Never Eat These Things With Tea: ನೀವೂ ಕೂಡ Tea ಜೊತೆಗೆ ಈ ವಸ್ತುಗಳನ್ನು ಸೇವಿಸುತ್ತೀರಾ? ಎಚ್ಚರ!

Avoid These Things While Sipping Tea - ಬೆಳಗ್ಗೆ ಆಗಲಿ ಅಥವಾ ಸಾಯಂಕಾಲ ಆಗಲಿ ಚಹಾ ಜೊತೆಗೆ ಜನರು ಬಿಸ್ಕಿಟ್ ಅಥವಾ ಸ್ನ್ಯಾಕ್ಸ್ ಸೇವಿಸುವುದನ್ನು ನೀವು ನೋಡಿರಬಹುದು ಮತ್ತು ಇದು ಸಾಮಾನ್ಯ ಸಂಗತಿ ಕೂಡ ಹೌದು. ಆದರೆ, ಚಹಾ ಜೊತೆಗೆ ಏನನ್ನು ಸೇವಿಸಬಾರದು ಎಂಬ ಸಂಗತಿ ನಿಮಗೆ ತಿಳಿದಿದೆಯಾ?  

Last Updated : Apr 9, 2022, 06:55 PM IST
  • ಚಹಾ ಜೊತೆಗೆ ಈ ತಿನುಸುಗಳನ್ನು ಸೇವಿಸಬೇಡಿ
  • ಇಲ್ಲದಿದ್ದರೆ ಆರೋಗ್ಯ ಹಾಳಾಗುತ್ತದೆ
  • ಇಂದೇ ಬದಲಾಯಿಸಿ ನಿಮ್ಮೀ ಅಭ್ಯಾಸ
Never Eat These Things With Tea: ನೀವೂ ಕೂಡ Tea ಜೊತೆಗೆ ಈ ವಸ್ತುಗಳನ್ನು ಸೇವಿಸುತ್ತೀರಾ? ಎಚ್ಚರ! title=
Avoid These Things While Sipping Tea

ನವದೆಹಲಿ: Things To Avoid While Drinking Tea - ಚಹಾ ಕುಡಿಯುವುದರ ಜೊತೆಗೆ, ಹೆಚ್ಚಿನ ಜನರು ಬಿಸ್ಕತ್ತುಗಳನ್ನು ತಿನ್ನುತ್ತಾರೆ, ಆದರೆ ಚಹಾದೊಂದಿಗೆ ಏನನ್ನು ತಿನ್ನಬಾರದು ಎಂಬುದು ಬಹುತೇಕರಿಗೆ ತಿಳಿದಿಲ್ಲ. ವಾಸ್ತವದಲ್ಲಿ, ಚಹಾದೊಂದಿಗೆ ಮಾಡಲಾಗುವ ಕೆಟ್ಟ ಸಂಯೋಜನೆಯು ನಿಮ್ಮ ಆರೋಗ್ಯವನ್ನು ಹಾಳುಮಾಡುತ್ತದೆ. ಚಹಾದೊಂದಿಗೆ ಯಾವ ವಸ್ತುಗಳನ್ನು ಸೇವಿಸಬಾರದು ಎಂಬುದನ್ನು ತಿಳಿಯೋಣ ಬನ್ನಿ,

ಚಹಾದೊಂದಿಗೆ ನೀರು ಕುಡಿಯಬೇಡಿ
ಚಹಾದೊಂದಿಗೆ ನೀರು ಕುಡಿಯಬಾರದು. ಅನೇಕ ಜನರು ಚಹಾ ಕುಡಿಯುವಾಗ ನೀರು ಕುಡಿಯುತ್ತಾರೆ, ಇದು ಅವರ ಆರೋಗ್ಯವನ್ನು (Health News) ಹದಗೆಡಿಸುತ್ತದೆ. ಅಂತಹ ಜನರಲ್ಲಿ ನೀವೂ ಇದ್ದರೆ, ಈಗಲೇ ಎಚ್ಚೆತ್ತುಕೊಳ್ಳಿ, ಏಕೆಂದರೆ ಹೀಗೆ ಮಾಡುವುದರಿಂದ ನಿಮಗೆ ಅಸಿಡಿಟಿ ಸಮಸ್ಯೆ ಎದುರಾಗಬಹುದು.

ಚಹಾದೊಂದಿಗೆ ನಿಂಬೆಯನ್ನು ಎಂದಿಗೂ ಬಳಸಬೇಡಿ
ಇದಲ್ಲದೇ ಟೀ ಜೊತೆ ನಿಂಬೆಹಣ್ಣಿನ ಬಳಕೆ ಕೂಡ ಒಳ್ಳೆಯದಲ್ಲ. ನೀವೂ ಕೂಡ ಚಹಾದೊಂದಿಗೆ ನಿಂಬೆ ಸೇವಿಸುತ್ತಿದ್ದರೆ, ಈ ಅಭ್ಯಾಸವನ್ನು ಇಂದೇ ಬದಲಿಸಿ. ಟೀ ಜೊತೆ ನಿಂಬೆಹಣ್ಣಿನ ಸೇವನೆಯೂ ಸರಿಯಲ್ಲ. ಇದು ಆರೋಗ್ಯದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ.

ಅರಿಶಿನದಿಂದ ತಯಾರಿಸಿದ ವಸ್ತುಗಳನ್ನು ಬಳಸಬೇಡಿ
ಇದರ ಹೊರತಾಗಿ, ಅರಿಶಿನದಿಂದ ಮಾಡಿದ ವಸ್ತುಗಳನ್ನು ಚಹಾದೊಂದಿಗೆ ಸೇವಿಸಬಾರದು, ಏಕೆಂದರೆ ಅರಿಶಿನವು ಚಹಾದೊಂದಿಗೆ ರಾಸಾಯನಿಕ ಕ್ರಿಯೆಗೆ ಒಳಗಾಗುತ್ತದೆ, ಇದು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-Booster Dose ಬೆಲೆ ಇಳಿಕೆ ಮಾಡಿದ ವ್ಯಾಕ್ಸಿನ್ ಕಂಪನಿಗಳು, ಹೊಸ ಬೆಲೆಗಳು ಇಂತಿವೆ

ಚಹಾದೊಂದಿಗೆ ಹಸಿರು ತರಕಾರಿಗಳು ಮತ್ತು ಒಣ ಹಣ್ಣುಗಳನ್ನು ತಿನ್ನಬೇಡಿ
ಹಸಿರು ತರಕಾರಿಗಳು ಮತ್ತು ಡ್ರೈ ಫ್ರೂಟ್ ಗಳು ಹ ಚಹಾದೊಂದಿಗೆ ಸೇವಿಸಬಾರದು. ವಾಸ್ತವದಲ್ಲಿ, ಡ್ರೈ ಫ್ರೂಟ್ ಗಳಲ್ಲಿ ಕಂಡುಬರುವ ಕಬ್ಬಿಣದೊಂದಿಗೆ ಚಹಾದ ರಾಸಾಯನಿಕ ಕ್ರಿಯೆಯು ನಮ್ಮ ದೇಹದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಇದನ್ನೂ ಓದಿ-Milk: ಅಪ್ಪಿತಪ್ಪಿಯೂ ಕೂಡ ಅವಶ್ಯಕತೆಗಿಂತ ಹೆಚ್ಚಿನ ಹಾಲು ಸೇವಿಸಬೇಡಿ, ಇಲ್ದಿದ್ರೆ...?

(Disclaimer: ಈ ಲೇಖನದಲ್ಲಿ ನೀಡಲಾಗಿರುವ ಮನೆಮದ್ದು ಮಾಹಿತಿ ಸಾಮಾನ್ಯ ಜ್ಞಾನ ಹಾಗೂ ಮಾಹಿತಿಯನ್ನು ಆಧರಿಸಿದೆ. ಅನುಸರಿಸುವ ಮುನ್ನ ವೈದ್ಯರ ಸಲಹೆ ಪಡೆದುಕೊಳ್ಳಿ. ಜೀ ಕನ್ನಡ ನ್ಯೂಸ್ ಈ ಮಾಹಿತಿಯನ್ನು ಖಚಿತಪಡಿಸುವುದಿಲ್ಲ)

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News