ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ ಆರೋಗ್ಯ ಕೆಡಿಸಿದಂತೆ

Unhealthy Breakfast To Avoid: ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ ಬೆಳಗಿನ ಉಪಾಹಾರದಲ್ಲಿ ನಾವು ಕೆಲವು ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು. ಯಾಕೆಂದರೆ ಈ ಆಹಾರಗಳು ನಮ್ಮ ಆರೋಗ್ಯವನ್ನು ಒಳಗಿನಿಂದಲೇ ಕೆಡಿಸಿ ಬಿಡುತ್ತವೆ.   

Written by - Ranjitha R K | Last Updated : Mar 27, 2023, 10:47 AM IST
  • ಬೆಳಗಿನ ಉಪಾಹಾರ ಬಹಳ ಮುಖ್ಯ.
  • ಉಪಾಹಾರದಲ್ಲಿ ಕೆಲವು ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು.
  • ಈ ಆಹಾರಗಳು ಆರೋಗ್ಯವನ್ನು ಕೆಡಿಸಿ ಬಿಡುತ್ತವೆ.
ಬೆಳಗಿನ ಉಪಹಾರಕ್ಕೆ ಈ ಆಹಾರ ಸೇವಿಸಿದರೆ ನಿಮ್ಮ ಕೈಯ್ಯಾರ  ಆರೋಗ್ಯ ಕೆಡಿಸಿದಂತೆ  title=

Unhealthy Breakfast To Avoid : ನಮ್ಮ ದಿನದ ಆರಂಭ ಎಷ್ಟು ಉತ್ತಮವಾಗಿರುತ್ತದೆಯೋ ನಮ್ಮ ದಿನ ಕೂಡಾ ಅಷ್ಟೇ ಸೊಗಸಾಗಿರುತ್ತದೆ. ಬೆಳಗಿನ ಉಪಾಹಾರದಲ್ಲಿ ನಾವು ಏನು ಸೇವಿಸುತ್ತೇವೆ ಎನ್ನುವುದು ಬಹಳ ಮುಖ್ಯ. ಬೆಳಗಿನ ಉಪಾಹಾರದಲ್ಲಿ, ನಾವು ಫೈಬರ್, ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬನ್ನು ನಮ್ಮ ಆಹಾರದಲ್ಲಿ ಸೇವಿಸಬೇಕು. ಪ್ರಸಿದ್ಧ ಆಹಾರ ತಜ್ಞ ಆಯುಷಿ ಯಾದವ್ ಪ್ರಕಾರ ಬೆಳಗಿನ ಉಪಾಹಾರದಲ್ಲಿ ನಾವು ಕೆಲವು ಪದಾರ್ಥಗಳನ್ನು ತಪ್ಪಿಯೂ ಸೇವಿಸಬಾರದು. ಯಾಕೆಂದರೆ ಈ ಆಹಾರಗಳು ನಮ್ಮ ಆರೋಗ್ಯವನ್ನು ಒಳಗಿನಿಂದಲೇ ಕೆಡಿಸಿ ಬಿಡುತ್ತವೆ. 

1. ಕಾಫಿ :
ಹಲವರಿಗೆ ಬೆಳಿಗ್ಗೆ ಎದ್ದ ಕೂಡಲೇ ಕಾಫಿ ಹೀರುವ ಅಭ್ಯಾಸವಿರುತ್ತದೆ. ಕಾಫಿ ಸೇವಿಸಿದ ನಂತರ ಸ್ವಲ್ಪ ಮಟ್ಟಿಗೆ ಉಲ್ಲಾಸ ಸಿಗಬಹುದು. ಆದರೆ ಕಾಫಿ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಕಾಫಿ ಕುಡಿಯುವುದು ಜೀರ್ಣಕ್ರಿಯೆಯ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಹೊಟ್ಟೆ ತುಂಬಿದಾಗ ಮಾತ್ರ ಕಾಫಿ ಕುಡಿಯುವುದು ಒಳ್ಳೆಯದು.

ಇದನ್ನೂ ಓದಿ : Yoga For Men's Health : ವಿವಾಹಿತ ಪುರುಷರೆ ನಿಮ್ಮ ಆರೋಗ್ಯಕ್ಕೆ ಪ್ರತಿದಿನ ಮಾಡಿ ಈ ಸುಲಭ ಯೋಗ!

2. ವೈಟ್ ಬ್ರೆಡ್ :
ಬೆಳಿಗ್ಗೆ ಆಫೀಸ್ ಗೆ ಹೋಗುವ ಆತುರದಲ್ಲಿ, ಕೆಲವರಿಗೆ ಟೀ, ಜಾಮ್ ಅಥವಾ ಬೆಣ್ಣೆಯೊಂದಿಗೆ ವೈಟ್ ಬ್ರೆಡ್ ತಿನ್ನುವ ಅಭ್ಯಾಸವಿರುತ್ತದೆ.  ವೈಟ್ ಬ್ರೆಡ್ ನಲ್ಲಿ ಪೋಷಕಾಂಶಗಳು ಕಡಿಮೆ ಇರುತ್ತದೆ. ಮಾತ್ರವಲ್ಲ ಅದರ ಸೇವನೆಯು ಜೀರ್ಣಕ್ರಿಯೆಯ ಮೇಲೆ ಕೂಡಾ ಕೆಟ್ಟ ಪರಿಣಾಮ ಬೀರುತ್ತದೆ. ಮಲ್ಟಿಗ್ರೇನ್ ಬ್ರೆಡ್ ಅನ್ನು ಬೆಳಗಿನ ಉಪಾಹಾರದ ಭಾಗವಾಗಿ ಸೇವಿಸಬಹುದು. 

3. ಪ್ಯಾಕೇಜ್ಡ್ ಫ್ರೂಟ್ ಜ್ಯೂಸ್  :
ಹಣ್ಣುಗಳು ಮತ್ತು ಅವುಗಳ ಜ್ಯೂಸ್ ಅನ್ನು ಬೆಳಿಗ್ಗೆ ಕುಡಿಯುವುದು ಯಾವಾಗಲೂ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ.  ಆದರೆ ಕೆಲವರು ಮಾರುಕಟ್ಟೆಯಲ್ಲಿ ಲಭ್ಯವಿರುವ ಪ್ಯಾಕ್ ಮಾಡಿದ ಹಣ್ಣಿನ ರಸವನ್ನು ಸೇವಿಸುತ್ತಾರೆ. ನಿಮಗೂ ಈ ಅಭ್ಯಾಸವಿದ್ದರೆ ಇಂದೇ ಬಿಟ್ಟುಬಿಡಿ. ಏಕೆಂದರೆ ಪ್ಯಾಕ್ ಮಾಡಿದ ಜ್ಯೂಸ್‌ಗಳಲ್ಲಿ ಹೆಚ್ಚಿನ ಪ್ರಮಾಣದ ಸಂರಕ್ಷಕಗಳು ಮತ್ತು ಸಕ್ಕರೆ ಇರುತ್ತದೆ. ಇದು ನಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ.

ಇದನ್ನೂ ಓದಿ : Water Intake : ಊಟ ಮಾಡುವಾಗ ನೀವು ನೀರು ಕುಡಿಯುತ್ತೀರಾ? ಹಾಗಿದ್ರೆ, ಎಚ್ಚರ..!

4. ಸಿರೆಲ್ಸ್ : 
ಕಳೆದ ಕೆಲವು ವರ್ಷಗಳಲ್ಲಿ, ಬೆಳಗಿನ ಉಪಾಹಾರದ ಸಮಯದಲ್ಲಿ ಸಿರೆಲ್ಸ್   ತಿನ್ನುವ ಪ್ರವೃತ್ತಿಯು ಬಹಳಷ್ಟು ಹೆಚ್ಚಾಗಿದೆ. ಆದರೆ ಅವುಗಳನ್ನು ಸಂಸ್ಕರಿಸಿ ತಯಾರಿಸುವುದರಿಂದ ಆರೋಗ್ಯಕ್ಕೆ ಒಳ್ಳೆಯದಲ್ಲ. ಅದರಲ್ಲಿ ಧಾನ್ಯದ ಪ್ರಮಾಣ ಬಹಳ ಕಡಿಮೆ ಮತ್ತು ಸಕ್ಕರೆಯ ಪ್ರಮಾಣ ಹೆಚ್ಚಾಗಿರುತ್ತದೆ. ಆದ್ದರಿಂದ, ಇದು ಮಧುಮೇಹ, ಬೊಜ್ಜು ಮತ್ತು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ.

5.  ಫ್ಲೇವರ್ಡ್ ಯೋಗರ್ಟ್ : 
ಇತ್ತೀಚಿನ ದಿನಗಳಲ್ಲಿ, ಬೆಳಗಿನ ಉಪಾಹಾರದಲ್ಲಿ ಮೊಸರಿನ ಬದಲಿಗೆ ಫ್ಲೇವರ್ಡ್ ಯೋಗರ್ಟ್ ತಿನ್ನುವ ಪ್ರವೃತ್ತಿ ಕೂಡಾ ಬಹಳಷ್ಟು ಹೆಚ್ಚಾಗಿದೆ.  ಆದರೆ ಈ ಆಹಾರ ಪದಾರ್ಥವು ಹೆಚ್ಚಿನ ಸಕ್ಕರೆ ಅಂಶವನ್ನು ಹೊಂದಿದ್ದು, ಅದು ನಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿಸುತ್ತದೆ. ಅದಕ್ಕಾಗಿಯೇ ಇದನ್ನು ಬೆಳಿಗ್ಗೆ ಸೇವಿಸಬೇಡಿ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News