧ ಎಂದು ಪರಿಗಣಿಸಲಾಗಿದೆ. ಸೀಬೆ ಹಣ್ಣು ವಿಟಮಿನ್ ಸಿ ಯ ಸಮೃದ್ಧ ಮೂಲವಾಗಿದ್ದು, ಇದರ ಸೇವನೆಯಿಂದ ದೇಹಕ್ಕೆ ಹಲವು ರೀತಿಯಲ್ಲಿ ಪ್ರಯೋಜನಕಾರಿ ಆಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.