ಬೆಂಗಳೂರು : ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ನಡೆಸಿದ ಇತ್ತೀಚಿನ ತಪಾಸಣೆಯಲ್ಲಿ ಕರ್ನಾಟಕ ರಾಜ್ಯದಾದ್ಯಂತ ತೆಗೆದ ಸುಮಾರು 22% ಪಾನಿ ಪುರಿ ಮಾದರಿಗಳು ಸುರಕ್ಷತಾ ಮಾನದಂಡಗಳನ್ನು ಹೊಂದಿಲ್ಲ ಎಂದು ಕಂಡುಬಂದಿದೆ.ಕಬಾಬ್,ಗೋಬಿ ಮಂಚೂರಿಯನ್ ಮತ್ತು ಬೆಂಗಾಲ್ ಸಿಹಿತಿಂಡಿಗಳಲ್ಲಿ ಕೃತಕ ಬಣ್ಣಗಳ ಬಳಕೆಯನ್ನು ಆಹಾರ ಸುರಕ್ಷತಾ ಅಧಿಕಾರಿ ನಿಷೇಧಿಸಿದ ಕೆಲ ದಿನಗಳ ಹಿಂದೆಯೇ ಬೆಳಕಿಗೆ ತಂದಿತ್ತು.
ಇತ್ತೀಚೆಗೆ, FSSAI ಪಾನಿ ಪುರಿ ಸ್ಟಾಲ್‌ಗಳು ಮತ್ತು ಕೆಲವು ಪ್ರಸಿದ್ಧ ತಿನಿಸುಗಳನ್ನು ಸಹ ಪರೀಕ್ಷಿಸಿದೆ.ವರದಿ ಪ್ರಕಾರ,ಕರ್ನಾಟಕದ 79 ಸ್ಥಳಗಳಿಂದ ಪಾನಿ ಪುರಿಯ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.ಇವುಗಳಲ್ಲಿ 41 ಮಾದರಿಗಳು ಕೃತಕ ಬಣ್ಣಗಳಿಂದ ಅಸುರಕ್ಷಿತವೆಂದು ಕಂಡುಬಂದಿದೆ. ಮಾತ್ರವಲ್ಲ ಅವುಗಳಲ್ಲಿ ಕ್ಯಾನ್ಸರ್ ಉಂಟುಮಾಡುವ ವಸ್ತುಗಳು ಸಹ ಕಂಡುಬಂದಿವೆ.ಇತರ 18 ಮಾದರಿಗಳನ್ನು ಕಳಪೆ ಗುಣಮಟ್ಟದ ಮತ್ತು ಬಳಕೆಗೆ ಸೂಕ್ತವಲ್ಲ ಎಂದು ಪರಿಗಣಿಸಲಾಗಿದೆ.ಇಲಾಖೆಯ ಅಧಿಕಾರಿಗಳು ತೆಗೆದ ಮಾದರಿಯಲ್ಲಿ ಬ್ರಿಲಿಯಂಟ್ ಬ್ಲೂ,ಸನ್‌ಸೆಟ್ ಯೆಲ್ಲೋ, ಟಾರ್ಟರಾಜೈನ್‌ನಂತಹ ರಾಸಾಯನಿಕಗಳು ಪತ್ತೆಯಾಗಿವೆ.
ಇದನ್ನೂ ಓದಿ : Uric Acid Remedy: ನೈಸರ್ಗಿಕವಾಗಿ ಯೂರಿಕ್ ಆಸಿಡ್ ನಿಯಂತ್ರಣಕ್ಕೆ ಲಾಭದಾಯಕ ಹಣ್ಣುಗಳು
ಆಹಾರ ಸುರಕ್ಷತಾ ಆಯುಕ್ತರು ಹೇಳಿದ್ದೇನು?:
ಹಲವು ದೂರುಗಳು ಬಂದ ಹಿನ್ನೆಲೆಯಲ್ಲಿ ಪಾನಿ ಪುರಿಯ ಗುಣಮಟ್ಟ ಪರೀಕ್ಷಿಸಲು ನಿರ್ಧರಿಸಲಾಗಿದೆ ಎಂದು ಆಹಾರ ಸುರಕ್ಷತಾ ಆಯುಕ್ತ ಶ್ರೀನಿವಾಸ್ ಕೆ. ಹೇಳಿದ್ದಾರೆ. ಪಾನಿ ಪುರಿ ಜನಪ್ರಿಯ ಚಾಟ್ ಆಗಿರುವುದರಿಂದ ಅದರ ಗುಣಮಟ್ಟದ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ ಎಂದು ಶ್ರೀನಿವಾಸ್ ಹೇಳಿದರು.ರಸ್ತೆ ಬದಿಯ ತಿನಿಸುಗಳಿಂದ ಹಿಡಿದು ಪ್ರಸಿದ್ಧ ರೆಸ್ಟೋರೆಂಟ್‌ಗಳವರೆಗೆ ಕರ್ನಾಟಕದಾದ್ಯಂತ ಎಲ್ಲಾ ರೀತಿಯ ಔಟ್‌ಲೆಟ್‌ಗಳಿಂದ ಮಾದರಿಗಳನ್ನು ತೆಗೆದುಕೊಳ್ಳಲಾಗಿದೆ.
ಟೆಸ್ಟ್ ರಿಸಲ್ಟ್ :
ಹೆಚ್ಚಿನ ಸಂಖ್ಯೆಯ ಮಾದರಿಗಳು ಸೇವನೆಗೆ ಯೋಗ್ಯವಾಗಿಲ್ಲ ಎನ್ನುವುದು ಪತ್ತೆಯಾಗಿದೆ.ಈ ರಾಸಾಯನಿಕಗಳ ಪರಿಣಾಮವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಅಧಿಕಾರಿಗಳು ಪ್ರಸ್ತುತ ಫಲಿತಾಂಶಗಳನ್ನು ವಿಶ್ಲೇಷಿಸುತ್ತಿದ್ದಾರೆ ಎಂದು ಆಹಾರ ಸುರಕ್ಷತಾ ಆಯುಕ್ತರು ಹೇಳಿದರು.FSSAI ಸಣ್ಣ ತಿನಿಸುಗಳ ಮೇಲೆ ಸುರಕ್ಷತಾ ಮಾನದಂಡಗಳನ್ನು ಜಾರಿಗೊಳಿಸುತ್ತದೆ ಮತ್ತು ಉಲ್ಲಂಘಿಸುವವರ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಭರವಸೆ ನೀಡಿದರು.
ಇದನ್ನೂ ಓದಿ : ಗಂಜಿಗೆ ಈ ಹಣ್ಣಿನ ರಸ ಬೆರೆಸಿ ಕುಡಿದರೆ ಡಯಾಬಿಟಿಸ್ ನಿಯಂತ್ರಣ ಖಂಡಿತ: ಮಧುಮೇಹಿಗಳಿಗಿದು ದಿವ್ಯೌಷಧಿ
ಹೃದ್ರೋಗದ ಅಪಾಯವೂ ಇದೆ :
ಈ ಕೃತಕ ಬಣ್ಣಗಳು ಹೊಟ್ಟೆ ನೋವಿನಿಂದ ಹಿಡಿದು ಹೃದ್ರೋಗದವರೆಗೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎದ್ನು ಎಚ್‌ಸಿಜಿ ಕ್ಯಾನ್ಸರ್ ಸೆಂಟರ್‌ನ ಶೈಕ್ಷಣಿಕ ಸಂಶೋಧನಾ ಕೇಂದ್ರದ ಡೀನ್ ಡಾ.ವಿಶಾಲ್ ರಾವ್ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ