How to control high Blood Sugar : ಹೈಪರ್ಗ್ಲೈಸೀಮಿಯಾ ಅಥವಾ ಅಧಿಕ ರಕ್ತದ ಗ್ಲೂಕೋಸ್ ಎಂದು ಕರೆಯಲ್ಪಡುವ  ಹೈ ಬ್ಲಡ್ ಶುಗರ್, ರಕ್ತ ಪರಿಚಲನೆಯಲ್ಲಿ ಹೆಚ್ಚು ಗ್ಲೂಕೋಸ್ ಇದ್ದಾಗ ಸಂಭವಿಸುತ್ತದೆ.ಸಾಮಾನ್ಯವಾಗಿ ನಮ್ಮ ದೇಹವು ಇನ್ಸುಲಿನ್ ಅನ್ನು ಉತ್ತಮವಾಗಿ ಬಳಸಲು ಅಥವಾ ಉತ್ಪಾದಿಸಲು ಸಾಧ್ಯವಾಗದಿದ್ದಾಗ ಈ ಸಮಸ್ಯೆ ಉಂಟಾಗುತ್ತದೆ.ಇನ್ಸುಲಿನ್ ಒಂದು ಹಾರ್ಮೋನ್, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. 


COMMERCIAL BREAK
SCROLL TO CONTINUE READING

ನಿಮ್ಮ ರಕ್ತದಲ್ಲಿನ ಸಕ್ಕರೆ ಅಥವಾ ರಕ್ತದಲ್ಲಿನ ಗ್ಲೂಕೋಸ್ ಅಧಿಕವಾದಾಗ ಸಾಮಾನ್ಯವಾಗಿ ಮೇದೋಜ್ಜೀರಕ ಗ್ರಂಥಿಯು ಇನ್ಸುಲಿನ್ ಅನ್ನು ಬಿಡುಗಡೆ ಮಾಡುತ್ತದೆ.ದೇಹದಲ್ಲಿನ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು,ಅನೇಕ ನೈಸರ್ಗಿಕ ಪರಿಹಾರಗಳ ಸಹಾಯವನ್ನು ತೆಗೆದುಕೊಳ್ಳಬಹುದು.ಈ ನೈಸರ್ಗಿಕ ಪರಿಹಾರಗಳಲ್ಲಿ ಅಡುಗೆಮನೆಯಲ್ಲಿ ಇರಿಸಲಾಗಿರುವ ಮಸಾಲೆಗಳು ಕೂಡಾ ಸೇರಿವೆ.ಅಡುಗೆಮನೆಯ ಮಸಾಲೆಗಳನ್ನು ಸೇವಿಸುವ ಮೂಲಕ ನಿಮ್ಮ ರಕ್ತದಲ್ಲಿನ ಸಕ್ಕರೆಯನ್ನು ಹೆಚ್ಚಿನ ಪ್ರಮಾಣದಲ್ಲಿ ನಿಯಂತ್ರಿಸಬಹುದು.ಈ ಮಸಾಲೆಗಳಲ್ಲಿ ಮೆಂತ್ಯೆ ಬೀಜಗಳು ಕೂಡಾ ಸೇರಿವೆ. ಮೆಂತ್ಯೆ ಬೀಜಗಳ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ನಿಯಂತ್ರಣಕ್ಕೆ ತರಬಹುದು. 


ಇದನ್ನೂ ಓದಿ : Kidney Problems: ರಾತ್ರಿ ಹೊತ್ತು ಕಾಣುವ ಈ ಲಕ್ಷಣಗಳು ಕಿಡ್ನಿ ವೈಫಲ್ಯದ ಸಂಕೇತವಾಗಿಬಹುದು!


ಬ್ಲಡ್ ಶುಗರ್ ನಿಯಂತ್ರಿಸುವಲ್ಲಿ ಮೆಂತ್ಯೆ ಹೇಗೆ ಸಹಾಯಕ ? : 
ಮಧುಮೇಹದಿಂದ ಬಳಲುತ್ತಿರುವವರಿಗೆ ಮೆಂತ್ಯೆ ಬೀಜಗಳು ತುಂಬಾ ಸಹಾಯಕ. ಈ ಬೀಜಗಳು ಫೈಬರ್ ಮತ್ತು ಇತರ ರಾಸಾಯನಿಕಗಳನ್ನು ಹೊಂದಿರುತ್ತವೆ. ಅದು ಜೀರ್ಣಕ್ರಿಯೆಯನ್ನು ನಿಧಾನಗೊಳಿಸುತ್ತದೆ.ಇದರಿಂದ ದೇಹವು ಕಾರ್ಬೋಹೈಡ್ರೇಟ್ ಮತ್ತು ಸಕ್ಕರೆಯನ್ನು ಹೀರಿಕೊಳ್ಳುತ್ತದೆ.ಈ ಬೀಜವು ದೇಹವು ಸಕ್ಕರೆಯನ್ನು ಬಳಸುವ ವಿಧಾನವನ್ನು ಸುಧಾರಿಸಲು ಮತ್ತು ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬ್ಲಡ್ ಶುಗರ್ ಅನ್ನು ಕಂಟ್ರೋಲ್ ನಲ್ಲಿಡಬೇಕಾದರೆ ಮೆಂತ್ಯೆ ಬೀಜದ ನೀರನ್ನು ನಿಯಮಿತವಾಗಿ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಕುಡಿಯಬೇಕು.  


ಮೆಂತ್ಯೆ ನೀರನ್ನು ಹೇಗೆ ಕುಡಿಯಬೇಕು ? :
ಮೆಂತ್ಯೆ ನೀರನ್ನು ತಯಾರಿಸಲು ಎರಡು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು.ಮೊದಲ ವಿಧಾನ:1 ಚಮಚ ಮೆಂತ್ಯೆಯನ್ನು  1 ಕಪ್ ನೀರಿನಲ್ಲಿ ಹಾಕಿ ರಾತ್ರಿಯಿಡೀ ಬಿಡಬೇಕು. ಬೆಳಿಗ್ಗೆ ಈ ನೀರನ್ನು ಕುಡಿಯಿರಿ.  ನೆನ್ಸಿತ್ತ ಈ ಮೆಂತ್ಯೆ ಕಾಳುಗಳನ್ನು ಕೂಡಾ ಜಗಿದು ತಿನ್ನಬಹುದು.  


ಇದನ್ನೂ ಓದಿ : ಬಾಯಿ ಚಪ್ಪರಿಸಿಕೊಂಡು ಪಾನೀಪುರಿ ತಿನ್ನುತ್ತೀರಾ ? ಈ ರುಚಿಯ ಹಿಂದಿದೆಯಂತೆ ಕ್ಯಾನ್ಸರ್ ಕಾರಕ ಅಂಶ : FSSAI ಶೋಧದಲ್ಲಿ ಸತ್ಯ ಬಯಲು


ಎರಡನೇ ವಿಧಾನ: 2 ಕಪ್ ನೀರು ತೆಗೆದುಕೊಂಡು ಅದರಲ್ಲಿ ಮೆಂತ್ಯೆಯನ್ನು  ಸೇರಿಸಿ . ಈಗ ಈ ನೀರು ಅರ್ಧದಶ್ತಾಗುವವರೆಗೆ ಕುದಿಸಿ.ನಂತರ,ಅದನ್ನು ಫಿಲ್ಟರ್ ಮಾಡಿ ಮತ್ತು ಕುಡಿಯಿರಿ.ನೀರಿನ ರುಚಿಯನ್ನು ಬದಲಾಯಿಸಲು, ನೀವು ಅದರಲ್ಲಿ ನಿಂಬೆ ರಸವನ್ನು ಬೆರೆಸಬಹುದು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ