Covid-19 vaccination : ಇತ್ತೀಚಿನ ದಿನಗಳಲ್ಲಿ ಕಿರಿಯ ವಯಸ್ಸಿನವರಿಗೂ ಹೃದಯಾಘಾತ ಕಾಣಿಸಿಕೊಳ್ಳುತ್ತಿರುವುದು ಸಾಮಾನ್ಯವಾಗಿದೆ. ಮಾತ್ರವಲ್ಲ ಹೃದಯಾಘಾತದಿಂದ ಮೃತ ಪಡುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಕಳೆದ ಕೆಲವು ತಿಂಗಳುಗಳಿಂದ ಇಂಥಹ ಅನೇಕ ಪ್ರಕರಣಗಳು ಕೇಳಿ ಬರುತ್ತಿವೆ. ವಾಕಿಂಗ್ ಮಾಡುವಾಗ, ಡಾನ್ಸ್ ಮಾಡುವಾಗ ಜಿಮ್ ನಲ್ಲಿ ವ್ಯಾಯಾಮ ಮಾಡುವಾಗ ಕುಸಿದು ಬೀಳುತ್ತಿರುವ ಪ್ರಕರಣ ಹೆಚ್ಚುತ್ತಿದೆ. ಕೋವಿಡ್ ನಂತರ ಈ ಪ್ರಕರಣಗಳು ಹೆಚ್ಚಾಗುತ್ತಿದೆ ಎಂದು ಕೆಲವರು ಹೇಳಿದರೆ, ಕೋವಿಡ್ ಲಸಿಕೆಯಿಂದಲೇ ಹೀಗಾಗುತ್ತಿದೆ ಎನ್ನುವ ವಾದ ಕೆಲವರದ್ದು. ಆದರೆ ಹೀಗೆ ಸಂಭವಿಸುತ್ತಿರುವ ಸಾವಿಗೆ ಕಾರಣ ಏನು ಎನ್ನುವುದನ್ನು ICMR ಹೇಳಿದೆ.
ಕೋವಿಡ್-19 ಲಸಿಕೆಯಿಂದ ಹಠಾತ್ ಸಾವಿನ ಅಪಾಯ ಹೆಚ್ಚಿಲ್ಲ :
ಕೋವಿಡ್-19 ಲಸಿಕೆಯಿಂದ ಹಠಾತ್ ಸಾವಿನ ಅಪಾಯ ಹೆಚ್ಚಿಲ್ಲ ಎನ್ನುವುದನ್ನು ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್ (ಐಸಿಎಂಆರ್) ಸ್ಪಷ್ಟಪಡಿಸಿದೆ. ಸುದ್ದಿ ಸಂಸ್ಥೆ ANI ಪ್ರಕಾರ, ವೈದ್ಯಕೀಯ ಸಂಶೋಧನಾ ಸಂಸ್ಥೆಯು ಕೋವಿಡ್-19 ನಿಂದಾಗಿ ಆಸ್ಪತ್ರೆಗೆ ದಾಖಲಾಗುವುದು, ಕುಟುಂಬದ ಹಿನ್ನೆಲೆ ಮತ್ತು ಕೆಲವು ಜೀವನಶೈಲಿಯಿಂದಾಗಿ ಭಾರತದಲ್ಲಿ ಯುವಕರಲ್ಲಿ ಹಠಾತ್ ಸಾವಿನ ಪ್ರಕರಣವನ್ನು ಹೆಚ್ಚಿಸಿವೆ ಎಂದು ಹೇಳಿದೆ.
ಇದನ್ನೂ ಓದಿ : ಮಧುಮೇಹ: ಈ ಎಲೆಯ ರಸ ಕ್ಷಣಾರ್ಧದಲ್ಲೇ ಶುಗರ್ ಲೆವಲ್ ಕಂಟ್ರೋಲ್ ಮಾಡುತ್ತೆ!
ಅಧ್ಯಯನ ನಡೆಸಿದ ICMR :
ಭಾರತದಲ್ಲಿ ಆರೋಗ್ಯವಂತರು ಹಠಾತ್ ಮೃತಪಡುತ್ತಿರುವ ಸುದ್ದಿ ಸಂಶೋಧಕರನ್ನು ಸಂಶೋಧನೆ ನಡೆಸುವಂತೆ ಪ್ರೇರೇಪಿಸಿದೆ. ಆರೋಗ್ಯವಂತ ಜನರೇ ಹಠಾತ್ ಸಾವಿನ ದವಡೆಗೆ ಸಿಲುಕುತ್ತಿರುವ ಹಿಂದಿನ ಕಾರಣಗಳನ್ನು ತನಿಖೆ ಮಾಡಲು ICMR ಅಧ್ಯಯನ ನಡೆಸಿದೆ.
18-45 ವರ್ಷ ವಯಸ್ಸಿನ ವ್ಯಕ್ತಿಗಳ ವರದಿ :
ಯಾವುದೇ ಆರೋಗ್ಯ ಸಮಸ್ಯೆಗಳಿಲ್ಲದ 18-45 ವರ್ಷ ವಯಸ್ಸಿನ ಆರೋಗ್ಯವಂತ ವ್ಯಕ್ತಿಗಳನ್ನು ಸಂಶೋಧನೆಗೆ ಒಳಪಡಿಸಲಾಗಿದೆ. ಅಕ್ಟೋಬರ್ 1, 2021 ಮತ್ತು ಮಾರ್ಚ್ 31, 2023 ರ ನಡುವೆ ಅವರು ಯಾವುದೇ ಕಾರಣವಿಲ್ಲದೆ ಮೃತಪಟ್ಟವರನ್ನು ಈ ಅಧ್ಯಯನ ಒಳಗೊಂಡಿತ್ತು.
ಇದನ್ನೂ ಓದಿ : ಚಳಿಗಾಲದಲ್ಲಿ ಕಾಡುವ ಸಾಮಾನ್ಯ ಗಂಟಲು ನೋವು, ಕೆಮ್ಮಿಗೆ ಅತ್ಯುತ್ತಮ 5 ಮನೆಮದ್ದುಗಳು
ಪ್ರತಿಯೊಂದು ಪ್ರಕರಣಕ್ಕೂ ವಯಸ್ಸು, ಲಿಂಗ ಮತ್ತು ಸ್ಥಳೀಯ ಆಧಾರದ ಮೇಲೆ ಜನರನ್ನು ಆಯ್ಕೆ ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ. ಸಂಶೋಧಕರು ಅಧ್ಯಯನಕ್ಕಾಗಿ 729 ಪ್ರಕರಣಗಳು (ಸಾವಿನ) ಮತ್ತು 2,916 ಅಧ್ಯಯನಕ್ಕಾಗಿ ತೆಗೆದುಕೊಂಡ ಜನರ ವೈದ್ಯಕೀಯ ಇತಿಹಾಸ, ಧೂಮಪಾನ, ಮದ್ಯಪಾನ ಮತ್ತು ತೀವ್ರವಾದ ದೈಹಿಕ ಚಟುವಟಿಕೆಯಂತಹ ನಡವಳಿಕೆ ಹೀಗೆ ವಿವಿಧ ಅಂಶಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗಿದೆ. ಅಲ್ಲದೆ ಆ ವ್ಯಕ್ತಿ ಕೋವಿಡ್‌ಗೆ ಲಸಿಕೆ ನೀಡಲಾಗಿದೆಯೇ?ಅಥವಾ ಬೇರೆ ಯಾವುದಾದರೂ ಲಸಿಕೆ ನೀಡಲಾಗಿದೆಯೇ? ಎನ್ನುವುದನ್ನು ಕೂಡಾ ಗಣನೆಗೆ ತೆಗೆದುಕೊಳ್ಳಲಾಗಿದೆ.
ಈ ಅಧ್ಯಯನದ ಪ್ರಕಾರ, 'COVID-19 ವ್ಯಾಕ್ಸಿನೇಷನ್ ಭಾರತದಲ್ಲಿ ಹಠಾತ್ ಸಾವಿನ ಅಪಾಯವನ್ನು ಹೆಚ್ಚಿಸಿಲ್ಲ. ಬದಲಿಗೆ ಈ ಲಸಿಕೆ ವಯಸ್ಕರಲ್ಲಿ ಹಠಾತ್ ಸಾವಿನ ಅಪಾಯವನ್ನು ಕಡಿಮೆ ಮಾಡಿದೆ ಎನ್ನಲಾಗಿದೆ.
ಇದನ್ನೂ ಓದಿ : ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ತೊಲಗಿಸಬೇಕೆ? ಮೊದಲು ಈ ಸಂಗತಿಗಳನ್ನು ನೆನಪಿಡಿ!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.