Over Thirst: ಈಗಾಗಲೇ ಬೇಸಿಗೆ ಕಾಲ ಆರಂಭವಾಗಿದೆ. ಈ ಸಮಯದಲ್ಲಿ ದೇಹವು ಬೇಗನೆ ನಿರ್ಜಲೀಕರಣಗೊಳ್ಳುತ್ತದೆ, ಇದರಿಂದಾಗಿ ನಮಗೆ ಬಾಯಾರಿಕೆಯಾಗುತ್ತದೆ, ಆದರೆ ನಿಯಮಿತವಾಗಿ ನೀರು ಕುಡಿದ ನಂತರವೂ, ನಿಮಗೆ ಮತ್ತೆ ಮತ್ತೆ ಬಾಯಾರಿಕೆಯಾಗುತ್ತಿದ್ದರೆ, ಆಗ ಇದು ಕೆಲವು ಗಂಭೀರ ಅನಾರೋಗ್ಯದ ಚಿಹ್ನೆಯಾಗಿರಬಹುದು. ಹಾಗಾಗಿ ಇಂತಹ ಲಕ್ಷಣವನ್ನು ನಿರ್ಲಕ್ಷಿಸದಿರುವುದೇ ಉತ್ತಮ. 


COMMERCIAL BREAK
SCROLL TO CONTINUE READING

ಅತಿಯಾಗಿ ಬಾಯಾರಿಕೆಯಾಗುತ್ತಿದೆಯೇ?
ನಿಯಮಿತವಾಗಿ ನೀರು ಕುಡಿದ ನಂತರವೂ ಅಧಿಕ ಬಾಯಾರಿಕೆಯ ಸಮಸ್ಯೆ ಕಾಡುತ್ತಿದ್ದರೆ ವೈದ್ಯರು ಮಧುಮೇಹ ಪರೀಕ್ಷೆಯನ್ನು ಶಿಫಾರಸು ಮಾಡುತ್ತಾರೆ. ಏಕೆಂದರೆ ಇದು ಮಧುಮೇಹದ ಸಾಮಾನ್ಯ ಲಕ್ಷಣವಾಗಿದೆ. ಆದರೆ ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವು ನಿಯಂತ್ರಣದಲ್ಲಿದ್ದರೆ ಮತ್ತು ಪದೇ ಪದೇ ಬಾಯಾರಿಕೆಯಾಗುತ್ತಿದ್ದರೆ ಅದು ಕರುಳಿನ ಕ್ಯಾನ್ಸರ್ ಲಕ್ಷಣದ ಸಂಕೇತವಾಗಿರಬಹುದು.


ಇದನ್ನೂ ಓದಿ- ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಸಹಾಯಕ ಈ 5 ಜ್ಯೂಸ್‌ಗಳು


ಕರುಳಿನ ಕ್ಯಾನ್ಸರ್ :
ಕೊಲೊನ್ ಕ್ಯಾನ್ಸರ್ ಅಥವಾ ಕರುಳಿನ ಕ್ಯಾನ್ಸರ್ ಕ್ರಮೇಣ ದೇಹವನ್ನು ಹಾನಿಗೊಳಿಸುತ್ತದೆ ಮತ್ತು ಅದರ ರೋಗಲಕ್ಷಣಗಳು ತುಂಬಾ ಮುಂಚೆಯೇ ಗೋಚರಿಸುವುದಿಲ್ಲ. ಆದರೆ ಕರುಳಿನ ಕ್ಯಾನ್ಸರ್ ಎಚ್ಚರಿಕೆಯ ಚಿಹ್ನೆಯನ್ನು ಗುರುತಿಸುವ ಮೂಲಕ, ಅಪಾಯವನ್ನು ತಪ್ಪಿಸಬಹುದು. ನಿಮ್ಮ ದೇಹದಲ್ಲಿ ಕೆಲವು ವಿಚಿತ್ರ ಲಕ್ಷಣಗಳು ಕಾಣಿಸಿಕೊಂಡರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಅಂತಹ ಕೆಲವು ಲಕ್ಷಣಗಳ ಬಗ್ಗೆ ತಿಳಿಯೋಣ...


ಕರುಳಿನ ಕ್ಯಾನ್ಸರ್ ಲಕ್ಷಣಗಳು :
- ನಿಯಮಿತವಾಗಿ ನೀರು ಸೇವಿಸಿದ ಬಳಿಕವೂ ಪದೇ ಪದೇ ಬಾಯಾರಿಕೆ 
- ಹೊಟ್ಟೆ ನೋವು ಮತ್ತು ಉಬ್ಬುವುದು (ವಾಯು) 
- ಅಸ್ವಸ್ಥತೆ
- ಮಲದಲ್ಲಿ ರಕ್ತ 
- ಮಲಬದ್ಧತೆ 
- ಗುದನಾಳದ ಬಳಿ ಉಂಡೆಗಳು 
- ಆಗಾಗ್ಗೆ ಮೂತ್ರ ವಿಸರ್ಜನೆ 
- ಮೂತ್ರದಲ್ಲಿ ರಕ್ತ


ಇದನ್ನೂ ಓದಿ- ನೀವೂ ಕೂಡ Tea ಜೊತೆಗೆ ಈ ವಸ್ತುಗಳನ್ನು ಸೇವಿಸುತ್ತೀರಾ? ಎಚ್ಚರ!


ಕರುಳಿನ ಕ್ಯಾನ್ಸರ್ಗೆ ಪ್ರಮುಖ ಕಾರಣಗಳು:
- ಕೆಂಪು ಮತ್ತು ಸಂಸ್ಕರಿಸಿದ ಮಾಂಸವನ್ನು ತಿನ್ನುವುದು 
- ಕಡಿಮೆ ಫೈಬರ್ ಆಹಾರವನ್ನು ತೆಗೆದುಕೊಳ್ಳುವುದು
- ಆನುವಂಶಿಕ ಕಾರಣಗಳು
- ವಯಸ್ಸಾದ ಪರಿಣಾಮ
- ಮದ್ಯದ ಸೇವನೆ


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.