Fatty Liver: ನಿಮ್ಮ ಆಹಾರದೊಳಗಿನ ಈ ಸಂಗತಿಗಳು ಲಿವರ್ ಗೆ ಹಾನಿ ತಲುಪಿಸುತ್ತವೆ
Fatty Liver: ನಮ್ಮ ಆಹಾರ ಪದಾರ್ಥಗಳಲ್ಲಿನ ಹಲವು ಸಂಗತಿಗಳು ಲಿವರ್ ಗೆ ಹಾನಿಯನ್ನು ತಲುಪಿಸುತ್ತವೆ. ಅಷ್ಟೇ ಅಲ್ಲ ಅವುಗಳ ನಿರಂತರ ಸೇವನೆಯಿಂದ ಲಿವರ್ ಫೇಲ್ ಕೂಡ ಆಗಬಹುದು.
ನವದೆಹಲಿ: Fatty Liver - ನಮ್ಮ ಆಹಾರ ಪದಾರ್ಥಗಳಲ್ಲಿನ ಹಲವು ಸಂಗತಿಗಳು ನಮ್ಮ ಯಕೃತ್ತಿಗೆ ಹಾನಿಯನ್ನು ತಲುಪಿಸುತ್ತವೆ. ಆಹಾರ-ಪಾನೀಯಗಳಲ್ಲಿನ ಈ ಸಂಗತಿಗಳು ಕೊಬ್ಬನ್ನು ಹೆಚ್ಚಿಸುತ್ತವೆ. ಕೆಲಸ ಮಾಡುತ್ತವೆ ಹಾಗೂ ಇದರಿಂದ ಫ್ಯಾಟಿ ಲಿವರ್ ಸಮಸ್ಯೆ ಎದುರಾಗಬಹುದು. ಅತಿಯಾದ ಸಿಹಿ, ಉಪ್ಪು, ಸಂಸ್ಕರಣೆಗೊಂಡ ಆಹಾರ ಪದಾರ್ಥಗಳು ಹಾಗೂ ಅಲ್ಕೋಹಾಲ್ ಲೀವರ್ ಗೆ ಹಾನಿಯನ್ನು ತಲುಪಿಸುತ್ತವೆ. ಸರಳ ಭಾಷೆಯಲ್ಲಿ ಹೇಳಬೇಕಾದರೆ ಈ ಸಂಗತಿಗಳು ಲೀವರ್ ಆರೋಗ್ಯಕ್ಕೆ ಮಾರಕವಾಗಿವೆ.
ಅತಿಯಾದ ಸಿಹಿ ಸೇವನೆ
ಒಂದು ವೇಳೆ ನೀವು ಅತಿಯಾಗಿ ಸಿಹಿ ತಿನ್ನುತ್ತಿದ್ದರೆ, ತಕ್ಷಣ ಈ ಅಭ್ಯಾಸವನ್ನು ಬದಲಾಯಿಸಿ. ಚಾಕೊಲೇಟ್, ಸಿಹಿತಿಂಡಿಗಳು, ತಂಪು ಪಾನೀಯಗಳು, ಕೇಕ್‌ಗಳಲ್ಲಿ (Bakery Food) ಸಕ್ಕರೆಯ ಪ್ರಮಾಣ ಅಧಿಕವಾಗಿರುತ್ತದೆ. ಅವುಗಳನ್ನು ಅತಿಯಾಗಿ ತಿನ್ನುವುದರಿಂದ, ದೇಹದಲ್ಲಿ ಗ್ಲೂಕೋಸ್ ಪ್ರಮಾಣ ಹೆಚ್ಚಾಗುತ್ತದೆ, ಇದು ಲಿವರ್ ಮೇಲೆ ಪರಿಣಾಮ ಬೀರುತ್ತದೆ ಮತ್ತು ಫ್ಯಾಟಿ ಲೀವರ್ (Fatty Liver) ಅಪಾಯ ಹೆಚ್ಚಾಗುತ್ತದೆ.
ಎಣ್ಣೆ ಪದಾರ್ಥಗಳು
ಸಮೋಸಾ, ಫ್ರೆಂಚ್ ಫ್ರೈಸ್, ಸ್ಪ್ರಿಂಗ್ ರೋಲ್ಸ್ ನಂತಹ ಹೆಚ್ಚು ಕರಿದ ಪದಾರ್ಥಗಳನ್ನು ತಿನ್ನುವುದರಿಂದ ಕೂಡ ಲಿವರ್ ಹಾಳಾಗುತ್ತದೆ. ಇವುಗಳಲ್ಲಿ ಸಂತೃಪ್ತ ಕೊಬ್ಬಿನ ಪ್ರಮಾಣವು ತುಂಬಾ ಹೆಚ್ಚಾಗಿದೆ, ಅದು ನಿಮಗೆ ಹಾನಿ ಮಾಡುತ್ತದೆ.
ಅಲ್ಕೋಹಾಲ್ ಸೇವನೆ
ಮದ್ಯಪಾನದಿಂದ ಕೂಡ ಲೀವರ್ ಹಾಳಾಗುತ್ತದೆ. ಇದರಿಂದ ಲೀವರ್ ನಲ್ಲಿರುವ ಜೀವಕೋಶಗಳಿಗೆ ಹಾನಿ ತಲುಪುತ್ತದೆ ಹಾಗೂ ಫ್ಯಾಟಿ ಲೀವರ್ ನಿಂದ ಹಿಡಿದು ಲೀವರ್ ಫೇಲ್ (Liver Failure) ಆಗುವವರೆಗೆ ಇದರಲ್ಲಿ ಅಪಾಯವಿದೆ.
ಇದನ್ನೂ ಓದಿ-Dandruff Remedies: ತಲೆಹೊಟ್ಟಿನ ಸಮಸ್ಯೆ ನಿವಾರಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
ಅಧಿಕ ಉಪ್ಪು ಸೇವನೆ
ಅತಿಯಾದ ಉಪ್ಪು ಸೇವನೆಯಿಂದ ಕೂಡ ಲಿವರ್ ಹಾಳಾಗುತ್ತದೆ. ಅತಿಯಾದ ಸೋಡಿಯಂ ಸೇವನೆಯಿಂದ ದೇಹದಲ್ಲಿ ಅಧಿಕ ನೀರು ಸಂಗ್ರಹವಾಗುತ್ತದೆ, ಇದು ಲಿವರ್ ಉರಿಯೂತ ಮತ್ತು ಫ್ಯಾಟಿ ಲೀವರ್ ಅಥವಾ ಇತರ ಲಿವರ್ ಸಂಬಂಧಿತ ಸಮಸ್ಯೆಗಳಿಗೆ (Liver Disease) ಕಾರಣವಾಗಬಹುದು. ಈ ಕಾರಣಕ್ಕಾಗಿ, ಫ್ಯಾಟಿ ಲೀವರ್ ಸಮಸ್ಯೆ ಇರುವವರಿಗೆ ವೈದ್ಯರು ಕಡಿಮೆ ಉಪ್ಪನ್ನು ಸೇವಿಸಲು ಸೂಚಿಸುತ್ತಾರೆ.
ಇದನ್ನೂ ಓದಿ-ಇವರಿಗೆ ಮಾತ್ರ ಸೊಳ್ಳೆ ಹೆಚ್ಚಾಗಿ ಕಚ್ಚುತ್ತದೆ , ಇದರ ಹಿಂದಿನ ಕಾರಣ ತಿಳಿದಿರಲಿ
ಸಂಸ್ಕರಣೆಗೊಂಡ ಆಹಾರ (Processed Food)
ಸಂಸ್ಕರಿಸಿದ ಆಹಾರ ಪದಾರ್ಥಗಳಾದ ಬ್ರೆಡ್, ಪಾಸ್ತಾ, ಬಿಸ್ಕತ್ ಗಳು ಯಕೃತ್ತಿನ ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಆಹಾರ ಪದಾರ್ಥಗಳು ಕೊಬ್ಬನ್ನು ಹೆಚ್ಚಿಸುತ್ತವೆ ಮತ್ತು ಈ ಕೊಬ್ಬು ನಿಮ್ಮ ಲಿವರ್ ಮೇಲೆ ಅಡ್ಡ ಪರಿಣಾಮ ಬೀರುತ್ತದೆ.
ಇದನ್ನೂ ಓದಿ-Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.