ನವದೆಹಲಿ: ಕೇಂದ್ರದ ಪ್ರಧಾನಿ ಮೋದಿ ನೇತೃತ್ವದ ಸರ್ಕಾರ (Modi Government) ದೊಡ್ಡ ಯೋಜನೆ ರೂಪಿಸುತ್ತಿದ್ದು, ಇದರಿಂದ ನೌಕರರ ರಾಜ್ಯ ವಿಮಾ ನಿಗಮ (ESIC) ಮತ್ತು ಆಯುಷ್ಮಾನ್ ಭಾರತ್ ಯೋಜನೆ ಎರಡರ ಫಲಾನುಭವಿಗಳಿಗೆ ಲಾಭವಾಗಲಿದೆ. ಇದರ ಅಡಿಯಲ್ಲಿ ಇಎಸ್ಐಸಿಯ ಫಲಾನುಭವಿಗಳು ಆಯುಷ್ಮಾನ್ ಭಾರತ್ ಅಥವಾ ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆ ಅಡಿಯಲ್ಲಿ ಲಭ್ಯವಿರುವ ಸೌಲಭ್ಯಗಳ ಲಾಭವನ್ನು ಪಡೆಯಲು ಸಾಧ್ಯವಾಗಲಿದೆ. ಅಂತೆಯೇ, ಆಯುಷ್ಮಾನ್ ಭಾರತದ ಫಲಾನುಭವಿಗಳು ಇಎಸ್ಐಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಸಾಧ್ಯವಾಗಲಿದೆ. ಇಎಸ್ಐಸಿಯ ಹೆಚ್ಚಿನ ಆಸ್ಪತ್ರೆಗಳು ಚಿಕಿತ್ಸೆಯಲ್ಲಿಲ್ಲ. ಎರಡೂ ಆರೋಗ್ಯ ಯೋಜನೆಗಳ ವಿಲೀನದಿಂದ ದೇಶದ ಕೋಟ್ಯಂತರ ಜನರಿಗೆ ಪ್ರಯೋಜನವಾಗಲಿದೆ.


COMMERCIAL BREAK
SCROLL TO CONTINUE READING

ಇದನ್ನು ಓದಿ- ಶೀಘ್ರದಲ್ಲಿಯೇ 65 ಲಕ್ಷ ಪೆನ್ಷನ್ ಧಾರಕರಿಗೆ ಸಿಗಲಿದೆ Modi Govt ನೀಡಲಿದೆಯೇ ಈ ಗಿಫ್ಟ್


ಇಎಸ್ಐಸಿ ಪ್ರಸ್ತುತ ಸುಮಾರು 13.5 ಕೋಟಿ ಫಲಾನುಭವಿಗಳನ್ನು ಹೊಂದಿದೆ. ಇವರೆಲ್ಲರೂ ಸರ್ಕಾರದ ಈ ಕ್ರಮದಿಂದ ಪ್ರಯೋಜನ ಪಡೆಯಲಿದ್ದಾರೆ. ಆಯುಷ್ಮಾನ್ ಭಾರತ್ ಅಡಿಯಲ್ಲಿ ನೋಂದಾಯಿತ ಆಸ್ಪತ್ರೆಗಳಲ್ಲಿ ಅವರು ಆರೋಗ್ಯ ಸೌಲಭ್ಯಗಳನ್ನು ಬಳಸಲು ಸಾಧ್ಯವಾಗಲಿದೆ. ಇದೇ ವೇಳೆ ಆಯುಷ್ಮಾನ್ ಭಾರತ್ ವ್ಯಾಪ್ತಿಗೆ ಬರುವ ಜನರು ಇಎಸ್ಐಸಿಯ 15 ಆಸ್ಪತ್ರೆಗಳಲ್ಲಿ ಆರೋಗ್ಯ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗಲ್ದಿದೆ. ಈ ಆಸ್ಪತ್ರೆಗಳಲ್ಲಿ ಆಕ್ಯುಪೆನ್ಸಿ ದರ ತುಂಬಾ ಕಡಿಮೆಯಾಗಿರುವುದು ಇಲ್ಲಿ ಗಮನಾರ್ಹ.


ಈ ಪ್ರಕ್ರಿಯೆಯು ಮೊದಲು ದೇಶದ 102 ಜಿಲ್ಲೆಗಳಿಂದ ಪ್ರಾರಂಭವಾಗಲಿದೆ. ಅಲ್ಲಿನ ಸುಮಾರು 1.2 ಲಕ್ಷ ಇಎಸ್ಐಸಿ ಚಂದಾದಾರರಿಗೆ ಇದರ ಲಾಭ ಸಿಗಲಿದೆ. ಮೊದಲ ಹಂತದ ಯಶಸ್ಸಿನ ನಂತರ ಈ ಯೋಜನೆಯನ್ನು ದೇಶಾದ್ಯಂತ ಜಾರಿಗೆ ತರಲಾಗುವುದು. ಪ್ರಸ್ತುತ ಆಯುಷ್ಮಾನ್ ಭಾರತ ಯೋಜನೆಯ  ಒಂದು ಕೋಟಿ ಫಲಾನುಭವಿಗಳು ಇದ್ದಾರೆ. ಆದರೆ, ಈ ಯೋಜನೆಗೆ ಜನಸಂಖ್ಯೆಯ ಶೇ.40 ರಷ್ಟು ಜನರನ್ನು ಸೇರಿಸಲು ಉದ್ದೇಶಿಸಲಾಗಿದೆ.


ಇದನ್ನು ಓದಿ- ಮೋದಿ ಸರ್ಕಾರ ರೈತರಿಗೆ ನೀಡುತ್ತಿದೆ 2000 ರೂಪಾಯಿ, ಅದಕ್ಕಾಗಿ ಈ ರೀತಿ ಅಪ್ಲೈ ಮಾಡಿ


ಪ್ರಧಾನ್ ಮಂತ್ರಿ ಜನ ಆರೋಗ್ಯ ಯೋಜನೆಯ ಫಲಾನುಭವಿಗಳಿಗೆ ಕಡಿಮೆ ಬಳಕೆಯಾಗುವ ಇಎಸ್ಐಸಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲು ಸರ್ಕಾರ ಅನುಮೋದನೆ ನೀಡಿದೆ. ಅವರನ್ನು 'ಇತರ ಫಲಾನುಭವಿಗಳು' ಪಟ್ಟಿಗೆ ಸೇರಿಸಲಾಗುವುದು ಎಂದು ಸರ್ಕಾರ ಹೇಳಿದೆ. ಕಳೆದ ಎರಡು ಹಣಕಾಸು ವರ್ಷಗಳಲ್ಲಿ ಇಎಸ್ಐಸಿ ಆಸ್ಪತ್ರೆಗಳಲ್ಲಿ ಬೆಡ್ ಆಕ್ಯುಪೆನ್ಸೀ ಶೇ.60 ಕ್ಕಿಂತ ಕಡಿಮೆಯಾಗಿದೆ.


ಇಎಸ್ಐಸಿ ಈ ಪ್ರಸ್ತಾಪದ ಬಗ್ಗೆ ತಮ್ಮ ಅಭಿಪ್ರಾಯವನ್ನು 30 ದಿನಗಳಲ್ಲಿ ತಿಳಿಸುವಂತೆ ಹಿತೈಷಿಗಳನ್ನು ಸರ್ಕಾರ ಕೇಳಿದೆ. ಇದರ ನಂತರ ಜನ ಆರೋಗ್ಯ ಯೋಜನೆ ಅಡಿಯಲ್ಲಿ ದರಗಳನ್ನು ನಿಗದಿಪಡಿಸಲಾಗುವುದು ಎಂದು ಸರ್ಕಾರ ಹೇಳಿದೆ.


ಇದನ್ನು ಓದಿ- ಸರ್ಕಾರಿ ನೌಕರರಿಗೆ ನೆಮ್ಮದಿಯ ಸುದ್ದಿ ನೀಡಿದ Modi Govt


ಆಯುಷ್ಮಾನ್ ಭಾರತ್ ಪ್ರಧಾನ ಮಂತ್ರಿ  ಜನ ಆರೋಗ್ಯ ಯೋಜನೆ (ABPM-JY) ಸರ್ಕಾರದ ರಾಷ್ಟ್ರೀಯ ಆರೋಗ್ಯ ನೀತಿಯ ಒಂದು ಭಾಗವಾಗಿದೆ. ಇದರ ಅಡಿಯಲ್ಲಿ ಜನರಿಗೆ ಉಚಿತ ಆರೋಗ್ಯ ರಕ್ಷಣೆ ನೀಡಲಾಗುತ್ತದೆ. ಯೋಜನೆಯಡಿ ಫಲಾನುಭವಿಗಳಿಗೆ 5 ಲಕ್ಷ ರೂ. ಕವರ್ ಸಿಗುತ್ತದೆ. ಇಲ್ಲಿಯವರೆಗೆ 1 ಕೋಟಿ ಜನರು ಇದರ ಲಾಭವನ್ನು ಪಡೆದುಕೊಂಡಿದ್ದಾರೆ. ಇದು1,000 ಕ್ಕೂ ಅಧಿಕ ವೈದ್ಯಕೀಯ ಪದ್ಧತಿಗಳನ್ನು ಒಳಗೊಂಡಿದೆ.


ಇನ್ನೊಂದೆಡೆ 10 ಅಥವಾ ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳು ಕೆಲಸ ಮಾಡುವ ಎಲ್ಲಾ ಕಾರ್ಖಾನೆಗಳು ಮತ್ತು ಸಂಸ್ಥೆಗಳ ನೌಕರರಿಗೆ ಇಎಸ್ಐ ಯೋಜನೆ ಅನ್ವಯಿಸುತ್ತದೆ ಮತ್ತು ಅವರ ಮಾಸಿಕ ವೇತನವು 21,000 ವರೆಗೆ ಇರುತ್ತದೆ. ಈ ಯೋಜನೆಯಲ್ಲಿ 13.3 ಕೋಟಿ ಫಲಾನುಭವಿಗಳಿದ್ದಾರೆ (ನೌಕರರು ಮತ್ತು ಅವರ ಕುಟುಂಬಗಳು ಸೇರಿದಂತೆ).