Home remedy to control blood sugar : ಇಂದಿನ ಕಾಲದಲ್ಲಿ ಮಧುಮೇಹವು ತುಂಬಾ ಸಾಮಾನ್ಯವಾದ ಕಾಯಿಲೆಯಾಗಿದೆ. ಇದಕ್ಕೆ ಕಾರಣ ಜನರ ಬದಲಾಗುತ್ತಿರುವ ಜೀವನಶೈಲಿ, ಅನುವಂಶಿಕತೆ, ಆಹಾರದಲ್ಲಿನ ಬದಲಾವಣೆ ಇತ್ಯಾದಿ. ಮಧುಮೇಹದಿಂದಾಗಿ, ದೇಹದಲ್ಲಿ ಅನೇಕ ರೀತಿಯ ಲಕ್ಷಣಗಳು ಕಂಡುಬರುತ್ತವೆ. ಮಧುಮೇಹವನ್ನು ಸಮಯಕ್ಕೆ ಸರಿಯಾಗಿ ನಿಯಂತ್ರಿಸದಿದ್ದರೆ, ಅದು ಇತರ ಅನೇಕ ಕಾಯಿಲೆಗಳಿಗೆ ಕಾರಣವಾಗಬಹುದು. ಆದ್ದರಿಂದ ಮಧುಮೇಹವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಮಧುಮೇಹವನ್ನು ನಿಯಂತ್ರಿಸಬೇಕಾದರೆ ಆಹಾರದಲ್ಲಿ ಹಲವಾರು ರೀತಿಯ ವಸ್ತುಗಳನ್ನು ಸೇರಿಸಿಕೊಳ್ಳಬಹುದು. 


COMMERCIAL BREAK
SCROLL TO CONTINUE READING

ಮೆಂತ್ಯೆ ಸೊಪ್ಪು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಲು ಸಹಾಯ ಮಾಡುತ್ತದೆ. ಮನೆಯಲ್ಲಿ ಈ ಸೊಪ್ಪಿನ ನೀರನ್ನು ತಯಾರಿಸುವುದು ತುಂಬಾ ಸುಲಭ. ಮೆಂತ್ಯೆ ಸೊಪ್ಪಿನ ನೀರು ರಕ್ತದಲ್ಲಿನ ಸಕ್ಕರೆಯನ್ನು ಹೇಗೆ ನಿಯಂತ್ರಿಸುತ್ತದೆ ನೋಡೋಣ.


ಇದನ್ನೂ ಓದಿ : ಹೃದಯಾಘಾತದಿಂದ ಹೆಚ್ಚುತ್ತಿರುವ ಸಾವಿಗೆ ಕೋವಿಡ್ ಲಸಿಕೆ ಕಾರಣವೇ? ICMR ಬಹಿರಂಗಪಡಿಸಿದ ಸತ್ಯ ಇದು !


ಮಧುಮೇಹದಲ್ಲಿ ಮೆಂತ್ಯೆ ಸೊಪ್ಪು ಹೇಗೆ ಪ್ರಯೋಜನಕಾರಿ ? :
ಮೆಂತ್ಯೆ ಸೊಪ್ಪು ಕರಗುವ ಫೈಬರ್ ಅನ್ನು ಹೊಂದಿರುತ್ತವೆ. ಇದು ನಿಮ್ಮ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಮೆಂತ್ಯೆ ಸೊಪ್ಪಿನ ಈ ಗುಣವು ಸಕ್ಕರೆಯನ್ನು ಹೀರಿಕೊಳ್ಳುವ ಪ್ರಕ್ರಿಯೆಯನ್ನು ನಿಧಾನಗೊಳಿಸುತ್ತದೆ. ಇದು ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದಲ್ಲದೆ, ಇದು ಜೀರ್ಣಕ್ರಿಯೆಗೆ ಕೂಡಾ ತುಂಬಾ ಒಳ್ಳೆಯದು.


ಮನೆಯಲ್ಲಿ ಮೆಂತ್ಯೆ ಸೊಪ್ಪಿನ ನೀರನ್ನು ತಯಾರಿಸುವುದು ಹೇಗೆ? :
ತಾಜಾ ಎಲೆಗಳಿಂದ ನೀರನ್ನು ತಯಾರಿಸಿ :

ಮೆಂತ್ಯೆ ಸೊಪ್ಪಿನ ನೀರನ್ನು ತಯಾರಿಸಲು, 1 ಗ್ಲಾಸ್ ನೀರನ್ನು ತೆಗೆದುಕೊಳ್ಳಿ. ಇದಕ್ಕೆ ಒಂದು ಹಿಡಿ ಮೆಂತ್ಯೆ ಸೊಪ್ಪನ್ನು ಸೇರಿಸಿ ಚೆನ್ನಾಗಿ ಕುದಿಸಿ. ಇದರ ನಂತರ, ಈ ನೀರನ್ನು ಫಿಲ್ಟರ್ ಮಾಡಿ ಸೇವಿಸಿ. ಈ ನೀರನ್ನು ಕುಡಿಯುತ್ತಾ ಬಂದರೆ ರಕ್ತದಲ್ಲಿನ ಸಕ್ಕರೆಯ ಮಟ್ಟವನ್ನು ನಿಯಂತ್ರಿಸಬಹುದು.


ಇದನ್ನೂ ಓದಿ :  ಮಧುಮೇಹ: ಈ ಎಲೆಯ ರಸ ಕ್ಷಣಾರ್ಧದಲ್ಲೇ ಶುಗರ್‌ ಲೆವಲ್‌ ಕಂಟ್ರೋಲ್‌ ಮಾಡುತ್ತೆ!


ಕಸ್ತೂರಿ ಮೆಂತ್ಯೆ ಅಥವಾ ಒಣಗಿದ ಎಲೆಗಳಿಂದಲೂ ನೀರನ್ನು ತಯಾರಿಸಬಹುದು : 
ಮೆಂತ್ಯೆ ಸೊಪ್ಪಿನ ಸೀಸನ್ ಅಲ್ಲ ಎಂದಾದರೆ ಒಣಗಿರುವ ಮೆಂತ್ಯೆ ಸೊಪ್ಪು  ಅಥವಾ ಕಸೂರಿ ಮೆಂತ್ಯೆಯನ್ನು ಬಳಸಬಹುದು. ಇದಕ್ಕಾಗಿ 1 ಕಪ್ ನೀರನ್ನು ತೆಗೆದುಕೊಳ್ಳಿ. ಅದರಲ್ಲಿ ಒಂದು ಚಮಚ ಕಸೂರಿ ಮೆಂತ್ಯೆ ಸೇರಿಸಿ ಚೆನ್ನಾಗಿ ಕುದಿಸಿ. ನಂತರ, ಅದನ್ನು ಫಿಲ್ಟರ್ ಮಾಡಿ ಕುಡಿಯಿರಿ.


ಮೆಂತ್ಯೆ ಸೊಪ್ಪಿನ ನೀರಿನ ಇತರ ಪ್ರಯೋಜನಗಳು ಯಾವುವು?
ಮೆಂತ್ಯೆ ಸೊಪ್ಪಿನ ನೀರನ್ನು ಕುಡಿಯುವುದರಿಂದ ಅನೇಕ ಪ್ರಯೋಜನಗಳಿವೆ.  

ಇದು ದೇಹದಲ್ಲಿ ಹೆಚ್ಚುತ್ತಿರುವ ಕೆಟ್ಟ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ. ಇದು ಉತ್ತಮ ಕೊಲೆಸ್ಟ್ರಾಲ್ ಅನ್ನು ಹೆಚ್ಚಿಸುತ್ತದೆ. 
-ಮೆಂತ್ಯೆ ಉತ್ತಮ ಪ್ರಮಾಣದ ಫೈಬರ್ ಅನ್ನು ಹೊಂದಿರುತ್ತದೆ. ಇದು ಜೀರ್ಣಾಂಗ ವ್ಯವಸ್ಥೆಯ ಆರೋಗ್ಯವನ್ನು ಉತ್ತೇಜಿಸುತ್ತದೆ. 
- ಹೊಟ್ಟೆನೋವಿನ ಸಂದರ್ಭದಲ್ಲಿ ಈ  ನೀರನ್ನು ಕುಡಿದರೆ ನೋವಿನಿಂದ ತಕ್ಷಣದ ಪರಿಹಾರವನ್ನು ನೀಡುತ್ತದೆ. 
- ಮೆಂತ್ಯೆ ಸೊಪ್ಪಿನ ನೀರು ಹೃದಯದ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. 
- ಹೆಚ್ಚುತ್ತಿರುವ ದೇಹದ ತೂಕವನ್ನು ನಿಯಂತ್ರಿಸಲು, ಮೆಂತ್ಯೆ ಸೊಪ್ಪಿನ ನೀರನ್ನು ಕುಡಿಯಿರಿ. ಇದು ಸಾಕಷ್ಟು ಆರೋಗ್ಯಕರವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.