Custard Apple Benefits: ಸಾಮಾನ್ಯವಾಗಿ ಸೀತಾಫಲ ಎಂತಲೇ ಪ್ರಸಿದ್ಧವಾಗಿರುವ ಚೆರಿಮೊಯಾ ಹಣ್ಣು ಹಸಿರು ಬಣ್ಣದ ಹೃದಯಾಕಾರದಲ್ಲಿ ಕಂಡು ಬರುತ್ತದೆ. ಮೂಲತಃ ದಕ್ಷಿಣ ಅಮೆರಿಕಾದ ಆಂಡಿಸ್ ಪರ್ವತಗಳಲ್ಲಿ ಹುಟ್ಟಿಕೊಂಡಿದೆ ಎಂದು ಭಾವಿಸಲಾಗಿರುವ ಈ ಹಣ್ಣನ್ನು ಸ್ಪೇನ್‌ನಲ್ಲಿ ಹೆಚ್ಚಾಗಿ ಬೆಳೆಯಲಾಗುತ್ತದೆ. ರುಚಿಯಲ್ಲಿ ಸಿಹಿಯಾಗಿರುವ ಸೀತಾಫಲ ಹಣ್ಣಿನಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ಕೂಡ ಅಡಕವಾಗಿವೆ. 


COMMERCIAL BREAK
SCROLL TO CONTINUE READING

ಫೈಬರ್, ಜೀವಸತ್ವಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿರುವ ಸೀತಾಫಲ ಹಣ್ಣಿನ ಸೇವನೆಯು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಸೀತಾಫಲ ಹಣ್ಣಿನ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳು ಲಭ್ಯವಿವೆ ಎಂದು ತಿಳಿಯೋಣ... 


ಸೀತಾಫಲ ತಿನ್ನುವುದರಿಂದ ಆರೋಗ್ಯಕ್ಕೆ ಸಿಗುವ ಪ್ರಯೋಜನಗಳು:- 
*  ಉತ್ಕರ್ಷಣ ನಿರೋಧಕ: 

ಫ್ಲೇವನಾಯ್ಡ್‌ಗಳು, ಕೌರೆನೊಯಿಕ್ ಆಮ್ಲ, ವಿಟಮಿನ್ ಸಿ ಮತ್ತು ಕ್ಯಾರೊಟಿನಾಯ್ಡ್‌ಗಳು ಸೇರಿದಂತೆ ವಿವಿಧ ಉತ್ಕರ್ಷಣ ನಿರೋಧಕ ಸಂಯುಕ್ತಗಳಲ್ಲಿ ಸಮೃದ್ಧವಾಗಿದೆ.  ಸೀತಾಫಲ ಸೇವನೆಯಿಂದ ಅದರಲ್ಲಿರುವ ಉತ್ಕರ್ಷಣ ನಿರೋಧಕಗಳು ಹೃದ್ರೋಗ, ಮಧುಮೇಹ ಮತ್ತು ಕ್ಯಾನ್ಸರ್ ನಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳ ವಿರುದ್ಧ ಹೋರಾಡಲು ತುಂಬಾ ಪ್ರಯೋಜನಕಾರಿಯಾಗಿದೆ. 


ಇದನ್ನೂ ಓದಿ- ಮಧುಮೇಹಿಗಳು ಚಳಿಗಾಲದಲ್ಲಿ ಈ ಐದು ಬಣ್ಣದ ಹಣ್ಣುಗಳನ್ನು ಸೇವಿಸಲೇ ಬೇಕು !


* ಕಣ್ಣಿನ ಆರೋಗ್ಯ: 
ಸೀತಾಫಲ ಹಣ್ಣಿನಲ್ಲಿ ಲುಟೀನ್‌ ಸಮೃದ್ಧವಾಗಿದೆ. ಇದು ಕಣ್ಣಿನಲ್ಲಿ ಕಂಡು ಬರುವ 
ಪ್ರಮುಖ ಕ್ಯಾರೊಟಿನಾಯ್ಡ್‌ಗಳಲ್ಲಿ ಒಂದಾಗಿದ್ದು ಲುಟೀನ್ ಬೆಳಕಿನ ಫಿಲ್ಟರ್ ಆಗಿ ಕಾರ್ಯನಿರ್ವಹಿಸುತ್ತದೆ. ಹಾಗಾಗಿ, ನಿಯಮಿತ ಸೀತಾಫಲ ಸೇವನೆಯು  ಕಣ್ಣಿನ ಪೊರೆಗಳಂತಹ ಕಣ್ಣಿನ ಕಾಯಿಲೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ.


* ಖಿನ್ನತೆ: 
ಸೀತಾಫಲ ವಿಟಮಿನ್ ಬಿ 6 ನ ಅತ್ಯುತ್ತಮ ಮೂಲವಾಗಿದೆ. ಮನಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುವ ಡೋಪಮೈನ್ ಮತ್ತು ಸಿರೊಟೋನಿನ್ ಸೇರಿದಂತೆ ನರಪ್ರೇಕ್ಷಕಗಳನ್ನು ರಚಿಸಲು B6 ಅವಶ್ಯಕವಾಗಿದ್ದು, ಖಿನ್ನತೆಯಂತಹ ಆರೋಗ್ಯ ಸಮಸ್ಯೆಗಳನ್ನು ಸುಧಾರಿಸುವಲ್ಲಿ ಇದು ಪ್ರಮುಖ ಪಾತ್ರ ವಹಿಸುತ್ತದೆ. 


* ಜೀರ್ಣಕಾರಿ: 
ಸೀತಾಫಲ ಫೈಬರ್‌ನಲ್ಲಿ ಅಧಿಕವಾಗಿದೆ. ಫೈಬರ್ ಉತ್ತಮ ಕರುಳಿನ ಬ್ಯಾಕ್ಟೀರಿಯಾವನ್ನು ಪೋಷಿಸುತ್ತದೆ. ಫೈಬರ್ ಜೀರ್ಣಕಾರಿ ಆರೋಗ್ಯವನ್ನು ವಿವಿಧ ರೀತಿಯಲ್ಲಿ ಉತ್ತೇಜಿಸುತ್ತದೆ. ಇದರಿಂದಾಗಿ, ಮಲಬದ್ಧತೆಯಂತಹ ಸಮಸ್ಯೆಯಿಂದಲೂ ರಕ್ಷಣೆ ಪಡೆಯಬಹುದು. 


ಇದನ್ನೂ ಓದಿ- ಒಂದು ಗ್ಲಾಸ್ ನೀರಿಗೆ ಒಂದು ಚಮಚ ಜೇನುತುಪ್ಪ… ಮಿಕ್ಸ್ ಮಾಡಿ ಕುಡಿದರೆ ಸಿಗುತ್ತೆ ಈ 5 ಅದ್ಭುತ ಪ್ರಯೋಜನ


* ರಕ್ತದೊತ್ತಡ: 
ಸೀತಾಫಲದಲ್ಲಿ  ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ನಂತಹ ಪೋಷಕಾಂಶಗಳು ಹೆಚ್ಚಾಗಿದ್ದು ಇದು ರಕ್ತದೊತ್ತಡದಂತಹ ಸಮಸ್ಯೆಗಳನ್ನು ನಿವಾರಿಸುವಲ್ಲಿ ಪ್ರಯೋಜನಕಾರಿಯಾಗಿದೆ. 


* ಕ್ಯಾನ್ಸರ್: 
ಸೀತಾಫಲ ಹಣ್ಣು ಎಪಿಕಾಟೆಚಿನ್, ಕ್ಯಾಟೆಚಿನ್ ಮತ್ತು ಎಪಿಗಲ್ಲೊಕಾಟೆಚಿನ್‌ನಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ. ಅಧ್ಯಯನಗಳ ಪ್ರಕಾರ, ಇದರ ಸೇವನೆಯು ಕ್ಯಾನ್ಸರ್ ಬೆಳವಣಿಗೆಯನ್ನು ತಡೆಯುವ ಸಾಮರ್ಥ್ಯವನ್ನು ಹೊಂದಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.