Face Pack During Periods: ಪೀರಿಯಡ್ಸ್ ಸಮಯದಲ್ಲಿ ಚರ್ಮವು ತುಂಬಾ ನಿರ್ಜೀವವಾಗಿ ಕಾಣಿಸುತ್ತದೆ. ಅಂದರೆ ಸಾಮಾನ್ಯ ದಿನಗಳಿಗಿಂತ ಮುಟ್ಟಿನ ಸಮಯದಲ್ಲಿ ಚರ್ಮವು ಡಲ್  ಆದಂತೆ ಕಾಣುತ್ತದೆ. ಇದಲ್ಲದೆ ಪೀರಿಯಡ್ಸ್ ವೇಳೆ ದೇಹದಲ್ಲಿ ಅನೇಕ ಬದಲಾವಣೆಗಳು ಕಂಡುಬರುತ್ತವೆ. ಋತುಚಕ್ರಕ್ಕೂ ಕೆಲವು ದಿನಗಳ ಮೊದಲು, ಮುಖದ ಮೇಲೆ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ.  ಅಂತಹ ಪರಿಸ್ಥಿತಿಯಲ್ಲಿ, ಹೊಳೆಯುವ ಚರ್ಮವನ್ನು ಪಡೆಯಲು ನೀವು ಕೆಲವು ಫೇಸ್ ಪ್ಯಾಕ್‌ಗಳನ್ನು (Face Pack During Periods) ಬಳಸಬಹುದು. ಈ ಫೇಸ್ ಪ್ಯಾಕ್‌ ಅನ್ನು ನೀವು ಹೊರಗಡೆಯಿಂದ ತರುವ ಅಗತ್ಯವಿಲ್ಲ. ಬದಲಿಗೆ ಮನೆಯಲ್ಲಿಯೇ ತಯಾರಿಸಬಹುದು.


COMMERCIAL BREAK
SCROLL TO CONTINUE READING

ಮುಟ್ಟಿನ ವೇಳೆ ಈ ಫೇಸ್ ಪ್ಯಾಕ್ ಅನ್ನು ಪ್ರಯತ್ನಿಸಿ :
ಫೇಸ್ ಪ್ಯಾಕ್ ತಯಾರಿಸಲು ಬೇಕಾಗುವ ಸಾಮಾಗ್ರಿಗಳು-

* ಸೌತೆಕಾಯಿ-1
* ಶ್ರೀಗಂಧದ ಪುಡಿ - 1 ಚಮಚ
* ರೋಸ್ ವಾಟರ್- 2 ಚಮಚ


ಇದನ್ನೂ ಓದಿ- Homemade Face Pack: ಎಣ್ಣೆಯುಕ್ತ ಮುಖದ ತ್ವಚೆಗೆ ಇಲ್ಲಿದೆ ಒಂದು ಅದ್ಭುತ Face Pack


ಫೇಸ್ ಪ್ಯಾಕ್ ತಯಾರಿಸುವ ವಿಧಾನ:
>> ಮೊದಲಿಗೆ ಸೌತೆಕಾಯಿಯ ಸಿಪ್ಪೆ ತೆಗೆದು ಅದನ್ನು ತುಂಡುಗಳಾಗಿ ಕತ್ತರಿಸಿ ರುಬ್ಬಿಕೊಳ್ಳಿ 


>>  ರುಬ್ಬಿಕೊಂಡ ಸೌತೆಕಾಯಿ ಪೇಸ್ಟ್ ಜೊತೆಗೆ ಶ್ರೀಗಂಧದ ಪುಡಿ ಮತ್ತು ರೋಸ್ ವಾಟರ್ ಮಿಶ್ರಣ ಮಾಡಿ.


>> ಈಗ ಫೇಸ್ ಪ್ಯಾಕ್ (Face Pack) ಬಳಸಲು ಸಿದ್ಧವಾಗಿದೆ.


ಇದನ್ನೂ ಓದಿ - Banana Peel Face Pack: ಮುಖದಲ್ಲಿನ ಕಲೆ ನಿವಾರಣೆಗೆ ಬಳಸಿ ಬಾಳೆಹಣ್ಣಿನ ಫೇಸ್ ಪ್ಯಾಕ್


ಫೇಸ್ ಪ್ಯಾಕ್ ಬಳಸುವ ವಿಧಾನ:
- ಇದನ್ನು ಅನ್ವಯಿಸಲು ಮೊದಲು ಕ್ಲೆನ್ಸರ್ ಮೂಲಕ ಮುಖವನ್ನು ಚೆನ್ನಾಗಿ ಸ್ವಚ್ಛಗೊಳಿಸಿ.


- ಬಳಿಕ ಪ್ಯಾಕ್ ಅನ್ನು ಮುಖಕ್ಕೆ (Face) ಹಚ್ಚಿ.


- ಈ ಪ್ಯಾಕ್ ಅನ್ನು ಮುಖಕ್ಕೆ ಹಚ್ಚಿದ ಬಳಿಕ ಕನಿಷ್ಠ 15 ನಿಮಿಷಗಳ ಕಾಲ ಒಣಗಲು ಬಿಡಿ.


- ಫೇಸ್ ಪ್ಯಾಕ್ ಸ್ವಲ್ಪ ಒಣಗಲು ಪ್ರಾರಂಭಿಸಿದಾಗ, ಅದನ್ನು ಲಘು ಕೈಗಳಿಂದ ಮಸಾಜ್ ಮಾಡುವ ಮೂಲಕ ಸ್ವಚ್ಛಗೊಳಿಸಿ.


ಮುಟ್ಟಿನ ಸಂದರ್ಭದಲ್ಲಿ ಈ ರೀತಿಯ ಫೇಸ್ ಪ್ಯಾಕ್ ಅನ್ನು ಬಳಸುವುದರಿಂದ ಕಾಂತಿಯುತ ತ್ವಚೆ ನಿಮ್ಮದಾಗುತ್ತದೆ.


(ಹಕ್ಕುತ್ಯಾಗ: ಲೇಖನದಲ್ಲಿ ನೀಡಿರುವ ಸಲಹೆಯು ಸಾಮಾನ್ಯ ಮಾಹಿತಿ ಮಾತ್ರ. ಇದು ತಜ್ಞರ ಅಭಿಪ್ರಾಯವಲ್ಲ.)


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.