ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಕಹಿ ಜ್ಯೂಸ್- ತೂಕ ಇಳಿಕೆ ಜೊತೆಗೆ ಸಿಗುತ್ತೆ ಹಲವು ಅದ್ಭುತ ಲಾಭ

Bitter Gourd Juice: ರುಚಿಯಲ್ಲಿ ಕಹಿಯಾದರೂ ಕೂಡ ಹಾಗಲಕಾಯಿ ಆರೋಗ್ಯಕ್ಕೆ ಸಿಹಿ ನೀಡುವ ತರಕಾರಿಗಳಲ್ಲಿ ಒಂದು. ತೂಕ ಇಳಿಕೆಯಲ್ಲಿ ವರದಾನವಾಗಿರುವ ಹಾಗಲಕಾಯಿ ಜ್ಯೂಸ್ ಆರೋಗ್ಯಕ್ಕೆ ಇನ್ನೂ ಹಲವು ಅದ್ಭುತ ಪ್ರಯೋಜನಗಳನ್ನು ನೀಡುತ್ತದೆ. 

Written by - Yashaswini V | Last Updated : Mar 29, 2023, 12:04 PM IST
  • ಹಾಗಲಕಾಯಿ ಜ್ಯೂಸ್ನಲ್ಲಿ ಕಬ್ಬಿಣ , ಮೆಗ್ನೀಸಿಯಮ್ ಮತ್ತು ವಿಟಮಿನ್‌ನಿಂದ ಹಿಡಿದು ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ವರೆಗಿನ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ.
  • ಫೈಬರ್‌ನ ಅತ್ಯುತ್ತಮ ಮೂಲವಾಗಿರುವ ಹಾಗಲಕಾಯಿ ಜ್ಯೂಸ್, ಪಾಲಕ್‌ನ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ ಅನ್ನು ಸಹ ಹೊಂದಿದೆ.
  • ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ.
ನಿತ್ಯ ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸೇವಿಸಿ ಈ ಕಹಿ ಜ್ಯೂಸ್- ತೂಕ ಇಳಿಕೆ ಜೊತೆಗೆ ಸಿಗುತ್ತೆ ಹಲವು ಅದ್ಭುತ ಲಾಭ  title=
Bitter Gourd Juice Benefits

Bitter Gourd Juice Benefits: ನಮ್ಮಲ್ಲಿ ಬಹುತೇಕ ಮಂದಿ ಹಾಗಲಕಾಯಿ ಹೆಸರು ಕೇಳಿದರೆ ಸಾಕು ಮೂಗು ಮುರಿಯುತ್ತಾರೆ. ಇದಕ್ಕೆ ಮುಖ್ಯ ಕಾರಣ ಅದರ ರುಚಿ ಕಹಿ. ಆದರೆ, ಉತ್ತಮ ಆರೋಗ್ಯಕ್ಕೆ ಈ ಕಹಿ ಹಾಗಲಕಾಯಿಯ ಪ್ರಯೋಜನಗಳನ್ನು ತಿಳಿದರೆ ಖಂಡಿತವಾಗಿಯೂ ನೀವು ತಪ್ಪದೇ ಇದನ್ನು ಸೇವಿಸುತ್ತೀರಿ. ನಿಮಗೆ ಹಾಗಲಕಾಯಿಯನ್ನು ತರಕಾರಿ, ಪಲ್ಯದ ರೂಪದಲ್ಲಿ ಸೇವಿಸಲು ಇಷ್ಟವಿಲ್ಲದಿದ್ದರೆ ಅದನ್ನು ಜ್ಯೂಸ್ ರೂಪದಲ್ಲಿಯೂ ಸೇವಿಸಬಹುದು. 

ಹಾಗಲಕಾಯಿ ಜ್ಯೂಸ್ನಲ್ಲಿ ಕಬ್ಬಿಣ , ಮೆಗ್ನೀಸಿಯಮ್ ಮತ್ತು ವಿಟಮಿನ್‌ನಿಂದ ಹಿಡಿದು ಪೊಟ್ಯಾಸಿಯಮ್ ಮತ್ತು ವಿಟಮಿನ್ ಸಿ ವರೆಗಿನ ಪ್ರಮುಖ ಪೋಷಕಾಂಶಗಳಿಂದ ಸಮೃದ್ಧವಾಗಿರುತ್ತದೆ. ಫೈಬರ್‌ನ ಅತ್ಯುತ್ತಮ ಮೂಲವಾಗಿರುವ ಹಾಗಲಕಾಯಿ ಜ್ಯೂಸ್, ಪಾಲಕ್‌ನ ಎರಡು ಪಟ್ಟು ಹೆಚ್ಚು ಕ್ಯಾಲ್ಸಿಯಂ , ಬ್ರೊಕೊಲಿಯ ಬೀಟಾ-ಕ್ಯಾರೋಟಿನ್ ಅನ್ನು ಸಹ ಒಳಗೊಂಡಿದೆ. ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲಾ ಪ್ರಯೋಜನಗಳು ಲಭ್ಯವಾಗಲಿವೆ ಎಂದು ತಿಳಿಯಿರಿ. 

ಉತ್ತಮ ಆರೋಗ್ಯಕ್ಕೆ ವರದಾನವಿದ್ದಂತೆ ಹಾಗಲಕಾಯಿ ಜ್ಯೂಸ್: 
* ಮಧುಮೇಹಿಗಳಿಗೆ ದಿವ್ಯೌಷಧ:

ಹಾಗಲಕಾಯಿಯು ಪಾಲಿಪೆಪ್ಟೈಡ್-ಪಿ ಅಥವಾ ಪಿ-ಇನ್ಸುಲಿನ್ ಎಂಬ ಇನ್ಸುಲಿನ್ ತರಹದ ಸಂಯುಕ್ತವನ್ನು ಹೊಂದಿದೆ, ಇದು ಮಧುಮೇಹವನ್ನು ನೈಸರ್ಗಿಕವಾಗಿ ನಿಯಂತ್ರಿಸುತ್ತದೆ ಎಂದು ಅಧ್ಯಯನಗಳಿಂದ ತಿಳಿದುಬಂದಿದೆ. ಹಾಗಾಗಿಯೇ, ಮಧುಮೆಹಿಗಳಿಗೆ ತಮ್ಮ ಡಯಟ್ನಲ್ಲಿ ಹಾಗಲಕಾಯಿಯನ್ನು ಸೇವಿಸಲು ಸಲಹೆ ನೀಡಲಾಗುತ್ತದೆ. 

ಇದನ್ನೂ ಓದಿ- ವಿಟಮಿನ್ ಸಿ ಕೊರತೆಯನ್ನು ನೀಗಿಸಲು ಬೇಸಿಗೆಯಲ್ಲಿ ಈ ಆಹಾರಗಳನ್ನು ತಪ್ಪದೇ ಸೇವಿಸಿ

* ತೂಕ ಇಳಿಕೆ:
ಹಾಗಲಕಾಯಿಯಲ್ಲಿ ಕಡಿಮೆ ಕ್ಯಾಲೋರಿಗಳು , ಕೊಬ್ಬು ಮತ್ತು ಕಾರ್ಬೋಹೈಡ್ರೇಟ್‌ಗಳಿವೆ . ಹಾಗಾಗಿಯೇ ಹಾಗಲಕಾಯಿ ಜ್ಯೂಸ್ ತೂಕ ಇಳಿಸುವವರಿಗೂ ಕೂಡ ಅತ್ಯುತ್ತಮ ಆಹಾರ ಎಂದು ಪರಿಗಣಿಸಲಾಗುತ್ತದೆ. ಅದರಲ್ಲೂ ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ಇದು ಹಸಿವನ್ನು ನಿಯಂತ್ರಿಸುವ ಗುಣಗಳನ್ನು ಹೊಂದಿದೆ. ಇದರಿಂದಾಗಿ ನೀವು ದೀರ್ಘಕಾಲ ಹಸಿವಿನಿಂದ ಅನುಭವಿಸುವುದಿಲ್ಲ, ಜೊತೆಗೆ ತೂಕ ಇಳಿಕೆಗೂ ಸಹಾಯಕವಾಗಿದೆ. 

* ರೋಗನಿರೋಧಕ ಶಕ್ತಿ ವೃದ್ಧಿ:
ಹಾಗಲಕಾಯಿ ಜ್ಯೂಸ್  ವೈರಸ್ ಮತ್ತು ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡುತ್ತದೆ ಮತ್ತು ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ . ಇದು ಅಲರ್ಜಿ ಮತ್ತು ಅಜೀರ್ಣವನ್ನು ತಡೆಯುತ್ತದೆ. ಉತ್ಕರ್ಷಣ ನಿರೋಧಕಗಳು ಅನಾರೋಗ್ಯದ ವಿರುದ್ಧ ಶಕ್ತಿಯುತ ರಕ್ಷಣಾ ಕಾರ್ಯವಿಧಾನಗಳಾಗಿ ಕಾರ್ಯನಿರ್ವಹಿಸುತ್ತವೆ. 

* ಕಣ್ಣುಗಳಿಗೆ ವರದಾನ:
ಹಾಗಲಕಾಯಿಯನ್ನು  ಕಣ್ಣಿನ ಪೊರೆಗಳಂತಹ ದೃಷ್ಟಿ-ಸಂಬಂಧಿತ ಸಮಸ್ಯೆಗಳನ್ನು ತಡೆಯಲು ಬಹಳ ಪ್ರಯೋಜನಕಾರಿ ಎಂದು ಹೇಳಲಾಗುತ್ತದೆ. ಇದು ಬೀಟಾ-ಕ್ಯಾರೋಟಿನ್ ಮತ್ತು ವಿಟಮಿನ್ ಎ ನಂತಹ ಸಂಯುಕ್ತಗಳನ್ನು ಹೊಂದಿರುವುದರಿಂದ ನಿಮ್ಮ ಕಣ್ಣುಗಳಿಗೆ ಆರೋಗ್ಯಕರವಾಗಿದ್ದು, ದೃಷ್ಟಿಯನ್ನು ಬಲಪಡಿಸುತ್ತದೆ. 

ಇದನ್ನೂ ಓದಿ- ಈ ಹಣ್ಣುಗಳನ್ನು ತಿಂದ ನಂತರ ನೀರು ಕುಡಿಯಲೇ ಬಾರದು! ಇಲ್ಲವಾದರೆ ಆಸ್ಪತ್ರೆಗೆ ಅಲೆದಾಡಬೇಕಾಗಿ ಬರಬಹುದು 

* ಕೊಲೆಸ್ಟ್ರಾಲ್ ನಿಯಂತ್ರಣ:
ತಜ್ಞರ ಪ್ರಕಾರ, ಖಾಲಿ ಹೊಟ್ಟೆಯಲ್ಲಿ ಹಾಗಲಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ನಿಯಂತ್ರಿಸಬಹುದಾಗಿದೆ. 

* ಕಾಂತಿಯುತ ಕೂದಲು:
ಹಾಗಲಕಾಯಿಯ ರಸವನ್ನು ನಿಯಮಿತವಾಗಿ ನಿಮ್ಮ ನೆತ್ತಿಗೆ ಹಚ್ಚುವುದರಿಂದ ಕೂದಲು ಉದುರುವಿಕೆ ಮತ್ತು ಕೂದಲು ಬಿಳಿಯಾಗುವುದನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ, ಇದು ತಲೆ ಹೊಟ್ಟು, ತುರಿಕೆಯನ್ನು ಕೂಡ ನಿವಾರಿಸಬಲ್ಲ ಶಕ್ತಿಯನ್ನು ಹೊಂದಿದೆ. 

ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಇದನ್ನು Zee ಮೀಡಿಯಾ ಖಚಿತಪಡಿಸುವುದಿಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News