Glowing skin : ಹೊಳೆಯುವ ತ್ವಚೆಗಾಗಿ ಸೋಯಾಬಿನ್ ಫೇಸ್ ಪ್ಯಾಕ್ …

ಮುಖದ ಸೌಂದರ್ಯ ಹೆಚ್ಚಿಸಲು ಅಥವಾ ಚರ್ಮದ ಕಾಂತಿ ಹೆಚ್ಚಿಸಲು ನಾನಾ  ರೀತಿಯ ಫೇಸ್ ಪ್ಯಾಕ್ ಗಳನ್ನು ಬಳಸುವವರಿದ್ದಾರೆ.  ಮಾರುಕಟ್ಟೆಯಲ್ಲಿ ಸಿಗುವ ಪ್ರಾಡೆಕ್ಟ್ ಗಳು ಬಹಳ ದುಬಾರಿಯಾಗಿರುತ್ತವೆ.

Written by - Ranjitha R K | Last Updated : Feb 28, 2021, 05:58 PM IST
  • ಸ್ಕಿನ್ ಕೇರ್ ಗಾಗಿ ಮಾರುಕಟ್ಟೆಯಲ್ಲೂ ನಾನಾ ಬಗೆಯ ಪ್ರಾಡೆಕ್ಟ್ ಗಳು ಸಿಗುತ್ತವೆ.
  • ಆದರೆ ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪ್ಯಾಕ್ ನ ಮಾಹಿತಿ ಇಲ್ಲಿದೆ
  • ಸೋಯಾಬಿನ್ ಫೇಸ್ ಪ್ಯಾಕ್ ಚರ್ಮದ ಅನೇಕ ಸಮಸ್ಯೆಗಳಿಗೆ ರಾಮಬಾಣ
Glowing skin : ಹೊಳೆಯುವ ತ್ವಚೆಗಾಗಿ ಸೋಯಾಬಿನ್ ಫೇಸ್ ಪ್ಯಾಕ್ … title=
ಸೋಯಾಬಿನ್ ಫೇಸ್ ಪ್ಯಾಕ್ ಚರ್ಮದ ಅನೇಕ ಸಮಸ್ಯೆಗಳಿಗೆ ರಾಮಬಾಣ (file photo)

ಬೆಂಗಳೂರು: ಮುಖದ ಸೌಂದರ್ಯ ಹೆಚ್ಚಿಸಲು ಅಥವಾ ಚರ್ಮದ ಕಾಂತಿ ಹೆಚ್ಚಿಸಲು ನಾನಾ  ರೀತಿಯ ಫೇಸ್ ಪ್ಯಾಕ್ ಗಳನ್ನು (Face pack) ಬಳಸುವವರಿದ್ದಾರೆ.  ಸ್ಕಿನ್ ಕೇರ್ ಗಾಗಿ ಮಾರುಕಟ್ಟೆಯಲ್ಲೂ ನಾನಾ ಬಗೆಯ ಪ್ರಾಡೆಕ್ಟ್ ಗಳು ಸಿಗುತ್ತವೆ.  ಆದರೆ ಮಾರುಕಟ್ಟೆಯಲ್ಲಿ ಸಿಗುವ ಪ್ರಾಡೆಕ್ಟ್ ಗಳು ಬಹಳ ದುಬಾರಿಯಾಗಿರುತ್ತವೆ. ನಾವಿಲ್ಲಿ ಹೇಳುತ್ತಿರುವುದು ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಫೇಸ್ ಪ್ಯಾಕ್ ಬಗ್ಗೆ. ಹೌದು, ಇದರಲ್ಲಿ ಕೆಮಿಕಲ್ ಬೆರೆತಿರಬಹುದೇ ಎಂಬ ಭಯವೂ ಇರುವುದಿಲ್ಲ, ನಿಮ್ಮ ಬಜೆಟ್ ನಲ್ಲೂ ಇರುತ್ತದೆ.  ಆ ಪ್ಯಾಕ್ ಯಾವುದು ಅಂದರೆ  ಸೋಯಾಬಿನ್ ಫೇಸ್ ಪ್ಯಾಕ್(Soybean face mask). 

ಸೋಯಾಬೀನ್ ಪ್ರೋಟೀನ್‌ನ ಉತ್ತಮ ಮೂಲ : 
ಸೋಯಾಬೀನ್ (Soybean) ಅನ್ನು ಪ್ರೋಟೀನ್‌ನ ಉತ್ತಮ ಮೂಲವೆಂದು ಪರಿಗಣಿಸಲಾಗುತ್ತದೆ,. ಸೌಂದರ್ಯವನ್ನು ಹೆಚ್ಚಿಸಲು ಸೋಯಾಬೀನ್ ಸಹಾಯ ಮಾಡುತ್ತದೆ. ಸೋಯಾಬೀನ್ ನಲ್ಲಿ ವಿಟಮಿನ್ ಇ ಮತ್ತು ವಿಟಮಿನ್ ಎ ಜೊತೆಗೆ ಸಾಕಷ್ಟು ಮಿನರಲ್ಸ್ ಇರುತ್ತದೆ. ಹಾಹಾಗಿ ಇದು ಚರ್ಮದ ರೋಗ್ಯಕ್ಕೆ (Skin disease) ಬಹಳ  ಪ್ರಯೋಜನಕಾರಿ.

ಇದನ್ನೂ ಓದಿ : Shilpa Shetty Beauty Secrets: ಸದಾ ಯಂಗ್ ಆಗಿ ಕಾಣಲು ಇಲ್ಲಿದೆ ಸಿಂಪಲ್ ಟಿಪ್ಸ್

ಎಣ್ಣೆಯುಕ್ತ ಚರ್ಮದ ಸಮಸ್ಯೆಗ ಪರಿಹಾರ : 
ಎಣ್ಣೆಯುಕ್ತ ಚರ್ಮದ (oily skin) ಸಮಸ್ಯೆ ಹೆಚ್ಚಿನ ಹುಡುಗಿಯರಲ್ಲಿ ಕಂಡುಬರುತ್ತದೆ.  ಬೇಸಿಗೆಯಲ್ಲಂತೂ (Summer) ಈ ಸಮಸ್ಯೆ ಹೇಳತೀರದು.  ಎಣ್ಣೆಯುಕ್ತ ಅಥವಾ ಆಯಿಲಿ ಸ್ಕಿನ್ ಇರುವವರು ಸೋಯಾಬೀನ್ ತಿನ್ನುವುದು ಮತ್ತು ಅದರ ಫೇಸ್ ಪ್ಯಾಕ್ ಹಚ್ಚುವುದರಿಂದ  ಸಮಸ್ಯೆಯನ್ನು ಬಹಳ ಬೇಗನೆ ನಿವಾರಿಸಬಹುದು.

ಸ್ಕಿನ್ ಟೈಟ್ನಿಂಗ್ ಗೆ : 
ಸ್ಕಿನ್ ಟೈಟ್ನಿಂಗ್ ಗೆ ಸೋಯಾಬೀನ್ ತುಂಬಾ ಪ್ರಯೋಜನಕಾರಿ. ದಾಳಿಂಬೆ ಬೀಜ ಮತ್ತು  ಸೋಯಾಬೀನ್‌ ಅನ್ನು ಪುಡಿಮಾಡಿ ಅರಿಶಿನ (Turmeric) ಬೆರೆಸಿ ಮುಖಕ್ಕೆ ಹಚ್ಚುವುದರಿಂದ ಚರ್ಮ ಬಿಗಿಯಾಗುತ್ತದೆ. ಅಲ್ಲದೆ, ಮುಖದ ಟೋನ್ ಕೂಡ ಹೆಚ್ಚಾಗುತ್ತದೆ.  

ಇದನ್ನೂ ಓದಿ : Dio, Perfume ಬಳಸುವ ಮೊದಲು ಅದು ಆರೋಗ್ಯಕ್ಕೆ ಎಷ್ಟು ಹಾನಿಕಾರಕ ಎಂದು ತಿಳಿಯಿರಿ

ಮುಖದಿಂದ ಕಲೆಗಳನ್ನು ತೆಗೆದುಹಾಕುತ್ತದೆ : 
ಮುಖದ ಮೇಲಿನ ಕಲೆಗಳು ಮುಖದ ಸೌಂದರ್ಯವನ್ನು ಕೆಡಿಸುತ್ತದೆ. ಸೋಯಾಬೀನ್ ನಿಂದ ಮಾಡಿದ ಫೇಸ್ ಪ್ಯಾಕ್ ಕಲೆಗಳನ್ನು ತೆಗೆದುಹಾಕುತ್ತದೆ. ಇದಕ್ಕಾಗಿ, ಸೋಯಾಬೀನ್  ಜೊತೆಗೆ ಮೊಸರು (curd) ಮತ್ತು ನಿಂಬೆ (lemon) ಹಾಕಿ ಪ್ಯಾಕ್ ತಯಾರಿಸಿ. ಈ ಪ್ಯಾಕ್ ಚರ್ಮದ ಡೆಡ್ ಸೆಲ್ ಗಳನ್ನು ತೆಗೆದು ಹಾಕುತ್ತದೆ. ಈ ಪ್ಯಾಕನ್ನು ಹಚ್ಚಿ 10 ನಿಮಿಷಗಳ ನಂತರ ಮುಖವನ್ನು ತೊಳೆಯಿರಿ. ಕಲೆಗಳನ್ನು ಹೋಗಲಾಡಿಸಿ ಕಾಂತಿಯುತ ತ್ವಚೆ ಪಡೆಯಲು ಸಹಕಾರಿಯಾಗುತ್ತದೆ.

ಸೋಯಾಬೀನ್ ಫೇಸ್ ಪ್ಯಾಕ್ ನ ಪ್ರಯೋಜನಗಳು :
ಸೋಯಾಬೀನ್ ಚರ್ಮ ರೋಗಗಳನ್ನು ಹೋಗಲಾಡಿಸುವಲ್ಲಿ ಬಹಳ ಪರಿಣಾಮಕಾರಿ. ನಿಯಮಿತವಾಗಿ  ಸೋಯಾಬಿನ್ ಫೆಸ್ ಪ್ಯಾಕ್ ಬಳಸುವುದರಿಂದ ನುಣುಒಆದ ಹೊಳೆಯುವ ತ್ವಚೆಯನ್ನು ಪಡೆಯಬಹುದು. 

ಇದನ್ನೂ ಓದಿ : Lemon Water : ಈ ಆರು ಕಾರಣಕ್ಕೆ ನಿಂಬೂಪಾನಿ ಜೊತೆ ದಿನ ಶುರುಮಾಡಬೇಡಿ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News