ಚಹಾದೊಂದಿಗೆ ಈ ಆಹಾರಗಳ ಸೇವನೆ ತುಂಬಾ ಅಪಾಯಕಾರಿ
ಚಹಾ ಭಾರತದ ಅತ್ಯಂತ ಜನಪ್ರಿಯ ಪಾನೀಯಗಳಲ್ಲಿ ಅಗ್ರಸ್ಥಾನವನ್ನು ಪಡೆಯುವ ಪಾನೀಯ. ಇದು ರುಚಿಕರ ಮಾತ್ರವಲ್ಲ, ಒಂದು ರೀತಿಯ ರಿಲಾಕ್ಸ್ ಭಾವನೆಯನ್ನು ಮೂಡಿಸುವ ಮ್ಯಾಜಿಕ್ ಡ್ರಿಂಕ್ ಕೂಡ ಹೌದು. ಕೆಲವರಿಗೆ ಚಹಾ ಜೊತೆಗೆ ಕರಿದ ಆಹಾರಗಳನ್ನು ಸೇವಿಸುವ ಅಭ್ಯಾಸವೂ ಇರುತ್ತದೆ. ಆದರೆ, ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದೇ ಎಂದು ಎಂದಾದರೂ ಯೋಚಿಸಿದ್ದೀರಾ...
Never consume these foods with Tea: ನೀವೂ ಚಹಾ ಪ್ರಿಯರೇ! ತುಂಬಾ ಆಯಾಸವಾದಾಗ ಒಂದು ಕಪ್ ಚಹಾ ನೀಡುವ ಆರಾಮದಾಯಕ ಅನುಭವ ಮತ್ತೊಂದಿಲ್ಲ. ಭಾರತದಲ್ಲಿ ಎಲ್ಲರೂ ಇಷ್ಟಪಡುವ ಜನಪ್ರಿಯ ಪಾನೀಯವೆಂದರೆ ಚಹಾ. ಅದರ ರುಚಿಕರವಾದ ಸುವಾಸನೆಯ ಹೊರತಾಗಿ, ಚಹಾವು ಅನೇಕ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ಮಾತ್ರವಲ್ಲ, ಚಹಾದೊಂದಿಗೆ ಕುರುಕಲು ತಿಂಡಿ ಅದರಲ್ಲೂ ಕರಿದ ಆಹಾರಗಳಾದ ಬಜ್ಜಿ, ಬೋಂಡ, ಪಕೋಡದಂತಹ ಆಹಾರಗಳನ್ನು ಸೇವಿಸುವ ರುಚಿ ಖಂಡಿತ ನಿಮಗೆ ಗೊತ್ತೇ ಇರುತ್ತದೆ. ಆದರೆ, ಚಹಾದೊಂದಿಗೆ ಈ ಆಹಾರಗಳ ಸೇವನೆ ಎಷ್ಟು ಆರೋಗ್ಯಕರ ಎಂದು ಎಂದಾದರೂ ಯೋಚಿಸಿದ್ದೀರಾ...
ವೈದ್ಯರ ಪ್ರಕಾರ, ಚಹಾದೊಂದಿಗೆ ಕೆಲವು ಆಹಾರಗಳ ಸೇವನೆ ನಿಮ್ಮ ಆರೋಗ್ಯಕ್ಕೆ ಹಾನಿಕಾರಕ ಎಂದು ಸಾಬೀತುಪಡಿಸಬಹುದು. ಹಾಗಿದ್ದರೆ, ಚಹಾದೊಂದಿಗೆ ಯಾವ ಆಹಾರಗಳನ್ನು ಸೇವಿಸಬಾರದು ಎಂದು ತಿಳಿಯೋಣ.
* ಕಬ್ಬಿಣ ಭರಿತ ಆಹಾರಗಳು:
ತಜ್ಞರ ಪ್ರಕಾರ, ಚಹಾ ಸೇವಿಸುವಾಗ ಅದರೊಟ್ಟಿಗೆ ಹಸಿರು ತರಕಾರಿಗಳು, ಮಸೂರಗಳು, ಧಾನ್ಯಗಳಂತಹ ಕಬ್ಬಿಣದ ಭರಿತ ಆಹಾರಗಳನ್ನು ಸೇವಿಸುವುದನ್ನು ತಪ್ಪಿಸಬೇಕು. ವಾಸ್ತವವಾಗಿ, ಚಹಾದಲ್ಲಿರುವ ಟ್ಯಾನಿನ್ ಮತ್ತು ಆಕ್ಸಲೇಟ್ ಕಬ್ಬಿಣಾಂಶವಿರುವ ಆಹಾರದಿಂದ ದೇಹವು ಕಬ್ಬಿಣವನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ.
ಇದನ್ನೂ ಓದಿ- ಶುಗರ್ ಲೆಸ್ ಟೀ ಇಷ್ಟವಿಲ್ಲವೇ! ಮಧುಮೇಹಿ ತುಂಬಾ ಪ್ರಯೋಜನಕಾರಿ ಈ ಸ್ಪೆಷಲ್ ಟೀ
* ನಿಂಬೆ:
ಎಲ್ಲರಿಗೂ ತಿಳಿದಿರುವಂತೆ ನಿಂಬೆಯಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ತೂಕ ನಷ್ಟಕ್ಕೆ ದಿವ್ಯೌಷಧವಾಗಿರುವ ನಿಂಬೆಯನ್ನು ಟೀ ಜೊತೆಗೆ ಅಪ್ಪಿತಪ್ಪಿಯೂ ಬಳಸಬಾರದು. ಹಾಲಿನ ಚಹಾಕ್ಕೆ ನಿಂಬೆ ಸೇರಿಸುವುದು ಅಪಾಯಕಾರಿ. ನಿಂಬೆಯೊಂದಿಗೆ ಬೆರೆಸಿದ ಚಹಾವನ್ನು ಕುಡಿಯುವುದು ಆಸಿಡ್ ರಿಫ್ಲಕ್ಸ್ನಂತಹ ಸಮಸ್ಯೆಗಳಿಗೆ ಕಾರಣವಾಗಬಹುದು.
* ಬಜ್ಜಿ, ಬೋಂಡ, ಪಕೋಡ:
ಚಹಾದೊಂದಿಗೆ ಬಜ್ಜಿ, ಬೋಂಡ, ಪಕೋಡದಂತಹ ಕರಿದ ಆಹಾರಗಳು ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ. ಆದರೆ, ಈ ಆಹಾರಗಳನ್ನು ಚಹಾದೊಂದಿಗೆ ಸೇವಿಸುವುದು ನಿಮ್ಮ ಆರೋಗ್ಯಕ್ಕೆ ಹಾನಿಯುಂಟು ಮಾಡಬಹುದು. ಆರೋಗ್ಯ ತಜ್ಞರ ಪ್ರಕಾರ, ಬೇಳೆ ಹಿಟ್ಟಿನ ಪೋಷಕಾಂಶಗಳು ರಕ್ತದಲ್ಲಿ ಹೀರಿಕೊಳ್ಳುವುದಿಲ್ಲ. ಮಾತ್ರವಲ್ಲ, ಇದು ಹೊಟ್ಟೆ ನೋವು, ಮಲಬದ್ಧತೆಯಂತಹ ಸಮಸ್ಯೆಗಳಿಗೂ ಕೂಡ ಕಾರಣವಾಗಬಹುದು.
ಇದನ್ನೂ ಓದಿ- ಮೊದಲು ಕೇವಲ ವಯಸ್ಸಾದವರಲ್ಲಿ ಕಾಣಿಸುತ್ತಿದ್ದ ಈ ಕಾಯಿಲೆ ಇದೀಗ ಹದಿಹರೆಯದವರಿಗೆ ಹೆಚ್ಚು ಕಾಡುತ್ತಿದೆ!
* ಐಸ್ ಕ್ರೀಮ್:
ಐಸ್ ಕ್ರೀಮ್ ನಂತಹ ತಣ್ಣನೆಯ ಆಹಾರವನ್ನು ಚಹಾದೊಂದಿಗೆ ಎಂದಿಗೂ ಸೇವಿಸಬಾರದು. ಇದು ಜೀರ್ಣಕಾರಿ ಸಮಸ್ಯೆಗಳನ್ನು ಉಂಟುಮಾಡಬಹುದು.
* ಅರಿಶಿನ:
ಆರೋಗ್ಯಕ್ಕೆ ಅರಿಶಿನ ತುಂಬಾ ಪ್ರಯೋಜನಕಾರಿ. ಆದರೆ, ಚಹಾದೊಂದಿಗೆ ಅರಿಶಿನವನ್ನು ಬೆರೆಸಬೇಡಿ. ಏಕೆಂದರೆ ಚಹಾದೊಂದಿಗೆ ಅರಿಶಿನವನ್ನು ಬೆರೆಸಿ ಸೇವಿಸುವುದರಿಂದ ಅಜೀರ್ಣ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆ ಉಂಟಾಗಬಹುದು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.