Sea Salt benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ

ಸಮುದ್ರದ ಉಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಬಳಕೆಯಿಂದ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. 

Written by - Ranjitha R K | Last Updated : Aug 26, 2021, 05:22 PM IST
  • ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೆ ಒಳ್ಳೆಯದು
  • ಸಮುದ್ರದ ಉಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ.
  • ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು.
Sea Salt  benefits : ಉಪ್ಪು ಊಟದ ರುಚಿ ಹೆಚ್ಚಿಸುವುದು ಮಾತ್ರವಲ್ಲ ಈ ಸಮಸ್ಯೆಗಳನ್ನೂ ನಿವಾರಿಸುತ್ತದೆ    title=
Sea Salt benefits (file photo)

ನವದೆಹಲಿ : ಆಹಾರದಲ್ಲಿ ಉಪ್ಪು ಸ್ವಲ್ಪ ಹೆಚ್ಚಾದರೂ ಅಥವಾ ಕಡಿಮೆಯಾದರೂ ಊಟದ ರುಚಿ ಕೆಡುತ್ತದೆ. ಹಾಗೆಯೇ ಉಪ್ಪನ್ನು ಸರಿಯಾದ ಪ್ರಮಾಣದಲ್ಲಿ ಸೇವಿಸಿದರೆ ಆರೋಗ್ಯಕ್ಕೂ (Benefits of salt) ಒಳ್ಳೆಯದು.  ಪ್ರತಿ ಅಡುಗೆಗೂ ಉಪ್ಪು ಬೇಕೇ ಬೇಕು. ಉಪ್ಪು ಇಲ್ಲದ ಆಹಾರವನ್ನು ತಿನ್ನುವುದು ಸಾಧ್ಯವೇ ಇಲ್ಲ. ಸಾಮಾನ್ಯವಾಗಿ ಉಪ್ಪು ಅಡುಗೆ ಮನೆಗೆ ಸೀಮಿತ ಅಂದುಕೊಳ್ಳುವುದೇ ಹೆಚ್ಹು. ಆದರೆ ಇದು ಪೂರ್ತಿ ಸತ್ಯ ಅಲ್ಲ. ಊಟದ ರುಚಿ ಹೆಚ್ಚಿಸುವ ಉಪ್ಪು, ಆರೋಗ್ಯಕ್ಕೆ ಸಂಬಂಧಪಟ್ಟ ಅನೇಕ ಸಮಸ್ಯೆಗಳನ್ನು ಕೂಡಾ ನಿವಾರಿಸುತ್ತದೆ. 

ಸಮುದ್ರದ ಉಪ್ಪು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದರ ಬಳಕೆಯಿಂದ ಅನೇಕ ರೀತಿಯ ದೈಹಿಕ ಮತ್ತು ಮಾನಸಿಕ ಸಮಸ್ಯೆಗಳನ್ನು ನಿವಾರಿಸಬಹುದು. 

ಇದನ್ನೂ ಓದಿ :  Clove Oil Benefits : ಮುಖದ ಕಲೆ ಮತ್ತು ಮೊಡವೆಗಳಿಗೆ ಬಳಿಸಿ 'ಲವಂಗದ ಎಣ್ಣೆ' : ಹೇಗೆ ಬಳಸುವುದು ಇಲ್ಲಿದೆ ಸಂಪೂರ್ಣ ಮಾಹಿತಿ

 ಡಿಹೈಡ್ರೆಶನ್ ದೂರ ಮಾಡುತ್ತದೆ : 
 ಡಿಹೈಡ್ರೆಶನ್ (dehydration) ಸಮಸ್ಯೆಯನ್ನು ನಿವಾರಿಸಲು ಸಮುದ್ರದ ಉಪ್ಪು ಸಹಾಯ ಮಾಡುತ್ತದೆ. ಸಮುದ್ರದ ಉಪ್ಪಿನಲ್ಲಿ ಸೋಡಿಯಂ ಪ್ರಮಾಣವು ಹೆಚ್ಚಿಣ ಪ್ರಮಾಣದಲ್ಲಿರುತ್ತದೆ. ಇದರಿಂದಾಗಿ ದೇಹದ ನೀರಿನ (Water) ಕೊರತೆಯನ್ನು ನಿವಾರಿಸಬಹುದು. ಇದರಲ್ಲಿರುವ ಸೋಡಿಯಂ ದೇಹದಲ್ಲಿ ಸುಲಭವಾಗಿ ಕರಗುತ್ತದೆ ಮತ್ತು ನೀರಿನ ಕೊರತೆಯನ್ನು ನಿವಾರಿಸುತ್ತದೆ. 

ಕಾಲು ನೋವಿಗೂ ಪರಿಹಾರ : 
ಸಮುದ್ರದ ಉಪ್ಪು (Salt) ಕೆಲವೇ ಸಮಯದಲ್ಲಿ ಪಾದದ ನೋವನ್ನು ನಿವಾರಿಸುತ್ತದೆ. ಕಾಲು ನೋವು ಇರುವವರು ಉಪ್ಪನ್ನು ಬಿಸಿನೀರಿನಲ್ಲಿ ಹಾಕಿ  ತಮ್ಮ ಪಾದಗಳನ್ನು ಅದರ ಒಳಗೆ ಇಟ್ಟುಕೊಳ್ಳಬೇಕು. ಹೀಗೆ ಮಾಡುವುದರಿಂದ ಕಾಲು ನೋವು ಮಾಯವಾಗುತ್ತದೆ.

ಇದನ್ನೂ ಓದಿ :  Benefits of Garlic : ಸಕ್ಕರೆ ರೋಗಿಗಳಿಗೆ ತುಂಬಾ ಪ್ರಯೋಜನಕಾರಿ 'ಬೆಳ್ಳುಳ್ಳಿ' : ಇದನ್ನು ಈ ರೀತಿ ಸೇವಿಸಬೇಕು!

ಒರಲ್ ಹೆಲ್ತ್ ಗಾಗಿ ಉಪ್ಪು ಬಳಸಿ :
ಸಮುದ್ರದ ಉಪ್ಪು ಬಾಯಿಯ ಆರೋಗ್ಯವನ್ನು (Oral health) ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಮುದ್ರದ ಉಪ್ಪಿನಲ್ಲಿ ಸಾಕಷ್ಟು ಪ್ರಮಾಣದ ಕ್ಯಾಲ್ಸಿಯಂ ಇರುತ್ತದೆ. ಕ್ಯಾಲ್ಸಿಯಂ ಹಲ್ಲು ಮತ್ತು ಒಸಡುಗಳನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡಲು ಸಹಾಯ ಮಾಡುತ್ತದೆ. ಇದು ಹಲ್ಲು ಮುರಿಯುವುದು ಮುಂತಾದ ಸಮಸ್ಯೆಗಳನ್ನು ತಡೆಯುತ್ತದೆ. 

ಕೂದಲನ್ನು ಬಲಪಡಿಸುತ್ತದೆ : 
ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರಿಗೂ ಕೂದಲು ಉದುರುವ ಸಮಸ್ಯೆ ಇರುತ್ತದೆ. ಉಪ್ಪನ್ನು ಬಳಸುವುದರಿಂದ ಕೂದಲು ಉದುರುವಿಕೆಯ (Hair fall) ಸಮಸ್ಯೆಯನ್ನು ನಿವಾರಿಸಬಹುದು. ಉಪ್ಪಿನ ದ್ರಾವಣದಿಂದ ಮಸಾಜ್ ಮಾಡುವುದರಿಂದ ಕೂದಲ ಬೇರುಗಳು ಬಲಗೊಳ್ಳುತ್ತವೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News